Picsart 25 10 19 22 42 39 923 scaled

ಬರೋಬ್ಬರಿ 5 ಲಕ್ಷ ರೂಪಾಯಿ ಸಿಗುವ NPS ವಾತ್ಸಲ್ಯ ಯೋಜನೆ : ಮಕ್ಕಳ ಭವಿಷ್ಯ ಭದ್ರಗೊಳಿಸಲು ಸಣ್ಣ ಹೂಡಿಕೆ.

Categories:
WhatsApp Group Telegram Group

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಭವಿಷ್ಯ ಅತ್ಯಂತ ಅಮೂಲ್ಯ. ಮಕ್ಕಳು ದೊಡ್ಡವರಾದಾಗ ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸದಂತೆ ಮಾಡುವ ಉದ್ದೇಶದಿಂದ, ಅನೇಕರು ಉಳಿತಾಯ, ಹೂಡಿಕೆ ಹಾಗೂ ಭದ್ರತಾ ಯೋಜನೆಗಳ ಮೊರೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಮಕ್ಕಳ ಭವಿಷ್ಯವನ್ನು ಇನ್ನಷ್ಟು ಭದ್ರಗೊಳಿಸುವ ಉದ್ದೇಶದಿಂದ NPS ವಾತ್ಸಲ್ಯ ಎಂಬ ವಿಶೇಷ ಯೋಜನೆಯನ್ನು ಆರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಈ ಯೋಜನೆಯ ಮೂಲಕ ಪೋಷಕರು ಅಥವಾ ಪಾಲಕರು ತಮ್ಮ ಮಕ್ಕಳ ಹೆಸರಿನಲ್ಲಿ ಕಡಿಮೆ ಮೊತ್ತದಿಂದಲೇ ಹೂಡಿಕೆ ಪ್ರಾರಂಭಿಸಿ, ಅವರಿಗೆ 18 ವರ್ಷ ತುಂಬುವ ವೇಳೆಗೆ ಭಾರೀ ಮೊತ್ತವನ್ನು ಸಂಗ್ರಹಿಸಬಹುದು. 18ರ ನಂತರ ಈ ಖಾತೆ ಸಾಮಾನ್ಯ NPS ಖಾತೆಯಾಗಿ ಬದಲಾಗುತ್ತದೆ ಮತ್ತು ಮಗುವಿಗೆ ನಿವೃತ್ತಿ ವಯಸ್ಸಿನವರೆಗೂ ಬಡ್ಡಿ ಮತ್ತು ಹೂಡಿಕೆಗಳ ಲಾಭ ದೊರೆಯುತ್ತಿರುತ್ತದೆ.

ಯೋಜನೆಯ ಮುಖ್ಯ ಉದ್ದೇಶವೇನು?:

‘NPS ವಾತ್ಸಲ್ಯ’ ಯೋಜನೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ವಿಶೇಷ ನಿವೃತ್ತಿ ಯೋಜನೆಯಾಗಿದ್ದು, ಮಕ್ಕಳ 18 ವರ್ಷ ವಯಸ್ಸು ತುಂಬಿದ ನಂತರ ಈ ಖಾತೆ ಸಾಮಾನ್ಯ NPS (National Pension System) ಖಾತೆಯಾಗಿ ಪರಿವರ್ತನೆಗೊಳ್ಳುತ್ತದೆ. ಇದರ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ಸಣ್ಣ ಪ್ರಮಾಣದ ಹೂಡಿಕೆಯಿಂದಲೇ ಭವಿಷ್ಯದಲ್ಲಿ ದೊಡ್ಡ ಆರ್ಥಿಕ ಸಂಪತ್ತನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಯಾವುವು?:

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ನಾಗರಿಕರು.
ಅನಿವಾಸಿ ಭಾರತೀಯರು (NRI).
ಸಾಗರೋತ್ತರ ಭಾರತೀಯರು (OCI).
ಪೋಷಕರು ಅಥವಾ ಕಾನೂನುಪರ ಪೋಷಕರು ಅಪ್ರಾಪ್ತ ವಯಸ್ಕರರ ಪರವಾಗಿ ಖಾತೆಯನ್ನು ತೆರೆಯಬಹುದು ಮತ್ತು ನಿರ್ವಹಿಸಬಹುದು. ಮಗುವೇ ಈ ಖಾತೆಯ ಏಕೈಕ ಫಲಾನುಭವಿಯಾಗಿರುತ್ತದೆ.

ಹೂಡಿಕೆ ಮತ್ತು ಲಾಭದ ವಿವರಗಳು ಕೆಳಗಿನಂತಿವೆ:

ಕನಿಷ್ಠ ಹೂಡಿಕೆ: ವರ್ಷಕ್ಕೆ ₹1,000
ಗರಿಷ್ಠ ಹೂಡಿಕೆ: ಯಾವುದೇ ಮಿತಿ ಇಲ್ಲ
ಬಡ್ಡಿದರ: ವರ್ಷಕ್ಕೆ 9.5% – 10% ವರೆಗೆ
ಉದಾಹರಣೆಗೆ, ನೀವು ಪ್ರತಿ ವರ್ಷ ₹10,000 ಹೂಡಿಕೆ ಮಾಡಿದರೆ, ಅಂದರೆ ತಿಂಗಳಿಗೆ ಕೇವಲ ₹834 ಹೂಡಿಕೆ ಮಾಡಿದರೆ 18 ವರ್ಷಗಳ ಬಳಿಕ ಒಟ್ಟು ಹೂಡಿಕೆ ₹1.8 ಲಕ್ಷವಾಗುತ್ತದೆ. ಈ ಮೊತ್ತದ ಮೇಲೆ ಸರಾಸರಿ 10% ಬಡ್ಡಿದರ ಲಭಿಸಿದರೆ, ಅದು ಸುಮಾರು ₹5 ಲಕ್ಷವಾಗುತ್ತದೆ. ಖಾತೆಯು 18 ವರ್ಷಗಳ ನಂತರ ಸಾಮಾನ್ಯ NPS ಖಾತೆಯಾಗಿ ಬದಲಾಗುತ್ತದೆ ಮತ್ತು 60 ವರ್ಷ ವಯಸ್ಸಿನವರೆಗೆ ಹೂಡಿಕೆ ಬೆಳೆಯುತ್ತಲೇ ಇರುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?: 

ಪೋಷಕರು ಈ ಯೋಜನೆಗೆ ಕೆಳಗಿನ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸಬಹುದು,
ಮೊದಲು eNPS ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.  https://enps.nps-proteantech.in/eNPS/NationalPensionSystem.html
ನಂತರ NPS ವಾತ್ಸಲ್ಯ (ಅಪ್ರಾಪ್ತ ವಯಸ್ಕರು) ವಿಭಾಗದಲ್ಲಿ ಈಗ ನೋಂದಾಯಿಸಿ ಕ್ಲಿಕ್ ಮಾಡಿ.
ಪೋಷಕರ PAN, DOB, ಮೊಬೈಲ್ ಹಾಗೂ ಇಮೇಲ್‌ ನಮೂದಿಸಿ, OTP ಮೂಲಕ ಪರಿಶೀಲಿಸಿ.
ಮಗುವಿನ ಹಾಗೂ ಪೋಷಕರ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಕನಿಷ್ಠ ₹1,000 ಪ್ರಾಥಮಿಕ ಹೂಡಿಕೆ ಮಾಡಿ.
eSign ಅಥವಾ ಡ್ಯುಯಲ್ OTP ಮೂಲಕ ದೃಢೀಕರಣ ಮಾಡಿ.
PRAN (Permanent Retirement Account Number) ಸೃಷ್ಟಿಯಾಗುತ್ತದೆ ಮತ್ತು ಖಾತೆ ತೆರೆಯಲ್ಪಡುತ್ತದೆ.

ಎಲ್ಲಿ ಅರ್ಜಿ ಸಲ್ಲಿಸಬಹುದು?:

eNPS ಪೋರ್ಟಲ್ (ಆನ್‌ಲೈನ್)
ಅಂಚೆ ಕಚೇರಿಗಳು
ಪ್ರಮುಖ ಬ್ಯಾಂಕುಗಳು
ಪಿಂಚಣಿ ನಿಧಿ ಕಚೇರಿಗಳು
POP ಕೇಂದ್ರಗಳು (Points of Presence)

NPS ವಾತ್ಸಲ್ಯ ಯೋಜನೆಯ ಪ್ರಮುಖ ಪ್ರಯೋಜನಗಳು ಹೀಗಿವೆ:

ಮಕ್ಕಳ ಆರ್ಥಿಕ ಭದ್ರತೆಗೆ ದೀರ್ಘಾವಧಿ ಹೂಡಿಕೆ.
ತೆರಿಗೆ ಪ್ರಯೋಜನಗಳ ಲಭ್ಯತೆ.
ಸರ್ಕಾರದ ಪಿಎಫ್‌ಆರ್ಡಿಎ ನಿಯಂತ್ರಣದ ಅಡಿಯಲ್ಲಿ ಭದ್ರತೆ.
18ರ ನಂತರ ಸ್ವಯಂಚಾಲಿತವಾಗಿ ಸಾಮಾನ್ಯ NPS ಖಾತೆಗೆ ಪರಿವರ್ತನೆ.
ಸರ್ಕಾರದಿಂದ ಮಾನ್ಯತೆ ಪಡೆದ ಸುರಕ್ಷಿತ ಯೋಜನೆ.
ಉಳಿತಾಯದ ಜೊತೆಗೆ ಪಿಂಚಣಿ ಲಾಭ.
ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಸುಲಭ ಅರ್ಜಿ ಪ್ರಕ್ರಿಯೆ.

ಒಟ್ಟಾರೆಯಾಗಿ, ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸುವ ಅತ್ಯುತ್ತಮ ಮಾರ್ಗಗಳಲ್ಲಿ NPS ವಾತ್ಸಲ್ಯ ಯೋಜನೆ ಒಂದು ಪ್ರಮುಖ ಆಯ್ಕೆ. ಸಣ್ಣ ಹೂಡಿಕೆಯ ಮೂಲಕ ವರ್ಷಗಳಿಂದ ವರ್ಷಗಳವರೆಗೆ ಬಡ್ಡಿ ಸಂಗ್ರಹಿಸಿ, ಅವರಿಗೆ ಪ್ರೌಢಾವಸ್ಥೆಯಲ್ಲಿಯೇ ಭದ್ರ ಆರ್ಥಿಕ ನೆಲೆ ಸೃಷ್ಟಿಸಲು ಇದು ಉತ್ತಮ ಅವಕಾಶ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories