ವಾಹನ ಮಾಲೀಕರು ಹಾಗೂ ಲೈಸೆನ್ಸ್ ಹೋಲ್ಡರ್‌ಗಳಿಗೆ ಮಹತ್ವದ ಸುದ್ದಿ: ಮೊಬೈಲ್ ನಂಬರ್ ಲಿಂಕಿಂಗ್ ಕಡ್ಡಾಯ
ಇಂದಿನ ಡಿಜಿಟಲ್ ಯುಗದಲ್ಲಿ ಸರಕಾರಿ ಸೇವೆಗಳಲ್ಲಿ ಪಾರದರ್ಶಕತೆ, ತ್ವರಿತ ಸಂವಹನ ಹಾಗೂ ನಾಗರಿಕರ ಅನುಕೂಲತೆಗಾಗಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿಶೇಷವಾಗಿ ಸಾರಿಗೆ ಕ್ಷೇತ್ರದಲ್ಲಿ ಪ್ರತಿ ವಾಹನ ಮಾಲೀಕರಿಗೂ ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ನವೀನ ಮಾಹಿತಿಯನ್ನು ತಲುಪಿಸುವುದು, ದಂಡ ಅಥವಾ ನೋಟಿಸ್‌ಗಳನ್ನು ಸರಿಯಾದ ವ್ಯಕ್ತಿಗೆ ಕಳುಹಿಸುವುದು ಮತ್ತು ಸೇವೆಗಳನ್ನು ಸುಗಮಗೊಳಿಸುವುದು ದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಮಹತ್ವದ ಹೆಜ್ಜೆ ಇಟ್ಟಿದ್ದು, ಎಲ್ಲ ವಾಹನ ಮಾಲೀಕರು ಹಾಗೂ ಲೈಸೆನ್ಸ್ ಹೊಂದಿದವರು ತಮ್ಮ ಮೊಬೈಲ್ ನಂಬರ್‌ಗಳನ್ನು ಸಾರಿಗೆ ಡೇಟಾಬೇಸ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಈ ನಿಯಮದಿಂದಾಗಿ ನಾಗರಿಕರಿಗೆ ನೇರ ಪ್ರಯೋಜನ ದೊರೆಯಲಿದ್ದು, ಸರ್ಕಾರದ ವಿವಿಧ ಸಾರಿಗೆ ಸೇವೆಗಳು ಪಾರದರ್ಶಕವಾಗಲು ಸಹಾಯವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ದೇಶಾದ್ಯಂತ ವಾಹನ ಮಾಲೀಕರು ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಇಂದಿನಿಂದ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಕ್ರಮವು ಕೇವಲ ಕಾನೂನುಬದ್ಧ ಪ್ರಕ್ರಿಯೆಗಷ್ಟೇ ಅಲ್ಲ, ಪಾರದರ್ಶಕತೆ, ಸಮಯಕ್ಕೆ ತಕ್ಕ ಮಾಹಿತಿ ಹಂಚಿಕೆ ಹಾಗೂ ನಾಗರಿಕರ ಸುಗಮ ಸೇವೆಗಳ ದೃಷ್ಟಿಯಿಂದ ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಇದನ್ನು ಜಾರಿಗೊಳಿಸುವುದರ ಮೂಲಕ ಸರ್ಕಾರವು ಸಾರಿಗೆ ಡೇಟಾಬೇಸ್ ಬಲಪಡಿಸುವುದು, ದಂಡ ಹಾಗೂ ನೋಟಿಸ್‌ಗಳ ಸ್ಪಷ್ಟ ಮಾಹಿತಿಯನ್ನು ತಕ್ಷಣ ಕಳುಹಿಸುವುದು, ತಪ್ಪು ನೋಟಿಸ್‌ಗಳ ಸಮಸ್ಯೆ ತಪ್ಪಿಸುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲು ಉದ್ದೇಶಿಸಿದೆ. ಈ ಪ್ರಕ್ರಿಯೆಯಲ್ಲಿ ಆಧಾರ್ ಅಥೆಂಟಿಕೇಶನ್ ಕಡ್ಡಾಯವಾಗಿದ್ದು, ನಾಗರಿಕರು ತಮ್ಮ ಮಾಹಿತಿಯನ್ನು ಸ್ವಯಂ ಆನ್‌ಲೈನ್ ಮೂಲಕ ಸುಲಭವಾಗಿ ಅಪ್‌ಡೇಟ್ ಮಾಡಿಕೊಳ್ಳಬಹುದು.
ಏಕೆ ಮೊಬೈಲ್ ನಂಬರ್ ಲಿಂಕ್ ಮಾಡಬೇಕು?:
- ದಂಡ, ನೋಟಿಸ್ ಸೇರಿದಂತೆ ಸಾರಿಗೆ ಸಂಬಂಧಿತ ಎಲ್ಲಾ ಮಾಹಿತಿಗಳು ನೇರವಾಗಿ ವಾಹನ ಮಾಲೀಕರ ಮೊಬೈಲ್‌ಗೆ ಬರುತ್ತವೆ.
- ತಪ್ಪಾಗಿ ನೋಟಿಸ್ ಬಂದರೆ ತಕ್ಷಣ ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು.
- ಸಾರಿಗೆ ಇಲಾಖೆಯ ಎಲ್ಲಾ ಸೇವೆಗಳಲ್ಲಿ ಪಾರದರ್ಶಕತೆ ಹೆಚ್ಚುತ್ತದೆ.
- ಭವಿಷ್ಯದಲ್ಲಿ ಎಲ್ಲಾ ಆನ್‌ಲೈನ್ ಸೇವೆಗಳಿಗೆ ಮೊಬೈಲ್ OTP ಅಗತ್ಯವಾಗಲಿದೆ.
MoRTH ಆದೇಶದ ಪ್ರಮುಖ ಅಂಶಗಳು ಏನು?:
- ಸಾರಿಗೆ ಡೇಟಾಬೇಸ್ ಬಲಪಡಿಸುವುದು: ದೇಶಾದ್ಯಂತ ಎಲ್ಲಾ ವಾಹನ ಮತ್ತು ಲೈಸೆನ್ಸ್ ಮಾಹಿತಿ ಒಗ್ಗೂಡಿಸಲಾಗುತ್ತದೆ.
- ರಿಯಲ್ ಟೈಮ್ ಅಪ್‌ಡೇಟ್‌ಗಳು: ದಂಡದ ಮಾಹಿತಿ, ನೋಟಿಸ್ ಹಾಗೂ ಇತರ ಸಾರಿಗೆ ವಿವರಗಳನ್ನು ತಕ್ಷಣ ಕಳುಹಿಸಲಾಗುತ್ತದೆ.
- ಗೊಂದಲ ತಪ್ಪಿಸುವುದು: ತಪ್ಪು ನೋಟಿಸ್‌ಗಳು ಅಥವಾ ಪಾವತಿ ಸಂಬಂಧಿತ ಅಸ್ಪಷ್ಟತೆ ನಿವಾರಣೆಯಾಗುತ್ತದೆ.
ಆಧಾರ್ ಅಥೆಂಟಿಕೇಶನ್ ಮೂಲಕ ಪ್ರಕ್ರಿಯೆ ಹೇಗೆ?:
- ವಾಹನದ ರಿಜಿಸ್ಟ್ರೇಶನ್ ನಂಬರ್, ಎಂಜಿನ್/ಚಾರ್ಸಿ ನಂಬರ್, ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು.
- ನಂತರ ಆಧಾರ್ ನಂಬರ್ ಹಾಕಿ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ OTP ಬರುತ್ತದೆ.
- OTP ನಮೂದಿಸಿದ ನಂತರ ಲಿಂಕಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.
ಆನ್‌ಲೈನ್ ಲಿಂಕಿಂಗ್ ಹೇಗೆ ಮಾಡಬೇಕು?:
- ಮೊದಲಿಗೆ Parivahan.gov.in ವೆಬ್‌ಸೈಟ್‌ಗೆ ಹೋಗಿ.
- ನಂತರ “Update Mobile Number” ಆಯ್ಕೆ ಮಾಡಿ.
- ಅಲ್ಲಿ ಎರಡು ಆಯ್ಕೆಗಳಿರುತ್ತವೆ:
- ವಾಹನ ರಿಜಿಸ್ಟ್ರೇಶನ್ ಜೊತೆ ಮೊಬೈಲ್ ಲಿಂಕಿಂಗ್.
- ಡ್ರೈವಿಂಗ್ ಲೈಸೆನ್ಸ್ ಜೊತೆ ಮೊಬೈಲ್ ಲಿಂಕಿಂಗ್.
- ನಂತರ ಸಂಬಂಧಿತ ದಾಖಲೆಗಳ ವಿವರ ನೀಡಿ.
- ಆಧಾರ್ OTP ಮೂಲಕ ದೃಢೀಕರಿಸಿ.
- ಗಮನಿಸಿ ಈ ಪ್ರಕ್ರಿಯೆಗೆ ಯಾವುದೇ ಶುಲ್ಕವಿಲ್ಲ.
ಒಂದು ವೇಳೆ ನಿಮ್ಮ ವಾಹನ ಅಥವಾ ಲೈಸೆನ್ಸ್‌ಗೆ ಮೊಬೈಲ್ ನಂಬರ್ ಈಗಾಗಲೇ ಲಿಂಕ್ ಆಗಿದ್ದರೆ, ಹೊಸದಾಗಿ ಲಿಂಕ್ ಮಾಡುವ ಅಗತ್ಯವಿಲ್ಲ. ಆದರೆ ಲಿಂಕ್ ಮಾಡಿಲ್ಲದಿದ್ದರೆ ಶೀಘ್ರದಲ್ಲೇ ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಿಕೊಳ್ಳುವುದು ಕಡ್ಡಾಯ. ಸರಳ, ಉಚಿತ ಮತ್ತು ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆಯಾಗಿರುವುದರಿಂದ ಪ್ರತಿಯೊಬ್ಬ ವಾಹನ ಮಾಲೀಕರು ಹಾಗೂ ಚಾಲಕರು ಇದನ್ನು ನಿರ್ಲಕ್ಷಿಸದೆ ತಕ್ಷಣ ಮಾಡಿಕೊಳ್ಳುವುದು ಉತ್ತಮ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.