ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭ

WhatsApp Image 2023 09 30 at 14.51.36

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಹೊಸ ರೇಷನ್ ಕಾರ್ಡ್(new ration card) ಗೆ ಅರ್ಜಿಯನ್ನು ಸಲ್ಲಿಸುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕುವ ಮುನ್ನ ಏನೆಲ್ಲ ಮಾಹಿತಿಗಳನ್ನು ಹೊಂದಿಸಿಟ್ಟಿಕೊಳ್ಳಬೇಕು?, ಹೊಸ ಪಡಿತರ ಚೀಟಿಗಳಿಗೆ ಎಲ್ಲಿ ಅರ್ಜೆಗಳನ್ನು ಸಲ್ಲಿಸಬೇಕು?, ಬೇಕಾದ ದಾಖಲೆಗಳು ಯಾವುವು?, ಯಾವ ದಿನಾಂಕದಿಂದ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಶುರುವಾಗಲಿದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ :

WhatsApp Image 2023 08 06 at 5.51.05 PM 1

ಮೇಲಿನ screenshot ಅನ್ನು ನೀವು ಗಮನಿಸಬಹುದು, ಗ್ರಾಮ ಒನ್, ಕರ್ನಾಟಕ ಒನ್, ಮತ್ತು ಬೆಂಗಳೂರು ಒನ್ ಕೇಂದ್ರಗಳ ಸೇವಾ ಸಿಂಧುವಿನಲ್ಲಿ ಈಗಾಗಲೇ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕುವ ಫಾರಂ ಕಾಣಿಸಿಕೊಳ್ಳುತ್ತಿದೆ. ( application for new BPL ration card ) ಆದರೆ ಈಗ ಅರ್ಜಿ ಸಲ್ಲಿಸಲು ಪ್ರಯತ್ನಿಸಿದರೆ ಕೊನೆಯಲ್ಲಿ ಅರ್ಜಿ submit ಆಗುತ್ತಿಲ್ಲ, ಆದರೆ ಇದೇ ಬರುವ ಆಗಸ್ಟ್ 15ರ ನಂತರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗುವ ಸಾಧ್ಯತೆ ಇದೆ, ಹಾಗಾಗಿ ಯಾರೆಲ್ಲಾ ಹೊಸ ರೇಷನ್ ಕಾರ್ಡ ಗೆ ಅರ್ಜಿ ಸಲ್ಲಿಸುವ ನಾಗರಿಕರು ಬೇಕಾದ ದಾಖಲಾತಿಗಳನ್ನು ಈಗಲೇ ಸಿದ್ದಪಡಿಸಿಕೊಳ್ಳುವುದು ಉತ್ತಮ

chanel

ಹೊಸ ಸರ್ಕಾರ ಬಂದ ಮೇಲೆ ಅಂತಲೂ ರೇಷನ್ ಕಾರ್ಡ್ ಎಲ್ಲರಿಗೂ ತುಂಬಾ ಅವಶ್ಯವಿದೆ. ರೇಷನ್ ಕಾರ್ಡ್ ಇಲ್ಲದಿದ್ದರೆ ಯಾವ ಯೋಜನೆಯು ಕೂಡ ನಮಗೆ ದೊರೆಯುವುದಿಲ್ಲ. ಹಾಗಾಗಿ ಮೊನ್ನೆ ಅಷ್ಟೇ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಿದೆ. ಹಾಗೆಯೇ ಆಗಸ್ಟ್ 15 ರ ನಂತರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ವರದಿಗಳು ತಿಳಿಸಿವೆ. ಮೂರು ತಿಂಗಳಗಳ ಹಿಂದೆ ಅಥವಾ ಅದಕ್ಕೂ ಮುಂಚೆ ಅರ್ಜಿಯನ್ನು ಸಲ್ಲಿಸಿದ ರೇಷನ್ ಕಾರ್ಡ್ ಗಳನ್ನು, ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಉದ್ದೇಶದಿಂದಾಗಿ ವಿತರಣೆಯನ್ನು ತಡೆಗಿಡಿಯಲಾಗಿತ್ತು. ಆದರೆ ಈಗ ಪಡಿತರ ಚೀಟಿಯ ತಿದ್ದುಪಡಿ ಹಾಗೂ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸುವ(apply for new ration card) ಪ್ರಕ್ರಿಯೆ ಪುನರಾರಂಭಗೊಳ್ಳುತ್ತಿದೆ. ಹೊಸ ರೇಷನ್ ಕಾರ್ಡ್ ಗಳಿಗೆ ನೀವು ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಿಟಿಜನ್ ಲಾಗಿನ್ ಅಂದರೆ ಗ್ರಾಹಕರು ಸ್ವತಃ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗದು ಆದರೆ ನೀವು ಹತ್ತಿರದ ಮೇಲೆ ತಿಳಿಸಲಾದ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮಾನದಂಡಗಳೇನು

ಸರ್ಕಾರಿ ಅರೆ ಸರ್ಕಾರಿ ಹಾಗೂ ಖಾಯಂ ನೌಕರರು ಆಗಿರಬಾರದು, ವೃತ್ತಿ ತೆರಿಗೆ ಜಿಎಸ್‌ ಟಿ, ಆದಾಯ ತೆರಿಗೆ ಪಾವತಿದಾರರಾಗಿಬಾರದು, ಗ್ರಾಮೀಣ ಭಾಗದಲ್ಲಿ 3 ಹೆಕ್ಟೆರ್‌ ಗಿಂತ ಭೂಮಿ ಹೆಚ್ಚು ಹೊಂದಿರಬಾರದು, ನಗರದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮೆನಯಿರಬಾರದು, ಟ್ಯಾಕ್ಸಿ, ಕ್ಯಾಬ್‌ ಟ್ಯಾಕ್ಟರ್‌ ಹೊರತಾಗಿ ವೈಟ್‌ ಬೋರ್ಡ್ ಕಾರು ಇರಬಾರದು, ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿರುವ ಕುಟುಂಬ ಆಗಿರಬಾರದು.

whatss

ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವ ಮುನ್ನ ಯಾವೆಲ್ಲ ಸಿದ್ಧತೆ ಇರಬೇಕು :

ಹೊಸ ರೇಷನ್ ಕಾರ್ಡಿಗೆ ಬಯೋಮೆಟ್ರಿಕ್ ಅವಶ್ಯಕತೆ ಇರುತ್ತದೆ. ಹಾಗಾಗಿ ಬಯೋಮೆಟ್ರಿಕ್ ನೀಡಲು ರೇಷನ್ ಕಾರ್ಡಿನಲ್ಲಿ ಇರಬೇಕಾದ ಸದಸ್ಯರು ಎಲ್ಲರೂ ಸರ್ಕಾರಿ ಕೇಂದ್ರಗಳಿಗೆ ಹೋಗಬೇಕಾಗುತ್ತದೆ.
ಐದು ವರ್ಷದ ಒಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಅವಶ್ಯಕತೆ ಇರುವುದಿಲ್ಲ ಆದರೆ ಅವರು ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಹೊಂದಿರಬೇಕು. PHH ಅಂದರೆ ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಬಯಸುವ ಗ್ರಾಹಕರು ಆಧಾರ್ ಕಾರ್ಡ್ ಹಾಗೂ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು. NPHH ಅಂದರೆ ಎಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್(Aadhar card) ಅಗತ್ಯವಿದೆ. ಆಧಾರ್ ಕಾರ್ಡಿನಲ್ಲಿ ವಿಳಾಸವು ಸರಿಯಾಗಿರಬೇಕು.

ಬೇಕಾದ ದಾಖಲೆಗಳು :

ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಕುಟುಂಬದಲ್ಲಿ ಯಾರಾದರೂ ಒಬ್ಬರ ಆದಾಯ ಪ್ರಮಾಣ ಪತ್ರ
ಮನೆಯಲ್ಲಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಲ್ಲಿ ಅವರ ಜನನ ಪ್ರಮಾಣ ಪತ್ರ,
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ / ಇ-ಮೇಲ್ ಐಡಿ, ಮೇಲೆ ತಿಳಿಸಿದ ದಾಖಲೆಗಳನ್ನು ಹೊಂದಿರದಿದ್ದಲ್ಲಿ, ಹೊಸ ಪಡಿತರ ಚೀಟಿಗಾಗಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

tel share transformed

ನೀವೇನಾದರೂ ಇನ್ನೂ ಹೊಸ ರೇಷನ್ ಕಾರ್ಡನ್ನು ಹೊಂದಿಲ್ಲವೆಂದರೆ ಹಾಗೂ ಅದಕ್ಕೆ ಅರ್ಜಿಯನ್ನು ಸಲ್ಲಿಸಲು ಕಾಯುತ್ತಿದ್ದರೆ, ಈ ಲೇಖನವು ನಿಮಗೆ ಸಹಾಯಮಾಡುತ್ತದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!