Train updates – ಈ ಎರಡು ಜಿಲ್ಲೆಗಳ ನಡುವೆ 10 ನಿಮಿಷಕ್ಕೊಂದು ರೈಲು ಸಂಚಾರ, ಕಂಪ್ಲೀಟ್ ಮಾಹಿತಿ ಇಲ್ಲಿದೆ

mysore to bengaluru train timimgs

WhatsApp Group Telegram Group

ಇದೀಗ ಸಂಚಾರಿಗಳಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಮೈಸೂರು ಮತ್ತು ಬೆಂಗಳೂರು ನಡುವೆ ಪ್ರತಿ 10 ನಿಮಿಷಗಳಿಗೊಮ್ಮೆ ರೈಲು (Train) ಸಂಚಾರ ನಡೆಸುವ ಬಗ್ಗೆ ರೈಲ್ವೆ ಮಂಡಳಿಯು (Railway Board) ನಿರ್ಧಾರ ಕೈಗೊಂಡಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಮತ್ತು ಬೆಂಗಳೂರು ನಡುವೆ 10 ನಿಮಿಷಕ್ಕೊಂದು ರೈಲು ಸಂಚಾರ ಆರಂಭಿಸುವ ಉದ್ದೇಶ ( Purpose ) :

ಎಲ್ಲರಿಗೂ ಪ್ರಯಾಣ ಮೂಲಸೌಕರ್ಯವನ್ನು ಒದಗುಸಬೇಕು ಮತ್ತು ಆರ್ಥಿಕ ಬೆಳವಣಿಗೆಯನ್ನು ( Increasing Economic ) ಉತ್ತೇಜಿಸುವಲ್ಲಿ ಇದು ಒಂದು ಮುಖ್ಯ ಪಾತ್ರ ವಹಿಸುತ್ತದೆ. ಅದರ ಜೊತೆಗೆ ಈ ರೈಲಿನ ವ್ಯವಸ್ಥೆಯನ್ನು ಪ್ರಾರಂಭಿಸುವುದರಿಂದ ಉಭಯ ನಗರಗಳ ನಡುವಿನ ಪ್ರಯಾಣಿಕರಿಗೆ ತ್ವರಿತ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವನ್ನು ದೊರಕಿಸುವುದು ಇದರ ಮುಖ್ಯ ಉದ್ದೇಶ ಆಗಿದೆ.

ಪ್ರತಿ 10 ನಿಮಿಷಕ್ಕೆ ರೈಲು ಸಂಚಾರ :

ಮುಖ್ಯವಾಗಿ ಎರಡು ನಗರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಈ ರೈಲು ವ್ಯವಸ್ಥೆಯನ್ನು ಕೈಗೊಳ್ಳಲಾಗಲಿದೆ. ಮೆಟ್ರೋ ಶೈಲಿಯ ( Metro Style ) ರೈಲುಗಳು ಈ ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ಟ್ರ್ಯಾಕ್‍ಗಳನ್ನು ನಾಲ್ಕು ಪಟ್ಟು ಹೆಚ್ಚಿಸುವ ವಿಶಾಲ ಯೋಜನೆಯು ಇದಾಗಿದೆ. ಹಾಗೆಯೇ ಸುಧಾರಿತ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಯೋಜನೆ ಪರಿಹರಿಸುತ್ತದೆ. ಹಾಗೆಯೇ ಬಂಗಾರಪೇಟೆ-ಜೋಲಾರಪೇಟೆ, ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ವಿಭಾಗಗಳಲ್ಲಿ ಚತುಷ್ಪಥ ( Four Routes ) ಕಾಮಗಾರಿಗೆ ಅಂತಿಮ ಸ್ಥಳವನ್ನು ಗುರುತಿಸಲಾಗಿದೆ. ಅದನ್ನು ಹೊರತು ಪಡಿಸಿ ಬೆಂಗಳೂರಿನ ಹೊರವಲಯವನ್ನು ಒಳಗೊಂಡಿರುವ ವೃತ್ತಾಕಾರದ ರೈಲುಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಕೂಡ ಅನುಮೋದನೆ ನೀಡಲಾಗಿದೆ.

whatss

4 ಲೇನ್‌ ರೈಲ್ವೆ ಮಾರ್ಗಕ್ಕೆ ( Four Lene Train Route ) ಸಮೀಕ್ಷೆ ಮಾಡಲಾಗಿದೆ :

ಈಗಾಗಲೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಆಗಿದ್ದು, ಇದೀಗ ರೈಲ್ವೆ ಇಲಾಖೆಯು ಈ ಎರಡು ನಗರಗಳ ನಡುವಿನ ಮಾರ್ಗಗಳಲ್ಲಿ ನಾಲ್ಕು ಹಳಿ ನಿರ್ಮಾಣಕ್ಕೆ ಮುಂದಾಗಿದೆ. ಹಾಗಾದರೆ ಇದರಿಂದ ಏನೆಲ್ಲ ಪ್ರಯೋಜನಾ ಆಗಲಿದೆ ಎನ್ನುವ ಮಾಹಿತಿಯ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.

ಈಗಾಗಲೇ ಬೆಂಗಳೂರು-ಮೈಸೂರು ಮಾರ್ಗಗಳಲ್ಲಿ 4 ರೈಲ್ವೆ ಹಳಿ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗಿವೆ. ಪ್ರಯಾಣಿಕರ ದಟ್ಟಣೆ ನಿವಾರಣೆ ಮಾಡುವ ಸಲುವಾಗಿ ಮತ್ತು ಸರಕು ಸಾಗಣಿಕೆ ಹೆಚ್ಚಳದ ಉದ್ದೇಶದಿಂದ ನೈರುತ್ಯ ರೈಲ್ವೆಯು ಬೆಂಗಳೂರು ಸಂಪರ್ಕಿಸುವ ಮಾರ್ಗವೂ ಸೇರಿ ಒಟ್ಟಾರೆ 10 ರೈಲ್ವೆ ಮಾರ್ಗಗಳ ಜೋಡಿ ಹಳಿ ( Two Tracks ) ಹಾಗೂ ಮೈಸೂರು-ಬೆಂಗಳೂರು ಮಾರ್ಗಗಳ 4 ಹಳಿ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಅದಕ್ಕೆ ಅಂತಿಮ ಸ್ಥಳ ಸಮೀಕ್ಷೆಗೆ ನಿರ್ಧರಿಸಿದೆ.

ಯಾವೆಲ್ಲ ಮಾರ್ಗಗಳಲ್ಲಿ ನಾಲ್ಕು ರೈಲು ಹಳಿ ನಿರ್ಮಾಣವಾಗಲಿದೆ ?

ಬೆಂಗಳೂರು-ತುಮಕೂರು (70 ಕಿಲೋ ಮೀಟರ್‌)
ಬೆಂಗಳೂರು-ಮೈಸೂರು (137 ಕಿಲೋ ಮೀಟರ್‌)
ಘಟ್ಟ ಪ್ರದೇಶ ಸೇರಿದಂತೆ ಬಂಗಾರಪೇಟೆ-ಜೋಲಾರಪೇಟೈ (72 ಕಿಲೋ ಮೀಟರ್‌)
ಹುಬ್ಬಳ್ಳಿ-ಹೊಸಪೇಟೆ (143 ಕಿಲೋ ಮೀಟರ್‌)
ಚಾಮರಾಜನಗರ-ಮೈಸೂರು (60 ಕಿಲೋ ಮೀಟರ್‌)
ಈ ಮಾರ್ಗವನ್ನು ಜೋಡಿಹಳಿಯಿಂದ 4 ಹಳಿಗೆ ಹೆಚ್ಚಿಸಲು ಆರಂಭ ಮಾಡಲಾಗಿದೆ.

ಒಂದೇ ಹಳಿ ಇರುವ ಮಾರ್ಗಗಳನ್ನು ಜೋಡಿ ಹಳಿ ಮಾಡಲು ನಿರ್ಧಾರ :

ಹೊಸಪೇಟೆ-ವ್ಯಾಸ ಕಾಲೋನಿ (58 ಕಿ.ಮೀ.)
ಹಾಸನ-ಕುಣಿಗಲ್‌-ಚಿಕ್ಕಬಾಣಾವರ (166 ಕಿ.ಮೀ.)
ಗಿಣಿಗೇರಾ-ರಾಯಚೂರು (166 ಕಿ.ಮೀ.)
ವ್ಯಾಸ ಕಾಲೋನಿ-ಕೊಟ್ಟೂರು-ಅಮರಾವತಿ ಕಾಲೋನಿ (196 ಕಿ.ಮೀ.)
ಮಾಲ್ಗೂರು -ಮದಕ್ಷಿರ- ಹಿರಿಯೂರು ಹೊಸ ಮಾರ್ಗದ ಡಬ್ಲಿಂಗ್‌ (110 ಕಿ.ಮೀ.)
ಗದಗ-ವಾಡಿ (257 ಕಿ.ಮೀ.)

ಈ ಮಾರ್ಗಗಳ ನಡುವೆ ಜೋಡಿಹಳಿ ರೂಪಿಸಲು ಅಂತಿಮ ಸ್ಥಳ ಸಮೀಕ್ಷೆಗೆ ನೈಋತ್ಯ ರೈಲ್ವೆ ಟೆಂಡರ್‌ ಕರೆದಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.

ಈ ರೈಲಿನ ವ್ಯವಸ್ಥೆಯಲ್ಲಿ ಅತ್ಯುತ್ತಮ ಮೂಲಸೌಕರ್ಯ ಒದಗಿಸಲಾಗಿದೆ :

ಮೆಟ್ರೋ ವ್ಯವಸ್ಥೆಗಳಿಗಿಂತ ಭಿನ್ನವಾಗಿ ಅತ್ಯತ್ತಮ ಮೂಲಸೌಕರ್ಯ ನೀಡಲಾಗಿದೆ. ಎಲ್ಲಾ ಭಾರತೀಯ ನಗರಗಳಲ್ಲಿನ ಉಪನಗರ ವ್ಯವಸ್ಥೆಗಳು ಭಾರತೀಯ ರೈಲ್ವೇ ನೆಟ್‍ವರ್ಕ್‍ಗೆ ಸಂಯೋಜಿಸಲ್ಪಟ್ಟಿವೆ, ಇದು ಅತ್ಯುತ್ತಮ ಮೂಲಸೌಕರ್ಯ ಬಳಕೆ ಎಂದು ಹೇಳಲಾಗಿದೆ. ಪ್ರಸ್ತುತ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಾಲ್ಕು ಕಾರಿಡಾರ್‍ಗಳನ್ನು ನಿರ್ಮಿಸಲು ಕೆ-ರೈಡ್ ಕಡ್ಡಾಯವಾಗಿದೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಮತ್ತು ಭವಿಷ್ಯದ ಭಾರತೀಯ ರೈಲ್ವೆ ನಡುವಿನ ಸಹಯೋಗದಲ್ಲಿ, ನೈಋತ್ಯ ರೈಲ್ವೆಯ ಉಪಕ್ರಮಗಳೊಂದಿಗೆ ಬೆಂಗಳೂರು ನಗರ ಮತ್ತು ಉಪಗ್ರಹ ಪಟ್ಟಣಗಳ ನಡುವೆ ಪ್ರಯಾಣಿಕರ ಸಂಚಾರ ಸಂಪರ್ಕವನ್ನು ಗಣನೀಯವಾಗಿ ಹೆಚ್ಚಿಸುವ ನನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!