ಕರ್ನಾಟಕದಲ್ಲಿ ಈ ವರ್ಷದ ಮುಂಗಾರು ಮಳೆ ಅಬ್ಬರಿಸಿದೆ. ಅರಬ್ಬಿ ಸಮುದ್ರ ಹಾಗೂ ದಕ್ಷಿಣ ಭಾರತದ ಮೇಲ್ಮೈ ಭಾಗದಲ್ಲಿ ಸಕ್ರಿಯಗೊಂಡಿರುವ ವಾಯುಭಾರ ಕುಸಿತ (Low Pressure Area) ಪರಿಣಾಮವಾಗಿ, ರಾಜ್ಯದ ಹಲವೆಡೆ ಮುಂದಿನ ಎಂಟು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ(Meteorological Department) ನೀಡಿದೆ. ಜುಲೈ 15ರಿಂದ 21ರವರೆಗೆ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಕೆಲವು ಒಳನಾಡು ಜಿಲ್ಲೆಗಳಲ್ಲಿ ನಿರಂತರ ಮಳೆಯ ಅಬ್ಬರ ಇರಲಿದ್ದು, ಸಾರ್ವಜನಿಕರ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಚಿಂತನೆ ಶುರುವಾಗಿದೆ. ಹಾಗಿದ್ದರೆ ಯಾವೆಲ್ಲ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಮುಂಗಾರು ಮಳೆ ಕರ್ನಾಟಕದಲ್ಲಿ ಮತ್ತೆ ತನ್ನ ಆರ್ಭಟಕ್ಕೆ ಸಿದ್ದವಾಗಿದೆ. ಇನ್ನು, ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದಿಂದ ಬಹುಜಿಲ್ಲೆಗಳ ಮೇಲೆ ‘ಆರೆಂಜ್’ ಮತ್ತು ‘ಯೆಲ್ಲೋ ಅಲರ್ಟ್’ ಘೋಷಿಸಿರುವ ಹಿನ್ನೆಲೆಯಲ್ಲಿ ಕೆಲವೊಂದಷ್ಟು ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ.
ಯಾವೆಲ್ಲ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ?
ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರಿನ ಪ್ರಕಾರ, ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ 115mm ರಿಂದ 200mm ಮೀಟರ್‌ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ‘ಆರೆಂಜ್ ಅಲರ್ಟ್’ ಮತ್ತು ‘ಯೆಲ್ಲೋ ಅಲರ್ಟ್’ಗಳನ್ನು ಘೋಷಿಸಲಾಗಿದೆ. ಮುಖ್ಯವಾಗಿ ಈ ಜಿಲ್ಲೆಗಳು ಹೆಚ್ಚು ಮಳೆಯತ್ತ ಮುಖ ಮಾಡಿವೆ,
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ:
ಜುಲೈ 15ರಿಂದ 21ರವರೆಗೆ ಭಾರೀ ಮಳೆ ನಿರೀಕ್ಷೆ – ‘ಆರೆಂಜ್ ಅಲರ್ಟ್’ ಘೋಷಣೆ.
ಚಿಕ್ಕಮಗಳೂರು, ಕೊಡಗು:
ಜುಲೈ 19ರಂದು ಭಾರಿ ಮಳೆಯ ಮುನ್ಸೂಚನೆ – ‘ಆರೆಂಜ್ ಅಲರ್ಟ್’, ಉಳಿದ ದಿನಗಳು – ‘ಯೆಲ್ಲೋ ಅಲರ್ಟ್’ ಘೋಷಣೆ.
ಶಿವಮೊಗ್ಗ, ಹಾಸನ:
ನಿರಂತರ ಧಾರಾಕಾರ ಮಳೆಯಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಶಾಲೆ-ಅಂಗನವಾಡಿ ರಜೆ ಬಗ್ಗೆ ನಿರೀಕ್ಷೆ ಏನು?:
ಕೊಡಗು, ಚಿಕ್ಕಮಗಳೂರು, ಮಡಿಕೇರಿ, ತೀರ್ಥಹಳ್ಳಿ, ಸಾಗರ, ಜೋಗ ಜಲಪಾತ, ಸೋಮವಾರಪೇಟೆ, ಬಾಗಮಂಡಲ ಮತ್ತು ಪಶ್ಚಿಮ ಘಟ್ಟದ ಇತರೆ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಆಡಳಿತ ಶಾಲೆ ಹಾಗೂ ಅಂಗನವಾಡಿಗಳಿಗೆ ಮುಂಜಾಗ್ರತಾ ರಜೆಯನ್ನು ಘೋಷಿಸಬಹುದಾದ ಸಾಧ್ಯತೆಯಿದೆ.
ಈ ಹಿಂದೆ ಮಳೆ ಪರಿಣಾಮದಿಂದಾಗಿ ಕರಾವಳಿ ಮತ್ತು ಮಲೆನಾಡು ಭಾಗದ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಜೆ ಘೋಷಿಸಲಾಗಿತ್ತು. ಇತ್ತೀಚಿನ ಈ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಇನ್ನೂ ಹೆಚ್ಚಿನ ಭಾಗಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಮುಂದಿನ ದಿನಗಳಲ್ಲಿ ರಜೆ ಘೋಷಣೆ ಸಾಧ್ಯ.
ಒಳನಾಡು ಜಿಲ್ಲೆಗಳ ಸ್ಥಿತಿ ಹೇಗೆ?:
ಕರಾವಳಿ ಮತ್ತು ಮಲೆನಾಡು ಹೊರತುಪಡಿಸಿ, ಹಾವೇರಿ, ಗದಗ, ಧಾರವಾಡ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಕೋಲಾರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ದಾವಣಗೆರೆ ಜಿಲ್ಲೆಗಳಲ್ಲಿ ಜಿಟಿ ಜಿಟಿಯಾಗಿ ಸಾಧಾರಣ ಮಳೆಯ ಅನುಭವವಾಗಿದೆ. ಈ ಭಾಗಗಳಲ್ಲಿ ತೀವ್ರ ಎಚ್ಚರಿಕೆ ಇಲ್ಲದಿದ್ದರೂ ಮಳೆ ತಾಪಮಾನ ಇಳಿಕೆಗೆ ಕಾರಣವಾಗಿದ್ದು, ಶೀತ ವಾತಾವರಣ ಉಂಟಾಗಿದೆ.
ಒಟ್ಟಾರೆಯಾಗಿ, ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮುಂದಿನ ದಿನಗಳಲ್ಲಿ ರಾಜ್ಯದ ಹಲವೆಡೆ ಜನಜೀವನಕ್ಕೆ ತೊಂದರೆಯಾಗುವಂತಹ ಮಳೆಯ ನಿರೀಕ್ಷೆ ಇದೆ. ರಸ್ತೆ ಸಂಚಾರ, ವಿದ್ಯುತ್ ಪೂರೈಕೆ ಮತ್ತು ಶಾಲಾ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಸಂಭವಿಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಸರ್ಕಾರದಿಂದ ಪ್ರಕಟವಾಗುವ ನಿರ್ಧಾರಗಳತ್ತ ಗಮನಹರಿಸಬೇಕು.
ಜಿಲ್ಲಾ ಆಡಳಿತಗಳು ಸ್ಥಿತಿಗತಿಯ ಪ್ರಕಾರ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದು, ಪೋಷಕರು ಹಾಗೂ ಶಿಕ್ಷಕರು ಸರಕಾರಿ ಪ್ರಕಟಣೆಗಳನ್ನು ಗಮನಿಸಿ ಕ್ರಮ ಕೈಗೊಳ್ಳುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.