ಭೂಗೋಳದ ತಂತ್ರಜ್ಞಾನದಲ್ಲಿ (In geography technology) ಕ್ರಾಂತಿಯೊಂದು ಭಾರತವನ್ನು ತಲುಪಿದೆಯೆಂಬುದಕ್ಕೆ ಈ ಸುದ್ದಿ ಒಂದು ಸ್ಪಷ್ಟ ಸಂಕೇತ. ಇಲ್ಲಿಯವರೆಗೆ ನಮಗೆ ತಿಳಿದಿದ್ದ ಭಾರತೀಯ ಕರಾವಳಿ ಉದ್ದ ಈಗ ಬದಲಾಗಿದ್ದು, 7,516 ಕಿ.ಮೀ ವಿಸ್ತೀರ್ಣದಿಂದ 11,098 ಕಿ.ಮೀ ಆಗಿದೆ. ಶೇ.48ರಷ್ಟು ಹೆಚ್ಚಳವಾಗಿರುವ ಈ ಬದಲಾವಣೆಗೆ ಕಾರಣ ಯುದ್ಧವಲ್ಲ, ಹೊಸ ಭೂಮಿ ವಶಪಡಿಸಿಕೊಳ್ಳುವ ರಾಜಕೀಯ (Political) ಚತುರತೆಯೂ ಅಲ್ಲ ಇದು ತಂತ್ರಜ್ಞಾನದ ವಿಜ್ಞಾನದ ಸಾಧನೆ. ಹಾಗಿದ್ದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನಾವು ಶಾಲೆಯಲ್ಲಿ ಓದಿದ್ದೆವು “ಭಾರತದ ಕರಾವಳಿ ಉದ್ದ 7,516 ಕಿಮೀ” ಅಷ್ಟೆ. ಈ ಅಂಕಿಯು ವರ್ಷಗಳು ಕಳೆದರೂ ಬದಲಾಗಲಿಲ್ಲ. ಆದರೆ ಇತ್ತೀಚೆಗೆ ಪ್ರಕಟವಾದ ಭಾರತ ಸರ್ಕಾರದ ಆಧುನಿಕ ಭೌಗೋಳಿಕ ಅಳತೆ ವರದಿ(Modern Geographic Measurement Report) ಬೃಹತ್ ಮಟ್ಟದಲ್ಲಿ ಹೊಸ ಓಲೈಕೆಯನ್ನು ನೀಡಿದೆ. ಭಾರತದ ಕರಾವಳಿ ಉದ್ದವು ಈಗ 11,098.81 ಕಿಲೋ ಮೀಟರ್ ಎಂದು ಘೋಷಿಸಲಾಗಿದೆ ಅಂದರೆ 3,582 ಕಿಮೀ, ಶೇ.48ರಷ್ಟು ಹೆಚ್ಚಳವಾಗಿದೆ.!
ಈ ಬದಲಾವಣೆಯು ಕೇವಲ ನಕ್ಷೆಯ ಮೇಲೆ ಮಾತ್ರವಲ್ಲ, ದೇಶದ ಭದ್ರತೆ, ವಿಕಾಸ ಯೋಜನೆಗಳು, ಪ್ರವಾಸೋದ್ಯಮ, ಹವಾಮಾನ ಬದಲಾವಣೆ ಇವೆಲ್ಲರ ಮೇಲೆ ಪರಿಣಾಮ ಬೀರುವಷ್ಟು ಗಂಭೀರ ಮತ್ತು ಪ್ರಾಯೋಗಿಕವಾಗಿದೆ.
ಭೂಗೋಳದ ಹೊಸ ದೃಷ್ಟಿಕೋನ(A new perspective on geography): ಏನು ಬದಲಾಗಿದೆ?:
ವಾಸ್ತವದಲ್ಲಿ ಭೂಮಿಯ ಮೇಲೆ ಏನೂ ಬದಲಾಗಿಲ್ಲ. ಆದರೆ, ಭೂಮಿಯ ಬಗ್ಗೆ ನಾವೆಲ್ಲಾ ತಿಳಿದುಕೊಳ್ಳುವ ರೀತಿ ಮಾತ್ರ ಸಂಪೂರ್ಣವಾಗಿ ಬದಲಾಗಿದೆ. ಭಾರತದಲ್ಲಿ ಇತ್ತೀಚೆಗೆ ನಡೆದ ತಂತ್ರಜ್ಞಾನಾಧಾರಿತ ನಿಖರ ಮಾಪನದ ಫಲವಾಗಿ, ಭಾರತೀಯ ಕರಾವಳಿ (Indian coastal) ಉದ್ದದ ಲೆಕ್ಕಾಚಾರದಲ್ಲಿ ಈ ಭಾರಿ ಬದಲಾವಣೆ ಬಂದಿದೆ.
ಪೂರ್ವದಲ್ಲಿ ಬಳಕೆಯಾಗುತ್ತಿದ್ದ ಮಾಪನ ಸ್ಕೆಲ್ 1:45,00,000 ರಷ್ಟು ಕಡಿಮೆ ರೆಸಲ್ಯೂಶನ್ (Low resolution) ಹೊಂದಿದ್ದವು. ಇದರಿಂದ ಕರಾವಳಿಯ ಅನೇಕ ಅಂಕುಡೊಂಕುಗಳು ಹಾಗೂ ಸಣ್ಣ ದ್ವೀಪಗಳ ಉದ್ದ ಲೆಕ್ಕಕ್ಕೆ ಬಾರದಿದ್ದವು. ಆದರೆ, ಈಗ ಬಳಸಿರುವ 1:2,50,000 ಪ್ರಮಾಣದ ಹೈ-ರೆಸಲ್ಯೂಶನ್ ಡೇಟಾ, ಜಿಯೋಗ್ರಾಫಿಕ್ ಇನ್ಫರ್ಮೇಶನ್ ಸಿಸ್ಟಮ್ (GIS) ತಂತ್ರಜ್ಞಾನ, ಮತ್ತು ಉಪಗ್ರಹ ಚಿತ್ರೀಕರಣದ ಸಹಾಯದಿಂದ ಪ್ರತಿಯೊಂದು ತಿರುವು, ಕೋಣೆ, ದ್ವೀಪವನ್ನು ನಿಖರವಾಗಿ ಸೆರೆಹಿಡಿಯಲಾಗಿದೆ.
ಕರಾವಳಿ ಉದ್ದದಲ್ಲಿ ಏನೇನಿತ್ತು ಬದಲಾವಣೆ?:
ಭಾರತದ ಕರಾವಳಿ ಉದ್ದ 7,516 ಕಿ.ಮೀ ಎಂದು ನಾವು ಹಲವು ದಶಕಗಳಿಂದ ಪಠ್ಯಪುಸ್ತಕಗಳಲ್ಲಿ ಓದುತ್ತಿದ್ದೆವು. ಆದರೆ ಈಗ ಆ ಉದ್ದ 11,098 ಕಿ.ಮೀ ಆಗಿದೆ. ಅಂದರೆ 3,582 ಕಿ.ಮೀ ಹೆಚ್ಚಳ!
ಈ ಬದಲಾವಣೆ ರಾಜ್ಯವಾರು ಈ ರೀತಿ ಪ್ರಭಾವ ಬೀರಿದೆ,
ಗುಜರಾತ್ : 2,340.62 ಕಿ.ಮೀ.
ಮಹಾರಾಷ್ಟ್ರ :877.97 ಕಿ.ಮೀ.
ಗೋವಾ: 193.95 ಕಿ.ಮೀ.
ಕರ್ನಾಟಕ: 343.30ಕಿ.ಮೀ.
ಕೇರಳ: 600.15ಕಿ.ಮೀ.
ತಮಿಳುನಾಡು: 1,068.69ಕಿ.ಮೀ.
ಆಂಧ್ರಪ್ರದೇಶ: 1,053.07ಕಿ.ಮೀ.
ಓಡಿಶಾ : 574.71ಕಿ.ಮೀ.
ಪ. ಬಂಗಾಳ : 721.02ಕಿ.ಮೀ.
ದಮನ್ & ದಿಯು: 54.38ಕಿ.ಮೀ.
ಪಾಂಡಿಚೇರಿ : 42.65ಕಿ.ಮೀ.
ಲಕ್ಷದ್ವೀಪ: 144.80ಕಿ.ಮೀ.
ಅಂಡಮಾನ್–ನಿಕೋಬಾರ್ : 3,083.50ಕಿ.ಮೀ.
ಈ ವಿವರಗಳು ಒಟ್ಟು 11,098.81 ಕಿ.ಮೀ ಉದ್ದದ ನವೀಕರಿತ ಕರಾವಳಿಯನ್ನು ತೋರಿಸುತ್ತವೆ.
ಅದಕ್ಕೆಲ್ಲಾ ಕಾರಣ – ತಂತ್ರಜ್ಞಾನ, ಸ್ಫಷ್ಟತೆ, ಮತ್ತು ದ್ವೀಪಗಳ ಅಳತೆ:
ಈ ಬದಲಾವಣೆಗೆ ಪ್ರಮುಖ ಕಾರಣಗಳೆಂದರೆ,
ಅತ್ಯಾಧುನಿಕ ಮಾಪನ ಸಾಧನಗಳು: GIS ಸಾಫ್ಟ್‌ವೇರ್ (GIS Software) ಬಳಕೆ.
ಹೆಚ್ಚಿನ ರೆಸಲ್ಯೂಶನ್ ಸ್ಕೆಲ್: 1:2,50,000 ಪ್ರಮಾಣದಲ್ಲಿ ಮಾಡಲಾದ ಹೊಸ ಮ್ಯಾಪಿಂಗ್.
ದ್ವೀಪಗಳ ಸಮಾವೇಶ: ಹಿಂದಿನ ಅಳತೆಯಲ್ಲಿ ಲೆಕ್ಕಕ್ಕೆ ಬಾರದೆ ಬಿದ್ದಿದ್ದ ಅನೇಕ ಕಡಲಾಚೆಯ ದ್ವೀಪಗಳು ಈಗ ಸೇರಿವೆ.
ಹೈ ವಾಟರ್ ಲೈನ್ (High water line) ಆಧಾರದ ಮೇಲೆ ಅಳತೆ: ಸಮುದ್ರದ ಹತ್ತಿರದ ಅತಿದೂರದ ಮರೆಮಾಚಿದ ತಿರುವುಗಳೂ ಸೇರಿವೆ.
ಕೋಸ್ಟ್‌ಲೈನ್ ಪ್ಯಾರಡಾಕ್ಸ್ – ಕರಾವಳಿಗೆ ನಿಖರವಾದ ಉದ್ದವೇ ಇಲ್ಲ!:
ಇಲ್ಲಿ ಒಂದು ವಿಜ್ಞಾನ ಸಂಬಂಧಿತ ವಿಚಾರವನ್ನು ಅರಿತುಕೊಳ್ಳುವುದು ಮುಖ್ಯ. ಕರಾವಳಿಯು ಅತ್ಯಂತ ಅನಿಯಮಿತವಾದ ಭೌಗೋಳಿಕ ರಚನೆಯಾಗಿದೆ. ಇದು “Coastline Paradox” ಅಂದರೆ, ನೀವು ಅಳತೆ ಮಾಡುವ ಸ್ಕೆಲ್ ಚಿಕ್ಕದಾದಷ್ಟು, ಉದ್ದ ಹೆಚ್ಚು ಬರುತ್ತದೆ. ಇದರರ್ಥ, ಕರಾವಳಿ ಉದ್ದವು ಯಾವತ್ತೂ ಸ್ಥಿರವಲ್ಲ. ನಾವೆಷ್ಟೇ ನಿಖರವಾಗಿ ಅಳೆಯುತ್ತಿದ್ದರೂ, ಇನ್ನೂ ಹೆಚ್ಚು ನಿಖರ ಅಳತೆ ಸಾಧ್ಯವಿದೆ. ಅಂದರೆ, ಉದ್ದ ಸದಾ ಬದಲಾಗುತ್ತಲೇ ಇರುತ್ತದೆ.
ದ್ವೀಪಗಳ ಸಂಖ್ಯೆಯಲ್ಲೂ ಸ್ಪಷ್ಟತೆ:
2016ರಲ್ಲಿ ವಿವಿಧ ಸಂಸ್ಥೆಗಳ ಲೆಕ್ಕಾಚಾರಗಳಲ್ಲಿ ಭಿನ್ನತೆ ಕಂಡುಬಂದಿತ್ತು,
Surveyor General: 1,382 ದ್ವೀಪಗಳು.
ಇತರ ಸಂಸ್ಥೆಗಳು: 1,334 ದ್ವೀಪಗಳು.
ಇದಕ್ಕೆ ಸ್ಪಷ್ಟತೆ ತರಲು, ಹೊಸ ಸಮೀಕ್ಷೆ 1,298 ಕಡಲಾಚೆ ದ್ವೀಪಗಳನ್ನು ದೃಢಪಡಿಸಿದೆ. ಜೊತೆಗೆ 91 ಒಳನಾಡು ದ್ವೀಪಗಳೊಂದಿಗೆ, ಒಟ್ಟು 1,389 ದ್ವೀಪಗಳು ಎಂದು ಪ್ರಮಾಣಿತವಾಗಿದೆ.
ಈ ಹೊಸ ಅಳತೆಯಿಂದ ಏನು ಲಾಭ?:
ಈ ಬದಲಾವಣೆ ಕೇವಲ ಅಂಕಿ-ಅಂಶಗಳ ಮಟ್ಟಿಗೇ ಅಲ್ಲ, ಇವು ದೇಶದ ಭದ್ರತೆ, ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಹವಾಮಾನ ಬದಲಾವಣೆಯ (Weather changes) ವಿರುದ್ಧ ರಕ್ಷಣಾತ್ಮಕ ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಕಾರ್ಯಕ್ಷಮ ನೌಕಾ ಗಸ್ತು ಯೋಜನೆಗಳು.
ಸಮುದ್ರ ತೀರ ರಕ್ಷಣಾ ಯೋಜನೆಗಳು.
ಪ್ರವಾಸೋದ್ಯಮಕ್ಕಾಗಿ ಹೊಸ ದ್ವೀಪಗಳ ಬಳಕೆ.
ಪ್ಲಾನಿಂಗ್ ಮತ್ತು ಇಂಟಿಗ್ರೇಟೆಡ್ ಕೋಸ್ಟಲ್ ಝೋನ್ ಮ್ಯಾನೇಜ್‌ಮೆಂಟ್ (Planning and Integrated Coastal Zone Management).
ಇದೇ ಕಾರಣಕ್ಕೆ, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಕರಾವಳಿ ಉದ್ದದ ಮರುಅಳತೆಯನ್ನು ನಡೆಸುವ ತೀರ್ಮಾನ ಕೈಗೊಂಡಿದೆ.
ಒಟ್ಟಾರೆಯಾಗಿ, ಈ ಬದಲಾವಣೆಯಲ್ಲಿ ನಾವು ನೂತನ ಭಾರತವನ್ನು ನೋಡಬಹುದು. ತಂತ್ರಜ್ಞಾನದ ಬೆಳಕಿನಲ್ಲಿ ತನ್ನ ನಿಜವಾದ ರೂಪವನ್ನು ಅನಾವರಣ ಮಾಡಿಕೊಳ್ಳುತ್ತಿರುವ ರಾಷ್ಟ್ರ(Nation). ಇದು ನಮ್ಮ ಭೂಗೋಳದ ಅಂತರಂಗವನ್ನು ತಿಳಿಯಲು ಇರುವ ನಮ್ಮ ಪ್ರಯತ್ನದ ಒಂದು ಹೆಜ್ಜೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




