Tata Ace Pro: ಟಾಟಾ ಮೋಟರ್ಸ್ ಮಿನಿ ಟ್ರಕ್ ಭರ್ಜರಿ ಎಂಟ್ರಿ, ಕಮ್ಮಿ ಬೆಲೆಗೆ ಟಾಟಾ ಎಸ್ ಪ್ರೊ.!

Picsart 25 07 02 19 25 28 7891

WhatsApp Group Telegram Group

ಟಾಟಾ ಮೋಟಾರ್ಸ್‌ನ ಹೊಸ ಮಿನಿ ಟ್ರಕ್ ಟಾಟಾ ಏಸ್ ಪ್ರೋ (Mini Truck Tata Ace Pro)ಬಿಡುಗಡೆ: ಕೇವಲ ₹3.99 ಲಕ್ಷಕ್ಕೆ ಪೆಟ್ರೋಲ್, CNG ಮತ್ತು ಇಲೆಕ್ಟ್ರಿಕ್ ಆಯ್ಕೆಗಳೊಂದಿಗೆ ಲಭ್ಯ!

ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹೆಸರಾಂತ ‘ಟಾಟಾ ಏಸ್’ ಸರಣಿಯಲ್ಲಿ ಹೊಸ ಆವೃತ್ತಿಯ ಮಿನಿ ಟ್ರಕ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ‘ಟಾಟಾ ಏಸ್ ಪ್ರೋ’ (Tata Ace Pro) ಎಂಬ ಹೆಸರಿನಲ್ಲಿ ಲಭ್ಯವಿರುವ ಈ ಹೊಸ 4 ಚಕ್ರದ ಮಿನಿ ಲಘು ವಾಹನವು, ಅದರ ವಿಶೇಷ ವೈಶಿಷ್ಟ್ಯಗಳು, ಬಹು ಆಯ್ಕೆಗಳ ಡ್ರೈವ್‌ ಟ್ರೈನ್ ಹಾಗೂ ಬೆಲೆಗಿಂತ ಹೆಚ್ಚಿನ ಮೌಲ್ಯವನ್ನು ನೀಡುವ ಸಾಮರ್ಥ್ಯದೊಂದಿಗೆ ಸಾಕಷ್ಟು ಗಮನಸೆಳೆದಿದೆ. ಹಾಗಿದ್ದರೆ ‘ಟಾಟಾ ಏಸ್ ಪ್ರೋ’ (Tata Ace Pro) ಎಂಬ ಹೆಸರಿನ ಹೊಸ 4 ಚಕ್ರದ ಮಿನಿ ಲಘು ವಾಹನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು, ಟಾಟಾ ಮೋಟಾರ್ಸ್ ಭಾರತದಲ್ಲಿ ತಮ್ಮ ಅತ್ಯಂತ ಜನಪ್ರಿಯ ಮಿನಿ ಟ್ರಕ್ ಸರಣಿಯ ಹೊಸ ಮಾದರಿ ಟಾಟಾ ಏಸ್ ಪ್ರೋ (Tata Ace Pro) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಳೆದ ಎರಡು ದಶಕಗಳಿಂದ ಭಾರತೀಯ ಲಘು ವಾಣಿಜ್ಯ ವಾಹನ (LCV) ಮಾರುಕಟ್ಟೆಯಲ್ಲಿ ಆಳವಾದ ಸಂಚಲನ ಮೂಡಿಸಿರುವ ಟಾಟಾ ಏಸ್ ಇದೀಗ ಹೊಸ ರೂಪದಲ್ಲಿ, ನೂತನ ತಂತ್ರಜ್ಞಾನ ಹಾಗೂ ಇನ್ನಷ್ಟು ವೇದಿಕೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ. ಕೇವಲ ₹3.99 ಲಕ್ಷದ ಪ್ರಾರಂಭಿಕ ಎಕ್ಸ್-ಶೋರೂಂ ಬೆಲೆಯಿಂದ ಲಭ್ಯವಿರುವ ಈ ವಾಹನವು ಪೆಟ್ರೋಲ್, ಬೈ-ಫ್ಯೂಯಲ್ (CNG + ಪೆಟ್ರೋಲ್) ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿರುವುದು ಇದರ ವಿಶೇಷ ಆಕರ್ಷಣೆ.

ಟಾಟಾ ಏಸ್ ಪ್ರೋ: ಕಡಿಮೆ ಬೆಲೆಯಲ್ಲಿ ಹೆಚ್ಚು ಸಾಮರ್ಥ್ಯ,

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಮಿನಿ ಲೋಡರ್ ಸೆಗ್ಮೆಂಟ್‌ನಲ್ಲಿ ಮತ್ತೊಂದು ಪರ್ವ ಆರಂಭಿಸಿದೆ. ಹೊಸದಾಗಿ ಬಿಡುಗಡೆಗೊಂಡ ಟಾಟಾ ಏಸ್ ಪ್ರೋ ನ ವೈಶಿಷ್ಟ್ಯಗಳು ಹೀಗಿವೆ :
ಪೆಟ್ರೋಲ್ ಆವೃತ್ತಿ(Petrol version): 694 ಸಿಸಿ ಎಂಜಿನ್ ಹೊಂದಿದ್ದು, ಶಕ್ತಿಯುತ ತಂತ್ರಜ್ಞಾನದಿಂದ ಲೋಡ್‌ ಹೊತ್ತಿ ಸುಲಭವಾಗಿ ಸಂಚರಿಸುತ್ತದೆ.
ಬೈ-ಫ್ಯೂಯಲ್ ಆವೃತ್ತಿ(Bi-fuel version): CNG ಬಳಸುವ ಮೂಲಕ ಇಂಧನ ದಕ್ಷತೆಯನ್ನು ಸಾಧಿಸುವುದರ ಜೊತೆಗೆ 5 ಲೀಟರ್ ಪೆಟ್ರೋಲ್ ಬ್ಯಾಕಪ್ ಟ್ಯಾಂಕ್‌ನ ಸೌಲಭ್ಯವಿದೆ.
ಎಲೆಕ್ಟ್ರಿಕ್ ಆವೃತ್ತಿ(Electric version): ಇಕೋ ಫ್ರೆಂಡ್ಲಿ ಆಯ್ಕೆಯಾಗಿದ್ದು, ಒಂದೇ ಚಾರ್ಜ್‌ನಲ್ಲಿ 155 ಕಿಮೀ ರೇಂಜ್ ನೀಡುತ್ತದೆ.

ತಾಂತ್ರಿಕ ವೈಶಿಷ್ಟ್ಯಗಳು:

ಲೋಡ್ ಸಾಮರ್ಥ್ಯ: 750 ಕೆಜಿ.
ಡೆಕ್ ಗಾತ್ರ: 6.5 ಅಡಿ (1.98 ಮೀಟರ್).
ಡ್ರೈವಿಂಗ್ ಮತ್ತು ನಿರ್ವಹಣೆಯ ಸುಲಭತೆ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರಕು ಸಾಗಣೆಗಾಗಿ ಸೂಕ್ತವಾದ ವಿನ್ಯಾಸ.

ಇನ್ನು, ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ(Managing Director of Tata Motors) ಶ್ರೀ ಗಿರೀಶ್ ವಾಫ್ ಹೇಳುವಂತೆ “ಟಾಟಾ ಏಸ್‌ನ ಮೊದಲ ಬಿಡುಗಡೆ ದೇಶದ ಸರಕು ಸಾಗಣೆ ಕ್ಷೇತ್ರದಲ್ಲಿ  ಕ್ರಾಂತಿಯನ್ನು ಉಂಟುಮಾಡಿತ್ತು. 25 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಇದುವರೆಗೆ ನೇರ ಅಥವಾ ಪರೋಕ್ಷವಾಗಿ ಉದ್ಯಮದ ಅವಕಾಶವನ್ನು ನೀಡಿದೆ. ಹೊಸ ಏಸ್ ಪ್ರೋ ಕೂಡ ಹೆಚ್ಚಿನ ಗಳಿಕೆ ಹಾಗೂ ನಂಬಿಕೆಯ ಕಾರ್ಮಿಕ ಸಾಧನವಾಗಲಿದೆ ಎಂದು ತಿಳಿಸಿದ್ದಾರೆ.

ವಾಣಿಜ್ಯ ವಾಹನ ವಿಭಾಗದ ಉಪಾಧ್ಯಕ್ಷ ಪಿನಾಕಿ ಹಲ್ದಾರ್(Pinaki Haldar) ಅವರು ಹೇಳಿರುವ ಪ್ರಕಾರ, “ಟಾಟಾ ಏಸ್ ಪ್ರೋ ಪರಿಕಲ್ಪನೆ ಗ್ರಾಹಕರ ನೈಜ ಅಗತ್ಯಗಳ ಅಧ್ಯಯನದ ಮೇರೆಗೆ ರೂಪುಗೊಂಡಿದೆ. ಇದು ವಿವಿಧ ವ್ಯಾಪಾರ ಮತ್ತು ಲಾಜಿಸ್ಟಿಕ್ ಕ್ಷೇತ್ರಗಳಲ್ಲಿ ಬಳಕೆದಾರರ ಅಗತ್ಯವನ್ನು ಪೂರೈಸುವಂತೆ ವಿನ್ಯಾಸಗೊಂಡಿದೆ.”

ಒಟ್ಟಾರೆಯಾಗಿ, ಟಾಟಾ ಮೋಟಾರ್ಸ್‌ನ ಈ ಹೊಸ ಆವೃತ್ತಿಯು ಕೇವಲ ಹೊಸ ತಂತ್ರಜ್ಞಾನ ಮತ್ತು ಕಡಿಮೆ ಬೆಲೆಗಾಗಿ ಮಾತ್ರವಲ್ಲ, ಭಾರತದ ಸಣ್ಣ ವ್ಯಾಪಾರಿಗಳಿಗೆ ಹಾಗೂ ಸ್ವತಂತ್ರ ಉದ್ಯಮಿಗಳಿಗೆ ನಂಬಿಕಾಸ್ಪದ ಸಾಧನವಾಗಿ ರೂಪುಗೊಳ್ಳಲಿದೆ. ಮಾರುಕಟ್ಟೆಯಲ್ಲಿ ಈ ಹೊಸ ಟಾಟಾ ಏಸ್ ಪ್ರೋ ಇದೀಗ ಲಘು ವಾಣಿಜ್ಯ ವಾಹನ ಕ್ಷೇತ್ರದ ದಿಕ್ಕೇ ಬದಲಾಯಿಸುವ ನಿರೀಕ್ಷೆಯಲ್ಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!