ನಿಮ್ಮ ಐಡಿ ಪ್ರೊಫ್ ಗಳ ಬಗ್ಗೆ ಎಚ್ಚರ ಜನರೇ : ಕೆಲವು ಸಂದರ್ಭಗಳಲ್ಲಿ ನಿಜವಾದ ಆಧಾರ್ ಕಾರ್ಡ್ ಬದಲಿಗೆ ಮಾಸ್ಕ್‌ಡ್ ಆಧಾರ್ ಕಾರ್ಡ್ (MASKED AADHAAR CARD) ಬಳಸಿ.
ಭಾರತದಲ್ಲಿ ನಾವು ಎಲ್ಲಿಯೇ ಹೋಗಬೇಕೆಂದರೂ ಅಥವಾ ಕೆಲವೊಂದು ವಿಷಯಗಳಿಗೆ ಐಡಿ ಪ್ರೊಫ್ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ. ಅದರಲ್ಲೂ ಆಧಾರ್ ಕಾರ್ಡ್ (Aadhaar card) ನಮ್ಮ ಎಲ್ಲಾ ಮಾಹಿತಿಯನ್ನು ಒಳಗೊಂಡಿರುವಂತಹ ಐಡಿ ಪ್ರೊಫ್(ID proof) ಎಂದರೆ ತಪ್ಪಾಗಲಾರದು. ಕೆಲವೊಮ್ಮೆ ನಾವು ಪ್ರವಾಸಕ್ಕೆ ಹೋಗುತ್ತೇವೆ. ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಉಳಿದುಕೊಳ್ಳಲು ಹೋಟೆಲ್ ಗಳಿಗೆ ತೆರಳುತ್ತೇವೆ. ಇಂತಹ ಸಂದರ್ಭದಲ್ಲಿ ಹೋಟೆಲ್ ಮಾಲೀಕರು (Hotel onwer) ಕೆಲವೊಂದು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಅಥವಾ ಭದ್ರತೆಯ ವಿಷಯಕ್ಕಾಗಿ ಪುರಾವೆಯಾಗಿ ಪಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ನಮ್ಮ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ಯಾರು ಬೇಕಾದರೂ ಇದನ್ನು ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ ನಾವು ನಿಜವಾದ ಆಧಾರ್ ಕಾರ್ಡನ್ನು ಬಳಸುವ ಬದಲಾಗಿ ಮಾಸ್ಕ್‌ಡ್ ಆಧಾರ್ ಕಾರ್ಡ್ ( Masked Aadhaar Card) ಬಳಸಿ ನಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು. ಇದರ ಪ್ರಯೋಜನಗಳೇನು? ಮಾಸ್ಕ್‌ಡ್ ಆಧಾರ್ ಕಾರ್ಡ್ ಹೇಗೆ ಪಡೆದುಕೊಳ್ಳಬೇಕು? ಎಲ್ಲೆಲ್ಲಾ ಬೆಳೆಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಾಸ್ಕ್‌ಡ್ ಆಧಾರ್ ಕಾರ್ಡ್ ಎಂದರೇನು?
ಮಾಸ್ಕ್‌ಡ್ ಆಧಾರ್ ಕಾರ್ಡ್ ಕೂಡ ನಿಜವಾದ ಆಧಾರ್ ಕಾರ್ಡ್ ನಷ್ಟೇ ಮುಖ್ಯವಾಗಿದೆ. ಮಾಸ್ಕ್‌ಡ್ ಆಧಾರ್ ಕಾರ್ಡ್ ನಲ್ಲಿ ಆಧಾರ್ ಸಂಖ್ಯೆಯ ಮೊದಲ 8 ಅಂಕೆಗಳನ್ನು “xxxx-xxxx” ನಂತಹ ಅಕ್ಷರಗಳೊಂದಿಗೆ ಬದಲಾಯಿಸಲಾಗುತ್ತದೆ, ಕೊನೆಯ 4 ಅಂಕೆಗಳು ಮಾತ್ರ ಗೋಚರಿಸುತ್ತವೆ. ಈ ರೀತಿಯಾಗಿ ಮರೆಮಾಚುವ ಮೂಲಕ ಜನರು ತಮ್ಮ ಸುರಕ್ಷತೆ ಮತ್ತು ಆ ವ್ಯಕ್ತಿಯ ಗುರುತನ್ನು ರಕ್ಷಿಸಿಕೊಳ್ಳಲು ಹೆಚ್ಚು ಸಹಕಾರಿಯಾಗುತ್ತದೆ. ಹಾಗೂ ಮಾಸ್ಕ್‌ಡ್ ಆಧಾರ್ ಕಾರ್ಡ್ ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಗುರುತಿನ ಕಳ್ಳತನ ಮತ್ತು ದುರುಪಯೋಗವನ್ನು ತಡೆಯಲು ತಡೆಗಟ್ಟುವ ಕ್ರಮಗಳನ್ನು ಪರಿಚಯಿಸಿದೆ. ಸಂಪೂರ್ಣ ಆಧಾರ್ ಸಂಖ್ಯೆಯ ಅಗತ್ಯವಿರುವ ಸರ್ಕಾರಿ ಲಾಭದ ವಹಿವಾಟುಗಳನ್ನು ಹೊರತುಪಡಿಸಿ, ಸಾಮಾನ್ಯ ಆಧಾರ್ ಕಾರ್ಡ್‌ನಂತೆ ಪರಿಶೀಲನೆ ಉದ್ದೇಶಗಳಿಗಾಗಿ ಮುಖವಾಡದ (masked) ಆಧಾರ್ ಅನ್ನು ಬಳಸಬಹುದು.
ಮಾಸ್ಕ್‌ಡ್ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಸಬಹುದು?
ಮಾಸ್ಕ್‌ಡ್ ಆಧಾರ್ ಕಾರ್ಡ್ ಅನ್ನು ಸರ್ಕಾರಿ ಲಾಭದ ವಹಿವಾಟುಗಳನ್ನು ಹೊರತುಪಡಿಸಿ, ಹೋಟೆಲ್ ಗಳು ಅಥವಾ ಓಯೋ ಕೊಠಡಿಗಳಲ್ಲಿ ಮತ್ತು ರೈಲುಗಳಲ್ಲಿ ಪ್ರಯಾಣಿಸುವಾಗ ಬಳಸಬಹುದು. ಹಾಗೂ ವಿಮಾನ ನಿಲ್ದಾಣದಲ್ಲಿಯೂ ಕೂಡ ಮಾಸ್ಕ್‌ಡ್ ಆಧಾರ್ ಕಾರ್ಡ್ ಬಳಸಬಹುದು.
ಮಾಸ್ಕ್‌ಡ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ?:
ಮಾಸ್ಕ್‌ಡ್ ಆಧಾರ್ ಕಾರ್ಡ್ ಪಡೆದುಕೊಳ್ಳಲು ಎರಡು ಮಾರ್ಗಗಳಿವೆ, UIDAI ವೆಬ್‌ಸೈಟ್ ಅಥವಾ ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಾಸ್ಕ್‌ಡ್ ಆಧಾರ್ ಕಾರ್ಡ್ ಪಡೆಯಬಹುದು.
UIDAI ವೆಬ್‌ಸೈಟ್ ಮೂಲಕ ಪಡೆದುಕೊಳ್ಳುವುದು ಹೇಗೆ?:
ಮೊದಲಿಗೆ ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ.
(https://uidai.gov.in/)
ನಂತರ myAadhaar ಪುಟದಿಂದ “ಆಧಾರ್ ಡೌನ್‌ಲೋಡ್” ಗೆ ನ್ಯಾವಿಗೇಟ್ ಮಾಡಿ.
ನ್ಯಾವಿಗೇಟ್ ಮಾಡಿದ ಮೇಲೆ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ.
ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಓಟಿಪಿ (OTP) ನಮೂದಿಸಿ.
ನಂತರ ಡೌನ್ಫೋಡ್ ಆಯ್ಕೆಯನ್ನು ಆರಿಸಬೇಕು.
ಇದರ ನಂತರ, ನೀವು ಮಾಸ್ಟ್ ಆಧಾರ್ ಕಾರ್ಡ್ ಅನ್ನು ಡೌಗ್ಲೋಡ್ ಮಾಡಲು ಬಯಸುತ್ತೀರಾ ಎಂದು ಚೆಕ್ಷಾಕ್ಸಲ್ಲಿ ನಿಮ್ಮನ್ನು ಕೇಳಲಾಗುತ್ತದೆ. ನೀವು ಇಲ್ಲಿ ಟಿಕ್ ಮಾಡಬೇಕು.
ಚೆಕ್ ಬಾಕ್ಸ್ ಟಿಕ್ (Box tick) ಮಾಡಿ ಸಲ್ಲಿಸಿದ ನಂತರ, ಮುಖವಾಡದ ಆಧಾರ್ ಕಾರ್ಡ್ ಡೌನ್ ಲೋಡ್ ಆಗುತ್ತದೆ.
ಮಾಸ್ಟ್ ಆಧಾರ್ ಕಾರ್ಡ್ ಅನ್ನು ಪಾಸ್ ವರ್ಡ್ ನೊಂದಿಗೆ ಸುರಕ್ಷಿತಗೊಳಿಸಲಾಗುತ್ತದೆ. ಪಾಸ್ ವರ್ಡ್ (Password) ನಲ್ಲಿ ನಿಮ್ಮಹೆಸರಿನ ಮೊದಲ ನಾಲ್ಕು ಅಕ್ಷರಗಳು ಮತ್ತು ಹುಟ್ಟಿದ ವರ್ಷವನ್ನು ನಮೂದಿಸಬೇಕು. ಇದರ ನಂತರ, ನಿಮ್ಮ ಮಾಸ್ಟ್ ಆಧಾರ್ ಕಾರ್ಡ್ ಅನ್ನು ತೋರಿಸಲಾಗುತ್ತದೆ.
ಆಫ್‌ಲೈನ್ ಪ್ರಕ್ರಿಯೆ (Offline process) :
ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.
ಗುರುತಿನ ಪುರಾವೆ, ಹುಟ್ಟಿದ ದಿನಾಂಕ ಮತ್ತು ವಿಳಾಸವನ್ನು ಸಲ್ಲಿಸಿ.
ಡಿಜಿಟಲ್ ವಿಧಾನದಂತೆಯೇ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




