₹1 ಲಕ್ಷ ಒಳಗಿನ ಮೈಲೇಜ್ ಕಿಂಗ್ ಬೈಕ್‌ಗಳು, ಭಾರತದ ಮಧ್ಯಮವರ್ಗೀಯರ ಆದರ್ಶ ಆಯ್ಕೆ.
ಭಾರತದಲ್ಲಿ ದ್ವಿಚಕ್ರ ವಾಹನಗಳು ಜನರ ದಿನನಿತ್ಯದ ಅಗತ್ಯವಾಗಿವೆ. ನಗರಗಳಲ್ಲಿ ಟ್ರಾಫಿಕ್‌ನಿಂದ ಪಾರಾಗಲು ಅಥವಾ ಗ್ರಾಮಾಂತರ ಪ್ರದೇಶಗಳಲ್ಲಿ ಸಹಜ ಸಾಗಣೆಗಾಗಿ, ಬಹುತೇಕ ಭಾರತೀಯರು ಬೈಕ್‌ಗಳನ್ನು ಆಯ್ಕೆಮಾಡುತ್ತಾರೆ. 2024ರಲ್ಲಿ 15% ರಿಂದ 17% ರಷ್ಟು ಬೆಳವಣಿಗೆಯೊಂದಿಗೆ ಭಾರತೀಯ ಬೈಕ್ ಉದ್ಯಮವು ಎತ್ತರಕ್ಕೆ ಏರಿದರೆ, 2025ರಲ್ಲೂ ಶೇ. 2-4% ಬೆಳವಣಿಗೆ ನಿರೀಕ್ಷೆಯಲ್ಲಿದೆ. ವಿಶೇಷವಾಗಿ ₹1 ಲಕ್ಷ ಬಜೆಟ್ ಒಳಗಿನ ಬೈಕ್‌ಗಳ ಬೇಡಿಕೆ ಎಂದಿಗೂ ಕಡಿಮೆಯಾಗಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
ಈ ಬಜೆಟ್‌ನಲ್ಲಿಯೇ ಉತ್ತಮ ಮೈಲೇಜ್, ಶಕ್ತಿಶಾಲಿ ಎಂಜಿನ್ ಮತ್ತು ಹೆಚ್ಚು ಫೀಚರ್‌ಗಳೊಂದಿಗೆ ಹಲವು ಕಂಪನಿಗಳು ಬೈಕ್‌ಗಳನ್ನು ಬಿಡುಗಡೆ ಮಾಡಿವೆ. ಇದರಲ್ಲಿ ಕೆಲವೊಂದು ಬೈಕ್‌ಗಳನ್ನು ನಾವು ಇಲ್ಲಿ ವಿಶ್ಲೇಷಿಸುತ್ತಿದ್ದೇವೆ.
ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) – ವಿಶ್ವಾಸಾರ್ಹತೆಗೊಂದು ಬೃಹತ್ ಹೆಸರು:
ಹೀರೋ ಕಂಪನಿಯ ಈ ಬೈಕ್ ಬಹುಕಾಲದಿಂದ ಮಧ್ಯಮವರ್ಗೀಯ ಭಾರತದ ‘ಹೀರೋ’ (Hero) ಆಗಿಯೇ ಮೆರೆದಿದೆ. i3S ತಂತ್ರಜ್ಞಾನದಿಂದ ಇದು ನಿಂತು ನಿಲ್ಲುವ ವೇಳೆ ಎಂಜಿನ್ ಅನ್ನು ಸ್ವಯಂಚಾಲಿತವಾಗಿ ನಿಲ್ಲಿಸಿ ಇಂಧನ ಉಳಿಸುತ್ತದೆ.
ಎಂಜಿನ್ ಸಾಮರ್ಥ್ಯ: 97.2cc
ಮೈಲೇಜ್: 70 ಕಿ.ಮೀ/ಲೀ
ಬೆಲೆ (ಎಕ್ಸ್ ಶೋ ರೂಂ): ₹ 77,026
ವಿಶೇಷತೆಗಳು: ಕಡಿಮೆ ನಿರ್ವಹಣಾ ವೆಚ್ಚ, ಉತ್ತಮ resale value. ಮತ್ತು ದಿನನಿತ್ಯ ಪ್ರಯಾಣಿಸುವ ಜನರಿಗೆ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.
ಹೋಂಡಾ SP 125 (Honda SP 125) – ಶಕ್ತಿ ಮತ್ತು ಸೌಲಭ್ಯಗಳ ಸಮತೋಲನ:
ಮೈಲೇಜ್ ಜೊತೆಗೆ ಸ್ಟೈಲ್‌ಗೂ ಗಮನ ನೀಡಿದವರು SP 125 ಕಡೆ ತಿರುಗುತ್ತಾರೆ. ಇದು ಡಿಜಿಟಲ್ ತಂತ್ರಜ್ಞಾನ, ಸೈಲೆಂಟ್ ಸ್ಟಾರ್ಟ್ ಹಾಗೂ ಸುಗಮ ಸವಾರಿಯನ್ನು ಒದಗಿಸುತ್ತದೆ.
ಎಂಜಿನ್ ಸಾಮರ್ಥ್ಯ: 123.94cc
ಮೈಲೇಜ್: 63 ಕಿ.ಮೀ/ಲೀ
ಬೆಲೆ: ₹ 89,468
ವಿಶೇಷತೆಗಳು: ಡಿಜಿಟಲ್ ಸ್ಪೀಡೋಮೀಟರ್ (digital speedometer), ಫ್ಯೂಲ್ ಎಫಿಷಿಯನ್ಸಿ (fuel efficency) ಮತ್ತು ಯುವ ಸವಾರರಿಗೆ ಮತ್ತು ಸ್ಟೈಲ್ ಪ್ರಿಯರಿಗೆ.
ಹೀರೋ ಎಕ್ಸ್‌ಟ್ರೀಮ್ 125R (Hero Xtreme 125R) – ಪವರ್‌ಫುಲ್, ಫೀಚರ್ ರಿಚ್:
ಹೀರೋ ನೂತನ ತಂತ್ರಜ್ಞಾನವನ್ನು ತೋರಿಸುವ ಬೈಕ್ ಇದು. LED ಹೆಡ್ಲೈಟ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮುಂತಾದ ವೈಶಿಷ್ಟ್ಯಗಳು ಇದನ್ನು ವಿಭಿನ್ನವಾಗಿಸುತ್ತವೆ.
ಎಂಜಿನ್ ಸಾಮರ್ಥ್ಯ: 124.7cc
ಮೈಲೇಜ್: 66 ಕಿ.ಮೀ/ಲೀ
ಬೆಲೆ: ₹ 96,336
ವಿಶೇಷತೆಗಳು: ಆಕರ್ಷಕ ವಿನ್ಯಾಸ, ಫುಲ್ ಡಿಜಿಟಲ್ ಡಿಸ್ಪ್ಲೇ ಮತ್ತು ಪರ್ಫಾರ್ಮೆನ್ಸ್ ಮತ್ತು ಲುಕ್‌ಗೆ ಒತ್ತ
ಸೈಕ್ಲಿಕ್ ಪ್ರಿಯಗಳಿಗಾಗಿ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.
ಟಿವಿಎಸ್ ರೇಡಿಯನ್ (TVS Radeon) ತಂತ್ರಜ್ಞಾನದ ತಾನಾಗುವ ಸರಳತೆ:
ಕಡಿಮೆ ಎಂಜಿನ್ ಸಾಮರ್ಥ್ಯದ bike ಆದರೆ ಅದರಲ್ಲಿರುವ ಯುಎಸ್‌ಬಿ ಚಾರ್ಜಿಂಗ್ (USB charging), ಪವರ್ ಮೋಡ್ ಸೂಚನೆಗಳು ಇತರೆಗಳು ಇದನ್ನು ಬಳಕೆದಾರ ಸ್ನೇಹಿಯಾಗಿ ರೂಪಿಸುತ್ತವೆ.
ಎಂಜಿನ್ ಸಾಮರ್ಥ್ಯ: 109.7cc
ಮೈಲೇಜ್: 62 ಕಿ.ಮೀ/ಲೀ
ಬೆಲೆ: ₹ 71,039
ವಿಶೇಷತೆಗಳು: ಟ್ಯೂಬ್‌ಲೆಸ್ ಟೈರ್, ಯುಎಸ್‌ಬಿ ಚಾರ್ಜರ್ ಮತ್ತು ನಿತ್ಯಪ್ರಯೋಗ ಮತ್ತು ಕಡಿಮೆ ಬಜೆಟ್ ಬಯಸುವವರಿಗೆ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.
ಹೋಂಡಾ ಲಿವೊ (Honda Livo) ಆಕರ್ಷಕ ನೋಟ, ನವೀನತೆ :
ಸಾಧಾರಣ commuter segment ಬೈಕ್ ಆಗಿದ್ದರೂ, ಲಿವೊ ತನ್ನ ಡಿಸೈನ್ ಮತ್ತು ತಂತ್ರಜ್ಞಾನದೊಂದಿಗೆ ಗಮನ ಸೆಳೆಯುತ್ತದೆ.
ಎಂಜಿನ್ ಸಾಮರ್ಥ್ಯ: 109.51cc
ಮೈಲೇಜ್: 60 ಕಿ.ಮೀ/ಲೀ
ಬೆಲೆ: ₹ 81,651
ವಿಶೇಷತೆಗಳು: ACG ಸ್ಟಾರ್ಟ್ ಸಿಸ್ಟಮ್, ಡಿಸೈನ್ ಸೆಂಟ್ರಿಕ್ ಮತ್ತು ಆರಾಮ ಮತ್ತು ನೋಟ ಎರಡನ್ನೂ ಬಯಸುವವರಿಗೆ.
ಯಾವ ಬೈಕ್ ಬೆಸ್ಟ್?
ಬೈಕ್ ಹೆಸರುಮೈಲೇಜ್ (ಕಿ.ಮೀ/ಲೀ)ಎಂಜಿನ್ (cc)ಮತ್ತು ಆರಂಭಿಕ ಬೆಲೆ :
ಹೀರೋ ಸ್ಪ್ಲೆಂಡರ್ ಪ್ಲಸ್70km ,97.2cc,
₹ 77,026
ಹೋಂಡಾ SP 125 63km,123.94cc₹ 89,468
ಎಕ್ಸ್‌ಟ್ರೀಮ್ 125R 66km,124.7cc, ₹ 96,336
ಟಿವಿಎಸ್ ರೇಡಿಯನ್62km,109.7cc,₹ 71,039
ಹೋಂಡಾ ಲಿವೊ60km,109.51cc₹ 81,651
ಹೆಚ್ಚು ಮೈಲೇಜ್ ಬಯಸಿದರೆ ಸ್ಪ್ಲೆಂಡರ್ ಪ್ಲಸ್, ಶಕ್ತಿ ಹಾಗೂ ಶೈಲಿ ಬೇಕಾದರೆ SP 125 ಅಥವಾ ಎಕ್ಸ್‌ಟ್ರೀಮ್ 125R, ಕಡಿಮೆ ಬಜೆಟ್ ಮತ್ತು ವೈಶಿಷ್ಟ್ಯತೆಗಳಿಗಾಗಿ ರೇಡಿಯನ್ ಉತ್ತಮ ಆಯ್ಕೆ.
ನಿಮ್ಮ ಪ್ರಯಾಣದ ಅನುಭವ, ಪ್ರಯೋಜನ ಮತ್ತು ಬಜೆಟ್ ಆಧರಿಸಿ ಈ ಬೈಕ್‌ಗಳ ಪೈಕಿ ಅತ್ಯುತ್ತಮ ಆಯ್ಕೆಯನ್ನು ಮಾಡಬಹುದು. ಮೈಲೇಜ್ ಮಾತ್ರವಲ್ಲದೆ, ನಿರ್ವಹಣಾ ವೆಚ್ಚ, ಸೌಲಭ್ಯ ಮತ್ತು ಲಂಬಾವಧಿಯ ನಂಬಿಕೆಯನ್ನು ಗಮನದಲ್ಲಿಡಿ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




