Picsart 25 09 02 23 37 25 857 scaled

ಹಿಂದೂ ದೇವಾಲಯಗಳ ದೇಣಿಗೆಹಣದ ಬಗ್ಗೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

Categories:
WhatsApp Group Telegram Group

ಭಾರತದಲ್ಲಿ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ಸಮಾಜದ ಆರ್ಥಿಕ ಮತ್ತು ಸಾಂಸ್ಕೃತಿಕ ಶಕ್ತಿ ಕೇಂದ್ರಗಳೂ ಆಗಿವೆ. ಲಕ್ಷಾಂತರ ಹಿಂದೂ ಭಕ್ತರು ಪ್ರತಿದಿನ ದೇವಾಲಯಗಳಲ್ಲಿ ಕಾಣಿಕೆ, ದೇಣಿಗೆ, ಚಿನ್ನ, ಬೆಳ್ಳಿ, ಆಭರಣಗಳನ್ನು ಅರ್ಪಿಸುತ್ತಾರೆ. ಈ ಹಣ ಭಕ್ತರ ಶ್ರದ್ಧೆಯ ಪ್ರತೀಕವಾಗಿದ್ದು, ದೇವರಿಗೆ ಸಮರ್ಪಿತವಾಗಿರುವುದು. ಆದರೆ ಇಂತಹ ಅಪಾರ ಪ್ರಮಾಣದ ಹಣವನ್ನು ಸರ್ಕಾರವು (Government) ಹೇಗೆ ಬಳಸುತ್ತಿದೆ? ದೇವಾಲಯಗಳಿಂದ ಬರುವ ಆದಾಯವನ್ನು ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗೆ ಮಾತ್ರ ಬಳಸಲಾಗುತ್ತಿದೆಯೇ, ಅಥವಾ ಸರ್ಕಾರ ತನ್ನ ಯೋಜನೆಗಳಿಗೆ ಖರ್ಚು ಮಾಡುತ್ತಿದೆಯೇ ಎಂಬ ಪ್ರಶ್ನೆ ದಶಕಗಳಿಂದ ಚರ್ಚೆಗೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ (Madras Highcourt) ಮಹತ್ವದ ತೀರ್ಪು ನೀಡಿದ್ದು, ದೇವಾಲಯದ ಕಾಣಿಕೆ ಹಣವನ್ನು ಯಾವುದೇ ಸರ್ಕಾರಿ ಯೋಜನೆಗಳಿಗಾಗಿ(For government Schems)  ಬಳಸಬಾರದು, ಅದು ದೇವಾಲಯ ಹಾಗೂ ದತ್ತಿ ಕಾರ್ಯಗಳಿಗಷ್ಟೇ ಮೀಸಲು ಎಂಬ ಸ್ಪಷ್ಟ ನಿರ್ದೇಶನ ನೀಡಿದೆ. ಈ ತೀರ್ಪು ಹಿಂದೂ ಭಕ್ತರಲ್ಲಿ ಸಂತೋಷ ಮೂಡಿಸಿದೆ.

ದೇವಾಲಯಗಳ ಸಂಖ್ಯೆ ಮತ್ತು ಹಣದ ಹರಿವು:

ಭಾರತದಲ್ಲಿ ಸುಮಾರು 7.5 ಲಕ್ಷ ದೇವಾಲಯಗಳಿವೆ, ಅವುಗಳಲ್ಲಿ 4 ಲಕ್ಷ ದೇವಾಲಯಗಳು ರಾಜ್ಯ ಸರ್ಕಾರಗಳ (State governments) ನಿಯಂತ್ರಣದಲ್ಲಿವೆ. ಭಕ್ತರಿಂದ ಬರುವ ದೇಣಿಗೆ, ಕಾಣಿಕೆ, ಹೂಡಿಕೆಗಳ ಮೂಲಕ ದೇಶದ ದೇವಾಲಯಗಳು ಪ್ರತಿವರ್ಷ 2.5 ರಿಂದ 3 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸುತ್ತವೆ. ಇದು ದೇಶದ GDP ಯಲ್ಲಿ ಸುಮಾರು 2.3% ಪಾಲು. ಸರಳವಾಗಿ ನೋಡಿದರೆ, ಈ ಹಣವನ್ನು ಪ್ರತಿಯೊಬ್ಬ ಭಾರತೀಯನಿಗೆ ಹಂಚಿದರೆ, ಪ್ರತಿಯೊಬ್ಬರಿಗೂ ₹2000 ಕ್ಕಿಂತ ಹೆಚ್ಚು ಸಿಗುತ್ತದೆ.

ಈ ಹಣ ಸಂಪೂರ್ಣವಾಗಿ ದೇವರ ಹೆಸರಲ್ಲಿ ನೀಡಲ್ಪಟ್ಟ ದಾನ(Donation given in the name of God). ಆದರೆ ಹಲವಾರು ರಾಜ್ಯಗಳಲ್ಲಿ ಸರ್ಕಾರವು ಈ ಹಣವನ್ನು ತನ್ನ ಯೋಜನೆಗಳಿಗೆ ಬಳಸುವ ಪ್ರಕರಣಗಳು ಹೆಚ್ಚಾಗಿವೆವೆ.

ತಮಿಳುನಾಡಿನ ಉದಾಹರಣೆ:

ತಮಿಳುನಾಡಿನಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆ ರಾಜ್ಯದ ಸುಮಾರು 44 ಸಾವಿರ ದೇವಾಲಯಗಳನ್ನು ನಿರ್ವಹಿಸುತ್ತದೆ. ರಾಮೇಶ್ವರಂ, ಮೀನಾಕ್ಷಿ ಅಮ್ಮನ್ (Rameshwaram, Meenakshi Amman) ಸೇರಿದಂತೆ ಅನೇಕ ಪ್ರಸಿದ್ಧ ದೇವಾಲಯಗಳು ಇದರ ಅಡಿಯಲ್ಲಿ ಬರುತ್ತವೆ.

2023 ರಿಂದ 2025 ರ ಅವಧಿಯಲ್ಲಿ, MK ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ದೇವಾಲಯದ ಹಣದಿಂದ ಮದುವೆ ಮಂಟಪಗಳ ನಿರ್ಮಾಣಕ್ಕೆ ಆದೇಶ ನೀಡಿತ್ತು. 27 ದೇವಾಲಯಗಳಲ್ಲಿ ಸುಮಾರು ₹80 ಕೋಟಿ ವೆಚ್ಚದಲ್ಲಿ ಮಂಟಪ ನಿರ್ಮಾಣ ಮಾಡಬೇಕೆಂದು ಸರ್ಕಾರ ನಿರ್ಧರಿಸಿತ್ತು. ಹಿಂದೂ ಮದುವೆ ಧಾರ್ಮಿಕ ಸಂಸ್ಕಾರವಾದ್ದರಿಂದ ಇದು ದತ್ತಿ ಕಾರ್ಯ ಎಂಬ ವಾದವನ್ನು ಸರ್ಕಾರ ಮಾಡಿತ್ತು.
ಆದರೆ ಮದ್ರಾಸ್ ಹೈಕೋರ್ಟ್ ಇದನ್ನು ತೀವ್ರವಾಗಿ ತಿರಸ್ಕರಿಸಿತು. ಮದುವೆ ಧಾರ್ಮಿಕ ಆಚರಣೆ ಅಲ್ಲ, ಅದು ಕೇವಲ ಸಾಮಾಜಿಕ ಸಂಸ್ಕಾರ. ಆದ್ದರಿಂದ ದೇವಾಲಯದ ಹಣವನ್ನು ಆ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ತೀರ್ಪು ನೀಡಿತು.

ಹೈಕೋರ್ಟ್‌ನ (Highcourt) ಸ್ಪಷ್ಟ ನಿಲುವು:

ದೇವಾಲಯದ ಕಾಣಿಕೆ ಹಣ ದೇವರದ್ದೇ, ಸರ್ಕಾರದದ್ದಲ್ಲ.
ಆ ಹಣವನ್ನು ದೇವಾಲಯದ ನಿರ್ವಹಣೆ, ಪೂಜೆ, ಅನ್ನದಾನ, ಯಾತ್ರಿಕರ ಕಲ್ಯಾಣ, ಬಡವರಿಗೆ ಸಹಾಯ ಮೊದಲಾದ ಧಾರ್ಮಿಕ/ದತ್ತಿ ಉದ್ದೇಶಗಳಿಗೆ ಮಾತ್ರ ಬಳಸಬೇಕು.
ಸರ್ಕಾರದ ಪಾತ್ರ ಕೇವಲ ಮೇಲ್ವಿಚಾರಣೆ, ದುರುಪಯೋಗವನ್ನು ತಡೆಯುವುದು. ಹೊಸ ಯೋಜನೆಗಳಿಗೆ ಹಣ ವರ್ಗಾವಣೆ (Money transformation) ಮಾಡುವುದು ಕಾನೂನುಬಾಹಿರ.

ಇತರ ರಾಜ್ಯಗಳಲ್ಲಿನ ನಿಯಂತ್ರಣ:

ಕರ್ನಾಟಕ: ಸುಮಾರು 34 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆಯ (Muzrai Department) ಅಡಿಯಲ್ಲಿ.
ಆಂಧ್ರಪ್ರದೇಶ: 25 ಸಾವಿರ ದೇವಾಲಯಗಳು, ತಿರುಮಲ ತಿರುಪತಿ ದೇವಸ್ಥಾನವು ಮಾತ್ರ ಸ್ವತಂತ್ರ ಮಂಡಳಿಯ ಅಡಿಯಲ್ಲಿ. ಇದರ ಆಸ್ತಿ ₹51,000 ಕೋಟಿ ಮೌಲ್ಯ.
ಕೇರಳ: ದೇವಸ್ವಂ ಮಂಡಳಿಗಳ (Devaswom Boards) ಮೂಲಕ ಸುಮಾರು 3 ಸಾವಿರ ದೇವಾಲಯಗಳು ನಿರ್ವಹಣೆ. ಶಬರಿಮಲೆ, ಗುರುವಾಯೂರು, ಪದ್ಮನಾಭಸ್ವಾಮಿ ದೇವಸ್ಥಾನಗಳು ಇದರ ಅಡಿಯಲ್ಲಿ.
ಇತರ ರಾಜ್ಯಗಳು: ಒಡಿಶಾ (ಪುರಿ ಜಗನ್ನಾಥ), ಮಧ್ಯಪ್ರದೇಶ (ಉಜ್ಜಯಿನಿ ಮಹಾಕಾಳೇಶ್ವರ), ಉತ್ತರಾಖಂಡ (ಬದರಿ-ಕೆದಾರ್), ಉತ್ತರ ಪ್ರದೇಶ (ಕಾಶಿ ವಿಶ್ವನಾಥ) ಮುಂತಾದ ಪ್ರಮುಖ ದೇವಾಲಯಗಳು ಸರ್ಕಾರದ ಮೇಲ್ವಿಚಾರಣೆಯಲ್ಲಿವೆ.
ಆದರೆ ಕೆಲವು ದೇವಾಲಯಗಳು ಸ್ವತಂತ್ರ ಮಂಡಳಿಗಳ ಅಡಿಯಲ್ಲಿ ಇವೆ. ಉದಾಹರಣೆಗೆ ಶಿರಡಿ ಸಾಯಿ, ಸಿದ್ಧಿವಿನಾಯಕ, ವೈಷ್ಣೋದೇವಿ, ಅಕ್ಷರಧಾಮ ಮುಂತಾದವುಗಳು ಸರ್ಕಾರದ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ನಡೆಯುತ್ತಿವೆ.

ಸರ್ಕಾರದ ನಿಯಂತ್ರಣದ ವಿವಾದ:

ಹಿಂದೂ ದೇವಾಲಯಗಳ ಮೇಲೆ ಸರ್ಕಾರ ನೇರ ಹಸ್ತಕ್ಷೇಪ (Intervention) ಮಾಡುತ್ತದೆ. ಆದರೆ ಮಸೀದಿ, ಚರ್ಚ್, ಗುರುದ್ವಾರಗಳಲ್ಲಿ ಸರ್ಕಾರದ ಹಸ್ತಕ್ಷೇಪ ಬಹಳ ಕಡಿಮೆ.
ಮಸೀದಿಗಳು: ವಕ್ಫ್ ಮಂಡಳಿ ನಿರ್ವಹಣೆ.
ಚರ್ಚ್‌ಗಳು: ಕ್ರಿಶ್ಚಿಯನ್ ಟ್ರಸ್ಟ್‌ಗಳು ನಿರ್ವಹಣೆ.
ಗುರುದ್ವಾರಗಳು: ಧಾರ್ಮಿಕ ಸಮಿತಿಗಳು ನಿರ್ವಹಣೆ.
ಇದರಿಂದ “ಏಕೆ ಹಿಂದೂ ದೇವಾಲಯಗಳ ಮೇಲಷ್ಟೇ ಸರ್ಕಾರ ನಿಯಂತ್ರಣ?” ಎಂಬ ಪ್ರಶ್ನೆ ಹಲವು ಬಾರಿ ಎದ್ದಿದೆ.

ಸುಪ್ರೀಂ ಕೋರ್ಟ್‌ನ ಅಭಿಪ್ರಾಯ(Supreme Court opinion) :

2014ರಲ್ಲಿ ಸುಪ್ರೀಂ ಕೋರ್ಟ್ ಚಿದಂಬರಂ ನಟರಾಜ ದೇವಸ್ಥಾನದ ಕುರಿತು ತೀರ್ಪು ನೀಡಿತ್ತು. ದೇವಾಲಯದ ಆಡಳಿತ ಸರ್ಕಾರದ ಕೈಯಲ್ಲಿ ಅಲ್ಲ, ಅರ್ಚಕರು ಮತ್ತು ಸಮುದಾಯದ ಕೈಯಲ್ಲಿರಬೇಕು ಎಂದು ಹೇಳಿತ್ತು. ದುರುಪಯೋಗದ ಪುರಾವೆಗಳಿದ್ದಾಗ ಮಾತ್ರ ಸರ್ಕಾರ ಮಧ್ಯಪ್ರವೇಶಿಸಬಹುದು ಎಂದೂ ಸ್ಪಷ್ಟಪಡಿಸಿತ್ತು.

ಒಟ್ಟಾರೆಯಾಗಿ, ಮದ್ರಾಸ್ ಹೈಕೋರ್ಟ್ ಇತ್ತೀಚಿನ ತೀರ್ಪು ಹಿಂದೂ ದೇವಾಲಯಗಳ ಹಣವನ್ನು ಭಕ್ತರ ನಂಬಿಕೆಯಂತೆ, ಧಾರ್ಮಿಕ ಮತ್ತು ದತ್ತಿ ಕಾರ್ಯಗಳಿಗಷ್ಟೇ ಮೀಸಲು (Reserved for religious and charitable purposes only) ಮಾಡಿದೆ. ಇದರಿಂದ ಸರ್ಕಾರವು ಮದುವೆ ಮಂಟಪಗಳಂತಹ ಹೊಸ ಯೋಜನೆಗಳಿಗೆ ಹಣ ಬಳಸುವ ಅವಕಾಶವನ್ನು ಕಳೆದುಕೊಂಡಿದೆ.
ಈ ತೀರ್ಪು ದೇಶದಾದ್ಯಂತ ನಡೆಯುತ್ತಿರುವ ಚರ್ಚೆಗೆ ಹೊಸ ದಿಕ್ಕು ನೀಡಿದ್ದು, ದೇವಾಲಯಗಳ ಹಣ ಸರ್ಕಾರದದ್ದಲ್ಲ, ದೇವರದ್ದೇ ಎಂಬ ಸಂದೇಶವನ್ನು ಸ್ಪಷ್ಟಪಡಿಸಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories