ಗುಡ್ ನ್ಯೂಸ್ – ಸರ್ಕಾರದಿಂದ ರೈತರಿಗೆ ಯಾವುದೇ ಬಡ್ಡಿ ಇಲ್ಲದೇ 1 ಲಕ್ಷ ಸಾಲ ಸೌಲಭ್ಯಕ್ಕೆ ನಿರ್ಧಾರ, ಇಲ್ಲಿದೆ ಮಾಹಿತಿ

free loan for farmers

ಈಗಾಗಲೇ ರಾಜ್ಯದಲ್ಲಿ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಹಾಗೆಯೇ ಅದರ ಜೊತೆಗೆ ರೈತರಿಗೆ ಸಾಲ ಸೌಲಭ್ಯ , ಹಲವಾರು ಯೋಜನೆಗಳು ಜಾರಿಗೊಳಿಸಿದ್ದಾರೆ. ಅವರ ಕಷ್ಟಕ್ಕೆ ಮತ್ತು ಆರ್ಥಿಕ ಪರಿಸ್ಥಿತಿ ( Economic Purpose ) ಅನ್ನು ದೂರ ಮಾಡಲು ಸರ್ಕಾರದ ಈ ಯೋಜನೆಗಳು ಬಹಳ ಅನುಕೂಲವಾಗಿವೆ. ಹಾಗೆಯೇ ಇದೀಗ ಈ ರೈತರಿಗಾಗಿ ಬಡ್ಡಿ ರಹಿತ ಸಾಲ(loan without interest)ವನ್ನು ನೀಡಲು ಮುಂದಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯ ಮುಖ್ಯ ಉದ್ದೇಶ ( Purpose ) :

ಈ ಯೋಜನೆಗಳ ಮುಖ್ಯ ಉದ್ದೇಶ ಎಂದರೆ ರೈತರು ಯಾವುದೇ ಸಾಲದ ಸುಳಿಯೊಳಗೆ ಸಿಲುಕಬಾರದು, ಅವರ ಕೃಷಿಗೆ ಯಾವುದೇ ಆರ್ಥಿಕ ಸಂಕಷ್ಟ ಉಂಟಾಗಬಾರದು ಎಂಬ ಕಾರಣಕ್ಕೆ ಸರ್ಕಾರ ( Government ) ಈ ಸಾಲ ಸೌಲಭ್ಯವನ್ನು ಜಾರಿಗೆ ತಂದಿದೆ. ಹಾಗೆಯೇ ಇದೀಗ ಬಡ್ಡಿ ರಹಿತ ಸಾಲವನ್ನು ಜಾರಿಗೊಳಿಸಿ, ಅವರಿಗೆ ನೆರವು ನೀಡಲು ಈ ವ್ಯವಸ್ಥೆಯಡಿ ರೈತರು ಒಂದು ಲಕ್ಷ ರೂಪಾಯಿಯನ್ನು ಬಡ್ಡಿ ರಹಿತವಾಗಿ ಪಡೆಯಬಹುದಾಗಿದೆ.

ರೈತರಿಗಾಗಿ ಬಡ್ಡಿ ರಹಿತ ಸಾಲ ( Interest free loan ) ನೀಡಲಾಗುವುದು :

ರೈತರಿಗೆ ಬಡ್ಡಿರಹಿತ ಸಾಲವನ್ನು ಸರ್ಕಾರದಿಂದ ಅನೇಕ ಯೋಜನೆಗಳ ಮೂಲಕ ನೀಡಲಾಗುತ್ತದೆ. ಈ ಯೋಜನೆಯು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರವು ( State Government ) ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಬಡ್ಡಿ ಸಹಾಯಧನ ಯೋಜನೆ ಜಾರಿಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯಡಿ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ಯೋಜನೆಯಡಿಯಲ್ಲಿ ಈ ಸಣ್ಣ ಜಮೀನು ಹೊಂದಿರುವ ರೈತರಿಗೆ ಕೃಷಿ ಕೆಲಸಕ್ಕಾಗಿ ಬಡ್ಡಿರಹಿತ ಸಾಲವನ್ನು ಒದಗಿಸಲಾಗುತ್ತದೆ, ಇದರಿಂದ ಅವರು ತಮ್ಮ ಕೃಷಿ ಕೆಲಸವನ್ನು ಯಾವುದೇ ತೊಂದರೆಯಿಲ್ಲದೆ ಮಾಡಬಹುದು.

whatss

ಸರ್ಕಾರದಿಂದ 5700 ಕೋಟಿ ರೂ. ಬಜೆಟ್ ನ ಸಾಲ ಬಿಡುಗಡೆ ( Debt release of the budget ) :

ಬಡ್ಡಿ ಸಹಾಯಧನ ಯೋಜನೆ (Interest Subsidy Scheme) ಮೂಲಕ ರಾಜ್ಯ ಸರ್ಕಾರ 1 ಲಕ್ಷ ರೂ.ವರೆಗೆ ಬಡ್ಡಿಯಿಲ್ಲದೆ ಸಾಲ ಸೌಲಭ್ಯ ನೀಡಲಿದೆ. ಇದರಿಂದ ರೈತರು ಬಡ್ಡಿ ಇಲ್ಲದೆ ಸಾಲ ಪಡೆಯಬಹುದಾಗಿದ್ದು ಕೃಷಿ ಪರಿಕರಗಳನ್ನು ಖರೀದಿ ಮಾಡಬಹುದಾಗಿದೆ. ಈ ಯೋಜನೆ ಅನುಷ್ಠಾನಕ್ಕೆ 5700 ಕೋಟಿ ರೂ.ಗಳ ಬಜೆಟ್ ಬಿಡುಗಡೆ ಮಾಡಿದ್ದು ರೈತರಿಗೆ ಈ ವಿಚಾರ ಖುಷಿ ಸಿಕ್ಕಿದಂತಾಗಿದೆ.ಈ ಯೋಜನೆಯು 2023-24 ರಿಂದ 2027-28 ರವರೆಗೆ ಸಂಪೂರ್ಣ ಐದು ವರ್ಷಗಳವರೆಗೆ ಸಹಕಾರಿ ಬ್ಯಾಂಕ್‌ಗಳು ಅಥವಾ PACS ಗೆ ಬಡ್ಡಿ ಸಹಾಯಧನ (Subsidy) ಸಾಲ ಸೌಲಭ್ಯ ದೊರೆಯಲಿದೆ.

ಬಡ್ಡಿ ರಹಿತ ಸಾಲ ಸೌಲಭ್ಯಕ್ಕೆ ನೀಡಲಾಗುವ ಅವಧಿ ವಿವರ ( Time limit ) :

ರೈತರು ಪಡೆದುಕೊಂಡ ಸಾಲವನ್ನು ತಮ್ಮ ಅವಧಿ ಯೊಳಗೆ ಮರುಪಾವತಿ ಮಾಡಬೇಕು. ಇದಕ್ಕೆ ಯಾವುದೇ ರೀತಿಯಲ್ಲಿ ಸಾಲ (Loan) ಕ್ಕೆ ಬಡ್ಡಿ ಇರುವುದಿಲ್ಲ. ಆದರೆ ಅವಧಿ ಮೀರಿದ ನಂತರ ಸಾಲಕ್ಕೆ ಬಡ್ಡಿ ವಿಧಿಸಲಾಗುತ್ತದೆ.

ರೈತರಿಗಾಗಿ ಸರಕಾರದ ವತಿಯಿಂದ ಸಬ್ಸಿಡಿ ಯೋಜನೆ ( Subsidy Scheme ) :

ರೈತರಿಗಾಗಿ ಸರಕಾರ ನೀಡಿರುವ ಸಾಲ ಸೌಲಭ್ಯ ಹಲವು ಇವೆ. ಅವುಗಳೆಂದರೆ :
ಅವಧಿ ಸಾಲ, ನಗದು ಸಾಲ (Cash Loan), ಅಲ್ಪಾವಧಿ, ದೀರ್ಘಾವಧಿ, ಹೀಗೆ ಬೇರೆ ಬೇರೆ ರೀತಿಯ ಸಾಲಗಳನ್ನು ಒದಗಿಸಲಾಗುತ್ತದೆ.

ಹೈನುಗಾರಿಕೆ (Dairying), ಹಂದಿ (Swine), ಕೋಳಿ ಸಾಕಾಣಿಕೆ (Poultry), ರೇಷ್ಮೆ (Sericulture), ಪುಷ್ಪೋದ್ಯಮ (Floriculture), ಮೀನುಗಾರಿಕೆ (Fisheries), ಗೋಬರ್ ಗ್ಯಾಸ್ (Dung Gas) ಇತ್ಯಾದಿ ಚಟುವಟಿಕೆ ಗಳಿಗೂ ಸರಕಾರದಿಂದ ಸಬ್ಸಿಡಿ ಮೊತ್ತ ದೊರೆಯುತ್ತದೆ. ಅದೇ ರೀತಿ ರೈತರ ಮತ್ತು ಮಹಿಳೆಯರ ಸ್ವ ಸಹಾಯ ಗುಂಪುಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಶೇ.7ರ ಬಡ್ಡಿ ದರ ದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ( Steps for applying application ) :

ರಾಜ್ಯದ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಸಹಕಾರಿ ಬ್ಯಾಂಕ್ ಅಥವಾ ಸಹಕಾರ ಸಂಘದ ಮೂಲಕ ಅರ್ಜಿ ಸಲ್ಲಿಸಬಹುದು.
ಬ್ಯಾಂಕ್‌ನಿಂದ ಫಾರ್ಮ್ ಅನ್ನು ತೆಗೆದುಕೊಂಡು ಅರ್ಜಿ ಫಾರ್ಮ್ ತುಂಬಬಹುದು.
ಅದರಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು ಮತ್ತು ಕೇಳಲಾದ ಎಲ್ಲಾ ದಾಖಲೆಗಳನ್ನು ಫಾರ್ಮ್‌ನೊಂದಿಗೆ ಲಗತ್ತಿಸಬೇಕು.
ಫಾರ್ಮ್ ಅನ್ನು ತೆಗೆದುಕೊಂಡಿರುವ ಬ್ಯಾಂಕ್‌ಗೆ ಸಲ್ಲಿಸಬೇಕು.
ನಂತರ ನೀವು ತುಂಬಿದ ಫಾರ್ಮ್ ಮತ್ತು ಅದರೊಂದಿಗೆ ಲಗತ್ತಿಸಲಾದ ದಾಖಲೆಗಳನ್ನು ಬ್ಯಾಂಕ್ ಪರಿಶೀಲಿಸುತ್ತದೆ.
ನೀವು ಬಡ್ಡಿ ಸಬ್ಸಿಡಿ ಯೋಜನೆಗೆ ಅರ್ಹರಾಗಿದ್ದರೆ, ನಿಮ್ಮ ಸಾಲವನ್ನು ಅನುಮೋದಿಸಲಾಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!