BBK Kannada – ಬಿಗ್ ಬಾಸ್ ಮನೆಯಿಂದ ಹೊರಬಂದ ತುಕಾಲಿ ಸಂತು..! ಬಿಗ್ ಟ್ವಿಸ್ಟ್

is tukali eliminated

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ರೋಚಕತೆಯನ್ನು ಸೃಷ್ಟಿಸಿದೆ. ಕಿಚ್ಚ ಸುದೀಪ್ ಅವರ ರಿಯಾಲಿಟಿ ಶೋ ತನ್ನ ಗ್ರ್ಯಾಂಡ್ ಫಿನಾಲೆಗೆ ಹತ್ತಿರವಾಗುತ್ತಿರುವುದರಿಂದ ಉತ್ಸಾಹವು ಎಲ್ಲರಲ್ಲೂ ಕಾಣುತ್ತಿದೆ. ಕಾರ್ಯಕ್ರಮವು ಎರಡು ವಾರಗಳವರೆಗೆ ವಿಸ್ತರಣೆಯನ್ನು ಮಾಡಲಾಗುತ್ತದೆ ಎಂದು ಹೋಸ್ಟ್ ಖಚಿತಪಡಿಸಿದಾಗಿನಿಂದ ಅಭಿಮಾನಿಗಳು ಗ್ರ್ಯಾಂಡ್ ಫಿನಾಲೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅದೇ ಸಮಯದಲ್ಲಿ ಈ ವಾರ ಯಾವ ಕಂಟೆಸ್ಟೆಂಟ್ ಎಲಿಮಿನೇಟ್ ಆಗುತ್ತಾರೆ ಎಂಬುವುದನ್ನು ತಿಳಿಯಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಬಲ್ಲ ಮೂಲಗಳಿಂದ ಇಂದು ಯಾರು ನೋವಿನೆಟ್ ಆಗುತ್ತಾರೆ ಎಂದು ತಿಳಿದು ಬಂದಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಎಲಿಮಿನೇಷನ್ (elimination):

14 ನೇ ವಾರದಲ್ಲಿ ಆರು ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮನಿರ್ದೇಶನಗೊಂಡರು. ನಮ್ರತಾ ಗೌಡ, ವಿನಯ್ ಗೌಡ, ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಮತ್ತು ತನಿಶಾ ಅಪಾಯದ ವಲಯದಲ್ಲಿದ್ದರು. ಬಿಗ್ ಬಾಸ್ ಕನ್ನಡ 10 ರಿಂದ ಯಾರು ಎಲಿಮಿನೇಟ್ ಆಗುತ್ತಾರೆ? ಎಂಬುವುದು ಎಲ್ಲರ ಪ್ರಶ್ನೆಯಾಗಿದೆ. ನಿನ್ನೆಯ ಸಂಚಿಕೆ, ಅಂದರೆ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡಿನಲ್ಲಿ ಸುದೀಪ್ ಅವರು ನಮ್ರತಾ ಅವರನ್ನು ಮೊದಲಿಗೆ ಸೇಫ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ 10 ರ ಮತದಾನದ ಟ್ರೆಂಡ್ ಅನ್ನು ನಾವು ಗಣನೆಗೆ ತೆಗೆದುಕೊಂಡರೆ, ತುಕಾಲಿ ಸಂತೋಷ್(Tukali santhosh) ಎಲಿಮಿನೇಟ್ ಆಗುವ ಸಾಧ್ಯತೆಗಳಿವೆ. ಬಿಬಿಕೆಯಲ್ಲಿ ವಾರದಲ್ಲಿ ಹೊರಹಾಕಲಾಗುವುದಿಲ್ಲ ಎಂಬ ಮಾತುಗಳೂ ಇವೆ. ನಿಜವಾದ ಬಿಗ್ ಬಾಸ್ ಕನ್ನಡ ಎಲಿಮಿನೇಷನ್ ಫಲಿತಾಂಶಗಳನ್ನು ನೋಡಲು ನಾವು ಸಂಚಿಕೆಗಾಗಿ ಕಾಯಬೇಕಾಗಿದೆ.

ತುಕಾಲಿ ಸಂತೋಷ್ ಎಲಿಮಿನೇಟ್ ಆದ್ರ ?:

ಬಿಗ್ ಬಾಸ್ ಇಂದಿನ ಸಂಚಿಕೆಯಲ್ಲಿ ರಿಲೀಸ್ ಮಾಡಿರುವ ಪ್ರೊಮೊದ ಪ್ರಕಾರ ತುಕಾಲಿ ಸಂತೋಷ್(Tukali sathosh) ಅವರು ಎಲಿಮಿನೇಟ್ ಆಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ಕೊನೆಯಲ್ಲಿ ತುಕಾಲಿ ಸಂತೋಷ್ ಹಾಗೂ ವರ್ತೂರ್ ಸಂತೋಷ್ ಡೇಂಜರ್ ಜೋನಿನಲ್ಲಿ ಉಳಿದುಕೊಂಡಿದ್ದಾರೆ. ಸುದೀಪ್ ಅವರು ಇವರಿಬ್ಬರಲ್ಲಿ ಒಬ್ಬರು ಇಂದು ಮನೆಗೆ ಹೋಗಬೇಕಾಗುತ್ತದೆ ಎಂದು ಹೇಳುತ್ತಾರೆ. ಆಗ ಇಬ್ಬರೂ ಕೂಡ ಕಣ್ಣೀರಿಡುತ್ತಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ತುಕಾಲಿ ಸಂತೋಷ್ ಅವರು ವರ್ತೂರ್ ಅವರಿಗೆ ನಾನು ಹೋಗುವುದಾದರೆ, ಚೆನ್ನಾಗಿ ಆಡಿ ಗೆದ್ದುಕೊಂಡು ಬಾ ಎಂದು ವರ್ತೂರ್ ಅವರಿಗೆ ಹೇಳಲು ಇಷ್ಟಪಡುತ್ತೇನೆ ಎಂದು ಹೇಳುತ್ತಾ ಹೇಳಿದ್ದಾರೆ. ಇವರಿಬ್ಬರ ಸ್ನೇಹ ಎಲ್ಲರಲ್ಲಿಯೂ ಹೊಟ್ಟೆಕಿಚ್ಚನ್ನು ಮೂಡಿಸಿದ್ದಂತೂ ನಿಜ. ನಮ್ರದ ಅವರು ಕೂಡ ಇವರಿಬ್ಬರೂ ದೂರವಾಗಬೇಕು ಎನಿಸುತ್ತಿತ್ತು, ಆದರೆ ಇಂದು ಯಾಕೋ ಬೇಡ ಎನಿಸುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಸುದೀಪ್ ಅವರು ಕೂಡ ಇವರಿಬ್ಬರ ಸ್ನೇಹ ನಿಷ್ಕಲ್ಮಶವಾದದ್ದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತುಕಾಲಿ ಸಂತೋಷ್ ಅವರು ಇಂದು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ ಎಂದು ಬಲ್ಲಮೂಲಗಳು ಹೇಳುತ್ತಿದ್ದರು ಕೂಡ ರಾತ್ರಿಯ ಸಂಚಿಕೆಯಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

whatss

ಜೈಲಿಗೆ ಕೂಡ ಹೋಗಿದ್ದರು ತುಕಾಲಿ ಸಂತೋಷ್ :

ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಆದರೆ ಇಂಥ ಹೊತ್ತಿನಲ್ಲಿ ಕಳಪೆ ಪಟ್ಟ ಪಡೆದುಕೊಂಡ ‘ತುಕಾಲಿ’ ಸಂತು ಜೈಲಿಗೆ ಹೋಗಿದ್ದರು. ಈ ವಾರ ಕಾರ್ತಿಕ್, ಡ್ರೋನ್ ಪ್ರತಾಪ್ ಸೇರಿದಂತೆ ಅನೇಕರು ತುಕಾಲಿ ಸಂತುಗೆ ಕಳಪೆ ಪಟ್ಟ ನೀಡಿದ್ದರು. ಅದರಲ್ಲೂ ಪ್ರತಾಪ್(Drone prathap) ನೀಡಿದ ಕಾರಣವೇನೆಂದರೆ, ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಅತ್ಯುತ್ತಮವಾಗಿ ಆಡಲಿಲ್ಲ ಎಂಬುದು. ಅವರಿಗೆ ಸಿಕ್ಕಿರುವ ಪಾಯಿಂಟ್ಸ್ ಕೂಡ ಶ್ರಮದಿಂದ ಸಿಕ್ಕಿರುವುದಲ್ಲ ಎಂದು ಕಾರಣ ನೀಡಿದರು. ಎಲ್ಲರೂ ಫಿನಾಲೆಯಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವ ಹೊತ್ತಿನಲ್ಲಿ ಜೈಲಿಗೆ ಹೋಗಿದ್ದರು ತುಕಾಲಿ ಸಂತು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!