ಇಂದಿನ ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಹೂಡಿಕೆ ಮತ್ತು ಜೀವ ವಿಮಾ (Investment and life insurance) ರಕ್ಷಣೆಯ ಅಗತ್ಯತೆ ಪ್ರತಿಯೊಬ್ಬರಿಗೂ ಹೆಚ್ಚಾಗಿದೆ. ಹೆಚ್ಚು ಮಂದಿ ಕಡಿಮೆ ಮೊತ್ತದ ಹೂಡಿಕೆಯಿಂದ ದೀರ್ಘಾವಧಿಯಲ್ಲಿ ಉತ್ತಮ ಲಾಭದಾಯಕ ಯೋಜನೆಗಳನ್ನು ಹುಡುಕುತ್ತಾರೆ. ನಿವೃತ್ತಿ ನಂತರದ ದಿನಗಳಲ್ಲಿ ಸ್ಥಿರ ಆದಾಯವಿಲ್ಲದಿರುವುದು ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (Life insurance corporation of India) ತನ್ನ ಜೀವನ್ ಉಮಂಗ್ ಪಾಲಿಸಿ ಮೂಲಕ ಹೂಡಿಕೆದಾರರಿಗೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆ ನೀಡುವ ಅದ್ಭುತ ಅವಕಾಶ ಒದಗಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆ ವಿಶೇಷವಾಗಿರುವುದು ಏಕೆಂದರೆ ಇದು ಜೀವ ವಿಮಾ ರಕ್ಷಣೆಯ ಜೊತೆಗೆ ಜೀವಿತಾವಧಿ ಆದಾಯವನ್ನು ನೀಡುತ್ತದೆ. ಅಂದರೆ, ಒಂದು ಕಡೆ ಕುಟುಂಬಕ್ಕೆ ಭದ್ರತೆ (Safety for family) ದೊರೆಯುವಂತೆಯೇ, ಇನ್ನೊಂದು ಕಡೆ ಹೂಡಿಕೆದಾರರಿಗೆ ನಿವೃತ್ತಿ ಬಳಿಕವೂ ಸ್ಥಿರ ಆದಾಯ ದೊರಕುತ್ತದೆ.
ಹೂಡಿಕೆ ಹೇಗೆ(How to invest)?:
ಈ ಪಾಲಿಸಿಯಲ್ಲಿ ತಿಂಗಳಿಗೆ ಕೇವಲ ರೂ.1302 ಪಾವತಿಸುವ ಮೂಲಕ ಹೂಡಿಕೆ ಪ್ರಾರಂಭಿಸಬಹುದು. ಉದಾಹರಣೆಗೆ,
30 ವರ್ಷದ ವ್ಯಕ್ತಿ ಈ ಯೋಜನೆಯಲ್ಲಿ ಸೇರಿ 30 ವರ್ಷಗಳವರೆಗೆ ಪ್ರತಿ ತಿಂಗಳು ರೂ.1302 ಪಾವತಿಸಿದರೆ,
ಒಟ್ಟಾರೆ ಸುಮಾರು ರೂ.4.68 ಲಕ್ಷ ಹೂಡಿಕೆ ಮಾಡಲಾಗುತ್ತದೆ.
ಲಾಭ ಎಷ್ಟು?:
ಪ್ರೀಮಿಯಂ ಅವಧಿ ಪೂರ್ತಿಯಾದ ನಂತರ ಹೂಡಿಕೆದಾರರಿಗೆ ಪ್ರತಿ ವರ್ಷ ಸುಮಾರು ರೂ.40,000 ಪಿಂಚಣಿ (Pension) ದೊರೆಯುತ್ತದೆ.
ಈ ಆದಾಯವು 100 ವರ್ಷ ವಯಸ್ಸು ತಲುಪುವವರೆಗೆ ಮುಂದುವರಿಯುತ್ತದೆ.
ಅಂದರೆ, ಹೂಡಿಕೆದಾರರು ಒಟ್ಟಾರೆ ರೂ.27.60 ಲಕ್ಷದಷ್ಟು ಆದಾಯ ಪಡೆಯುವ ಸಾಧ್ಯತೆ ಇದೆ.
ವಿಶೇಷ ವೈಶಿಷ್ಟ್ಯಗಳು (Feature’s) ಯಾವುವು?:
ಮಕ್ಕಳಿಂದ ಹಿಡಿದು 55 ವರ್ಷ ವಯಸ್ಸಿನವರೆಗೆ ಯಾರಾದರೂ ಹೂಡಿಕೆ ಮಾಡಬಹುದು.
ಪ್ರೀಮಿಯಂ ಅವಧಿ ಪೂರ್ತಿಯಾದ ಬಳಿಕ ಜೀವಮಾನಪರ್ಯಂತ ಆದಾಯ.
ಪಾಲಿಸಿಯ ಅವಧಿಯಲ್ಲಿ ಬೋನಸ್ ಸೌಲಭ್ಯ ಕೂಡ ಲಭ್ಯ.
ತೆರಿಗೆ ಉಳಿತಾಯ:
ಸೆಕ್ಷನ್ 80C ಅಡಿಯಲ್ಲಿ ಪ್ರೀಮಿಯಂ ಮೇಲೆ ತೆರಿಗೆ ವಿನಾಯಿತಿ,
ಸೆಕ್ಷನ್ 10(10D) ಅಡಿಯಲ್ಲಿ ಮೆಚ್ಯುರಿಟಿ ಮೊತ್ತದ ಮೇಲೆ ವಿನಾಯಿತಿ.
ಒಟ್ಟಾರೆಯಾಗಿ, ಎಲ್‌ಐಸಿ ಜೀವನ್ ಉಮಂಗ್ ಪಾಲಿಸಿ (LIC jeevan ugam policy) ಕಡಿಮೆ ಹೂಡಿಕೆಯಿಂದ ಜೀವನಪರ್ಯಂತ ಪಿಂಚಣಿ ಹಾಗೂ ಕುಟುಂಬದ ಭದ್ರತೆ ಒದಗಿಸುವ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ. ಭವಿಷ್ಯದಲ್ಲಿ ಆರ್ಥಿಕ ಕಷ್ಟಗಳ ಭಯವಿಲ್ಲದೆ ಸ್ಥಿರ ಆದಾಯ ಬಯಸುವವರು ಈ ಯೋಜನೆಯನ್ನು ಪರಿಗಣಿಸಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.