Picsart 25 10 11 23 36 22 311 scaled

ಒತ್ತಡರಹಿತ, ನೆಮ್ಮದಿಯ ಜೀವನದತ್ತ ಕರೆದೊಯ್ಯುವ 5 ಸರಳ ಅಭ್ಯಾಸಗಳು, ತಪ್ಪದೇ ತಿಳಿದುಕೊಳ್ಳಿ.!

Categories:
WhatsApp Group Telegram Group

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯ ಮತ್ತು ಸಂತೋಷ ಎರಡನ್ನೂ ಜನರು ಮರೆತಂತೆ ಕಾಣಿಸುತ್ತಿದೆ.  ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸದ ಒತ್ತಡ, ಟ್ರಾಫಿಕ್‌ನ ಒದ್ದಾಟ, ಅಸ್ವಸ್ಥ ಆಹಾರ ಪದ್ಧತಿ ಮತ್ತು ನಿದ್ರೆಯ ಕೊರತೆಯ ನಡುವೆ ಬದುಕು ಸಾಗಿಸುವುದು ಕಷ್ಟವಾಗಿದೆ. ಅದರ ಪರಿಣಾಮವಾಗಿ ಅತಿಯಾದ ಒತ್ತಡ, ಆತಂಕ, ದೈಹಿಕ ದೌರ್ಬಲ್ಯ ಮತ್ತು ವಿವಿಧ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಯುವಜನರಲ್ಲಿಯೇ ಹೆಚ್ಚುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಆದರೆ, ವಿಜ್ಞಾನ ಮತ್ತು ಮನೋವಿಜ್ಞಾನ ಎರಡೂ ಹೇಳುವ ಪ್ರಕಾರ, ದೀರ್ಘಕಾಲದವರೆಗೆ ಆರೋಗ್ಯಕರ, ನೆಮ್ಮದಿಯ ಜೀವನ ಬಯಸಿದರೆ ದಿನನಿತ್ಯದ ಚಿಕ್ಕಚಿಕ್ಕ ಅಭ್ಯಾಸಗಳೇ ದೊಡ್ಡ ಬದಲಾವಣೆಯನ್ನು ತರಬಲ್ಲವು. ಸಂತೋಷದಿಂದ ಇದ್ದರೆ ಎಂತಹ ಕಷ್ಟವನ್ನೂ ಮರೆಮಾಚಬಹುದು. ಆದ್ದರಿಂದ ಜೀವನದಲ್ಲಿ ಸಂತೋಷವಾಗಿ ಇರುವುದು ಬಹಳ ಮುಖ್ಯ. ಹಾಗಾದರೆ, ಆರೋಗ್ಯಕರ ಮತ್ತು ಸಂತೋಷದಾಯಕ ಜೀವನದತ್ತ ಕರೆದೊಯ್ಯುವ ಪ್ರಮುಖ ಅಭ್ಯಾಸಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಒತ್ತಡವನ್ನು ನಿಯಂತ್ರಿಸಲು ಕಲಿಯಿರಿ:

ಒತ್ತಡ ನಮ್ಮ ಜೀವನದ ಅವಿಭಾಜ್ಯ ಭಾಗವಾದರೂ, ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿರ್ಧರಿಸುತ್ತದೆ. ಧ್ಯಾನ, ಯೋಗ, ಉಸಿರಾಟ ವ್ಯಾಯಾಮ ಅಥವಾ ಪುಸ್ತಕ ಓದುವುದು ಮುಂತಾದ ಚಟುವಟಿಕೆಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಒತ್ತಡ ಕಡಿಮೆಯಾದಾಗ ದೇಹದ ಉರಿಯೂತದ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವೂ ತಗ್ಗುತ್ತದೆ.

ಸಾಮಾಜಿಕ ಸಂಬಂಧಗಳಿಗೆ ಆದ್ಯತೆ ನೀಡಿ:

ಕುಟುಂಬ, ಸ್ನೇಹಿತರು ಮತ್ತು ಸಮುದಾಯದೊಂದಿಗೆ ನಿಕಟ ಸಂಪರ್ಕವು ಸಂತೋಷದ ಪ್ರಮುಖ ಮೂಲವಾಗಿದೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದು ಮಾನಸಿಕ ಸಮತೋಲನವನ್ನು ಕಾಪಾಡಲು ಹಾಗೂ ಜೀವನದಲ್ಲಿ ಉದ್ದೇಶ ಮತ್ತು ನೆಮ್ಮದಿಯ ಭಾವನೆ ಬೆಳೆಸಲು ಸಹಕಾರಿಯಾಗಿದೆ. ಸಮಾಜದಿಂದ ದೂರವಾದ ಜೀವನವು ಖಿನ್ನತೆ ಹಾಗೂ ಏಕಾಂತತೆಯನ್ನು ಹೆಚ್ಚಿಸಬಹುದು.

ವಿಶ್ರಾಂತಿಗೆ ಸಮಯ ಕೊಡಿ:

ಮಾನವ ದೇಹ ಮತ್ತು ಮನಸ್ಸು ನಿರಂತರ ಕಾರ್ಯನಿರ್ವಹಣೆಗೆ ಯಂತ್ರವಲ್ಲ. ಸಮರ್ಪಕ ನಿದ್ರೆ, ಮಧ್ಯೆ ಮಧ್ಯೆ ಸಣ್ಣ ವಿರಾಮಗಳು ಮತ್ತು ಪ್ರಕೃತಿಯ ಮಧ್ಯೆ ಸಮಯ ಕಳೆಯುವುದು ಆರೋಗ್ಯವನ್ನು ಕಾಪಾಡಲು ಬಹಳ ಅಗತ್ಯ. ವಿಶ್ರಾಂತ ಮನಸ್ಸು ಹೆಚ್ಚು ಸ್ಪಷ್ಟವಾಗಿ ಯೋಚಿಸಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

ಆಹಾರ ಮತ್ತು ವ್ಯಾಯಾಮದಲ್ಲಿ ಶಿಸ್ತು ಬೆಳೆಸಿ:

ಆರೋಗ್ಯಕರ ಜೀವನದ ಮೂಲವೇ ಸರಿಯಾದ ಆಹಾರ ಮತ್ತು ನಿಯಮಿತ ವ್ಯಾಯಾಮ. ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ದಿನಕ್ಕೆ ಕನಿಷ್ಠ ಅರ್ಧ ಗಂಟೆ ನಡೆದಾಡುವುದು, ಸೈಕ್ಲಿಂಗ್ ಅಥವಾ ಸರಳ ವ್ಯಾಯಾಮ ಮಾಡಲು ಸಮಯ ಮೀಸಲಿಡಿ. ಇದು ರಕ್ತಸಂಚಾರ ಸುಧಾರಣೆ, ತೂಕ ನಿಯಂತ್ರಣ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾಗಿದೆ.

ಸಂತೋಷ ನೀಡುವ ಚಟುವಟಿಕೆಗಳಲ್ಲಿ ತೊಡಗಿರಿ:

ಜೀವನದಲ್ಲಿ ಸಮಯವನ್ನು ಕೇವಲ ಕೆಲಸಕ್ಕಷ್ಟೇ ಸೀಮಿತವಾಗಬೇಡಿ. ನಿಮ್ಮ ಹೃದಯಕ್ಕೆ ಹತ್ತಿರವಾದ ಹವ್ಯಾಸಗಳು, ಸಂಗೀತ, ಪ್ರವಾಸ ಅಥವಾ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇವು ಮನಸ್ಸಿಗೆ ಆನಂದ ನೀಡುವುದರ ಜೊತೆಗೆ ಒತ್ತಡವನ್ನು ದೂರ ಮಾಡುತ್ತವೆ ಹಾಗೂ ಆತ್ಮತೃಪ್ತಿಯನ್ನು ಹೆಚ್ಚಿಸುತ್ತವೆ.

ಒಟ್ಟಾರೆಯಾಗಿ, ದೀರ್ಘಾಯುಷ್ಯ ಅಥವಾ ಸಂತೋಷ ಯಾವುದೂ ತಕ್ಷಣ ಸಿಗುವ ವಸ್ತುವಲ್ಲ. ಅದು ದೈನಂದಿನ ಅಭ್ಯಾಸಗಳ ಮೂಲಕ ನಿರ್ಮಾಣವಾಗುವ ನಿಧಾನವಾದ,  ಶಕ್ತಿಯುತವಾದ ಪ್ರಕ್ರಿಯೆ. ಈ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕೇವಲ ಆಯುಷ್ಯವಷ್ಟೇ ಹೆಚ್ಚುವುದಿಲ್ಲ ಅದರ ಜೊತೆಯಲ್ಲಿ ಸಂತೋಷದಿಂದ ಕೂಡ ಇರಬಹುದು.

WhatsApp Image 2025 09 05 at 11.51.16 AM 12

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories