ಕಟ್ಟಡ ಮತ್ತು ಇತರೆ ಕೆಲಸ ಮಾಡುವವವರಿಗೆ ಇದೀಗ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಇದೀಗ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗುತ್ತಿವೆ ಈ ಎಲ್ಲ ಯೋಜನೆಗಳಿಂದ ಮಹಿಳೆಯರಿಗೆ, ಬಡವರಿಗೆ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದುಳಿದಿರುವ ಸರ್ಕಾರದಿಂದ ಸಿಗುವ ಈ ಯೋಜನೆಗಳು, ಸಾಲ(loan) ಸೌಲಭ್ಯಗಳು ಬಹಳ ಉಪಯೋಗವಾಗಿವೆ. ಇದರಿಂದ ಅವರು ತಮ್ಮ ತಮ್ಮ ಸ್ವಂತ ಉದ್ಯೋಗ ( Own Work ) ನಡೆಸಿಕೊಂಡು ಜೀವನ ನಡೆಸಲು ಸಹಾಯವಾಗಿದೆ. ಹಾಗೆಯೇ ಇದೀಗ ಕಾರ್ಮಿಕ ಇಲಾಖೆಯಿಂದ ಹಲವಾರು ಯೋಜನೆಗಳು ಜಾರಿಯಾಗುತ್ತಿವೆ. ಅವುಗಳನ್ನು ಪಡೆಯಲು ಕಾರ್ಮಿಕರು ಲೇಬರ್ ಕಾರ್ಡ್ ಅನ್ನು ( Labour card ) ಪಡೆಯಬೇಕು. ಅದನ್ನು ಹೇಗೆ ಪಡೆಯುವುದು ಮತ್ತು ಈ ಯೋಜನೆಗಳ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಲೇಬರ್ ಕಾರ್ಡ್ ಪಡೆಯಲು ನೋಂದಣಿ ಕಡ್ಡಾಯ :
ಕಾರ್ಮಿಕ ಇಲಾಖೆಯಿಂದ ದೊರೆಯುವ ಈ ಯೋಜನೆಗಳು ಬಹಳಷ್ಟು ಜನರಿಗೆ ಉಪಯೋಗವಾಗಲಿವೆ.
ಹಾಗೆಯೇ, ಸರ್ಕಾರದಿಂದ ದೊರೆಯುವ ಈ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ಅಥವಾ ಅರ್ಹ ಅಭ್ಯರ್ಥಿ ಲೇಬರ್ ಕಾರ್ಡ್ ಅನ್ನು ಹೊಂದಬೇಕು. ಅವಾಗ ಮಾತ್ರ ಸರ್ಕಾರ ನೀಡುತ್ತಿರುವ ಈ ಎಲ್ಲ ಸೌಲಭ್ಯ ಪಡೆಯಲು ಸಾಧ್ಯ. ಹಾಗಾಗಿ ಲೇಬರ್ ಕಾರ್ಡ್ ದೊರೆಯಬೇಕಿದ್ದರೆ ಅಥವಾ ಈoo ಯೋಜನೆಗಳನ್ನು ಪಡೆಯಲು ಕಾರ್ಮಿಕರು ನೋಂದಣಿ (Labour Card ) ಕಡ್ಡಾಯವಾಗಿರುತ್ತದೆ. ಮತ್ತು ಅವರು ನೋಂದಣಿ ಮಾಡುವ ಮೂಲಕ ಅದನ್ನು ಪಡೆಯಬಹದು.

ಲೇಬರ್ ಕಾರ್ಡ್ ಪಡೆಯಲು ನೋಂದಣಿ ಅಭಿಯಾನ ಪ್ರಾರಂಭ :
ಈಗಾಗಲೇ ಸರ್ಕಾರದಿಂದ ಜಾರಿಗೆ ಆಗಿರುವ ಲೇಬರ್ ಕಾರ್ಡ್ ಮತ್ತು ಅದರ ಅಡಿಯಲ್ಲಿ ದೊರೆಯುವ ಯೋಜನೆಗಳನ್ನು ಪಡೆಯಲು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಒಂದು ನೋಂದಣಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ನೋಂದಣಿ ನಡೆಯುವ ಸ್ಥಳ ಹಾಗೂ ದಿನಾಂಕದ ವಿವರ ಈ ಕೆಳಗೆ ನೀಡಲಾಗಿದೆ.
ಸ್ಥಳ ( Place ) : ಬೆಂಗಳೂರು ನಗರದ ಸ್ಥಳದಲ್ಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನವು ನಡೆಯಲಿದೆ. ನೋಂದಣಿ ಪ್ರಕ್ರಿಯೆಯನ್ನು ಮಾಡಲು ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ಭೇಟಿ ನೀಡಬಹುದು.
ದಿನಾಂಕ ( Date ) : 30 ನೇ ಡಿಸೆಂಬರ್ 2023 ರಿಂದ 31 ನೇ ಮಾರ್ಚ್ 2024 ರವರೆಗೆ ಈ ಒಂದು ಲೇಬರ್ ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆಯಲಿದೆ.
ಕರ್ನಾಟಕ ಸರ್ಕಾರ ( Karnataka Government ) ನೀಡುತ್ತಿರುವ ಈ ಯೋಜನಗಳು ಅದೆಷ್ಟೋ ಜನರಿಗೆ ಸಾಹಾಯ ಆಗಲಿದೆ.
ಇದರಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ, ಅವುಗಳೆಂದರೆ :
ಅರ್ಹ ಅಭ್ಯರ್ಥಿಗಳು ಲೇಬರ್ ಕಾರ್ಡ್ ಅನ್ನು ನೊಂದಣಿ ಮಾಡುವ ಮೂಲಕ ಪಡೆದುಕೊಂಡು ಈ ಕೆಳಗೆ ನೀಡಲಾದ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ( karnataka labour card schemes ) ಪಡೆಯಬಹುದು.
ಅಪಘಾತ ಪರಿಹಾರ
ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
ತಾಯಿ ಮಗು ಸಹಾಯಹಸ್ತಾ
ದುರ್ಬಲತೆ ಪಿಂಚಣಿ ಮುಂದುವರಿಕೆ
ಪಿಂಚಣಿ ಮುಂದುವರಿಕೆ
ಹೆರಿಗ ಸೌಲಭ್ಯ
ದುರ್ಬಲತೆ ಪಿಂಚಣಿ ಸಾಲಭ್ಯ
ಶೈಕ್ಷಣಿಕ ಸಹಾಯಧನ
ಅಂತ್ಯಕ್ರಿಯೆ ವೆಚ್ಚ
ಮದುವೆ ಸಹಾಯಧನ
ವೈದ್ಯಕೀಯ ಸಹಾಯಧನ
ಪಿಂಚಣಿ ಸೌಲಭ್ಯ
ಶ್ರಮಸಾಮರ್ಥ್ಯ ಟೂಲ್ ಕಿಟ್
ಉಚತ ಸಾರಿಗೆ ಬಸ್ ಪಾಸ್ ಸೌಲಭ್ಯ.
ಲೇಬರ್ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳ ( Qualifications ) ವಿವರ :
ಲೇಬರ್ ಕಾರ್ಡ್ ಅನ್ನು ಪಡೆಯುವ ಅಥವಾ ನೋಂದಣಿ ಮಾಡುವ ಮೊದಲು ಅರ್ಹ ಅಭ್ಯರ್ಥಿಯು ಮೊದಲು 12 ತಿಂಗಳುಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. ಹಾಗಾದರೆ ಮಾತ್ರ ಅವರಿಗೆ ಸರ್ಕಾರದಿಂದ ದೊರೆಯುವ ಈ ಯೋಜನೆಗಳನ್ನು ಪಡೆಯಲು ಸಾಧ್ಯ.
ಲೇಬರ್ ಕಾರ್ಡ್ ಪಡೆಯಲು ಇರಬೇಕಾದ ವಯೋಮಿತಿ ( Age limit ) :
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು ವಯೋಮಿತಿಯು 18 ರಿಂದ 60 ವರ್ಷದೊಳಗಿರಬೇಕು.
ಲೇಬರ್ ಕಾರ್ಡ್ ಗೆ ನೋಂದಣಿ ಮಾಡಿಕೊಳ್ಳಲು ಬೇಕಾಗುವ ಮುಖ್ಯ ದಾಖಲೆಗಳ ( Important documents ) ವಿವರ:
90 ದಿನಗಳ ಉದ್ಯೋಗ ದೃಢೀಕರಣ ಪತ್ರ.
ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ.
ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ.
ಅರ್ಜಿದಾರರ ಆಧಾರ್ ಕಾರ್ಡ್’ಗೆ ಲಿಂಕ್ ಇರುವ ದೂರವಾಣಿ ಸಂಖ್ಯೆ.
ಇದರಲ್ಲಿ ನಿಮಗೆ ಇನ್ನಾವುದೇ ಇತರ ಮಾಹಿತಿ ಬೇಕಿದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ( For More Information ) ಈ ಕೆಳಗೆ ನೀಡಿರುವ ಮಾಹಿತಿಯನ್ನು ಸಂರ್ಕಿಸಬಹುದು :
ನೋಂದಣಿ ಪ್ರಕ್ರಿಯೆಯಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾರ್ಮಿಕ ಅಧಿಕಾರಿಗಳು & ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು. ಹಾಗೆಯೇ ಸಹಾಯವಾಣಿ ಸಂಖ್ಯೆ 155214 ಕರೆ ಮಾಡಿ ಮಾಹಿತಿ ಪಡೆಯಬಹುದು.
ಹಾಗೆಯೇ ಯಾವುದೇ ಮಾಹಿತಿ ಬೇಕಿದ್ದಲ್ಲಿ ಇಲಾಖೆಯ ಪ್ರಮುಖ ಲಿಂಕ್‌ಗಳು ( website links ) ಲಭ್ಯವಿದೆ ಅವುಗಳಲಿಗೆ ಭೇಟಿ ನೀಡಿ ಮಾಹಿತಿ ತಿಳಿದು ಕೊಳ್ಳಬಹುದು.
ಇಲಾಖೆಯ ವೆಬ್‌ಸೈಟ್ :
karbwwb.karnataka.gov.in
ವಿಶೇಷ ಸೂಚನೆ ( Important notice ) :
ಕಟ್ಟಡ ಕಾರ್ಮಿಕರಲ್ಲದವರು ನಕಲಿ
ದಾಖಲಾತಿ ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದಾರೆ. ಇದು ಎಲ್ಲರಿಗೂ ಅನ್ವಯಿಸುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





