ಕರ್ನಾಟಕದಲ್ಲಿ ಸರ್ಕಾರಿ ನೇಮಕಾತಿ ಪ್ರಕ್ರಿಯೆಯ (Government Recruitment Process) ಸುತ್ತ ಮತ್ತೆ ಗೊಂದಲ ಸೃಷ್ಟಿಯಾಗಿದೆ. ದಶಕಗಳಿಂದ ಪರಿಶಿಷ್ಟ ಜಾತಿ ಸಮುದಾಯಗಳ ಒಳಮೀಸಲಾತಿ ಹಕ್ಕು ಸಾಧನೆಗಾಗಿ ಹೋರಾಟ ನಡೆದಿರುವ ಸಂದರ್ಭದಲ್ಲಿ, ರಾಜ್ಯ ಸರ್ಕಾರವೇ ಅದರ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಇಂತಹ ಸಂದರ್ಭದಲ್ಲಿ, ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission) ಯಾವುದೇ ಒಳಮೀಸಲಾತಿ ಅನ್ವಯಿಸದೆ ಕೃಷಿ ಇಲಾಖೆಯ ಪ್ರಮುಖ ಹುದ್ದೆಗಳ ಭರ್ತಿಗೆ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಖಾಲಿ ಹುದ್ದೆಗಳ ಸಂಖ್ಯೆ ಮತ್ತು ಅಧಿಸೂಚನೆಗಳ ಬಗ್ಗೆ ನೋಡುವುದಾದರೆ:
ರಾಜ್ಯದ ಕೃಷಿ ಇಲಾಖೆಯಲ್ಲಿ (State Agricultural Department) ಒಟ್ಟು 3,319 ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳು ಖಾಲಿ ಇವೆ. ಅದರಲ್ಲಿ 817 ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ 945 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಮುಂದಾಗಿದೆ. 2024ರ ಸೆಪ್ಟೆಂಬರ್ 20ರಂದು ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಯಿತು. ಆದರೆ ಅದೇ ವೇಳೆಗೆ ಸುಪ್ರೀಂ ಕೋರ್ಟ್‌ನ(Supreme Court) ಒಳಮೀಸಲಾತಿ ತೀರ್ಪು ಬಂದುಬಿಟ್ಟದ್ದರಿಂದ, ಅಧಿಸೂಚನೆ ರದ್ದು ಮಾಡಬೇಕಾಯಿತು. ಬಳಿಕ, 2024ರ ಡಿಸೆಂಬರ್ 31ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಲಾಯಿತು.
ಒಳಮೀಸಲಾತಿ ವಿಚಾರ: ಏಕಸದಸ್ಯ ಆಯೋಗ
ಪರಿಶಿಷ್ಟ ಜಾತಿಯ 101 ಉಪಜಾತಿಗಳ ದತ್ತಾಂಶ ಸಂಗ್ರಹಿಸಿ (Single-member commission collects data on 101 sub-castes of Scheduled Castes) ಒಳಮೀಸಲಾತಿ ಕಲ್ಪಿಸುವ ಕುರಿತು ಸೂಕ್ತ ಶಿಫಾರಸು ನೀಡಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿತ್ತು. ವರದಿ ಸಲ್ಲಿಸುವವರೆಗೆ ಹಾಗೂ ಒಳಮೀಸಲಾತಿ ಕುರಿತು ಅಂತಿಮ ತೀರ್ಮಾನ ಬರುವವರೆಗೆ 2024ನೇ ಅಕ್ಟೋಬರ್ 28ಕ್ಕೆ ಅನ್ವಯವಾಗುವಂತೆ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ತಡೆಹಿಡಿಯಬೇಕು ಎಂದು ಸರ್ಕಾರ ಸುತ್ತೋಲೆ (Circular) ಹೊರಡಿಸಿತ್ತು.
ಕೆಪಿಎಸ್‌ಸಿಯ ಆತುರ, ಸರ್ಕಾರದ ಸೂಚನೆ ನಿರ್ಲಕ್ಷ್ಯ(KPSC’s haste, disregard for government instructions) :
ಸರ್ಕಾರದ ಈ ಸ್ಪಷ್ಟ ನಿಷೇಧವನ್ನು ಕಡೆಗಣಿಸಿ ಕೆಪಿಎಸ್‌ಸಿಯು ಈಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅಲ್ಲದೇ, ಕಲ್ಯಾಣ ಕರ್ನಾಟಕದ 273 ಹುದ್ದೆಗಳಿಗೂ ಸೇರಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ. ಇದರಿಂದ ಸರ್ಕಾರದ ಒಳಮೀಸಲಾತಿ ನೀತಿ ಬಲಹೀನಗೊಳ್ಳುವ ಅಪಾಯವಿದೆ ಎಂದು ಸಾಮಾಜಿಕ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಒಳಮೀಸಲಾತಿ ಹೋರಾಟಕ್ಕೆ ಹಿನ್ನಡೆಯ ಭೀತಿ(Fear of setback for internal reservation struggle):
ಸರ್ಕಾರ ಈಗಾಗಲೇ ಪರಿಶಿಷ್ಟ ಜಾತಿಗೆ ಒಟ್ಟು 17% ಮೀಸಲಾತಿ ನೀಡಿದ್ದು, ಅದರೊಳಗೆ,
‘ಎ’ ಪ್ರವರ್ಗ (ಎಡಗೈ ಜಾತಿಗಳು) – 6%
‘ಬಿ’ ಪ್ರವರ್ಗ (ಬಲಗೈ ಜಾತಿಗಳು) – 6%
‘ಸಿ’ ಪ್ರವರ್ಗ (ಲಂಬಾಣಿ, ಬೋವಿ, ಕೊರಚ, ಕೊರಮ, ಅಲೆಮಾರಿ) – 5%
ಈ ರೀತಿಯ ಒಳಮೀಸಲಾತಿ ಜಾರಿಗೆ ಸಂಬಂಧಿಸಿದ ಆದೇಶವಿದ್ದರೂ, ಕೆಪಿಎಸ್‌ಸಿ(KPSC) ಅದನ್ನು ಅನ್ವಯಿಸದೆ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದನ್ನು ಮಾಜಿ ಸಚಿವ ಎಚ್. ಆಂಜನೇಯ ತೀವ್ರವಾಗಿ ವಿರೋಧಿಸಿದ್ದಾರೆ. “ಒಳಮೀಸಲಾತಿ ಇಲ್ಲದೆ ನೇಮಕಾತಿ ಮಾಡಿದರೆ, ದಲಿತ ಸಮುದಾಯದ ಕೃಷಿ ಪದವೀಧರರಿಗೆ (ಬಿ.ಎಸ್‌ಸಿ) ಭಾರಿ ಅನ್ಯಾಯವಾಗುತ್ತದೆ. ದಶಕಗಳ ಹೋರಾಟ ವ್ಯರ್ಥವಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
ಸಚಿವರ ಎಚ್ಚರಿಕೆ(Minister’s warning) :
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೂಡ ಈ ವಿಚಾರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕೃಷಿ ಅಧಿಕಾರಿಗಳ ಹುದ್ದೆ ಭರ್ತಿ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಲು ಮುಖ್ಯಮಂತ್ರಿ (Chief Minister) ಅವರಿಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಕೆಪಿಎಸ್‌ಸಿ ತೆಗೆದುಕೊಂಡ ಈ ನಿರ್ಧಾರವು ರಾಜ್ಯದ ನೇಮಕಾತಿ ನೀತಿ, ಪರಿಶಿಷ್ಟ ಜಾತಿ ಸಮುದಾಯಗಳ ಒಳಮೀಸಲಾತಿ ಹೋರಾಟ ಮತ್ತು ಸಾಮಾಜಿಕ ನ್ಯಾಯದ ತತ್ತ್ವಗಳ ಮೇಲೆ ದೊಡ್ಡ ಪ್ರಶ್ನೆ ಕೇಳಿ ಬರುತ್ತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.