ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದಿಂದ 2025ನೇ ಸಾಲಿಗೆ ಒಟ್ಟು 708 ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಕೆಇಎ ಅಕ್ಟೋಬರ್ 2025ರ ಅಧಿಕೃತ ಅಧಿಸೂಚನೆಯ ಮೂಲಕ ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರ (FDA), ದ್ವಿತೀಯ ದರ್ಜೆ ಸಹಾಯಕರ (SDA), ಸಹಾಯಕ ವ್ಯವಸ್ಥಾಪಕರು (Assistant Manager), ಕಿರಿಯ ಅಭಿಯಂತರರು (Junior Engineer), ಲೆಕ್ಕಿಗರು (Accountant) ಸೇರಿದಂತೆ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 10, 2025 ಕೊನೆಯ ದಿನಾಂಕವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..
ಸಂಸ್ಥೆ ಮತ್ತು ಹುದ್ದೆಗಳ ವಿವರ
- ಸಂಸ್ಥೆಯ ಹೆಸರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority – KEA)
- ಒಟ್ಟು ಹುದ್ದೆಗಳ ಸಂಖ್ಯೆ: 708
- ಉದ್ಯೋಗ ಸ್ಥಳ: ಕರ್ನಾಟಕ
- ಪ್ರಮುಖ ಹುದ್ದೆಗಳು: FDA, SDA, ಸಹಾಯಕ ವ್ಯವಸ್ಥಾಪಕರು, ಕಿರಿಯ ಅಭಿಯಂತರರು, ಲೆಕ್ಕಿಗರು.
- ವೇತನ ಶ್ರೇಣಿ: ತಿಂಗಳಿಗೆ ರೂ. 21,400/- ರಿಂದ 83,900/- ವರೆಗೆ.
ಇಲಾಖಾವಾರು ಹುದ್ದೆಗಳ ಸಂಖ್ಯೆ
| ಇಲಾಖೆಯ ಹೆಸರು | ಉಳಿದ ಮೂಲವೃಂದ (RPC) ಹುದ್ದೆಗಳು | ಕಲ್ಯಾಣ ಕರ್ನಾಟಕ (KK) ಹುದ್ದೆಗಳು |
| ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) | 18 | 7 |
| ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) | 7 | 14 |
| ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) | 40 | 4 |
| ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) | 63 | 253 |
| ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) | 19 | – |
| ಕೃಷಿ ಮಾರಾಟ ಇಲಾಖೆ | 180 | – |
| ತಾಂತ್ರಿಕ ಶಿಕ್ಷಣ ಇಲಾಖೆ | 50 | 43 |
| ಶಾಲಾ ಶಿಕ್ಷಣ ಇಲಾಖೆ (ಪೂರ್ವ ಪದವಿ) | 10 | – |
| ಒಟ್ಟು | 387 | 321 |
ಅರ್ಹತಾ ಮಾನದಂಡಗಳು (Eligibility Criteria)
ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ (PUC), ಪದವಿ, B.Com, B.E ಅಥವಾ B.Tech ಅನ್ನು ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷದಿಂದ ಗರಿಷ್ಠ 38 ವರ್ಷಗಳವರೆಗೆ ಇರಬೇಕು.
ವಯೋಮಿತಿ ಸಡಿಲಿಕೆ (Age Relaxation):
- 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷಗಳು
- ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳಿಗೆ: 5 ವರ್ಷಗಳು
ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ
ಅರ್ಜಿ ಶುಲ್ಕ:
| ವರ್ಗ | ಶುಲ್ಕ (ರೂ.) |
| 2A, 2B, 3A, 3B ಅಭ್ಯರ್ಥಿಗಳು | 750/- |
| SC / ST, ಮಾಜಿ ಸೈನಿಕ (Ex-Army) ಅಭ್ಯರ್ಥಿಗಳು | 500/- |
| ಅಂಗವಿಕಲ (PWD) ಅಭ್ಯರ್ಥಿಗಳು | 250/- |
ಪಾವತಿ ವಿಧಾನ: ಆನ್‌ಲೈನ್ (Online)
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ (Written Test – OMR ಆಧಾರಿತ)
- ದಾಖಲೆಗಳ ಪರಿಶೀಲನೆ (Documents Verification)
- ಸಂದರ್ಶನ (Interview)
ಪ್ರಮುಖ ದಿನಾಂಕಗಳು
| ವಿವರ | ದಿನಾಂಕ |
| ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ | ಅಕ್ಟೋಬರ್ 09, 2025 |
| ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಕಲ್ಯಾಣ ಕರ್ನಾಟಕೇತರರಿಗೆ – NHK) | ನವೆಂಬರ್ 01, 2025 |
| ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಕಲ್ಯಾಣ ಕರ್ನಾಟಕದವರಿಗೆ – HK) | ನವೆಂಬರ್ 10, 2025 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | ನವೆಂಬರ್ 11, 2025 |
ಪ್ರಮುಖ ಲಿಂಕ್‌ಗಳು
| ವಿವರ | ಲಿಂಕ್ |
| ಅರ್ಜಿ ಸಲ್ಲಿಸಲು (Apply Online) | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ HK | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ NHK | ಇಲ್ಲಿ ಕ್ಲಿಕ್ ಮಾಡಿ |
| ಕಿರು ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್‌ಸೈಟ್ | cetonline.karnataka.gov.in |

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




