DA HIKESS

ಸರ್ಕಾರಿ ನೌಕರರಿಗೆ ಭರ್ಜರಿ ಬೋನಸ್! ತುಟ್ಟಿಭತ್ಯೆ (DA) ದರದಲ್ಲಿ ಬೃಹತ್ ಹೆಚ್ಚಳ: ಸರ್ಕಾರ ಮಹತ್ವದ ಆದೇಶ

Categories:
WhatsApp Group Telegram Group

ಬೆಂಗಳೂರು: ರಾಜ್ಯ ಸರ್ಕಾರವು 2016ರ ಪರಿಷ್ಕೃತ ಯುಜಿಸಿ (UGC), ಐಸಿಎಆರ್ (ICAR), ಮತ್ತು ಎಐಸಿಟಿಇ (AICTE) ವೇತನ ಶ್ರೇಣಿಗಳಲ್ಲಿರುವ ಬೋಧಕ ಹಾಗೂ ತತ್ಸಮಾನ ಹುದ್ದೆಗಳ ಸಿಬ್ಬಂದಿಗಳ ತುಟ್ಟಿಭತ್ಯೆ (Dearness Allowance – DA) ದರವನ್ನು ಪರಿಷ್ಕರಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರದ ಆದೇಶದ ಪ್ರಕಾರ, 2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿನ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯ ದರಗಳನ್ನು ಈಗಿರುವ ಮೂಲ ವೇತನದ ಶೇಕಡ 55 ರಿಂದ ಶೇಕಡ 58ಕ್ಕೆ ಹೆಚ್ಚಿಸಲಾಗಿದ್ದು, ಈ ಪರಿಷ್ಕೃತ ದರವು ಜುಲೈ 1, 2025 ರಿಂದ ಜಾರಿಗೆ ಬರಲಿದೆ.

ಪ್ರಮುಖ ಅಂಶಗಳು:

ಮೂಲ ವೇತನದ ವ್ಯಾಖ್ಯಾನ: ಈ ಆದೇಶದ ಅಡಿಯಲ್ಲಿ ‘ಮೂಲ ವೇತನ’ ಎಂದರೆ, ಸರ್ಕಾರಿ ನೌಕರರು ತಾವು ಹೊಂದಿರುವ ಹುದ್ದೆಗೆ ಅನ್ವಯವಾಗುವ 2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಪಡೆಯುವ ಮೂಲ ವೇತನವಾಗಿದೆ. ವೇತನ ಎಂದು ಪರಿಗಣಿಸಲ್ಪಡದ ಯಾವುದೇ ಭತ್ಯೆಗಳನ್ನು ಮೂಲ ವೇತನಕ್ಕೆ ಸೇರಿಸುವಂತಿಲ್ಲ.

ಅನ್ವಯವಾಗುವಿಕೆ: ಈ ತುಟ್ಟಿಭತ್ಯೆ ಪರಿಷ್ಕರಣೆಯು ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು, ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಇತ್ಯಾದಿಗಳ ಪೂರ್ಣಕಾಲಿಕ ನೌಕರರಿಗೆ ಅನ್ವಯಿಸುತ್ತದೆ.

ಪಾವತಿ ವಿಧಾನ: ಈ ಆದೇಶದ ಅಡಿಯಲ್ಲಿ ಮಂಜೂರಾದ ಹೆಚ್ಚುವರಿ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿಸಲಾಗುತ್ತದೆ.

ಬಾಕಿ ಮೊತ್ತದ ಪಾವತಿ: ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು 2025ರ ಅಕ್ಟೋಬರ್ ತಿಂಗಳ ವೇತನ ವಿತರಣೆಯ ಮೊದಲು ಪಾವತಿ ಮಾಡುವಂತಿಲ್ಲ.

ನಿವೃತ್ತರಿಗೆ ಅನ್ವಯಿಸುವುದಿಲ್ಲ: ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಯ ನಿವೃತ್ತ ನೌಕರರಿಗೆ ಈ ಆದೇಶಗಳು ಅನ್ವಯಿಸುವುದಿಲ್ಲ.

ಇತರ ನಿಯಮಗಳು: ತುಟ್ಟಿಭತ್ಯೆಯನ್ನು ಸಂಭಾವನೆಯ ಒಂದು ವಿಶಿಷ್ಟ ಅಂಶವಾಗಿ ತೋರಿಸಬೇಕು ಮತ್ತು ಇದನ್ನು ಯಾವುದೇ ಕಾರಣಕ್ಕೂ ‘ವೇತನ’ ಎಂದು ಪರಿಗಣಿಸಲಾಗುವುದಿಲ್ಲ. ತುಟ್ಟಿಭತ್ಯೆಯ ಹಣದ ಲೆಕ್ಕದಲ್ಲಿ ಐವತ್ತು ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸಿ, ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸಲಾಗುತ್ತದೆ.

011
022
033 1
This image has an empty alt attribute; its file name is WhatsApp-Image-2025-09-05-at-11.51.16-AM-12-1024x330.jpeg

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories