ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನರ ಆರ್ಥಿಕ ಮೇಲ್ಮಟ್ಟ ಮತ್ತು ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳ ಅಡಿಯಲ್ಲಿ ಆರ್ಥಿಕ ಸಹಾಯ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಗಳು ಈ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿವೆ.
ಆಸಕ್ತ ಅರ್ಜಿದಾರರು ತಮ್ಮ ನಿಗಮದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು: https://sevasindhu.karnataka.gov.in
ಮುಖ್ಯ ಯೋಜನೆಗಳು ಮತ್ತು ವಿವರ:
ಸ್ವಯಂ ಉದ್ಯೋಗ ನೇರಸಾಲ ಯೋಜನೆ:
- ಹೈನುಗಾರಿಕೆ: ಎರಡು ಎಮ್ಮೆ/ಹಸುಗಳ ಘಟಕಕ್ಕೆ ಒಟ್ಟು ವೆಚ್ಚದ 50% ಸಹಾಯಧನ (ಗರಿಷ್ಠ ₹1.25 ಲಕ್ಷ).
- ವ್ಯಾಪಾರ/ಇತರೆ ಉದ್ಯಮ: ಘಟಕ ವೆಚ್ಚದ 70% ಸಹಾಯಧನ (ಗರಿಷ್ಠ ₹2 ಲಕ್ಷ). ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ನೀಡಲಾಗುವುದು.
ಸ್ವಾವಲಂಬಿ ಸಾರಥಿ ಯೋಜನೆ:
- ಸರಕು ವಾಹನ/ಟ್ಯಾಕ್ಸಿ: ಖರೀದಿ ವೆಚ್ಚದ 75% ಸಹಾಯಧನ (ಗರಿಷ್ಠ ₹4 ಲಕ್ಷ).
- ಪಿಕ್ಅಪ್ ಟ್ರಕ್/ಟ್ರೈಲರ್/ಮೊಬೈಲ್ ಕಿಚನ್/ಕಿಯೋಸ್ಕ್: ಖರೀದಿ ವೆಚ್ಚದ 75% ಸಹಾಯಧನ (ಗरಿಷ್ಠ ₹4 ಲಕ್ಷ).
- ಮೈಕ್ರೋ ಕ್ರೆಡಿಟ್ ಯೋಜನೆ (ಮಹಿಳಾ ಸ್ವಸಹಾಯ ಸಂಘಗಳಿಗೆ):
- ಕನಿಷ್ಠ 10 ಸದಸ್ಯರಿರುವ ನೋಂದಾಯಿತ ಮಹಿಳಾ ಸಂಘಗಳಿಗೆ ಗುಂಪು ಉದ್ಯಮಗಳಿಗೆ ₹5 ಲಕ್ಷಗಳವರೆಗೆ ನೆರವು. ಇದರಲ್ಲಿ ₹2.5 ಲಕ್ಷಗಳು ಸಹಾಯಧನ ಮತ್ತು ₹2.5 ಲಕ್ಷಗಳು ಕಡಿಮೆ ಬಡ್ಡಿಯ (ವಾರ್ಷಿಕ 4%) ಸಾಲವಾಗಿರುತ್ತದೆ.
ಇದರ ಜೊತೆಗೆ, ಗಂಗಾ ಕಲ್ಯಾಣ ಯೋಜನೆ ಮತ್ತು ಭೂ ಒಡೆತನ ಯೋಜನೆಯಂತಹ ಇತರ ಸೌಲಭ್ಯಗಳಿಗೂ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ:
ಯೋಜನೆಗಳ ವಿವರವಾದ ಮಾಹಿತಿ ಮತ್ತು ಅರ್ಜಿ ಫಾರಂಳನ್ನು ಕೆಳಗಿನ ನಿಗಮಗಳ ಅಧಿಕೃತ ವೆಬ್ಸೈಟ್ಗಳಿಂದ ಪಡೆಯಬಹುದು:
- ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ: https://adcl.karnataka.gov.in
- ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ: https://adijambava.karnataka.gov.in
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ: https://www.kbdc.karnataka.gov.in
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ: https://kssksc.kar.nic.in
- ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ: https://ktdc.karnataka.gov.in
ಅರ್ಜಿದಾರರು ಸೆಪ್ಟೆಂಬರ್ 10 ರೊಳಗಾಗಿ https://sevasindhu.karnataka.gov.in ಈ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿಯ ಒಂದು ಪ್ರತಿಯನ್ನು ಸಂಬಂಧಿತ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಸಂಪರ್ಕ ಮಾಹಿತಿ:
ಹೆಚ್ಚಿನ ವಿವರಗಳಿಗಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಈ ಕೆಳಗಿನ ವಿಳಾಸ ಮತ್ತು ದೂರವಾಣಿ ನಂಬರ್ ಮೂಲಕ ಸಂಪರ್ಕಿಸಬಹುದು: ಕೊಡಗು ಜಿಲ್ಲೆ – 571201, ದೂರವಾಣಿ: 08272-228857.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.