e khata bigg update scaled

E-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!

WhatsApp Group Telegram Group

ಗುಡ್ ನ್ಯೂಸ್: ಇ-ಖಾತಾ ಇನ್ಮುಂದೆ ಆನ್‌ಲೈನ್!

ಆಸ್ತಿ ಮಾಲೀಕರೇ ಗಮನಿಸಿ, ಇನ್ಮುಂದೆ ಖಾತಾ ಬದಲಾವಣೆಗಾಗಿ ಅಥವಾ ಇ-ಖಾತಾ (E-Khata) ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹೊಸ ‘ಇ-ಆಸ್ತಿ’ (E-Aasthi) ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಮನೆಯಲ್ಲೇ ಕುಳಿತು 10 ನಿಮಿಷದಲ್ಲಿ ನಿಮ್ಮ ಆಸ್ತಿ ದಾಖಲೆ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್.

ಬೆಂಗಳೂರು: ನಗರ ಪ್ರದೇಶದಲ್ಲಿ ಸೈಟ್ ಅಥವಾ ಮನೆ ಹೊಂದಿರುವವರಿಗೆ ಇದೊಂದು ಬಹುದೊಡ್ಡ ಸಿಹಿಸುದ್ದಿ. ಇ-ಖಾತಾ ಮಾಡಿಸಲು ಮಧ್ಯವರ್ತಿಗಳಿಗೆ ಹಣ ಕೊಟ್ಟು, ಪಾಲಿಕೆ ಕಚೇರಿಗಳ ಮುಂದೆ ಕ್ಯೂ ನಿಲ್ಲುವ ತಾಪತ್ರಯಕ್ಕೆ ಸರ್ಕಾರ ಶಾಶ್ವತ ಬ್ರೇಕ್ ಹಾಕಿದೆ. ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ‘ನಮ್ಮ ಸ್ವತ್ತು’ ಯೋಜನೆಯಡಿ ಆನ್‌ಲೈನ್ ಮೂಲಕ ಇ-ಖಾತಾ ವಿತರಣೆಗೆ ಚಾಲನೆ ನೀಡಿದ್ದಾರೆ.

ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಏನಿದು ಹೊಸ ಬದಲಾವಣೆ? 

ಇಷ್ಟು ದಿನ ಇ-ಖಾತಾ ಪಡೆಯಲು ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಪೌರಾಡಳಿತ ಇಲಾಖೆಯು www.eaasthi.karnataka.gov.in ಎಂಬ ಹೊಸ ವೆಬ್‌ಸೈಟ್ ಅಭಿವೃದ್ಧಿಪಡಿಸಿದೆ. ಇದರಲ್ಲಿ ರಾಜ್ಯದ ನಗರ ವ್ಯಾಪ್ತಿಯ 45 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಕರಡು ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ನಿಮ್ಮ ಆಸ್ತಿ ವಿವರ ಸರಿಯಾಗಿದ್ದರೆ, ಆನ್‌ಲೈನ್‌ನಲ್ಲೇ ಶುಲ್ಕ ಕಟ್ಟಿ ಒರಿಜಿನಲ್ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಬಹುದು!

ಯಾಕೆ ಬೇಕು ಇ-ಖಾತಾ?

  • ಆಸ್ತಿ ಮಾರಾಟ ಮಾಡಲು ಅಥವಾ ಖರೀದಿಸಲು.
  • ಬ್ಯಾಂಕ್‌ನಲ್ಲಿ ಸಾಲ (Loan) ಪಡೆಯಲು.
  • ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು.
  • ವಂಚನೆ ರಹಿತ ಆಸ್ತಿ ನಿರ್ವಹಣೆಗೆ ಇದು ಅತ್ಯಗತ್ಯ.
ekhata update
{“remix_data”:[],”remix_entry_point”:”challenges”,”source_tags”:[],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“transform”:1},”is_sticker”:false,”edited_since_last_sticker_save”:true,”containsFTESticker”:false}

📲 ಇ-ಖಾತಾ ಪಡೆಯುವುದು ಹೇಗೆ? (Step-by-Step)

  • 👉 ಹಂತ 1: ಸರ್ಕಾರದ ಅಧಿಕೃತ eaasthi.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • 👉 ಹಂತ 2: ಅಲ್ಲಿ ‘Citizen Login’ ಮೇಲೆ ಕ್ಲಿಕ್ ಮಾಡಿ, ಮೊಬೈಲ್ ನಂಬರ್ ಹಾಕಿ OTP ನಮೂದಿಸಿ.
  • 👉 ಹಂತ 3: ನಿಮ್ಮ ಆಸ್ತಿ ಇರುವ ಜಿಲ್ಲೆ ಮತ್ತು ನಗರಸಭೆಯನ್ನು ಆಯ್ಕೆ ಮಾಡಿ.
  • 👉 ಹಂತ 4: ನಿಮ್ಮ ಆಸ್ತಿ ಸಂಖ್ಯೆ ಅಥವಾ ಹೆಸರನ್ನು ಸರ್ಚ್ ಮಾಡಿ.
  • 👉 ಹಂತ 5: ಎಲ್ಲಾ ವಿವರ ಸರಿಯಿದ್ದರೆ, ಆನ್‌ಲೈನ್ ಮೂಲಕವೇ e-Khata Certificate ಡೌನ್‌ಲೋಡ್ ಮಾಡಿ.

ಸೂಚನೆ: ಏನಾದರೂ ತಪ್ಪುಗಳಿದ್ದರೆ ಆನ್‌ಲೈನ್‌ನಲ್ಲೇ ತಿದ್ದುಪಡಿಗೂ ಅರ್ಜಿ ಹಾಕಬಹುದು!

Citizen Login’ ಮೇಲೆ ಕ್ಲಿಕ್ ಮಾಡಿ, ಮೊಬೈಲ್ ನಂಬರ್ ಹಾಕಿ OTP ನಮೂದಿಸಿ.

ekhata 1

ಅಲ್ಲಿ ‘Citizen Login’ ಮೇಲೆ ಕ್ಲಿಕ್ ಮಾಡಿ, ಮೊಬೈಲ್ ನಂಬರ್ ಹಾಕಿ OTP ನಮೂದಿಸಿ.

ekhata 2

ನಿಮ್ಮ ಆಸ್ತಿ ಇರುವ ಜಿಲ್ಲೆ ಮತ್ತು ನಗರಸಭೆಯನ್ನು ಆಯ್ಕೆ ಮಾಡಿ.

ekhata 3

ಎಲ್ಲಾ ವಿವರ ಸರಿಯಿದ್ದರೆ, ಆನ್‌ಲೈನ್ ಮೂಲಕವೇ e-Khata Certificate ಡೌನ್‌ಲೋಡ್ ಮಾಡಿ.

ekhata 4 1

ಕೈಯಲ್ಲಿ ಇಟ್ಟುಕೊಳ್ಳಬೇಕಾದ ದಾಖಲೆಗಳು: 

ಅರ್ಜಿ ಸಲ್ಲಿಸುವ ಮುನ್ನ ಅಥವಾ ಪರಿಶೀಲಿಸುವ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ:

  1. ಮಾಲೀಕರ ಆಧಾರ್ ಕಾರ್ಡ್ & ಫೋಟೋ.
  2. ಆಸ್ತಿ ನೋಂದಣಿ ಪತ್ರ (Sale Deed Number).
  3. ವಿದ್ಯುತ್ ಬಿಲ್ (RR Number).
  4. ಆಸ್ತಿ ತೆರಿಗೆ ಕಟ್ಟಿದ ರಸೀದಿ (SAS Number).
  5. EC (Encumbrance Certificate – 15/16).

ಸಹಾಯವಾಣಿ ಸಂಖ್ಯೆ: ನಿಮಗೆ ಆನ್‌ಲೈನ್‌ನಲ್ಲಿ ಮಾಡಲು ಕಷ್ಟವಾದರೆ ಅಥವಾ ಯಾವುದೇ ಗೊಂದಲವಿದ್ದರೆ, ಸರ್ಕಾರವು ಸಹಾಯವಾಣಿಯನ್ನು ಆರಂಭಿಸಿದೆ. ಕರೆ ಮಾಡಿ ಮಾಹಿತಿ ಪಡೆಯಬಹುದು: 72595 85959.

WhatsApp Group Join Now
Telegram Group Join Now

Popular Categories