computer teacher

CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಿಂದ 500 ಗಣಕ ವಿಜ್ಞಾನ ಶಿಕ್ಷಕರ (CST) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ, B.Ed ಮತ್ತು TET ಷರತ್ತುಗಳು, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ.

Highlights:

  • ಒಟ್ಟು ಹುದ್ದೆಗಳು: 500 ಗಣಕ ವಿಜ್ಞಾನ ಶಿಕ್ಷಕರು (CST – 1 ರಿಂದ 8ನೇ ತರಗತಿ).
  • ಪ್ರಮುಖ ವಿನಾಯಿತಿ: ಅರ್ಜಿ ಸಲ್ಲಿಸಲು ಪ್ರಸ್ತುತ ಬಿ.ಎಡ್ (B.Ed) ಹಾಗೂ ಟಿಇಟಿ (TET) ಕಡ್ಡಾಯವಲ್ಲ.
  • ಅರ್ಜಿ ಸಲ್ಲಿಕೆ ಪ್ರಾರಂಭ: 18 ಆಗಸ್ಟ್ 2026.
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 7th September 2026 15th Sepetember 2026

ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಬಯಸುವ ಗಣಕ ವಿಜ್ಞಾನ (Computer Science) ಪದವೀಧರರಿಗೆ ಉತ್ತಮ ಅವಕಾಶವೊಂದು ಒದಗಿಬಂದಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಸಾಲಿನಲ್ಲಿ ವಿವಿಧ ವಿಭಾಗಗಳ ಒಟ್ಟು 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದ್ದು, ಇದರಲ್ಲಿ 500 ಗಣಕ ವಿಜ್ಞಾನ ಶಿಕ್ಷಕರ (Computer Science Teachers – CST) ಹುದ್ದೆಗಳು ಸೇರಿವೆ.

ಈ 500 CST ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ 300 ಹಾಗೂ ಕಲ್ಯಾಣ ಕರ್ನಾಟಕೇತರ ಪ್ರದೇಶಗಳಿಗೆ 200 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಟೆಕ್ನಾಲಜಿ, BCA ಸೇರಿದಂತೆ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಸಂಬಂಧಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ, CST ಹುದ್ದೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ B.Ed ಮತ್ತು TET ಹೊಂದಿರದ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದ್ದು, ನೇಮಕಾತಿಯಾದ 5 ವರ್ಷಗಳೊಳಗೆ B.Ed ಪದವಿ ಹಾಗೂ TET ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 18, 2026ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 07, 2026ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಗಳ ವಿಂಗಡಣೆ, ಶೈಕ್ಷಣಿಕ ಅರ್ಹತೆ, B.Ed ಮತ್ತು TETಗೆ ಸಂಬಂಧಿಸಿದ ಷರತ್ತುಗಳು, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ CST ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ.

ಹುದ್ದೆಗಳ ವಿಂಗಡಣೆ (Vacancy Breakdown)

15,000 ಒಟ್ಟು ಶಿಕ್ಷಕ ಹುದ್ದೆಗಳ ಪೈಕಿ 500 ಗಣಕ ವಿಜ್ಞಾನ ಶಿಕ್ಷಕ (CST) ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕೇತರ ವಿಭಾಗಗಳಿಗೆ ಈ ಕೆಳಗಿನಂತೆ ವಿಂಗಡಿಸಲಾಗಿದೆ:

ವಿಭಾಗ (Region)ಗಣಕ ವಿಜ್ಞಾನ ಶಿಕ್ಷಕರ ಹುದ್ದೆಗಳು (CST)ಇತರೆ ಹುದ್ದೆಗಳುಒಟ್ಟು
ಕಲ್ಯಾಣ ಕರ್ನಾಟಕ (Kalyana Karnataka)3006,6676,967
ಕಲ್ಯಾಣ ಕರ್ನಾಟಕೇತರ (Non-Kalyana Karnataka)2007,8338,033
ಒಟ್ಟು ಹುದ್ದೆಗಳು (Total)50014,50015,000

ಗಣಕ ವಿಜ್ಞಾನ ಶಿಕ್ಷಕರ ಶೈಕ್ಷಣಿಕ ಅರ್ಹತೆ (CST Educational Qualification)

ಅಭ್ಯರ್ಥಿಯು ಕಾನೂನಿನ ಮೂಲಕ ಸ್ಥಾಪಿಸಲಾದ ವಿಶ್ವವಿದ್ಯಾನಿಲಯದಿಂದ ಈ ಕೆಳಕಂಡ ಯಾವುದಾದರೊಂದು ಸ್ನಾತಕ (ಪದವಿ) ವ್ಯಾಸಂಗದಲ್ಲಿ ಕನಿಷ್ಠ ಸರಾಸರಿ ಶೇಕಡ 50% ಅಂಕಗಳನ್ನು ಹೊಂದಿರತಕ್ಕದ್ದು:

  • ಬ್ಯಾಚುಲರ್ ಆಫ್ ಸೈನ್ಸ್ (ಕಂಪ್ಯೂಟರ್ ಸೈನ್ಸ್) – B.Sc (Computer Science)
  • ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ – BCA
  • ಬ್ಯಾಚುಲರ್ ಆಫ್ ಇಂಜಿನಿಯರಿಂಗ್ – B.E (ಕಂಪ್ಯೂಟರ್ ಸೈನ್ಸ್ / ಇನ್ಫಾರ್ಮೇಶನ್ ಸೈನ್ಸ್ / ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್)
  • ಬ್ಯಾಚುಲರ್ ಆಫ್ ಟೆಕ್ನಾಲಜಿ – B.Tech (ಕಂಪ್ಯೂಟರ್ ಸೈನ್ಸ್ / ಇನ್ಫಾರ್ಮೇಶನ್ ಸೈನ್ಸ್ / ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್)

(ವಿಶೇಷ ಸೂಚನೆ: ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಕ್ಕೆ ಸೇರಿದ ಅಥವಾ ಅಂಗವೈಕಲ್ಯವುಳ್ಳ ಅಭ್ಯರ್ಥಿಯಾಗಿದ್ದಲ್ಲಿ ಪದವಿಯಲ್ಲಿ ಕನಿಷ್ಠ ಶೇಕಡ 45% ಅಂಕಗಳನ್ನು ಪಡೆದಿರಬೇಕು).

📊 ಜಿಲ್ಲಾವಾರು ಹುದ್ದೆಗಳ ವಿವರ

ಜಿಲ್ಲೆಹುದ್ದೆಗಳ ಸಂಖ್ಯೆ
ಬೆಂಗಳೂರು4
ಬೆಂಗಳೂರು ಗ್ರಾಮಾಂತರ4
ಬಿ.ಉತ್ತರ6
ಬಿ.ದಕ್ಷಿಣ7
ಚಿಕ್ಕಬಳ್ಳಾಪುರ6
ಚಿತ್ರದುರ್ಗ6
ದಾವಣಗೆರೆ6
ಕೋಲಾರ6
ರಾಮನಗರ4
ಶಿವಮೊಗ್ಗ7
ತುಮಕೂರು6
ಹಾಸನ4
ಕೊಡಗು5
ಚಿಕ್ಕಮಗಳೂರು8
ದಕ್ಷಿಣ ಕನ್ನಡ7
ಉಡುಪಿ8
ಹಾವೇರಿ3
ಮಂಡ್ಯ8
ಮೈಸೂರು9
ಉತ್ತರ ಕನ್ನಡ5
ಬಾಗಲಕೋಟೆ12
ಬೆಳಗಾವಿ11
ಬಳ್ಳಾರಿ14
ಧಾರವಾಡ9
ಗದಗ8
ಹಾವೇರಿ8
ಉತ್ತರ ಕನ್ನಡ5
ಶಿರಸಿ6
ವಿಜಯಪುರ12
ಬಳ್ಳಾರಿ42
ಬೀದರ್24
ಕಲಬುರಗಿ58
ಕೊಪ್ಪಳ60
ರಾಯಚೂರು58
ವಿಜಯನಗರ24
ಯಾದಗಿರಿ34
ಒಟ್ಟು500

B.Ed ಮತ್ತು TET ಕುರಿತಾದ ವಿಶೇಷ ಷರತ್ತುಗಳು (Conditions for B.Ed & TET)

ಗಣಕ ವಿಜ್ಞಾನ ಶಿಕ್ಷಕರ (1 ರಿಂದ 8ನೇ ತರಗತಿ) ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಬಿ.ಎಡ್ ಮತ್ತು ಟಿಇಟಿ (TET) ಕುರಿತು ವಿಶೇಷ ವಿನಾಯಿತಿ ಮತ್ತು ಷರತ್ತುಗಳನ್ನು ವಿಧಿಸಲಾಗಿದೆ:

  1. ಪ್ರಸ್ತುತ ವಿನಾಯಿತಿ: ಗಣಕ ವಿಜ್ಞಾನ ಶಿಕ್ಷಕರ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಸ್ತುತ B.Ed ಪದವಿ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (KARTET/CTET) ಯಲ್ಲಿ ತೇರ್ಗಡೆ ಹೊಂದುವುದರಿಂದ ವಿನಾಯಿತಿ ನೀಡಲಾಗಿದೆ.
  2. 5 ವರ್ಷಗಳ ಗಡುವು (B.Ed): ಶಾಲಾ ಶಿಕ್ಷಣ ಇಲಾಖೆಯಲ್ಲಿ ಗಣಕ ವಿಜ್ಞಾನ ಶಿಕ್ಷಕರಾಗಿ ನೇಮಕಾತಿಗೊಂಡ 5 ವರ್ಷಗಳ ಒಳಗಾಗಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ (NCTE) ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಶಿಕ್ಷಣದಲ್ಲಿ ಪದವಿ (ಬಿ.ಎಡ್.) ಅರ್ಹತೆಯನ್ನು (ಹುದ್ದೆಗೆ ಸಂಬಂಧಿಸಿದ ಬೋಧನಾ ವಿಧಾನದಲ್ಲಿ) ಗಳಿಸಿಕೊಳ್ಳತಕ್ಕದ್ದು.
  3. 5 ವರ್ಷಗಳ ಗಡುವು (TET): ಅದೇ ರೀತಿ, ನೇಮಕಾತಿಯಾದ 5 ವರ್ಷಗಳ ಒಳಗಾಗಿ ಕಡ್ಡಾಯವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (KARTET ಅಥವಾ CTET) ಪೂರ್ಣಗೊಳಿಸತಕ್ಕದ್ದು.

ವಯೋಮಿತಿ ವಿವರ (Age Limit)

ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 21 ವರ್ಷ ವಯಸ್ಸನ್ನು ಪೂರೈಸಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:

  • ಸಾಮಾನ್ಯ ಅರ್ಹತೆ (General Merit): 40 ವರ್ಷಗಳು.
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 43 ವರ್ಷಗಳು.
  • SC/ST, ಪ್ರವರ್ಗ-1 ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ: 45 ವರ್ಷಗಳು.

ವೇತನ ಶ್ರೇಣಿ (Pay Scale)

ಆಯ್ಕೆಯಾದ ಗಣಕ ವಿಜ್ಞಾನ ಶಿಕ್ಷಕರ (1 ರಿಂದ 8ನೇ ತರಗತಿ) ಹುದ್ದೆಗಳಿಗೆ ₹ 44,425 ದಿಂದ ₹ 83,700/- ವರೆಗೆ ಮಾಸಿಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಮೆರಿಟ್ ಲೆಕ್ಕಾಚಾರ ಮತ್ತು ಆಯ್ಕೆ ಪ್ರಕ್ರಿಯೆ (Selection & Merit Weightage)

ಗಣಕ ವಿಜ್ಞಾನ ಶಿಕ್ಷಕರ (CST) ಹುದ್ದೆಗೆ ಆಯ್ಕೆ ಮಾಡಲು ಅಭ್ಯರ್ಥಿಯ ಮೆರಿಟ್ (Derived percentage) ಅನ್ನು ಈ ಕೆಳಗಿನ ವೇಟೇಜ್ (Weightage) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ:

  1. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (CET) ಪಡೆದ ಅಂಕಗಳು: 85% ವೇಟೇಜ್.
  2. ನಿಗದಿಪಡಿಸಿದ ಪದವಿಯಲ್ಲಿ (Degree) ಪಡೆದ ಅಂಕಗಳು: 15% ವೇಟೇಜ್.

ಪರೀಕ್ಷಾ ಮಾದರಿ ಮತ್ತು ವೇಳಾಪಟ್ಟಿ (Exam Pattern & Schedule)

ಗಣಕ ವಿಜ್ಞಾನ ಶಿಕ್ಷಕರಿಗಾಗಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯು (CET) ವಸ್ತುನಿಷ್ಠ ಮಾದರಿಯಲ್ಲಿದ್ದು (OMR ಶೀಟ್), ಈ ಕೆಳಗಿನಂತೆ ನಡೆಯಲಿದೆ:

ಪತ್ರಿಕೆಯ ವಿವರದಿನಾಂಕ ಮತ್ತು ಸಮಯಅಂಕಗಳು
ಪತ್ರಿಕೆ – 1 (ಸಾಮಾನ್ಯ ಜ್ಞಾನ, ಗಣಕ ಸಾಕ್ಷರತೆ ಇತ್ಯಾದಿ)08.10.2026 (ಬೆಳಗ್ಗೆ 10:00 ರಿಂದ 12:00)100 ಅಂಕಗಳು
ಪತ್ರಿಕೆ – 2 (ಗಣಕ ವಿಜ್ಞಾನ – Computer Science)08.10.2026 (ಮಧ್ಯಾಹ್ನ 2:30 ರಿಂದ 4:30)100 ಅಂಕಗಳು

(ಸೂಚನೆ: ಪತ್ರಿಕೆ-2 ರ ಗಣಕ ವಿಜ್ಞಾನ ಪರೀಕ್ಷೆಯು 100 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ).

ChatGPT Image Aug 22 2026 12 18 04 PM
📚 CST PAPER 2 – COMPUTER SCIENCE
Complete Study Material PDF
Complete coverage of all 10 units with MCQs, answer keys, revision material and model question papers.
📥 BUY & DOWNLOAD PDF
🔒 Secure Payment   •   ⚡ Instant PDF Download
Needs Of Public

ಅರ್ಜಿ ಶುಲ್ಕ (Application Fee)

ಅಭ್ಯರ್ಥಿಗಳು ಆನ್‌ಲೈನ್ (Internet Banking/Credit Card/Debit Card) ಮೂಲಕ ಮಾತ್ರ ಶುಲ್ಕ ಪಾವತಿಸಬೇಕು:

  • ಸಾಮಾನ್ಯ ಅರ್ಹತೆ (GM) ಹಾಗೂ 2A, 2B, 3A, 3B ಅಭ್ಯರ್ಥಿಗಳಿಗೆ: ಒಂದು ಹುದ್ದೆಗೆ ₹ 750/- (ಎರಡು ಹುದ್ದೆಗಳಿಗೆ ₹ 1125/-).
  • SC/ST/ಪ್ರವರ್ಗ-1/ಅಂಗವಿಕಲ/ಮಾಜಿ ಸೈನಿಕ/ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ಒಂದು ಹುದ್ದೆಗೆ ₹ 500/- (ಎರಡು ಹುದ್ದೆಗಳಿಗೆ ₹ 750/-).
new
Paper 1

ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ? (How to Apply)

Step 1: ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: schooleducation.karnataka.gov.in.

Step 2: ಮುಖಪುಟದಲ್ಲಿ “Karnataka Teacher Recruitment 2026” ಅರ್ಜಿ ಲಿಂಕ್ ಅನ್ನು ಹುಡುಕಿ ಕ್ಲಿಕ್ ಮಾಡಿ.

TEACHERS

Step 3: ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ಹೊಸದಾಗಿ ನೋಂದಣಿ (Registration) ಮಾಡಿಕೊಳ್ಳಿ.

Step 4: ಲಾಗಿನ್ ಆಗಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಿ.

Step 5: ನಿಗದಿತ ಅಳತೆಯಲ್ಲಿ ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಿ.

Step 6: ನಿಮ್ಮ ವರ್ಗಕ್ಕೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಆನ್‌ಲೈನ್ ಮುಖಾಂತರ ಪಾವತಿಸಿ.

Step 7: ನೀವು ತುಂಬಿದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಅಂತಿಮವಾಗಿ ಅರ್ಜಿಯನ್ನು ‘Submit’ ಮಾಡಿ.

Step 8: ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟ್‌ಔಟ್ (Printout) ತೆಗೆದುಕೊಂಡು ಸುರಕ್ಷಿತವಾಗಿರಿಸಿಕೊಳ್ಳಿ.

ಪ್ರಮುಖ ದಿನಾಂಕಗಳು (Important Dates)

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 18 ಆಗಸ್ಟ್ 2026
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಸೆಪ್ಟೆಂಬರ್ 2026
  • ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನಾಂಕ: 10 ಸೆಪ್ಟೆಂಬರ್ 2026
  • ಗಣಕ ವಿಜ್ಞಾನ ಸ್ಪರ್ಧಾತ್ಮಕ ಪರೀಕ್ಷೆಯ (CET) ದಿನಾಂಕ: 08 ಅಕ್ಟೋಬರ್ 2026

Karnataka Teacher Recruitment 2026: Important Links

ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್


WhatsApp Group Join Now
Telegram Group Join Now

3 responses to “CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?”

  1. Gururaj Itagi Avatar
    Gururaj Itagi

    ಸರ್ payment madidini download agilla pls notes kalsi Gururaj mob No.9972860209

  2. Unknown Avatar
    Unknown

    Please allow for Telecommunication engineer as well, as Electronics and communication engineer is allowed. Like computer science and information science allowed.

  3. Lakshmi PS Avatar
    Lakshmi PS

    I completed computer science engineering and now applying for Computer science teacher I have grade points in marks card how to add marks?And there is option for mathematics and applied mathematics did not get how to fill please do reply

Leave a Reply

Your email address will not be published. Required fields are marked *


Popular Categories