ಬಸವನಗುಡಿಯ ಕಡಲೆಕಾಯಿ ಪರಿಷೇಗಿದೆ 500 ವರ್ಷಗಳ ಇತಿಹಾಸ, ಇಲ್ಲಿದೆ ಮಾಹಿತಿ

kaldekai parishe

ಕಡಲೆಕಾಯಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಟೈಮ್ ಪಾಸ್ ಗೋಸ್ಕರನಾದ್ರು ನಾವು ಕಡಲೆಕಾಯಿಯನ್ನು ಇಷ್ಟ ಪಡುತ್ತೇವೆ. ಕಳ್ಳೆಕಾಯ್…..ಕಳ್ಳೆಕಾಯ್ ಎಂದು ಕೂಗುವುದನ್ನು ಕೇವಲ ಬಸ್ ಸ್ಟಾಂಡ್ ಗಳಲ್ಲಿ ಮಾತ್ರ ನೋಡ್ದಿದ್ದೇವೆ. ಆದರೆ ಇದೀಗ ಜನತೆ ಕಾದು ಕುಳಿತ್ತಿದಂತಹ ಕಡಲೆಕಾಯಿ ಪರಿಷೆಗೆ ಕ್ಷಣ ಬಂದೇ ಬಿಟ್ಟಿದೆ. ಬನ್ನಿ ಈ ಪರಿಷೆಯ ಬಗ್ಗೆ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಡ್ಲೆಕಾಯಿ ಪರಿಷೆ :

bull temple

ಬೆಂಗಳೂರಿನ ಸುತ್ತಲಿನ ಜಿಲ್ಲೆಗಳ ಜನರು ಬಹು ಆಸಕ್ತಿಯಿಂದ ವರ್ಷಪೂರ್ತಿ ಕಾಯುವ ಬಸವನಗುಡಿ ಪರಿಷೆಗೆ ಇಂದು ಚಾಲನೆ ಸಿಗಲಿದೆ. ಬೆಂಗಳೂರಿನ ಸುತ್ತಮುತ್ತ ಇರುವ ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಕಡಲೆಕಾಯಿ ಬೆಳೆ ಕೂಡಾ ಉತ್ತಮವಾಗಿದೆ. ಹೀಗಾಗಿ ಈ ಪರಿಷೆ ತುಂಬಾ ಚೆನ್ನಾಗಿ ಮೂಡಿಬರಬೇಕು ಎಂಬ ಕಾರಣಕ್ಕೆ ಬಸವನಗುಡಿಯಲ್ಲಿ ಸ್ವಚ್ಛತಾ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನೆರೆವೇರಿಸುತ್ತಿರುವ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಈ ಬಾರಿ ಪ್ಲಾಸ್ಟಿಕ್ ಮುಕ್ತ ಪರಿಷೆ ಮಾಡಲು ತಿಳಿಸಿದ್ದಾರೆ.

ಪರಿಷೆಯಲ್ಲಿ ಬಣ್ಣ – ಬಣ್ಣದ ಆಟಿಕೆ, ರುಚಿ ರುಚಿಯಾದ ಕಡಲೆ ಕಾಯಿ, ಜಾತ್ರೆ ತಿನಿಸುಗಳು, ಪೀಪಿ, ಬಲೂನ್‌ಗಳು, ಕಲರ್‌ಪೂಲ್‌ ಲೈಟಿಂಗ್‌ನಲ್ಲಿ ಬಸವನಗುಡಿ ಕಂಗೊಳಿಸುತ್ತಿದೆ. ಹಳ್ಳಿಯ ವಾತಾವರಣ ನಿಮ್ಮನ್ನು ಮತ್ತಷ್ಟು ಸೆಳೆಯುತ್ತದೆ. ಈ ಬಾರಿಯ ಪರಿಷೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಳಿಗೆಗಳು ತೆರೆಯುವ ಸಾಧ್ಯತೆಯಿದೆ.

ಈ ಐತಿಹಾಸಿಕ ಕಡಲೆಕಾಯಿ ಪರಿಷೆ ಇಂದು ಆರಂಭವಾಗಲಿದೆ. ಪರಿಷೆಗೆ ಬನ್ನಿ-ಕೈಚೀಲ ತನ್ನಿ’ ಎಂಬ ಆಹ್ವಾನದೊಂದಿಗೆ ಪರಿಸರ ಸ್ನೇಹಿ ಪರಿಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ಕೆ ಹಲವಾರು ಜನರು ಕೈ ಜೋಡಿಸಿದ್ದು, ಪ್ರಮುಖವಾಗಿ 10 ಎನ್‌ಜಿಒಗಳು, ಕೆಲವು ಕಾಲೇಜುಗಳು ಕೂಡ ಕೈಜೋಡಿಸುತ್ತಿವೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಪ್ಲಾಸ್ಟಿಕ್ ಬಳಕೆಯನ್ನು ನಾವು ಎಲ್ಲಾ ಕಡೆ ಕಾಣಬಹುದು ಆದ್ದರಿಂದ ಈ ಬಾರಿಯ ಕಡಲೆಕಾಯಿ ಪರಿಷೆಯಲ್ಲಿ ಮಾರಾಟ ಮಳಿಗೆಗಳು ಪ್ಲಾಸ್ಟಿಕ್‌ ಬಳಸುವಂತಿಲ್ಲ .ಇನ್ನು ಈ ಪರಿಷೆಯಲ್ಲಿ ಪ್ಲಾಸ್ಟಿಕ್ ಬಳಕೆ ಮುಕ್ತ ಗೊಳಿಸುವುದರ ಜೊತೆಗೆ ಶೂನ್ಯ ತ್ಯಾಜ್ಯ ಸಂಗ್ರಹವನ್ನಾಗಿ ಮಾಡಲು ನಿರ್ಧರಿಸಲಾಗಿದೆ.

ನಗರದ ಆಸಕ್ತರಿಂದ ಹಳೆಯ ಬಟ್ಟೆಗಳನ್ನು ತೆಗೆದುಕೊಂಡು ಅದರಲ್ಲಿ ಬ್ಯಾಗ್‌ಗಳನ್ನು ತಯಾರಿಸಿ ಮಳಿಗೆಗಳಿಗೆ ಕೊಡುತ್ತೀದ್ದಾರೆ. ಈ ಬ್ಯಾಗ್ ಗಳು ಕಡಿಮೆ ಬೆಲೆಗೂ ಸಿಗುತ್ತದೆ. ಇದರಿಂದ ನಿರುಪಯುಕ್ತ ಬಟ್ಟೆಗಳ ತ್ಯಾಜ್ಯವೂ ನಿಯಂತ್ರಣದಲ್ಲಿರುತ್ತದೆ. ಪರಿಸರ ಸ್ನೇಹಿ ಪರಿಷೆಯಂತಹ ಕಾರ್ಯಕ್ರಮಗಳಿಗೂ ನೆರವಾಗುತ್ತದೆ.

ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆಗೆ ಈ ಬಹಳಷ್ಟು ತಯಾರಿನೆಡೆಸಿದ್ದು, ಎಲ್ಲಾ ಇಲಾಖೆಯವರು ಇದರಲ್ಲಿ ತಮ್ಮ ತಮ್ಮ ಕೆಲಸವನ್ನು ತುಂಬಾ ಅಚ್ಚುಕ್ಕಟ್ಟಾಗಿ ಮಾಡುತ್ತಿದ್ದಾರೆ. ಸಿಸಿ ಕ್ಯಾಮರಾಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. 65 ವರ್ಷ ಮೇಲ್ಪಟ್ಟವರಿಗೆ ದೇವರ ದರ್ಶನ ಮಾಡಲು ವಿಶೇಷ ಅಧ್ಯತೆ ನೀಡಲಾಗಿದ್ದು, ಇದರ ಜೊತೆಗೆ ಸ್ವಚ್ಛತೆಯ ಕಡೆ ಹೆಚ್ಚು ಗಮನ ಹರಿಸಲಾಗಿದೆ.

ಈ ಬುಲ್ ಟೆಂಪಲ್(Bull Temple) ನ ಹಿನ್ನೆಲೆ :

1537 ರಲ್ಲಿ ಕೆಂಪೇಗೌಡರು ಬಸವನಗುಡಿ ಬೆಟ್ಟದ ಮೇಲೆ ದೊಡ್ಡ ಬಸವ ದೇವಾಲಯವನ್ನು ಸ್ಥಾಪಿಸಿದರು. ಈ ದೇವಾಲಯವನ್ನು ಬುಲ್ ಟೆಂಪಲ್ ಎಂದು ಕರೆಯಲಾಗುತ್ತದೆ. ಅಂದಿನಿಂದ ಇಲ್ಲಿಗೆ ಸುತ್ತಲಿನ ಗ್ರಾಮಗಳ ರೈತರು ಪ್ರತಿ ವರ್ಷ ಇಲ್ಲಿಗೆ ಬಂದು ತಮ್ಮ ವಾರ್ಷಿಕ ಕಡಲೆಕಾಯಿಯನ್ನು ಬಸವಣ್ಣನಿಗೆ ಅರ್ಪಿಸುತ್ತಾರೆ. ಈ ಸಂಪ್ರದಾಯ ಇವತ್ತಿಗೂ ಕೂಡ ಮುಂದುವರೆಯುತ್ತಾ ಬಂದಿದೆ.
ಇಂದು ಬೆಳಗ್ಗೆ ಅಂದರೆ ಸೋಮವಾರ 11 ಡಿಸೆಂಬರ್ ಇಂದ 10 ಗಂಟೆಗೆ ಕಡಲೆಕಾಯಿ ಪರಿಷೆಯ ಉದ್ಘಾಟನೆಯನ್ನು ರಾಮಲಿಂಗ ರೆಡ್ಡಿ ಅವರು ಮಾಡಲಿದ್ದಾರೆ. ಮೊದಲಿಗೆ ದೊಡ್ಡ ಗಣಪತಿ ಹಾಗೂ ಬಸವಣ್ಣ ದೇವರಿಗೆ ಅಭಿಷೇಕವನ್ನು ಮಾಡಿ ಇದಕ್ಕೆ ಚಾಲನೆಯನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ್ ಅವರು ಸೇರಿದಂತೆ ಸುಮಾರು ಏಳು ಲಕ್ಷ ಜನ ಸೇರುವ ಸಾಧ್ಯತೆ ಇದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!