Job Fair Karnataka – ರಾಜ್ಯದ ಅನ್ನದಾತರ ಮಕ್ಕಳಿಗೆ ಬೃಹತ್ ಉದ್ಯೋಗ ಮೇಳ, ಯಾವುದೇ ಕೋರ್ಸ್ ಮುಗಿದ ಅಭ್ಯರ್ಥಿಗಳಿಗೆ ಕೆಲಸ – ಸಂಪೂರ್ಣ ವಿವರ ಇಲ್ಲಿದೆ

job fair in mysore

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಮೈಸೂರಿನಲ್ಲಿ ನ.19 ರಂದು ಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳ ಜಾರುಗಲಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಯಾರಿಗೆಲ್ಲ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ?, ಯಾವ ದಿನಾಂಕ ಹಾಗೂ ಸಮಯದಂದು ಭಾಗವಹಿಸಬೇಕು ಎಂಬ ಈ ಉದ್ಯೋಗ ಮೇಳದ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಉದ್ಯೋಗ ಮೇಳ :

ಒಕ್ಕಲಿಗ ಯುವ ಬ್ರಿಗೇಡ್‌(okkaliga yuva brigade) ಹಾಗೂ NRI brigade ವತಿಯಿಂದ ನವೆಂಬರ್‌ 19ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ʼಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳʼ(Job Fair) ವನ್ನು ನಗರದ ಹೆಬ್ಬಾಳ ಇಂಡಸ್ಟ್ರಿಯಲ್‌ ಎಸ್ಟೇಟ್‌( Hebbala Industrial estate) ನ ಇನ್ಫೋಸಿಸ್‌( Infosys) ಸಂಸ್ಥೆ ಹತ್ತಿರದ ಶ್ರೀ ಲಕ್ಷ್ಮೀಕಾಂತ ದೇವಸ್ಥಾನ ಆವರಣದ ಬಿಜಿಎಸ್‌ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾಭವನದಲ್ಲಿ ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಹ ಸಂಸ್ಥಾನ ಮಠದ ಪೀಠಾಧ್ಯಕ್ಷ ರಾಗಿರುವ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಯವರ ಆಶೀರ್ವಾದದಿಂದ ಈ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.

ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ಬೃಹತ್‌ ಪ್ರಮಾಣದ ಉದ್ಯೋಗ ಮೇಳ ಆಯೋಜಿಸಲಾಗಿದೆ. 5 ಸಂಸ್ಥೆಗಳ ಸಂದರ್ಶನಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉದ್ಯೋಗ ಪಡೆಯಬಹುದು. ಈ ಉದ್ಯೋಗ ಮೇಳದಲ್ಲಿ Mahindra finance ರಿಲಯನ್ಸ್‌ ಮಾರ್ಟ್‌(Reliance Mart ), manpower group ಸೇರಿದಂತೆ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇದು ಸುವರ್ಣವಕಾಶ ಎನ್ನಬಹುದು. ಇಂತಹ ಉತ್ತಮ ಕಂಪನಿಗಳ ಸಂದರ್ಶನಗಳಲ್ಲಿ ಅಭ್ಯರ್ಥಿಯು ಉತ್ತಮ ಮಟ್ಟದ ಉದ್ಯೋಗವನ್ನು ಪಡೆಯಬುಹುದು.

ವಿದ್ಯಾರ್ಹತೆ:

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಈ ಕೆಳಗಿನ ಶಿಕ್ಷಣರ್ಹತೆ ಪಡೆದವರಾಗಿರಬೇಕು
ಎಸ್‌ಎಸ್‌ಎಲ್‌ಸಿ, ಪಿಯುಸಿ, ಹಾಗೂ ಯಾವುದೇ ಸ್ನಾತಕೋತ್ತರ ಪದವಿ (ಪಾಸ್‌/ಫೇಲ್‌), ಐಟಿಐ(ITI), ಡಿಪ್ಲೊಮಾ, ಎಂಜಿನಿಯರಿಂಗ್‌, ಎನ್‌ಟಿಟಿ(NTT), ಟಿಸಿಎಚ್‌, ಬಿ.ಇಡಿ(B.Ed), ಎಂ.ಇಡಿ (M.Ed) ಪದವಿದಾರರಾಗಿರಬೇಕು

ಉದ್ಯೋಗಾವಕಾಶ :

ಹೌಸ್‌ ಕೀಪಿಂಗ್( House keeping ) , ಸೇಲ್ಸ್‌ ಬಾಯ್‌( Sales boy), ಆಫೀಸ್‌ ಅಸಿಸ್ಟೆಂಟ್‌ (Office assistant ), ಚಾಲಕರು, ಡೆಲಿವರಿ ಬಾಯ್‌(Delivary boy), ಸೆಕ್ಯೂರಿಟಿ ಸರ್ವೀಸಸ್‌(Security service), ಡಿಟಿಪಿ( DTP), ಸಾಫ್ಟ್‌ವೇರ್‌, ಹಾರ್ಡ್‌ವೇರ್‌, ಟೀಚಿಂಗ್‌, ಟ್ರೈನಿಂಗ್‌, ಕಲೆಕ್ಷನ್‌, ಕೌಂಟರ್‌ ಸೇಲ್ಸ್‌, ಮಾರ್ಕೆಟಿಂಗ್‌, ಟೆಲಿ ಮಾರ್ಕೆಟಿಂಗ್‌(Tele marketing) , ಇನ್ಶೂರೆನ್ಸ್‌, ಬ್ಯಾಂಕಿಂಗ್‌, ಆಡಳಿತ, ಬಿಪಿಒ, ಕೆಪಿಒ ಮತ್ತು ಎಂಟಿ ಇತ್ಯಾದಿ ಉದ್ಯೋಗಾವಕಾಶಗಳಿವೆ.

ಇಂತಹ ಉತ್ತಮ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಂಡು ನಿರುದ್ಯೋಗಿಗಳು ಉತ್ತಮ ಮಟ್ಟದ ಉದ್ಯೋಗವನ್ನು ಪಡೆಯಬಹುದು. ಉದ್ಯೋಗ ಬಯಸುವರು ತಪ್ಪದೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ ಯೋಗದಾನವನ್ನು ನೀಡಬೇಕು. ಉದ್ಯೋಗ ಮೇಳದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಸಕ್ತರು
ಮೋಹನ್: 9686564192,
ರವಿಚಂದ್ರ: 9886943810,
ಕಿರಣಕುಮಾರ: 8660569173
ಈ ವ್ಯಕ್ತಿಗಳನ್ನು ಸಂಪರ್ಕಿಸಬಹುದು.

ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ತಿಳಿಸಿಕೊಡುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!