Jio Plans : ಜಿಯೋದ ಐದು ಹೊಸ ರಿಚಾರ್ಜ್ ಪ್ಲಾನ್ ಗಳು! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

IMG 20240622 WA0004

ಜಿಯೋ (jio) ಗ್ರಾಹಕರಿಗೆ ನೀಡುತ್ತಿದೆ ಐದು ಭರ್ಜರಿ ಪ್ಲಾನ್ (five plans) ಗಳು!

ಜಿಯೋ ಭಾರತೀಯ ದೂರಸಂಪರ್ಕ ಕಂಪನಿ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳ ಅಂಗಸಂಸ್ಥೆಯಾಗಿದೆ.
ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆಯನ್ನು (popularity) ಹೊಂದಿದ್ದು, ಅತೀ ಹೆಚ್ಚು ಗ್ರಾಹಕರನ್ನು ಹೊಂದಿದೆ. ಜಿಯೋ ಕಂಪನಿ ತನ್ನ ಗ್ರಾಹಕರಿಗೆ ಹಲವಾರು ರೀತಿಯ ಪ್ಲಾನ್ ರಿಯಾಯಿತಿ ಯನ್ನು ನೀಡುತ್ತ ಬಂದಿದೆ. ಆರಂಭದಲ್ಲಿ ಉಚಿತವಾಗಿ ಡಾಟಾ ನೀಡಿದ್ದ ಜಿಯೋ, ಈಗ ಓಟಿಟಿಗಳನ್ನು ಉಚಿತವಾಗಿ ನೀಡುತ್ತಿದೆ. ಹಾಗೆಯೇ ಇದೀಗ ಜಿಯೋ ಕಂಪೆನಿಯು ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಐದು ಭರ್ಜರಿ ಪ್ಲಾನ್ ಬಿಡುಗಡೆ ಮಾಡಿದ ಜಿಯೋ :

ಇದೀಗ ಜಿಯೋ ತನ್ನ ಗ್ರಾಹಕರನ್ನು ತನ್ನತ್ತ ಹಿಡಿದಿಟ್ಟುಕೊಳ್ಳಲು ಭರ್ಜರಿ ಪ್ಲ್ಯಾನ್ ಬಿಡುಗಡೆ ಮಾಡಿದೆ. ಹಲವು ಸೇವೆಗಳನ್ನು ಒಳಗೊಂಡ ವಿಶಿಷ್ಟ ರಿಚಾರ್ಜ್‌ (special recharge) ಯೋಜನೆಯನ್ನು ನೀಡಲು ಜಿಯೋ ಮುಂದಾಗಿದೆ. ಈ ರಿಚಾರ್ಜ್‌ ಪ್ಲ್ಯಾನ್‌ಗಳ ವ್ಯಾಲಿಡಿಟಿ ಹೆಚ್ಚಿರುತ್ತದೆ. 84 ದಿನಗಳ ಮಾನ್ಯತೆಯೊಂದಿಗೆ ಬರುವ ಕಂಪನಿಯ 5 ರೀಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ.

ಜಿಯೋ ಕಂಪನಿ ಏನೆಲ್ಲಾ ಆಫರ್ ನೀಡುತ್ತಿದೆ ಮತ್ತು ಐದು ಪ್ಲಾನ್ ಗಳ ವಿವರ ಹೀಗಿದೆ :
666 ರೂಗಳ ರಿಚಾರ್ಜ್‌ ಯೋಜನೆ (666 Rs. Recharge plan) :

ಇದೀಗ ಜಿಯೋ ಕಂಪನಿ ತನ್ನ ಗ್ರಾಹಕರಿಗೆ 666 ರಿಚಾರ್ಜ್‌ ಯೋಜನೆಯನ್ನು ನೀಡುತ್ತದೆ. ಈ ರಿಚಾರ್ಜ್‌ನೊಂದಿಗೆ ಗ್ರಾಹಕ 84 ದಿನಗಳ ಮಾನ್ಯತೆ ಪಡೆಯುತ್ತಾರೆ. ಅಲ್ಲದೆ ಪ್ರತಿ ದಿನ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌ಗಳು ಲಭ್ಯವಿರುತ್ತವೆ. ಬಳಕೆದಾರರು 64 kbps ವೇಗದಲ್ಲಿ ಡೇಟಾವನ್ನು ಬಳಸುವ ಸೌಲಭ್ಯ ಪಡೆಯಬಹುದಾಗಿದೆ.

739 ರೂಗಳ ರಿಚಾರ್ಜ್‌ ಯೋಜನೆ (739 Rs. Recharge plan) :

ಎರಡನೆಯ ಪ್ಲಾನ್, 739 ರಿಚಾರ್ಜ್‌ ಮಾಡಿಸಿಕೊಂಡರೆ, 84 ದಿನಗಳ ಮಾನ್ಯತೆ ಪಡೆಯಬಹುದು. ಅಲ್ಲದೆ ಅನಿಯಮಿತ ಕರೆ, 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌ಗಳು ಲಭ್ಯ. ಅಲ್ಲದೆ Jio ಅಪ್ಲಿಕೇಶನ್‌ಗಳ ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು.

758 ರೂಗಳ ರಿಚಾರ್ಜ್‌ ಯೋಜನೆ (758 Rs. Recharge plan) :

ಜಿಯೋ 758 ರೂಪಾಯಿಗಳ ರಿಚಾರ್ಜ್‌ ಪ್ಲ್ಯಾನ್‌ ಸಹ ಪರಿಚಯಿಸಿದಿದೆ. ಇದು ಸಹ 84 ದಿನಗಳ ಮಾನ್ಯತೆ ಹೊಂದಿದ್ದು, 1.5 ಜಿಬಿ ಡೇಟಾ ಸೌಲಭ್ಯವನ್ನು ಪ್ರತಿ ದಿನ ಹೊಂದಿರುತ್ತದೆ. ಇದರೊಂದಿಗೆ ಮೂರು ತಿಂಗಳವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನ ಪ್ರಯೋಜನವನ್ನು ಗ್ರಾಹಕ ಪಡೆಯಬಹುದು.

857 ರೂಗಳ ರೀಚಾರ್ಜ್ ಯೋಜನೆ (857 Rs. Recharge plan) :

ಹೆಚ್ಚಿನ ಡೇಟಾವನ್ನು ಉಪಯೋಗಿಸುವ ಗ್ರಾಹಕರಿಗೆ ಜಿಯೋ ಬೆಸ್ಟ್ ಆಫರ್ ನೀಡಿದೆ. 857 ರೂಗಳ ರೀಚಾರ್ಜ್ ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಂಡಲ್ಲಿ, ಬಳಕೆದಾರ ದಿನವೂ 2GB ಡೇಟಾ ಮತ್ತು 84 ದಿನಗಳವರೆಗೆ ಪಡೆಯುತ್ತಾನೆ. ಇದರೊಂದಿಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಮತ್ತು ಅಮೆಜಾನ್ ಪ್ರೈಮ್ ವೀಡಿಯೊ ವೀಕ್ಷಿಸಬಹುದು.

866 ರೂಗಳ ರೀಚಾರ್ಜ್ ಯೋಜನೆ (866Rs. Recharge plan) :

866 ರೂಗಳ ರೀಚಾರ್ಜ್ ಯೋಜನೆಯನ್ನು ಹಾಕಿಸಿಕೊಂಡಲ್ಲಿ, ದೈನಂದಿನ 2GB ಡೇಟಾ ಮತ್ತು 84 ದಿನಗಳವರೆಗೆ ದೈನಂದಿನ 100 SMS ಸೌಲಭ್ಯಗಳನ್ನು ನೀಡುತ್ತದೆ. ಇತರ ಪ್ರಯೋಜನಗಳಲ್ಲಿ 3 ತಿಂಗಳ ಕಾಲ Jio ಅಪ್ಲಿಕೇಶನ್‌ಗಳು ಮತ್ತು Swiggy ನ ಒನ್ ಲೈಟ್ ಸದಸ್ಯತ್ವವೂ ಸಿಗಲಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!