ಐಕ್ಯೂದ ಈ 5G ಮೊಬೈಲ್ ಬೆಲೆಯಲ್ಲಿ ಭರ್ಜರಿ ಇಳಿಕೆ ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ezgif.com jpg to webp converter 1

ಐಕ್ಯೂ ನಿಯೋ 7 ಪ್ರೊ 5G(IQOO neo 7 pro 5G) :

ವೇಗದ ಪ್ರೊಸೆಸರ್‌ ಇರುವ ಈ ಮೊಬೈಲ್‌ ಈಗ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಿದೆ.” ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್‌ ಮಾರುಕಟ್ಟೆಯಲ್ಲಿ ವಿವೋ(Vivo)ದ ಸಬ್ ಬ್ರ್ಯಾಂಡ್‌ ಆಗಿರುವ ಐಕ್ಯೂ(IQ) ತನ್ನ ಉತ್ಪನ್ನಗಳಿಂದ ಗ್ರಾಹಕರ ಮನಗೆದ್ದಿದೆ. ಐಕ್ಯೂ ನಿಯೋ 7 ಪ್ರೊ 5G ಫೋನ್‌ ಗೇಮಿಂಗ್‌ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಆಕರ್ಷಿತ ಫೀಚರ್ಸನೊಂದಿಗೆ ಈ ಫೋನ್‌ ಈಗಾಗಲೇ ಭಾರೀ ಬೆಲೆ(price drop) ಇಳಿಕೆಯನ್ನು ಕಂಡಿದೆ.

ಐಕ್ಯೂ ನಿಯೋ 7 ಪ್ರೊ ಫೋನ್ ಮೇಲೆ ಬಾರಿ ರಿಯಾಯಿತಿ:

untitled design 2023 07 04t115929 sixteen nine ezgif.com jpg to webp converter 1

ಹೌದು, ಐಕ್ಯೂ ನಿಯೋ 7 ಪ್ರೊ 5G ಫೋನ್‌ ಈಗ ಭಾರಿ ರಿಯಾಯಿತಿಯನ್ನು ಪಡೆದುಕೊಂಡಿದೆ. 8GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಈಗ ₹27,999ಗೆ ಖರೀದಿಸಬಹುದು. ಹಿಂದೆ ಈ ಫೋನ್‌ ಬೆಲೆ ₹34,999 ಆಗಿತ್ತು, 21% ರಷ್ಟು ಬೆಲೆ ಇಳಿಕೆಯಾಗಿದೆ. 12GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ₹30,999ಗೆ ಖರೀದಿಸಬಹುದು. ಹಿಂದೆ ಈ ಫೋನ್‌ ಬೆಲೆ ₹37,999 ಆಗಿತ್ತು, 21% ರಷ್ಟು ಬೆಲೆ ಇಳಿಕೆಯಾಗಿದೆ.

ಈ ಐಕ್ಯೂ ನಿಯೋ 7 ಪ್ರೊ 5G ಫೋನ್‌ ಗೇಮಿಂಗ್‌ ಫೋನ್‌ಗಳಲ್ಲಿ ಅತ್ಯಂತ ಉತ್ತಮ ಆಯ್ಕೆಯಾಗಿದೆ. ಈ ಫೋನ್‌ನಲ್ಲಿರುವ ಅತ್ಯಾಧುನಿಕ ಸ್ಪೆಸಿಫಿಕೇಶನ್‌ಗಳು ಮತ್ತು ಸೌಲಭ್ಯಗಳು ಗೇಮರ್‌ಗಳಿಗೆ ಉತ್ತಮ ಅನುಭವವನ್ನು ನೀಡುತ್ತವೆ. ಹಾಗಿದ್ದರೆ, ಈ ಸ್ಮಾರ್ಟ್ ಫೋನಿನ ವೈಶಿಷ್ಟ್ಯಗಳನ್ನು ತಿಳಿಯೋಣ.

ವೈಶಿಷ್ಟ್ಯಗಳು (Features):

ಡಿಸ್ಪ್ಲೇ(Display):

ಐಕ್ಯೂ ನಿಯೋ 7 ಪ್ರೊ 5G ಮೊಬೈಲ್‌ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ (Full HD + Amoled Display) ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. 120Hz ರಿಫ್ರೆಶ್ ರೇಟ್‌ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್‌(touch sampling rate ) ನೊಂದಿಗೆ, ಈ ಡಿಸ್‌ಪ್ಲೇ ಚಲನೆಯಲ್ಲಿಯೂ ಸ್ಪಷ್ಟತೆ ಮತ್ತು ತಾಂತ್ರಿಕತೆಯನ್ನು ಒದಗಿಸುತ್ತದೆ.
120Hz ರಿಫ್ರೆಶ್ ರೇಟ್‌ನೊಂದಿಗೆ, ಈ ಡಿಸ್‌ಪ್ಲೇ ಅನುಭವ ಸುಗಮವಾಗಿ ಮತ್ತು ಸ್ಪಷ್ಟವಾಗಿ ತೋರಿಸುತ್ತದೆ. 300Hz ಟಚ್ ಸ್ಯಾಂಪ್ಲಿಂಗ್ ರೇಟ್‌ನೊಂದಿಗೆ, ಈ ಡಿಸ್‌ಪ್ಲೇಯು ನಿಮ್ಮ ಸ್ಪರ್ಶವನ್ನು ತ್ವರಿತವಾಗಿ ಗುರುತಿಸುತ್ತದೆ. ಇದು ಆಟಗಾರರು, ವೀಡಿಯೊ ವೀಕ್ಷಕರು ಮತ್ತು ಇತರರಿಗೆ ಅನುಕೂಲಕರವಾಗಿದೆ.

whatss

ಪ್ರೊಸೆಸರ್‌(Processor):

iQOO Neo 7 Pro 5G ಮೊಬೈಲ್‌ ಕ್ವಾಲ್‌ಕಾಮ್‌ನ ಅತ್ಯುತ್ತಮ ಪ್ರೊಸೆಸರ್‌ಗಳಲ್ಲಿ ಒಂದಾದ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ (Spandragon 8+ gen 1 SoC processor) ಪವರ್‌ ಅನ್ನು ಪಡೆದಿದೆ. ಈ ಪ್ರೊಸೆಸರ್‌ ಗೇಮಿಂಗ್, ವೀಡಿಯೊ ಎಡಿಟಿಂಗ್ ಮತ್ತು ಇತರ ಗ್ರಾಫಿಕ್‌ ಸಮೃದ್ಧ ಅಪ್ಲಿಕೇಶನ್‌ಗಳನ್ನು(graphic rich applications) ಸುಲಭವಾಗಿ ಚಲಾಯಿಸಲು ಸಾಧ್ಯವಾಗುತ್ತದೆ.

ಆಂಡ್ರಾಯ್ಡ್‌ 13 OS

iQOO Neo 7 Pro 5G ಮೊಬೈಲ್‌ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ನೊಂದಿಗೆ ಬರುತ್ತದೆ. ಆಂಡ್ರಾಯ್ಡ್‌ 13 ಓಎಸ್‌ ಹೊಸ ಫೀಚರ್‌ಗಳು ಮತ್ತು ಸುಧಾರಣೆಗಳೊಂದಿಗೆ ಬರುತ್ತದೆ, ಇದು ಮೊಬೈಲ್‌ ಬಳಕೆದಾರರಿಗೆ ಹೆಚ್ಚು ಉತ್ತಮವಾದ ಅನುಭವವನ್ನು ನೀಡುತ್ತದೆ.
8/128GB ಹಾಗೂ 12/256GB ವೇರಿಯಂಟ್‌ ಆಂತರೀಕ ಸ್ಟೋರೇಜ್‌(Internal storage) ಸಾಮರ್ಥ್ಯ

iQOO Neo 7 Pro 5G ಮೊಬೈಲ್‌ 8/128GB ಮತ್ತು 12/256GB ಎರಡು ವೇರಿಯಂಟ್‌ಗಳಲ್ಲಿ ಬರುತ್ತದೆ. 8GB RAM ಮತ್ತು 128GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವು ಹೆಚ್ಚಿನ ಬಳಕೆದಾರರ ಅಗತ್ಯಗಳನ್ನು ಪೂರೈಸುತ್ತದೆ. 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವು ಗೇಮಿಂಗ್ ಮತ್ತು ವೀಡಿಯೊ ಎಡಿಟಿಂಗ್ ಮಾಡುವ ಬಳಕೆದಾರರಿಗೆ ಸೂಕ್ತವಾಗಿದೆ.

ಕ್ಯಾಮೆರಾ(Camera):

iqoo neo 7 pro 5g twitter 1687938406179

ಐಕ್ಯೂ ನಿಯೋ 7 ಪ್ರೊ 5G ಮೊಬೈಲ್‌ನ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌(Triple Rear Camera) ನೊಂದಿಗೆ ಬರುತ್ತದೆ. 50 ಮೆಗಾ ಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಉತ್ತಮ ಸ್ಪಷ್ಟತೆ ಮತ್ತು ವಿವರಣೆಯೊಂದಿಗೆ ಚಿತ್ರಗಳನ್ನು ತೆಗೆಯಲು ಸಹಾಯ ಮಾಡುತ್ತದೆ. 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌( Ultra Wide Angle Lens) ದೊಡ್ಡದಾದ ದೃಶ್ಯಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಸಣ್ಣ ವಸ್ತುಗಳನ್ನು ಹತ್ತಿರದಿಂದ ಹೊಳೆಯುವಂತೆ ತೆಗೆಯಲು ಅನುವು ಮಾಡಿಕೊಡುತ್ತದೆ.
16 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ(Selfie Camera) ನಿಮ್ಮದೇ ಆದ ಸುಂದರವಾದ ಸ್ವ-ಚಿತ್ರಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

tel share transformed

ಬ್ಯಾಟರಿ (Battery) ಮತ್ತು ಕನೆಕ್ಷವಿಟಿ (Connectivity):

ಐಕ್ಯೂ ನಿಯೋ 7 ಪ್ರೊ 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸುಮಾರು ಒಂದು ದಿನದ ಬಳಕೆಗೆ ಸಾಕಾಗುವಷ್ಟು ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತದೆ. 120W ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯದಿಂದಾಗಿ, ಈ ಮೊಬೈಲ್‌ ಅನ್ನು ಕೆಲವೇ ನಿಮಿಷಗಳಲ್ಲಿ ಶೇಕಡಾ 100 ರಷ್ಟು ಚಾರ್ಜ್ ಮಾಡಬಹುದು.

ಈ ಫೋನ್‌ನ ಕನೆಕ್ಟಿವಿಟಿ(Connectivity) ಆಯ್ಕೆಗಳು 5G ಮೊಬೈಲ್ ಡೇಟಾ, 4G LTE ಮೊಬೈಲ್ ಡೇಟಾ, Wi-Fi 6 ವೈ-ಫೈ, ಬ್ಲೂಟೂತ್ 5.2, GPS, GNSS, NavIC, ಮತ್ತು USB ಟೈಪ್-C ಪೋರ್ಟ್‌ಗಳನ್ನು ಒಳಗೊಂಡಿವೆ. ಈ ಫೋನ್‌ ಫಿಯರ್‌ಲೆಸ್‌ ಫೇಮ್‌ ಮತ್ತು ಡಾರ್ಕ್ ಸ್ಟ್ರೋಮ್‌ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.

ಒಟ್ಟಾರೆ, ಕಡಿಮೆ ಬೆಲೆಯಲ್ಲಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಹುಡುಕುತ್ತಿರುವವರಿಗೆ ಐಕ್ಯೂ ನಿಯೋ 7 ಪ್ರೊ 5G ಒಂದು ಉತ್ತಮ ಆಯ್ಕೆಯಾಗಿದೆ. ತಮ್ಮ ಅತ್ಯಗತ್ಯಕ್ಕೆ ಅನುಕೂಲವಾಗುವಂತಹ ಹಾಗೂ ಉತ್ತಮ ಸ್ಟೋರೇಜ್ ಹೊಂದಿರುವ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ. ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!