Picsart 25 11 23 22 59 50 762 scaled

ಪೋಷಕರೇ ನಿಮ್ಮ ಮಕ್ಕಳಿದ್ದರೆ ಈ ಮಾಹಿತಿ ಕಡ್ಡಾಯವಾಗಿ ತಿಳಿದುಕೊಳ್ಳಿ.!

Categories:
WhatsApp Group Telegram Group

ಇತ್ತೀಚಿನ ಕಾಲದಲ್ಲಿ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವುದು ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣ, ಮೌಲ್ಯ, ಜವಾಬ್ದಾರಿ ಕಲಿಸುವುದು ಮುಖ್ಯವಾದಂತೆ, ಅವರು 18 ವರ್ಷ ತುಂಬಿ ಪ್ರಾಪ್ತ ವಯಸ್ಕರಾಗುವಾಗ ಅವರ ಕಾನೂನು ಹಾಗೂ ಆರ್ಥಿಕ ಸ್ವತಂತ್ರತೆಯ ಕಡೆ ಗಮನ ಹರಿಸುವುದೂ ಅತ್ಯಗತ್ಯ.

18 ವರ್ಷ ತುಂಬುವುದು ಕೇವಲ ಹುಟ್ಟುಹಬ್ಬದ ಆಚರಣೆಗೆ ಸೀಮಿತವಲ್ಲ ಅದು ಜೀವನದ ಹೊಸ ಹಂತ, ಹೊಸ ಹಕ್ಕುಗಳು ಮತ್ತು ಜವಾಬ್ದಾರಿಗಳ ಆರಂಭ.
ಇದೇ ಸಮಯದಲ್ಲಿ ಮಕ್ಕಳಿಗೆ ಹಣಕಾಸು ಶಿಸ್ತನ್ನು ಕಲಿಸಿ, ಅವರ ಹೆಸರಿನಲ್ಲಿ ಅಗತ್ಯ ದಾಖಲೆಗಳು ಮತ್ತು ಹಣಕಾಸು ರಕ್ಷಣೆಗಳನ್ನು ಸೃಷ್ಟಿಸುವುದು ಪೋಷಕರ ಕರ್ತವ್ಯ. ಇದನ್ನು ಸರಿಯಾಗಿ ನಿರ್ವಹಿಸಿದರೆ, ಮಕ್ಕಳ ಭವಿಷ್ಯದ ಉದ್ಯೋಗ, ಶಿಕ್ಷಣ, ಮತದಾನ ಹಕ್ಕು, ಬ್ಯಾಂಕಿಂಗ್‌, ಹೂಡಿಕೆ ಮತ್ತು ಆರೋಗ್ಯ ಭದ್ರತೆ ಎಲ್ಲವೂ ಸುಗಮವಾಗುತ್ತದೆ. ಹಾಗಿದ್ದರೆ, ನಿಮ್ಮ ಮಗ ಅಥವಾ ಮಗಳಿಗೆ 18 ವರ್ಷ ತುಂಬುತ್ತಿದ್ದರೆ, ಮರೆಯದೇ ಈ 5 ಪ್ರಮುಖ ಕೆಲಸಗಳನ್ನು ಮಾಡಿ. ಆ 5 ಪ್ರಮುಖ ಕೆಲಸಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪ್ಯಾನ್ ಕಾರ್ಡ್ & ಮತದಾರರ ಗುರುತಿನ ಚೀಟಿ (Voter ID):

18 ವರ್ಷ ತುಂಬಿದ ನಂತರ, ಮಕ್ಕಳು ಪ್ಯಾನ್ ಕಾರ್ಡ್ ಪಡೆಯಬೇಕು. ಮುಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರಗಳು, ಉದ್ಯೋಗ, ಹೂಡಿಕೆಗಳು, ಆದಾಯ ತೆರಿಗೆ ಸಲ್ಲಿಕೆ ಎಲ್ಲವುದಕ್ಕೂ ಇದು ಅಗತ್ಯ. ಮತದಾರರ ಕಾರ್ಡ್ (Voter ID) ಪಡೆಯಲು ಅರ್ಜಿ ಹಾಕಬೇಕು. 18 ವರ್ಷದಿಂದ ಅವರು ಮತದಾನ ಹಕ್ಕುಳ್ಳ ಭಾರತೀಯ ನಾಗರಿಕರಾಗುತ್ತಾರೆ.

ಬ್ಯಾಂಕ್‌ ಖಾತೆ ಪರಿವರ್ತನೆ:

ಬಹುತೇಕ ಅಪ್ರಾಪ್ತ ವಯಸ್ಕರ ಖಾತೆಗಳು, Parents + Child (Joint Account) ಗಳಾಗಿರುತ್ತವೆ.  18 ವರ್ಷ ತುಂಬಿದ ಮೇಲೆ ಇದನ್ನು ಸಂಪೂರ್ಣ ಸ್ವತಂತ್ರ ಉಳಿತಾಯ ಖಾತೆಯಾಗಿ ಪರಿವರ್ತಿಸಬೇಕು.
ಅವರ ಖಾತೆಯಲ್ಲಿ ಸ್ವಲ್ಪ ಹಣವನ್ನು Fixed Deposit (FD) ಅಥವಾ Recurring Deposit (RD) ಆಗಿ ಇಡಿ. ಇದು ಹಣಕಾಸಿನ ಹೊಣೆಗಾರಿಕೆಯನ್ನು ಕಲಿಸುತ್ತದೆ.

ಆರೋಗ್ಯ ವಿಮೆ (Health Insurance):

ಅಪ್ರಾಪ್ತ ವಯಸ್ಕರಿಗೆ ತಮ್ಮ ಹೆಸರಿನಲ್ಲಿ ವಿಮೆ ತೆಗೆದುಕೊಳ್ಳಲು ಅವಕಾಶವಿಲ್ಲ. ಆದರೆ 18 ವರ್ಷವಾದ ನಂತರ ಅವರ ಹೆಸರಿನಲ್ಲಿ ಸ್ವತಂತ್ರ ಆರೋಗ್ಯ ವಿಮೆ ಪಾಲಿಸಿ ಮಾಡಿ. ಇದರಿಂದ ಭವಿಷ್ಯದಲ್ಲಿ ವೈದ್ಯಕೀಯ ವೆಚ್ಚಗಳು ಭಾರವಾಗುವುದನ್ನು ತಪ್ಪಿಸಬಹುದು.

ಹೂಡಿಕೆ ಆರಂಭ (Mutual Funds, SIP, Demat Account):

ಮಕ್ಕಳಿಗೆ ಈ ವಯಸ್ಸಿನಲ್ಲಿ ಹಣದ ಮೌಲ್ಯ, ಉಳಿತಾಯದ ಮಹತ್ವ, ಹೂಡಿಕೆ ವಿಧಾನ ಇವುಗಳನ್ನು ಕಲಿಸುವುದು ಬಹಳ ಮುಖ್ಯ. ಆದ್ದರಿಂದ ಅವರು ವಯಸ್ಕರಾದ ನಂತರ ಅವರ ಹೆಸರಿನಲ್ಲಿ Demat Account, Mutual Fund SIP ಆರಂಭಿಸಲು ಸಹಾಯ ಮಾಡಿ. ನಿಮ್ಮ ಹೆಸರಿನಲ್ಲಿ ಇರುವ ಕೆಲವು ಷೇರುಗಳನ್ನು ಅವರ ಹೆಸರಿಗೆ ವರ್ಗಾಯಿಸುವುದು ಕೂಡ ಉತ್ತಮ ಆಯ್ಕೆ.

ಆಧಾರ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌ ಅಪ್‌ಡೇಟ್:

18 ವರ್ಷವಾದ ನಂತರ,  ಆಧಾರ್ ವಿವರಗಳಲ್ಲಿ (Address, Mobile Number, Biometrics) ಬದಲಾವಣೆ ಮಾಡಿಸಬಹುದು. ಪಾಸ್‌ಪೋರ್ಟ್ ಮಾಡಿಸಬಹುದು. ಡ್ರೈವಿಂಗ್ ಲೈಸೆನ್ಸ್‌ಗಾಗಿ Learners License ಪಡೆಯಬಹುದು.

ಒಟ್ಟಾರೆಯಾಗಿ, 18 ವರ್ಷ ವಯಸ್ಸು ಜೀವನದ ಹೊಸ ಮೆಟ್ಟಿಲು. ಈ ಹಂತದಲ್ಲಿ ಪೋಷಕರು ಮಕ್ಕಳನ್ನು ಹಣಕಾಸು, ಕಾನೂನು ಮತ್ತು ಸಾಮಾಜಿಕ ಜವಾಬ್ದಾರಿಗಳತ್ತ ಮಾರ್ಗದರ್ಶನ ಮಾಡಿದರೆ, ಅವರು ಆತ್ಮವಿಶ್ವಾಸಿ ಮತ್ತು ಜವಾಬ್ದಾರಿ ನಾಗರಿಕರಾಗುತ್ತಾರೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories