ಈ ದಿನಾಂಕದೊಳಗೆ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ..!

HSRP number plate

ಇಂದು ಎಲ್ಲರ ಮನೆಯಲ್ಲಿ ವಾಹನಗಳು ಇದ್ದೇ ಇವೆ. ಓಡಾಡಲು ಅವರದ್ದೇ ಆದ ಸ್ವಂತ ಗಾಡಿ ಅಂತು ಬೇಕೇ ಬೇಕು. ಈಗ ನಮ್ಮ ಬಳಿ ಇರುವ ವಾಹನಗಳಿಗೆ ನಂಬರ್ ಪ್ಲೇಟ್ ಅವಶ್ಯಕತೆ ತುಂಬಾ ಇದೆ ಹಾಗೂ ಆ ನಂಬರ್ ಪ್ಲೇಟ್(Number plate) ಗಳು ಈಗಾಗಲೇ ನಮ್ಮ ಬಳಿ ಇರುವ ವಾಹನಗಳಲ್ಲಿ ಇವೆ. ಆ ನಂಬರ್ ಪ್ಲೇಟ್ ಗಳನ್ನು ಬದಲಾವಣೆ ಮಾಡಲು ಸಾರಿಗೆ ಇಲಾಖೆ ಸೂಚನೆ ನೀಡಿದೆ. ಅದೇನೆಂದು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

HSRP ನಂಬರ್ ಪ್ಲೇಟ್ ಕಡ್ಡಾಯ:

ಸಾರಿಗೆ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ 2019ಕ್ಕಿಂತ ಮೊದಲು ಖರೀದಿಸಿರುವ ವಾಹನಗಳಿಗೆ 17 ಫೆಬ್ರವರಿ 2024ರ ಒಳಗೆ ವಾಹನ ಮಾಲೀಕರು ತಪ್ಪದೇ HSRP ನಂಬರ್ ಪ್ಲೇಟ್ ( High Security Registration Plate ) ಅನ್ನು ತಮ್ಮ ತಮ್ಮ ವಾಹನಗಳಿಗೆ ಅವಳಡಿಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದ್ದಾರೆ. ಈ ಒಂದು ಸೂಚನೆ ಮೀರಿದಲ್ಲಿ ಮುಂದಿನ ದಿನಗಳಲ್ಲಿ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಕೂಡ ತಿಳಿಸಲಾಗಿದೆ. ಈಗ ಎಲ್ಲರಲ್ಲೂ ಇಂದು ಪ್ರಶ್ನೆ ಕಾಡುತ್ತಿದೆ ಅಲ್ಲವೇ ಏನಿದು HSRP ನಂಬರ್ ಪ್ಲೇಟ್ ಗಳು ಎಂದು ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ :

ಈ ನಂಬರ್ ಪ್ಲೇಟ್ ಅಳವಡಿಕೆಯ ಮುಖ್ಯ ಉದ್ದೇಶ ( Purpose ) ಅಥವಾ ಪ್ರಯೋಜನ :

ಈ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವುದರಿಂದ ಕಳ್ಳರು ಅಥವಾ ಇತರೆ ಕಾನೂನು ಬಾಹಿರ ಚಟುವಟಿಗೆ ನಂಬರ್ ಪ್ಲೇಟ್ ಬದಲಾಯಿಸುವವರನ್ನು ಗುರುತಿಸಲು ಪೋಲಿಸರಿಗೆ ಸಹಾಯವಾಗುತ್ತದೆ.
ನೀವು ಹಾಕುವ HSRP ನಂಬರ್ ಪ್ಲೇಟ್‌ನಲ್ಲಿ ನಿಮ್ಮ ವಾಹನದ (ಕಾರು/ಬೈಕ್ ಸಂಪೂರ್ಣ ಮಾಹಿತಿ) ಎಲ್ಲ ಮಾಹಿತಿ ಅಡಕವಾಗಿರುತ್ತದೆ.
ಈ ವಾಹನದ ಮಾಹಿತಿಗಳು ಸರ್ಕಾರದ ಕಚೇರಿಯಲ್ಲಿ (ಡೆಟಾಬೇಸ್) ಸಂಗ್ರಹವಾಗಿರುತ್ತದೆ.
ನಿಮ್ಮ ವಾಹನ ಕಳ್ಳತನವಾದರೆ ಇದರ ಸಹಾಯದಿಂದ ಬೇಗನೇ ಹುಡುಕಲು ಅನುಕೂಲವಾಗುತ್ತದೆ.
ಕಳ್ಳತನದ ಬೈಕ್ ಅಪರಾಧ ಕೃತ್ಯಕ್ಕೆ ಬಳಕೆ ಆಗುವುದನ್ನು ತಡೆಯಬಹುದು.
ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನಧಿಕೃತ ಬದಲಾವಣೆ ಅಸಾಧ್ಯವಾಗಿದೆ.
ಈ ನಂಬರ್ ಪ್ಲೇಟ್‌ನಲ್ಲಿ ಮಾಹಿತಿ ತಿದ್ದಲು ಆಗುವುದಿಲ್ಲ. ಈ ಪ್ಲೇಟ್‌ನ ಮರುಬಳಕೆಯು ಸಾಧ್ಯವಿಲ್ಲ.

whatss

ಏನಿದು HSRP ನಂಬ‌ರ್ ಪ್ಲೇಟ್ ?

HSRP ನಂಬರ್ ಪ್ಲೇಟ್ ಎಂದರೆ, ಹೈ ಸೆಕ್ಯುರಿಟಿ ರಿಜಿಸ್ಟರ್ ಪ್ಲೇಟ್ ಟ್ಯಾಮ್ ಪರ್ ಪ್ರೊಫ್ ಎಂಬುದಾಗಿದೆ. ಮುಖ್ಯವಾಗಿ ಈ ನಂಬ‌ರ್ ಪ್ಲೇಟ್ ನಲ್ಲಿ ಮತ್ತೆ ಬಳಕೆ ಮಾಡಲಾಗದ ಲಾಕ್ ಗಳನ್ನು ನೀಡಲಾಗಿದೆ.
ಒಂದು ಬಾರಿ ಈ ನಂಬರ್ ಪ್ಲೇಟ್ ಅನ್ನು ಹಾಕಿದರೆನಮ್ಮ ವಾಹನಕ್ಕೆ ಅಳವಡಿಸಿದರೆ ಮತ್ತೆ ಅದನ್ನು ಸುಲಭವಾಗಿ ತೆಗೆದುಹಾಕಲು ಆಗುವುದಿಲ್ಲ. ಹಾಗೇನಾದರೂ ಈ ನಂಬ‌ರ್ ಪ್ಲೇಟ್ ಅನ್ನು ಬದಲಾಯಿಸಲು ಪ್ರಯತ್ನಿಸಿದರೆ ಈ ನಂಬ‌ರ್ ಪ್ಲೇಟ್ ಹಾಳಾಗುತ್ತದೆ. ಮತ್ತೆ ಅದನ್ನು ಮರು ಬಳಕೆ ಮಾಡಲು ಸಾಧ್ಯವಿಲ್ಲ.

ಇನ್ನು HSRP ನಂಬರ್ ಪ್ಲೇಟ್ ನ ವಿನ್ಯಾಸ ಹೇಗಿರುತ್ತದೆ ಎಂದು ನೋಡೋಣ ಬನ್ನಿ.

ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ಗಳು (HSRP ) ಅಲ್ಯೂಮಿನಿಯಂನಿಂದ ಮಾಡಿದ ನಂಬರ್ ಪ್ಲೇಟ್‌ಗಳಾಗಿವೆ ಮತ್ತು ಕನಿಷ್ಟ ಎರಡು ಮರುಬಳಕೆ ಮಾಡಲಾಗದ ಸ್ನ್ಯಾಪ್-ಆನ್ ಲಾಕ್‌ಗಳನ್ನು ಬಳಸಿಕೊಂಡು ವಾಹನದ ಮೇಲೆ ಸ್ಥಿರವಾಗಿರುತ್ತವೆ. ಪ್ಲೇಟ್ ಮೇಲಿನ ಎಡ ಮೂಲೆಯಲ್ಲಿ ನೀಲಿ ಬಣ್ಣದಲ್ಲಿ ಹಾಟ್-ಸ್ಟ್ಯಾಂಪ್ಡ್ ಕ್ರೋಮಿಯಂ ಆಧಾರಿತ 20 mm X 20 mm ಹೊಲೊಗ್ರಾಮ್ ಅಶೋಕ ಚಕ್ರವನ್ನು ಹೊಂದಿದೆ. ಈ ಪ್ಲೇಟ್‌ನ ಕೆಳಗಿನ ಎಡ ಮೂಲೆಯಲ್ಲಿ 10-ಅಂಕಿಯ ಶಾಶ್ವತ ಗುರುತಿನ ಸಂಖ್ಯೆ (PIN) ಲೇಸರ್ ಬ್ರಾಂಡ್ ( Laser Brand ) ಆಗಿದೆ.

HSRP ಅಂಕಿಅಂಶಗಳು ಮತ್ತು ವರ್ಣಮಾಲೆಗಳ ಮೇಲೆ ಅನ್ವಯಿಸಲಾದ ಹಾಟ್-ಸ್ಟ್ಯಾಂಪ್ಡ್ ಫಿಲ್ಮ್ ಅನ್ನು ಸಹ ಹೊಂದಿದೆ, ಇದು 45-ಡಿಗ್ರಿ ಕೋನದಲ್ಲಿ ‘ಇಂಡಿಯಾ’ ಎಂದು ಕೆತ್ತಲಾಗಿದೆ. ಹಾಟ್-ಸ್ಟ್ಯಾಂಪ್ ಮಾಡಿದ ಫಿಲ್ಮ್‌ನೊಂದಿಗೆ ಬರೆಯಲಾದ ವರ್ಣಮಾಲೆಗಳು ಮತ್ತು ಸಂಖ್ಯಾಶಾಸ್ತ್ರವು ರಾಜ್ಯ ಕೋಡ್, ಜಿಲ್ಲೆ ಅಥವಾ RTO ಕೋಡ್ ಮತ್ತು ಕಾರಿನ ವಿಶಿಷ್ಟ ಆಲ್ಫಾ-ಸಂಖ್ಯಾ ಗುರುತಿನ ಸಂಖ್ಯೆಯನ್ನು ಸೂಚಿಸುತ್ತದೆ. ಈ ಪ್ಲೇಟ್ ಅನ್ನು ಸ್ಥಾಪಿಸಿದ ವಾಹನಕ್ಕೆ ವಿದ್ಯುನ್ಮಾನವಾಗಿ ಲಿಂಕ್ ಮಾಡಲಾಗಿದೆ.

HSRP ನಂಬರ್ ಪ್ಲೇಟ್ ಗಳಿಗೆ ನೀಡಿದ ಶುಲ್ಕಗಳು ಹೀಗಿವೆ :

ಕೇಂದ್ರ ಸರ್ಕಾರವು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬೆಲೆಯನ್ನು ನಿಗದಿಪಡಿಸಿಲ್ಲ. ಆದ್ದರಿಂದ ವಿವಿಧ ರಾಜ್ಯಗಳಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬೆಲೆ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ.

ಇನ್ನು ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಭದ್ರತಾ ನಂಬರ್ ಪ್ಲೇಟ್ ಶುಲ್ಕಗಳು ಸುಮಾರು ರೂ. 400, ಇದು ಅವರು ಸೇರಿರುವ ವರ್ಗವನ್ನು ಆಧರಿಸಿ ನಾಲ್ಕು-ಚಕ್ರ ವಾಹನಗಳಿಗೆ ರೂ.1,100 ವರೆಗೆ ಮೀರಬಹುದು. ಕಡ್ಡಾಯವಾಗಿರುವ ಬಣ್ಣ-ಕೋಡೆಡ್ ಸ್ಟಿಕ್ಕರ್ ಅನ್ನು ಪಡೆದುಕೊಳ್ಳಲು ನಿಮಗೆ ರೂ 100 ವೆಚ್ಚವಾಗುತ್ತದೆ.

tel share transformed

ಸರ್ಕಾರ ಹೊರಡಿಸಿದ ನಿಯಮ ಪಾಲಿಸದಿದ್ದರೆ ದಂಡ ( Penalty ) ವಿಧಿಸಲಾಗುತ್ತದೆ :

ಸರ್ಕಾರ ನೀಡಿದ ಮಾಹಿತಿಯ ಪ್ರಕಾರ , ಮೂರು ವರ್ಷಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಗಳನ್ನು ಹೊಂದಿರದ ವಾಹನಗಳನ್ನು ಗುರುತಿಸಿ ಒಟ್ಟು 71,796 ಪ್ರಕರಣಗಳನ್ನು ದಾಖಲಿಸಲಾಗಿದೆ.

ಆದರೆ ಇದೀಗ ಮತ್ತೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಕಾಲಾವಕಾಶ ನೀಡಿದ್ದಾರೆ. 17 ಫೆಬ್ರವರಿ 2024 ರ ವರೆಗೆ ಯಾವುದೇ ರೀತಿಯ ದಂಡವನ್ನು ಹಾಕದಂತೆ ಪೋಲಿಸರಿಗೆ ಪತ್ರ ಬರೆಯಲಾಗಿದೆ ಎಂದು ಸಾರಿಗೆ ಸಚಿವರು ಇದರ ಬಗ್ಗೆ ಸದನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

HSRP ನಂಬರ್ ಪ್ಲೇಟ್ ಅಳವಡಿಕೆಗೆ ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ :

ವಾಹನ ಸವಾರರು ಹೊಸ ನಂಬರ್ ಪ್ಲೇಟ್‌ಗಾಗಿ www.siam.in ಭೇಟಿ ನೀಡಿ ನಂತರ https://bookmyhsrp.com/ ಗೆ ಭೇಟಿ ನೀಡಬೇಕು.
ಡಿಸ್ಪ್ಲೇ ಮೇಲೆ ಕೇಳಲಾಗುವ ಎಚ್‌ಎಸ್‌ಆರ್‌ಪಿ ಬುಕ್‌ ಮೇಲೆ ಕ್ಲೀಕ್ ಮಾಡಬೇಕು.
ನಂತರ ತೆರೆದುಕೊಳ್ಳುವ ಬುಕ್ಕಿಂಗ್ ಡಿಟೇಲ್ಸ್‌ ಕಾಲಂನಲ್ಲಿ ವಾಹನ ತಯಾರಿಕ ಕಂಪನಿ ಆಯ್ಕೆ ಮಾಡಿಕೊಳ್ಳಬೇಕು.
ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಂಡು ನಿಮ್ಮ ವಾಹನದ ನಂಬರ್, ಚೆಸ್ಸಿ ಮತ್ತು ಇಂಜಿನ್ ನಂಬರ್ ಕ್ಯಾಪ್ಚಾ ನಮೂದಿಸಿ.
ವಿವರ ಭರ್ತಿ ಆದ ನಂತರ ನಂಬರ್ ಪ್ಲೇಟ್‌ಗಾಗಿ ಹತ್ತಿರ ಡೀಲರ್ ಸ್ಥಳ ಆಯ್ಕೆ ಮಾಡಿಕೊಳ್ಳಿ.
ನಂತರ ಕೇಳಲಾಗುವ ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.
ನಿಮ್ಮ ಮೊಬೈಲ್‌ಗೆ ಬರುವ ಸಂದೇಶದ ಆಧಾರದಲ್ಲಿ ನೀವು ಸಮಯಕ್ಕೆ ಸರಿಯಾಗಿ ಹತ್ತಿರದ ಡೀಲರ್ ಸ್ಥಳಕ್ಕೆ ಭೇಟಿ ನೀಡಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.
ಹೊಸ ನಂಬರ್ ಪ್ಲೇಟ್ ಅಳಡಿಕೆಗೆ ನೋಂದಾಯಿಸಿಕೊಂಡ ಮೇಲೆ ಅದನ್ನು ಟ್ರ್ಯಾಕ್ ಸಹ ಮಾಡಬಹುದು.

ಸಾರ್ವಜನಿಕರು ಆನ್ ಲೈನ್(online) ಮೂಲಕ ಹೆಚ್.ಎಸ್.ಆರ್.ಪಿ. ಪಡೆಯಲು ತೊಂದರೆಗಳಾದಲ್ಲಿ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು. 9449863429,9449863426

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!