75 ಸಾವಿರ ರೂಪಾಯಿ HDFC ಪರಿವರ್ತನಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ..! ಹೀಗೆ ಅರ್ಜಿ ಸಲ್ಲಿಸಿ

hdfc parivartana

ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್(Scholarship) ನೀಡುವ ಮೂಲಕ ಪ್ರೋತ್ಸಾಹ ಧನವನ್ನು (Money) ನೀಡಲು ಮುಂದಾಗಿದೆ. 1 ರಿಂದ 12 ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೊಮಾ, ITI, ಪಾಲಿಟೆಕ್ನಿಕ್, ಪದವಿಪೂರ್ವ(Under graduate) ಮತ್ತು ಸ್ನಾತಕೋತ್ತರ(post-graduate) ಶಿಕ್ಷಣವನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗಿದ್ದಾರೆ. ಯಾರ್ಯಾರು ಎಷ್ಟು ವಿದ್ಯಾರ್ಥಿವೇತನ ಪಡೆಯುತ್ತಾರೆ,?, ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ?, ಅರ್ಜಿ ಸಲ್ಲಿಸುವುದು ಹೇಗೆ?, ಎನ್ನುವುದರ ಇತರೆ ಮಾಹಿತಿಗಳ ಕುರಿತು ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

HDFC ಬ್ಯಾಂಕ್ ವತಿಯಿಂದ ಸ್ಕಾಲರ್‌ಶಿಪ್:

ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಗಳಿಂದಾಗಿ ಶೈಕ್ಷಣಿಕ ಕನಸುಗಳನ್ನು ತ್ಯಜಿಸಬೇಕಾಗಿಲ್ಲ. ಏಕೆಂದರೆ, HDFC ಬ್ಯಾಂಕ್ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ ನೀಡುತ್ತಿದೆ.
ಹೌದು, 2023-24ರ HDFC ಬ್ಯಾಂಕ್ ಪರಿವರ್ತನ್‌ನ ECSS ಕಾರ್ಯಕ್ರಮವು HDFC ಬ್ಯಾಂಕ್‌ನ ಒಂದು ಉಪಕ್ರಮವಾಗಿದ್ದು, ಸಮಾಜದ ಹಿಂದೂಳಿದ ವರ್ಗಗಳಿಗೆ ಸೇರಿದ ಶೈಕ್ಷಣಿಕವಾಗಿ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ECSS ಕಾರ್ಯಕ್ರಮದ ಮೂಲಕ, ವೈಯಕ್ತಿಕ / ಕೌಟುಂಬಿಕ ಬಿಕ್ಕಟ್ಟುಗಳು ಮತ್ತು ಇತರ ಆರ್ಥಿಕ ಸಂಕಷ್ಟಗಳಿಂದಾಗಿ ಶಿಕ್ಷಣವನ್ನು ಪೂರೈಸಲಗಾದ ವಿದ್ಯಾರ್ಥಿಗಳಿಗೆ ಭರವಸೆಯ ಕಿರಣವಾಗಿದೆ.

ಈ ಕಾರ್ಯಕ್ರಮವು ಶಿಕ್ಷಣ-ಸಂಬಂಧಿತ ವೆಚ್ಚಗಳ ಹೊರೆಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ, ಪ್ರತಿಭಾವಂತ ಮತ್ತು ಅರ್ಹ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕನಸುಗಳಲ್ಲಿ ಯಾವದೇ ರೀತಿಯ ಅಡೆತಡೆಯಿಲ್ಲದೆ ಮುಂದುವರಿಸುವ, ಅಧ್ಯಯನದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದೆ.

1 ರಿಂದ 12 ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೊಮಾ, ITI, ಪಾಲಿಟೆಕ್ನಿಕ್, ಪದವಿಪೂರ್ವ(Under graduate) ಮತ್ತು ಸ್ನಾತಕೋತ್ತರ(post-graduate) ಶಿಕ್ಷಣವನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗಿದ್ದಾರೆ. ಈ ವಿದ್ಯಾರ್ಥಿವೇತನದ ಅಡಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಡಿಸೆಂಬರ್ 2023. ಯಾರಿಗೆ ಎಷ್ಟು ಸ್ಕಾಲರ್‌ಶಿಪ್‌ ಸಿಗಲಿದೆ, ಸ್ಕಾಲರ್‌ಶಿಪ್‌ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು ಎಂದು ಹಂತ ಹಂತವಾಗಿ ತಿಳಿಯೋಣ.

PG ವಿದ್ಯಾರ್ಥಿಗಳಿಗೆ HDFC ಬ್ಯಾಂಕ್ ಪರಿವರ್ತನ್‌ ECSS ವಿದ್ಯಾರ್ಥಿ ವೇತನ:

ಅರ್ಹತೆ(Eligibility):
ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹತೆಗಳೆಂದರೆ.
– ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು
– ಎಂಎಸ್ಸಿ(MSc) ,ಎಂಎ( MA), ಎಂ.ಟೆಕ್(M-tech), ಎಂಬಿಎ(MBA)ಕೋರ್ಸ್‌ ಓದುತ್ತಿರಬೇಕು.
– ಪದವಿಯಲ್ಲಿ ಶೇಕಡ.55 ಅಂಕಗಳನ್ನು ಪಡೆದಿರಬೇಕು.
– ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು.

ಇದನ್ನೂ ಓದಿ – Scholarship – ಬರೋಬ್ಬರಿ 2 ಲಕ್ಷ ರೂ. ಉಚಿತ ವಿದ್ಯಾರ್ಥಿ ವೇತನ  ಡಿಗ್ರಿ ಓದುವವರಿಗೆ, ಈಗಲೇ ಅರ್ಜಿ ಸಲ್ಲಿಸಿ | Scholarship, Apply Online

ಸ್ಕಾಲರ್ಶಿಪ್ ಮೊತ್ತ:
– ಸಮಾನ್ಯ ಎಂಎಸ್ಸಿ, ಎಂಎ ಕೋರ್ಸ್‌ ಓದುತ್ತಿರುವವರಿಗೆ ರೂ.35,000.
-ವೃತ್ತಿಪರ ಕೋರ್ಸ್‌ಗಳಾದ ಎಂ.ಟೆಕ್, ಎಂಬಿಎ ಕೋರ್ಸ್‌ ಓದುತ್ತಿರುವವರಿಗೆ ರೂ.75000.

UG ವಿದ್ಯಾರ್ಥಿಗಳಿಗೆ HDFC ಬ್ಯಾಂಕ್ ಪರಿವರ್ತನ್‌ ECSS ವಿದ್ಯಾರ್ಥಿ ವೇತನ:

ಅರ್ಹತೆ(Eligibility):

– ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು
– ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಕೋರ್ಸ್‌ಗಳಾದ – BCom, BSc, BA, BCA, ಇತರೆ ವೃತ್ತಿಪರ ಕೋರ್ಸ್‌ಗಳಾದ ಬಿ.ಟೆಕ್(B-tech), ಎಂಬಿಬಿಎಸ್( MBBS), ಎಲ್‌ಎಲ್‌ಬಿ(LLB), ಬಿ.ಆರ್ಚ್‌(B-arch) , ನರ್ಸಿಂಗ್ ಕೋರ್ಸ್‌ಗಳನ್ನು ಅನುಸರಿಸುತ್ತಿರಬೇಕು.
– ಹೊಂದಿನ ಅರ್ಹತಾ ಪರೀಕ್ಷೆಯಲ್ಲಿ ಶೇಕಡ.55 ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು.
– ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಕಡಿಮೆ ಆಗಿರ್ಬೇಕು.

ಸ್ಕಾಲರ್ಶಿಪ್ ಮೊತ್ತ:

– ವೃತ್ತಿಪರ ಪದವಿ ಕೋರ್ಸ್‌ಗಳ ವ್ಯಸಂಗ ಮಾಡುತ್ತಿರುವರಿಗೆ ವಾರ್ಷಿಕ ರೂ.50,000.
– ಸಾಮಾನ್ಯ ಪದವಿ ಕೋರ್ಸ್‌ಗಳ ವ್ಯಸಂಗ ಮಾಡುತ್ತಿರುವರಿಗೆ ವಾರ್ಷಿಕ ರೂ.30000.

ಶಾಲಾ ವಿದ್ಯಾರ್ಥಿಗಳಿಗೆ HDFC ಬ್ಯಾಂಕ್ ಪರಿವರ್ತನ್‌  ECSS ವಿದ್ಯಾರ್ಥಿ ವೇತನ:

ಅರ್ಹತೆ(Eligibility):

– 1 ರಿಂದ 12ನೇ ತರಗತಿ, ITI, Diploma, ಇತರೆ ಪಾಲಿಟೆಕ್ನಿಕ್ ಕೋರ್ಸ್‌ಗಳನ್ನು ಖಾಸಗಿ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ(government-aided) ಶಾಲೆಗಳಲ್ಲಿ ಓದುತ್ತಿರಬೇಕು.
– ಅರ್ಜಿ ಸಲ್ಲಿಸುವವರು ತಮ್ಮ ಹಿಂದಿನ ಶಿಕ್ಷಣದಲ್ಲಿ ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು.
– ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು.

ಸ್ಕಾಲರ್ಶಿಪ್ ಮೊತ್ತ:

– 1 ರಿಂದ 6 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.15,000.
– 7 ರಿಂದ 12ನೇ ತರಗತಿವರೆಗಿನ ಹಾಗೂ ಡಿಪ್ಲೊಮ, ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಾಗಿದ್ದಲ್ಲಿ ವಾರ್ಷಿಕ ರೂ.18,000.

HDFC ಬ್ಯಾಂಕ್ ಪರಿವರ್ತನ್‌ ECSS ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :

-ಹಿಂದಿನ ವರ್ಷದ ಅಂಕ ಪಟ್ಟಿಗಳು
ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ
ಆಧಾರ್‌ ಕಾರ್ಡ್‌ ಅಥವಾ ಯಾವದೇ ಸರ್ಕಾರಿ ಗುರುತಿನ ಪುರಾವೆ.
ಆದಾಯ ಪ್ರಮಾಣ ಪತ್ರ.
ಪ್ರಸ್ತುತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಕುರಿತಾದ ದಾಖಲೆ.
-ವೈಯಕ್ತಿಕ / ಕೌಟುಂಬ ಬಿಕ್ಕಟ್ಟಿನ ಪುರಾವೆ(ಲಭ್ಯವಿದ್ದಲ್ಲಿ).

HDFC ಬ್ಯಾಂಕ್ ಪರಿವರ್ತನ್‌ ECSS ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಈ ವಿದ್ಯಾರ್ಥಿವೇತನದ ಅಡಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಡಿಸೆಂಬರ್ 2023.

https://www.buddy4study.com/page/hdfc-bank-parivartans-ecss-programme

ಹಂತ 1: ಕೆಳಗಿನ ‘APPLY NOW’ ಬಟನ್ ಕ್ಲಿಕ್ ಮಾಡಿ.

ಹಂತ 2: ಡ್ಯಾಶ್‌ಬೋರ್ಡ್‌ನ ಬಲಭಾಗದಲ್ಲಿರುವ ‘ರಿಜಿಸ್ಟರ್’ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ‘ರಿಜಿಸ್ಟರ್’ ಮಾಡಲು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
(ಗಮನಿಸಿ – ಈಗಾಗಲೇ ನೋಂದಾಯಿಸಿದ್ದರೆ, ನೋಂದಾಯಿತ ಇಮೇಲ್ ಐಡಿ ಬಳಸಿ ಲಾಗ್ ಇನ್ ಮಾಡಿ.)

ಹಂತ 3: ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ನೀಡಿರುವ ‘ಅಧಿಕೃತ ಲಾಗಿನ್’ ಆಯ್ಕೆಯ ಅಡಿಯಲ್ಲಿ ‘ಸ್ಕೂಲ್ ಅಥಾರಿಟಿ’ ಆಯ್ಕೆಗೆ ನ್ಯಾವಿಗೇಟ್ ಮಾಡಿ.

ಹಂತ 4: ಈಗ, ‘ಹೊಸ ನೋಂದಣಿಗಾಗಿ – ಇಲ್ಲಿ ಕ್ಲಿಕ್ ಮಾಡಿ’ ಆಯ್ಕೆಗೆ ನ್ಯಾವಿಗೇಟ್ ಮಾಡಿ ಮತ್ತು ಅದನ್ನು ಕ್ಲಿಕ್ ಮಾಡಿ.
(ಗಮನಿಸಿ – ಈಗಾಗಲೇ ನೋಂದಾಯಿಸಿರುವ ಶಾಲೆಗಳು, ಮಾನ್ಯ ರುಜುವಾತುಗಳನ್ನು ಬಳಸಿ ಲಾಗಿನ್ ಮಾಡಿ.)

ಹಂತ 5: ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

ಹಂತ 6: ಯಶಸ್ವಿ ನೋಂದಣಿಯ ನಂತರ, ”Student Nomination’ ಆಯ್ಕೆಮಾಡಿ.

ಹಂತ 7: ವಿದ್ಯಾರ್ಥಿಯ ವಿವರಗಳನ್ನು ಭರ್ತಿ ಮಾಡಿ, ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ ಮತ್ತು ಸ್ವೀಕೃತಿಯನ್ನು ಪಡೆಯಲು ಅರ್ಜಿಯನ್ನು ಸಬ್ಮಿಟ್ ಮಾಡಿ.

ವಿದ್ಯಾರ್ಥಿಗಳು ಈ ಉತ್ತಮ ಸಂಧಿಯನ್ನು ತಪ್ಪಿಸದೆ ಈ ಕಾರ್ಯಕ್ರಮದ ಲಾಭಗಳನ್ನು ಪಡೆದುಕೊಂಡು ತಮ್ಮ ಶೈಕ್ಷಣಿಕ ಕನಸುಗಳನ್ನು ಪೂರೈಸಿಕೊಳ್ಳಬಹುದು. ಹಾಗೆಯೇ ಇಂತಹ ಉತ್ತಮ ಸ್ಕಾಲರ್‌ಶಿಪ್ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

ಈ ಮಾಹಿತಿಗಳನ್ನು ಓದಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!