Gruhalakshmi- ಹಣ ಸಿಗದ ಗೃಹಲಕ್ಷ್ಮಿಯರೇ ನಿಮ್ಮ ಗಂಡನ ಖಾತೆಗೂ ಬರುತ್ತೆ 2000/- ರೂ. ಇಲ್ಲಿದೆ ಮಾಹಿತಿ

gruhalakshmi 7

ಕರ್ನಾಟಕ ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಮನೆಯೊಡತಿಗೆ ಪ್ರತಿತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಇದಾದ ಬಳಿಕ ಈ ಯೋಜನೆಗೆ ನೋಂದಾಯಿಸಿಕೊಂಡಿರುವ ರಾಜ್ಯದ ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ 2 ಸಾವಿರ ರೂಪಾಯಿ ಜಮಾ ಆಗುತ್ತಿದೆ  ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಹಾಗಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮೀ ಯೋಜನೆಯನ್ನು ಎಲ್ಲರಿಗೂ ತಲುಪಿಸುವ ಕುರಿತಂತೆ ಚರ್ಚೆ ನಡೆಸಲಾಗಿದ್ದು, ಇದರಂತೆ ಮಹತ್ವದ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.

ರೇಷನ್​ ಕಾರ್ಡ್​ನಲ್ಲಿರುವ ಎರಡನೇ ಹಿರಿಯ ವ್ಯಕ್ತಿಗೆ ಹಣ 

ಈಗಾಗಲೇ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಆದರೆ ಇನ್ನೂ ಅನೇಕ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೆಲವು ಕಾರ್ಡಗಳಲ್ಲಿ ಯಜಮಾನಿ ಹೆಸರೇ ಇಲ್ಲ ಹಾಗೂ ಯಜಮಾನಿ ಬ್ಯಾಂಕ್ ಖಾತೆಯು ತಾಂತ್ರಿಕ ಸಮಸ್ಯೆ ಆಗಿರುವ ಸಂದರ್ಭದಲ್ಲಿ ಆ ಕುಟುಂಬಗಳಿಗೆ ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯೊಳಗೆ ಕುಟುಂಬ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾನೂನು ಸಚಿವ ಎಚ್​ಡಿಕೆ ಪಾಟೀಲ್​, ಆಹಾರ ನಾಗರೀಕ ಸರಬರಾಜು ಇಲಾಖೆ, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪಕ ಇಲಾಖೆ ಅವರು ಅತ್ಯಂತ ಮಹತ್ವದ ಅಂಶಗಳನ್ನು ಕ್ಯಾಬಿನೆಟ್​ ಮುಂದಿಸಿ ಚರ್ಚೆ ನಡೆಸಿದ್ದರು.

ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮೀ ಯೋಜನೆಯ ಅಡಿ ಅರ್ಜಿ ಸಲ್ಲಿಕೆ ಆಗಿ ಮೊಬೈಲ್​ಗೆ ಮೆಸೇಜ್​ ಬಂದಿದ್ದರು ಸುಮಾರು 9 ಲಕ್ಷ ಯಜಮಾನಿಯರಿಗೆ ಹಣ ವರ್ಗಾವಣೆ ಆಗಲು ತಾಂತ್ರೀಕ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಸಾವಿರ ರೂಪಾಯಿಯನ್ನು ರೇಷನ್​ ಕಾರ್ಡ್​ನಲ್ಲಿರುವ ಎರಡನೇ ಹಿರಿಯ ವ್ಯಕ್ತಿಗೆ ನೀಡಲು (ವಯಸ್ಸಿನ ಆಧಾರದ ಮೇರೆಗೆ) ಸರ್ಕಾರ ನಿರ್ಧಾರ ಮಾಡಿದೆ.

3 ತಿಂಗಳಿಂದ ಬಾಕಿ ಇದ್ದರೆ 6 ಸಾವಿರ ರೂ. ಖಾತೆಗೆ ಬರುತ್ತೆ.

ರಾಜ್ಯದ ಯಜಮಾನಿ ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, ಅನೇಕ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸುದ್ದಿಗೋಷ್ಠಿಯ ಮುಖಾಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೇ ಇದ್ರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ಇದುವರೆಗೆ ಹಣ ಬಾರದೇ ಇದ್ರೂ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದರು. ದೀಪಾವಳಿ ಹಬ್ಬದ ವೇಳೆಗೆ ಅಥವಾ ಮುಂದಿನ 15 ದಿನಗಳೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಹೋಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!