ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಯ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲ ಪ್ರಕ್ರಿಯೆ ಎಸ್ಎಮ್ಎಸ್(SMS) ಮಾಡುವುದರ ಮೂಲಕ ಶುರುವಾಗುತ್ತದೆ ಎಂದು ಈಗಾಗಲೇ ಹಲವರಿಗೆ ತಿಳಿದಿದೆ. ಆದರೆ ನೀವೇನಾದರೂ ಹೇಗೆ ಮೆಸೇಜ್ ಮಾಡುವುದು?, ಏನನ್ನು ಮೆಸೇಜ್ ಮಾಡಬೇಕು ಎಂಬ ಗೊಂದಲದಲ್ಲಿದ್ದರೆ ನಿಮಗೆ ಈ ಲೇಖನ ಸಂಪೂರ್ಣವಾಗಿ ಸಹಾಯಮಾಡುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಮೆಸೇಜ್ ಮಾಡುವ ಪ್ರತಿ ಹಂತವನ್ನು ಹಾಗೂ ಯಾವ ದಾಖಲೆಗಳು ಬೇಕಾಗುತ್ತದೆ ಮತ್ತು ಎಲ್ಲಿ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಾಯ್ತು ಇನ್ನು ಮಹಿಳೆಯರು ಮೆಸೇಜ್ ಮಾಡುವುದೊಂದೇ ಬಾಕಿ :
ದೊಡ್ಡ ಹಣದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಸಂಜೆ 5:00 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯವಾಗಿ ಆಗಸ್ಟ್ ತಿಂಗಳಿನಲ್ಲಿ ಎಲ್ಲಾ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ 2000 ಹಣ ಜಮವಾಗಲಿದೆ. ಅರ್ಜಿಯನ್ನು ಸಲ್ಲಿಸುವ ವಿಷಯದಲ್ಲಿ ಸ್ವಲ್ಪ ಬದಲಾವಣೆ ಕೂಡ ಆಗಿದೆ. ಅದೇನೆಂದರೆ ಮೊದಲು ತಿಳಿಸಿದಂತೆ ಗೃಹಲಕ್ಷ್ಮಿಯರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತೆ. ಪತಿ ತೆರಿಗೆದಾರರಾಗಿದ್ದರೆ ಅಂಥವರ ಅಕೌಂಟ್‌ಗೆ ಹಣ ಬರುವುದಿಲ್ಲ. ಇನ್ನು ಆಧಾರ್‌ಗೆ ಲಿಂಕ್ ಆಗಿರೋ ಅಕೌಂಟ್ ಬಿಟ್ಟು, ನಿಮ್ಮದೆ ಬೇರೆ ಅಕೌಂಟ್‌ಗೆ ಹಣ ಬೇಕಾದ್ರೆ ಪಾಸ್‌ಬುಕ್‌ನ ಜೆರಾಕ್ಸ್ ಪ್ರತಿ ತೆಗೆದುಕೊಂಡು ಹೋಗಬೇಕು. ಹಾಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ, ತಪ್ಪದೇ ಓದಿ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನ :
ಹಂತ 1: ಮೊದಲನೆಯದಾಗಿ ರೇಷನ್ ಕಾರ್ಡಿಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಂದ ನೀವು ಮೆಸೇಜನ್ನು ಮಾಡಬೇಕು.
ಹಂತ 2: ನಿಮ್ಮ ಮೆಸೇಜ್ ಆಪನ್ನು ಓಪನ್ ಮಾಡಿ, ನಂತರ ಸ್ಟಾರ್ಟ್ ಕನ್ವರ್ಸೇಷನ್(start conversation) ಅಥವಾ ಪ್ಲಸ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ.
To ಎಂಬ ಬಾಕ್ಸಿನಲ್ಲಿ ಸರ್ಕಾರದ ಮೊಬೈಲ್ ಸಂಖ್ಯೆಯಾದ 8147500500 ಅನ್ನು ಹಾಕಿ. ನಂತರ ಟೆಕ್ಸ್ಟ್ ಮೆಸೇಜ್(text message) ನಲ್ಲಿ ನಿಮ್ಮ ಪಡಿತರ ಚೀಟಿಯ(Ration card) 12 ಡಿಜಿಟ್ ಗಳ ಸಂಖ್ಯೆಯನ್ನು ನೊಂದಣಿ ಮಾಡಿ ಮತ್ತು ಮೆಸೇಜನ್ನು ಸೆಂಡ್ ಮಾಡಿ.
ಹಂತ 4: ಎಸ್ಎಂಎಸ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮಗೆ ಸರ್ಕಾರದಿಂದ ಒಂದು ಮೆಸೇಜ್ ಬರುತ್ತದೆ ಅದರಲ್ಲಿ, ಯಾವ ಸ್ಥಳದಲ್ಲಿ ಯಾವ ದಿನಾಂಕಕ್ಕೆ ಎಷ್ಟು ಗಂಟೆಗೆ ತೆರಳಿ ಅರ್ಜಿಯನ್ನು ಸಲ್ಲಿಸಬೇಕು ಎಂಬುವ ಮಾಹಿತಿ ಇರುತ್ತದೆ.
ಹಂತ 6: ನಂತರ ತಮಗೆ ತಿಳಿಸಲಾದ ಸರ್ಕಾರಿ ಕೇಂದ್ರಗಳಲ್ಲಿ ಅರ್ಜಿಯನ್ನು ಹಾಕಲಾಗುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಯಾವ ದಾಖಲೆಗಳನ್ನು ಸರ್ಕಾರಿ ಕೇಂದ್ರಗಳಿಗೆ ತೆಗೆದುಕೊಂಡು ಹೋಗಿ ಅರ್ಜಿಯನ್ನು ಸಲ್ಲಿಸಬೇಕು :
ಬ್ಯಾಂಕ್ ಪಾಸ್ ಬುಕ್
ಮನೆ ಯಜಮಾನಿಯಾ ಆಧಾರ್ ಕಾರ್ಡ್
ಮೊಬೈಲ್
ಪಡಿತರ ಚೀಟಿ
ಎಲ್ಲಿ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ :
ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೊಂದಣಿಯನ್ನು ಮಾಡಿಕೊಡಲಾಗುತ್ತದೆ. ನೀವು ಅರ್ಜಿಗಳನ್ನು ಸಲ್ಲಿಸಲು ಯಾವುದೇ ರೀತಿಯ ಹಣವನ್ನು ಪಾವತಿಸುವ ಅಗತ್ಯವಿರುವುದಿಲ್ಲ.
ಅಧಿಕೃತ ಪ್ರಜಾ ಪ್ರತಿನಿಧಿ ಸ್ವಯಂಸೇವಕರು ಕೂಡ ನಿಮ್ಮ ಮನೆ ಬಾಗಿಲಿಗೆ ಬಂದು ಉಚಿತವಾಗಿ ಅರ್ಜಿಗಳನ್ನು ಸಲ್ಲಿಸಿಕೊಡುತ್ತಾರೆ.
ಈ ಮೇಲಿನ ಹಂತಗಳನ್ನು ಅನುಸರಿಸಿಕೊಂಡು ನೀವು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ದೊರೆಯುವಂತಹ ಎರಡು ಸಾವಿರದ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಲೇಖನವೂ ಎಲ್ಲಾ ಮಹಿಳೆಯರಿಗೆ ಉಪಯುಕ್ತವಾಗಿರುವುದರಿಂದ ಕೂಡಲೇ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ