Gruhalakshmi – ಮೆಸೇಜ್ ಇಲ್ಲದೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ – ಇಲ್ಲಿದೆ ಕಂಪ್ಲೀಟ್ ಮಾಹಿತಿ, Gruhalakshmi Application Kannada

Picsart 23 07 21 15 05 00 109

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಗೆ ಗ್ರಾಮ-ಒನ್ ನಲ್ಲಿ ನೇರವಾಗಿ ಯಾವುದೇ ರೀತಿಯ ಮೆಸೇಜನ್ನು ಕಳುಹಿಸದೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಮೊದಲು ನಾವು ಆಧಾರ್ ಕಾರ್ಡಿಗೆ ಲಿಂಕ್ ಆಗಿರುವಂತ ಮೊಬೈಲ್ ನಂಬರ್ ಇಂದ ಒಂದು ಮೆಸೇಜನ್ನು ಕಳುಹಿಸಬೇಕಾತ್ತದೆ. ನಂತರ ನಮಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯನ್ನು ಮಾಡಿಕೊಳ್ಳಲು ಸಮಯ ಸ್ಥಳ ಹಾಗೂ ದಿನಾಂಕವನ್ನು ಮೆಸೇಜ್ ಮಾಡುತ್ತಾರೆ. ಇದರೊಂದಿಗೆಯೇ ಗ್ರಾಮ ಒನ್(Grama one) ಸರ್ಕಾರಿ ಕೇಂದ್ರದಲ್ಲಿ ಯಾವುದೇ ಮೆಸೇಜ್ ಇಲ್ಲದೆ ನೀವು ಅರ್ಜಿಗಳನ್ನು ಸಲ್ಲಿಸುವ ಅವಕಾಶವಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈಗ ಮೆಸೇಜ್ ಕಳುಹಿಸದೆಯು ಕೂಡ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಬಹುದು :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಅನೇಕ ಜನರಿಗೆ ಗೊತ್ತಿರುವಂತೆ ಮೆಸೇಜ್ ಮಾಡಿದ ನಂತರವೇ ಸರ್ಕಾರದಿಂದ ಕಳುಹಿಸಲಾದ ದಿನಾಂಕ ಹಾಗೂ ಸ್ಥಳಕ್ಕೆ ತೆರಳಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿಗೆ ಗ್ರಾಮವನ್ ಸರ್ಕಾರಿ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸುವವರು ತಿಳಿಸಿರುವಂತೆ ಮೆಸೇಜ್ ಮಾಡದಿದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಗ್ರಾಮವನ್ ನಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ರೀತಿಯ ಘೋಷಣೆಯು ಹೊರಡದಿದ್ದರು ಕೂಡ, ಗ್ರಾಮ ಒನ್ ನವರು ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ ಅವರು ಅನೇಕ ಅರ್ಜಿಗಳನ್ನು ಮೆಸೇಜ್ ಇಲ್ಲದೆ ಸಲ್ಲಿಸಿದ್ದಾರೆ. ನಿಮಗೆ ಏನಾದರೂ ಮೆಸೇಜ್ ಮಾಡಲು ಬಾರದಿದ್ದಲ್ಲಿ ಅಥವಾ ಮೆಸೇಜ್ ಮಾಡಿಯೂ ಕೂಡ ಸರ್ಕಾರದಿಂದ ಸ್ಥಳ ಮತ್ತು ದಿನಾಂಕದ ವೇಳಾಪಟ್ಟಿ ಬರದಿದ್ದರೆ ನೀವು ಗ್ರಾಮವನ್ಗೆ ಒಮ್ಮೆ ತೆರಳಿ, ಗೃಹಲಕ್ಷ್ಮಿ ಯೋಜನೆಯ ನೋಂದಣಿಯನ್ನು ಮಾಡಿಸಿಕೊಂಡು ಅರ್ಜಿಯನ್ನು ಸಲ್ಲಿಸುವ  ಅವಕಾಶವಿದೆ.

whatss

ಪತಿಯ ಆಧಾರ್ ಕಾರ್ಡ್ ಇಲ್ಲದೆಯೂ ಕೂಡ ಗೃಹಲಕ್ಷ್ಮಿಗೆ ನೋಂದಣಿ ಮಾಡಲಾಗುವುದು :

ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಮಾಡಿಕೊಳ್ಳಲು, ಮನೆಯ ಯಜಮಾನಿ ಹಾಗೂ ಆಕೆಯ ಪತಿಯ ಆಧಾರ್ ಕಾರ್ಡ್, ಪಾಸ್ ಬುಕ್ ಪ್ರತಿ, ರೇಷನ್ ಕಾರ್ಡ್ ಹಾಗೂ ಮೊಬೈಲ್ ನ ಅವಶ್ಯಕತೆ ಇದೆ. ಆದರೆ ಗ್ರಾಮ ಒನ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ ಅಧಿಕಾರಿಗಳು ಹೇಳಿರುವ ಪ್ರಕಾರ ಮನೆಯ ಒಡತಿಯ ಪತಿಯ ಆಧಾರ್ ಕಾರ್ಡ್ ಅವಶ್ಯವಿಲ್ಲ. ಮನೆಯೊಡತಿಯ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ಪಾಸ್ ಬುಕ್, ಮನೆ ಯಜಮಾನಿಯ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಇದ್ದರೆ ಸಾಕು. ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಮಾಡಲಾಗುತ್ತಿದೆ. ಈಗಾಗಲೇ ಅನೇಕ ಜನರು ತಮ್ಮ ಹತ್ತಿರದ ಗ್ರಾಮ ಒನ್ ಸರ್ಕಾರಿ ಕೇಂದ್ರಗಳಿಗೆ ತೆರಳಿ, ಮೆಸೇಜ್ ಮಾಡದಿದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಮಾಡಿಸಿಕೊಳ್ಳುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯನ್ನು ಮಾಡಲು ಗ್ರಾಮವನ್ ನಲ್ಲಿ ಹೊರತುಪಡಿಸಿ ಕರ್ನಾಟಕ ಒನ್,ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಇನ್ನಿತರ ಸರ್ಕಾರಿ ಕೇಂದ್ರಗಳಲ್ಲಿ ಅರ್ಜೆಗಳನ್ನು ಸಲ್ಲಿಸಲು ಮೊದಲಿಗೆ ಮೆಸೇಜ್ ಕಳುಹಿಸುವುದು ಕಡ್ಡಾಯವಾಗಿದೆ.

ಗೃಹಲಕ್ಷ್ಮಿ ಯೋಜನೆ ನೊಂದಣಿ ವೇಳಾಪಟ್ಟಿಯನ್ನು ನೋಡುವ ವಿಧಾನ :

ಹಂತ 1: ಮೊದಲಿಗೆ ಗೃಹಲಕ್ಷ್ಮಿ ಯೋಜನೆಯ ಸೇವಾ ಸಿಂಧುವಿನ ಅಧಿಕೃತ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ. 

https://sevasindhugs1.karnataka.gov.in/gl-stat-sp/Slot_Track

s1 1

ಹಂತ 2: ನಂತರ ನಿಮ್ಮ ಪಡಿತರ ಚೀಟಿ(Ration card)ಯ 12 ಸಂಖ್ಯೆಗಳನ್ನು ನಮೂದಿಸಬೇಕು. ನಂತರ ಕೆಳಗಿನ ಭಾಗದಲ್ಲಿ ಕ್ಯಾಪ್ಚವನ್ನು ಎಂಟರ್ ಮಾಡಿ, ಸ್ಥಿತಿಯನ್ನು ಪರಿಶೀಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

s2

ಹಂತ 4: ನಂತರ ಪುಟದಲ್ಲಿ, ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಮಾಡಿಕೊಳ್ಳಲು ಸ್ಥಳ, ದಿನಾಂಕ ಹಾಗೂ ಸಮಯವನ್ನು ನೀಡಲಾಗಿರುತ್ತದೆ.

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

 

app download

ಸರ್ಕಾರದಿಂದ ಇದರ ಬಗ್ಗೆ ಯಾವುದೇ ಅಧಿಕೃತವಾಗಿ ಸೂಚನೆಯನ್ನು ಹೊರಡಿಸದಿದ್ದರು ಕೂಡ, ನಿಮಗೆ ಮೆಸೇಜಿನ ಸ್ವಿಕೃತಿ ದೊರೆಯದಿದ್ದೂ, ಸೇವಾ ಸಿಂಧುವಿನಲ್ಲಿ ನಿಮ್ಮ ವೇಳಾಪಟ್ಟಿಯನ್ನು ನೋಡಲು ಲಭ್ಯವಿಲ್ಲದಿದ್ದರೆ ನೀವು ಒಮ್ಮೆ ನಿಮ್ಮ ಹತ್ತಿರದ ಗ್ರಾಮ ಒನ್ ಗೆ ತೆರಳಿ ಗೃಹಲಕ್ಷ್ಮಿ ಯೋಜನೆಯ ನೋಂದಣಿಯನ್ನು ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಬಹುದು. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತನತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

tel share transformed

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!