ಕೊನೆಗೂ 2ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಬಂತು..! ನಿಮಗಿನ್ನೂ ಬಂದಿಲ್ವಾ..? ಹೀಗೆ ಮಾಡಿ ನಾಳೆಯೇ ಹಣ ಬರುತ್ತೆ

gruhalaxmi e1698976619220

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಜಮಾ ಆಗಿರುವ ಕುರಿತು ಮಾಹಿತಿ ತಿಳಿದುಕೊಳ್ಳೋಣ. ಮೊದಲ ಕಂತಿನ ಹಣವನ್ನು ಆಗಸ್ಟ್ 30ರಂದು ಸರ್ಕಾರ ಬಿಡುಗಡೆ ಮಾಡಿತ್ತು, ಈಗ 2ನೇ ಕಂತಿನ ಹಣವನ್ನು ಸಹ ಸರ್ಕಾರ ಡಿಬಿಟಿ ಮೂಲಕ ಬಿಡುಗಡೆ ಮಾಡಿದೆ, ಯಾವ ಜಿಲ್ಲೆಯ ಮಹಿಳೆಯರಿಗೆ ಈಗಾಗಲೇ ಹಣ ಜಮಾ ಆಗಿದೆ ಮತ್ತು ಇನ್ನು ಯಾವ ಜಿಲ್ಲೆಗಳಿಗೆ ಬಾಕಿ ಇದೇ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ, ವರದಿಯನ್ನು ಸಂಪೂರ್ಣವಾಗಿ ಓದಿ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸೆಪ್ಟೆಂಬರ್ ತಿಂಗಳ (2ನೇ ಕಂತು ) ಹಣ ಬಿಡುಗಡೆ

ದಸರಾ, ದೀಪಾವಳಿ ಹಬ್ಬದ (festival season) ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಎರಡು ಸಾವಿರ ರೂಪಾಯಿಗಳನ್ನು ಜಮಾ ಮಾಡಿ ಹಬ್ಬದ ಉಡುಗೊರೆ ನೀಡಿದೆ. ಗೃಹಲಕ್ಷ್ಮಿ ಯೋಜನೆಯ (Gruha lakshmi scheme) 2ನೇ ಕಂತಿನ ಸೆಪ್ಟೆಂಬರ್ ತಿಂಗಳ ಹಣ ಕೂಡ ಬಿಡುಗಡೆ ಆಗಿ ಬೆಳಗಾವಿ ಮತ್ತು ಮೈಸೂರು ವಿಭಾಗದ ಮಹಿಳೆಯರ ಖಾತೆಗೆ ನಿನ್ನೆಯಿಂದ ಜಮಾ ಆಗುತ್ತಿದೆ, ಈ ಕೆಳಗೆ ಕೊಟ್ಟಿರುವ ಫೋಟೋ ನೀವು ಗಮನಿಸಬಹುದು, ಹಾವೇರಿ ಜಿಲ್ಲೆಯ ಮನೆ ಯಜಮಾನಿಯ ಖಾತೆಗೆ ನಿನ್ನೆ ಸಂಜೆ ಹಣ ಜಮಾ ಆಗಿದೆ.

Screenshot 20231026 180959

ಈ ಜಿಲ್ಲೆಯ ಮನೆ ಯಜಮಾನಿಯರಿಗೆ ಹಣ ಬಿಡುಗಡೆ

ಎರಡನೇ ಕಂತಿನ ಹಣವನ್ನು (Gruha lakshmi scheme) ಕೂಡ ಈಗ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ವರ್ಗಾವಣೆ ಮಾಡಲಾಗಿದೆ (DBT). ನಿನ್ನೆಯಿಂದ ಬೆಳಗಾವಿ ಮತ್ತು ಮೈಸೂರು ವಿಭಾಗದ ಜಿಲ್ಲೆಗಳಾದ  ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರಕನ್ನಡ, ವಿಜಯಪುರ ಮಹಿಳೆಯರ ಖಾತೆಗೆ ನಿನ್ನೆಯಿಂದ ಜಮಾ ಆಗುತ್ತಿದೆ. ಅಕ್ಟೋಬರ್ 17ನೇ ತಾರೀಖಿನಿಂದ ಮಹಿಳೆಯರ ಖಾತೆಗೆ 2ನೇ ಕಂತಿನ ಹಣ ಜಮಾ ಆಗುತ್ತಿದೆ, ಇನ್ನೇನು ಹಂತ ಹಂತವಾಗಿ ಉಳಿದ ಎಲ್ಲಾ ಜಿಲ್ಲೆಗಳ ಮಹಿಳೆಯರ ಖಾತೆಗೆ ಅಕ್ಟೋಬರ್ 31ರ ಒಳಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುವುದು ಎಂದು ಸರ್ಕಾರ ತಿಳಿಸಿದೆ. ಈ ಮಾಹಿತಿಯನ್ನು ಗೃಹಲಕ್ಷ್ಮಿ ಯೋಜನೆಯ ಹಣಕ್ಕೆ ಕಾಯುತ್ತಿರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.

ಒಂದು ಕಂತಿನ ಹಣ ಇನ್ನೂ ಬಂದೆ ಇಲ್ವಾ..? ಈ ಕಚೇರಿಗೆ ಸಂಪರ್ಕಿಸಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣವನ್ನು ಆಗಸ್ಟ್ 30 ರಿಂದ ಬಿಡುಗಡೆ ಮಾಡಲಾಗಿದೆ. ಯೋಜನೆಗೆ ಒಂದು ಕೋಟಿಗೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಸುಮಾರು 82 ಲಕ್ಷ ಜನರ ಖಾತೆಗೆ ಈಗಾಗಲೇ ಮೊದಲ ಕಂತಿನ ಹಣ ವರ್ಗಾವಣೆಯಾಗಿದೆ (Money Transfer). ಅರ್ಜಿ ಸಲ್ಲಿಸಿರುವ ಬಹುತೇಕರಿಗೆ ಯೋಜನೆಯ ಹಣ ಬಂದಿದೆ. ಆದರೆ, ಇನ್ನೂ ಸಾಕಷ್ಟು ಅರ್ಜಿ ಸಲ್ಲಿಸಿರುವ (application) ಫಲಾನುಭವಿಗಳಿಗೆ ಮೊದಲ ಕಂತಿನ ಹಣ (first installment) ಬಂದಿಲ್ಲ. ಸರ್ಕಾರ ವಿಳಂಬ ಆಗುತ್ತಿರುವುದಕ್ಕೆ ಕಾರಣಗಳನ್ನು ಕೊಟ್ಟಿ ದ್ದು    ಅಕ್ಟೋಬರ್ ತಿಂಗಳ (October) ಅಂತ್ಯದೊಳಗೆ ಎಲ್ಲರ ಖಾತೆಗೂ ಹಣ ಜಮೆ ಮಾಡುವುದಾಗಿ ಭರವಸೆ ನೀಡಿದೆ.

ಇದಕ್ಕೆ ಮುಖ್ಯವಾಗಿರುವ ಕಾರಣ ಫಲಾನುಭವಿ ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳು. ನಿಮ್ಮ ಖಾತೆಯಲ್ಲಿ ಒಂದು ಸಣ್ಣ ಹೆಸರಿನ (Spelling Mistake) ವ್ಯತ್ಯಾಸವಾದರೂ ಕೂಡ ಹಣ ವರ್ಗಾವಣೆ ಆಗುವುದಿಲ್ಲ. ನೀವು ಅರ್ಜಿ ಸಲ್ಲಿಕೆ ಮಾಡುವುದಾಗ ನೀಡಿರುವ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿ ಹಾಗೂ ಆಧಾರ್ ಕಾರ್ಡ್​ನಲ್ಲಿರುವ ಮಾಹಿತಿ. ಈ ಮೂರು ಕೂಡ ಒಂದೇ ಆಗಿರಬೇಕು. ಅಂದರೇ ನಿಮ್ಮ ಹೆಸರು, ಮನೆ ವಿಳಾಸ, ನಿಮ್ಮ ಹೆಸರಿಗೆ ಇನ್ಶಲ್ ಇದ್ದರೆ ಅದು ಕೂಡ ಸರಿಯಾಗಿ ಇರಬೇಕು. ಈ ಸಮಸ್ಯೆ ಇರುವ ಕಾರಣದಿಂದಲೇ ಇನ್ನೂ 8-9 ಲಕ್ಷ ಮಂದಿಗೆ ಹಣ ವರ್ಗಾವಣೆ ಆಗಿಲ್ಲ ಅಂತ ಇಲಾಖೆ ಮಾಹಿತಿ ನೀಡಿದೆ. ಎನ್ ಪಿ ಸಿ ಐ (NPCI), ಆಧಾರ್ ಮ್ಯಾಪಿಂಗ್ (Aadhaar Mapping), ರೇಷನ್ ಕಾರ್ಡ್ (ration card correction) ನಲ್ಲಿ ಹೆಸರು ಬದಲಾವಣೆ, ಬ್ಯಾಂಕ್ ಖಾತೆಯನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳುವುದು ಈ ಮೊದಲಾದ ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕು.

ಹಣ ಜಮಾ ಆಗದೇ ಇರಲು ಇಲ್ಲಿವೆ ಪ್ರಮುಖ ಕಾರಣಗಳು

ಸುಮಾರು 6 ಲಕ್ಷ ಮಂದಿಗೆ ಬ್ಯಾಂಕ್ ಖಾತೆಯಲ್ಲಿರುವ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆ ಮಾಡುವ ವೇಳೆ ಇರುವ ಮಾಹಿತಿಯಲ್ಲಿ ಸಮಸ್ಯೆ ಇದೆಯಂತೆ. ಉದಾಹರಣೆ ಮನೆಯೊಡತಿಯ ಹೆಸರಿನಲ್ಲಿ 3-4 ಬ್ಯಾಂಕ್ ಖಾತೆಗಳಿರುತ್ತೆ. ಇದರಲ್ಲಿ ನಿಮ್ಮ ಆಧಾರ್ ಕಾರ್ಡ್​​ಗೆ ಯಾವ ಬ್ಯಾಂಕ್ ಲಿಂಕ್ ಆಗಿದೆ ಅಂತ ನೀವು ಚೆಕ್ ಮಾಡಿಕೊಳ್ಳಬೇಕು. ಬ್ಯಾಂಕ್​ಗೆ ಭೇಟಿ ನೀಡಿ ನೀವು ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲಿಯೂ ಮಾಹಿತಿ ಸಿಕ್ಕಿಲ್ಲ ಎಂದರೇ, ಮಹಿಳಾ ಮತ್ತು ಮಕ್ಕಳ ಇಲಾಖೆಯ ತಾಲೂಕು ಮಟ್ಟದ ಸಿಡಿಪಿಓ ಅಧಿಕಾರಿಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಇನ್ನೂ, ಕೆವೈಸಿ ಆಗಿರದ ಕಾರಣ 60 ಸಾವಿರ ಮಂದಿಗೆ ಹಣ ಹಾಕಲು ಸರ್ಕಾರ ಸಿದ್ಧವಾಗಿದ್ದರೂ ಹಣ ಹಾಕಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀವು ಅಂಗನವಾಡಿ ಕಾರ್ಯಕರ್ತರ ಸಂಪರ್ಕ ಮಾಡಿ ಅವರ ನೆರವು ಪಡೆದುಕೊಳ್ಳಬೇಕು. ಇದರಿಂದ ಸುಮಾರು ಮಂದಿಗೆ ಹಣ ವರ್ಗಾವಣೆ ಆಗಿಲ್ಲ. ಈ ಮೇಲಿನ ಕಾರಣಗಳಿಂದ ಒಟ್ಟಾರೆ ಸುಮಾರು 9 ಲಕ್ಷ ಮಂದಿಗೆ ಹಣ ವರ್ಗಾವಣೆ ಆಗಿಲ್ಲ. ಸಿಡಿಪಿಓ ಅಧಿಕಾರಿಯನ್ನು ಭೇಟಿ ಮಾಡಿದ ವೇಳೆ ಅವರು ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎಂದು ಚೆಕ್ ಮಾಡಿ ತಿಳಿಸುತ್ತಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆ ಸಲ್ಲಿಕೆ ಮಾಡಿದರೆ ಸಮಸ್ಯೆ ದೂರವಾಗುತ್ತದೆ.

ಈ ಮುಖ್ಯ ಮಾಹಿತಿಯನ್ನು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೂ ತಪ್ಪದೇ ಶೇರ್ ಮಾಡಿ ಮತ್ತು ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ವಾಟ್ಸಾಪ್ & ಟೆಲಿಗ್ರಾಂ ಚಾನೆಲ್ ಫಾಲೋ ಮಾಡಲು ಕೆಳಗಿನ ಬ್ಯಾನರ್ ಮೇಲೆ ಕ್ಲಿಕ್ ಮಾಡಿ

whatss

tel share transformed

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

 

 

 

 

WhatsApp Group Join Now
Telegram Group Join Now

Related Posts

One thought on “ಕೊನೆಗೂ 2ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಬಂತು..! ನಿಮಗಿನ್ನೂ ಬಂದಿಲ್ವಾ..? ಹೀಗೆ ಮಾಡಿ ನಾಳೆಯೇ ಹಣ ಬರುತ್ತೆ

  1. 2ನೇ ಕಂತಿನ ಹಣ ಬಂದಿಲ್ಲ. ಅಂಗನವಾಡಿಯಲ್ಲಿ ಕೇಳಿದರೆ ಅವರು ಎನ್ ಹೇಳುವುದಿಲ್ಲ. ಬೇರೆಕಡೆ ಹೋಗಿ ಕೇಳಿ ಎಂದು ಹೇಳುತ್ತಾರೆ

Leave a Reply

Your email address will not be published. Required fields are marked *

error: Content is protected !!