2000/- ಹಣ ಇನ್ನೂ ಬಂದಿಲ್ವಾ? ಮತ್ತೇ ಅರ್ಜಿ ಪರಿಶೀಲನೆಗೆ ಮುಂದಾದ ಸರ್ಕಾರ! ಇಲ್ಲಿದೆ ಮಾಹಿತಿ

gruhalakshmi update

ಸರ್ಕಾರ ಅದೆಷ್ಟೋ ಸಾಲ(loan) ಸೌಲಭ್ಯ, ಯೋಜನೆಗಳನ್ನು ಜಾರಿಗೊಳಿಸಿದೆ. ಹಾಗೆಯೇ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸಿ ಅದೆಷ್ಟೋ ಬಡವರ ಕಷ್ಟಕ್ಕೆ ಸಹಾಯ ಮಾಡಿದೆ. ಹೌದು ಅದಕ್ಕೆ ಉದಾಹರಣೆ ಈ ಐದು ಗ್ಯಾರಂಟಿ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಒಂದು. ಅದೇಷ್ಟೋ ಮಹಿಳೆಯರ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಿದೆ. ಹಾಗೆಯೇ ಈ ಯೋಜನೆಯಲ್ಲಿ ಇದ್ದ ಹಲವಾರು ದೋಷಗಳು ಮತ್ತು ಸಮಸ್ಯೆಗಳನ್ನು ( Problems ) ಸರಿ ಪಡಿಸಿ ಪ್ರತಿ ತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ(Bank account) ಹಣ ಜಮಾ ಆಗುವಂತೆ ಮಾಡಿದೆ. ಅದರಲ್ಲೂ ಕೂಡ ಇದೀಗ ಹೊಸ ರೂಲ್ಸ್ ಮತ್ತು ಬದಲಾವಣೆ ಮಾಡಿದೆ. ಈ ಬದಲಾವಣೆ ಗಳನ್ನು ಸರಿ ಪಡಿಸಿದರೆ ಯಾರ ಖಾತೆಗೆ ಹಣ ಜಮಾ ಆಗುದಿಲ್ಲವೋ ಅವರ ಖಾತೆಗೆ ಹಣ ಜಮಾ ಆಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಬದಲಾವಣೆ ಅಥವಾ ಅದರಲ್ಲಿರುವ ದೋಷಗಳು ಏನು? ಮತ್ತು ಏನು ಬದಲಾವಣೆ ಮಾಡಬೇಕು ? ಹಾಗೂ ಮತ್ತೆ ಗೃಹಲಕ್ಷ್ಮಿ ಯೋಜನೆ ಅವಕಾಶ ಕಲ್ಪಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಹಾಗೆಯೇ ಇದೀಗ ಸರ್ಕಾರ ಗೃಹಲಕ್ಷ್ಮಿ ಯೋಜನೆಯಲ್ಲಿ ಗೃಹಲಕ್ಷ್ಮಿ ಅದಾಲತ್‌ ( Gruha lakshmi Adalat ) ಮತ್ತು ಗೃಹಲಕ್ಷ್ಮಿ ಕ್ಯಾಂಪ್ (camp) ಗಳ ಮೂಲಕ ಲಕ್ಷಾಂತರ ಮಹಿಳೆಯರಿಗೆ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದೆ. ಇದುವರೆಗೆ ಮೂರು ಕಂತಿನ ಹಣ ಪಡೆಯದೆ ಇರುವವರು ಕೂಡ, ನಾಲ್ಕನೇ ಕಂತಿನ 2,000ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಹಾಗೂ ಇದೀಗ ಐದನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ.

whatss

ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಕೂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗದಿರಲು ಕಾರಣ ಏನು ?

ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಕೆಲವು ಮಹಿಳೆಯರ ಖಾತೆಗೆ ಜಮಾ ಆಗದಿರಲು ಕಾರಣ ಅವರು ತಮ್ಮ ಆಧಾರ್‌ ಕಾರ್ಡ್‌ ಲಿಂಕ್ (Aadhaar card) ಹಾಗೂ ಬ್ಯಾಂಕ್ ಖಾತೆಯನ್ನು (bank account link) ಮಾಡಿಕೊಂಡಿಲ್ಲ. ಹಾಗೆಯೇ ಇ ಕೆ ವೈ ಸಿ (E-KYC) ಮಾಡಿಸಿಕೊಳ್ಳದೆ ಇರುವುದು.

ಮತ್ತು ರೇಷನ್ ಕಾರ್ಡ್ (ration card correction) ನಲ್ಲಿ ತಿದ್ದುಪಡಿ ಮಾಡಿಕೊಳ್ಳದೆ ಇರುವ ಕಾರಣಕ್ಕೆ ಹಾಗೂ ಸರ್ಕಾರದ ಕಡೆಯಿಂದ ಆಗಿರುವ ತಾಂತ್ರಿಕ ಸಮಸ್ಯೆಗಳು (technical issues) ಇನ್ನೂ ಕೂಡ ಹಣ ಜಮಾ ಆಗದಿರಲು ಕಾರಣ ಎನ್ನಬಹುದು.

ಇದೀಗ ಮತ್ತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ( Apply for Gruha lakshmi scheme ) :

ಈಗಾಗಲೇ ಗೃಹಲಕ್ಷ್ಮಿ ಹಣ ಬಿಡುಗಡೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಆಗಿವೆ. ಮೊದಲ ಕಂತಿನ ಹಣ ಬಿಡುಗಡೆ ಆಗಿ ಉಳಿದ ಕಂತಿನ ಹಣ ಬಿಡುಗಡೆ ಆಗದೇ ಇರುವ ಸಮಸ್ಯೆಗಳು ಆಗಿವೆ. ಅದಕ್ಕಾಗಿ ಸರ್ಕಾರವು ಕೆಲವು ನಿಯಮಗಳನ್ನು ಜಾರಿಗೊಳಿಸಿ ಈಗ ಮತ್ತೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ.

ಹೊಸದಾಗಿ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ( Documents ) :

ನೀವು ನಿಮ್ಮ ಹೊಸ ರೇಷನ್ ಕಾರ್ಡ್ ( Ration Card ) ಪಡೆದುಕೊಂಡಿದ್ದರೆ, ಅಥವಾ ಸರ್ಕಾರದ ನಿಯಮಾನುಸಾರ ಬ್ಯಾಂಕ್ ಖಾತೆಯನ್ನು ತೆರೆದಿದ್ದರೆ ಅವುಗಳ ಮೂಲಕ ಈಗ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಹಲವು ಕಾರಣಗಳಿಂದ ಹೊಸ ಗೃಹಲಕ್ಷ್ಮಿ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಮಹಿಳೆಯರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ (Apply Gruha lakshmi scheme) :

ಈಗ ಸದ್ಯಕ್ಕೆ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಆನ್ಲೈನ್ ಪ್ರಕ್ರಿಯೆಯನ್ನು ಬಿಡುಗಡೆ ಮಾಡಿಲ್ಲ (online process). ಹಾಗಾಗಿ ಫಲಾನುಭವಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ನೀವು ನಿಮ್ಮ ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಮೊಬೈಲ್ ಸಂಖ್ಯೆ ಮುಖ್ಯ ದಾಖಲೆಗಳ ಸಹಿತ ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಕೇಂದ್ರ ಮೊದಲಾದ ಸೇವಾ ಕೇಂದ್ರಕ್ಕೆ ಹೋಗಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!