ಅಕ್ರಮ ಸಕ್ರಮದ ಈ 7000 ರೈತರಿಗೆ ಸಿಗಲಿದೆ ಸರ್ಕಾರಿ ಭೂಮಿ, ಇಲ್ಲಿದೆ ಸಂಪೂರ್ಣ ಮಾಹಿತಿ.

akrama sakrama scheme

ರೈತರೇ ನಮ್ಮ ದೇಶದ ಬೆನ್ನೆಲುಬು. ಕೆಲವೊಂದು ಕಡೆ ಜಮೀನಿಗೋಸ್ಕರ ಅಣ್ಣ ತಮ್ಮಂದಿರ ನಡುವೆಯೇ ಜಗಳಗಳಾಗುತ್ತವೆ. ಇನ್ನು ಕೆಲವು ಕಡೆ ಜಮೀನು ಇಲ್ಲದ ರೈತರು ಉಳಿಮೆ ಮಾಡಲು ಜಾಗವನ್ನು ಹುಡುಕುತ್ತಾ ಕೆಲವೊಂದಷ್ಟು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಂಡಿರುತ್ತಾರೆ. ಹಾಗೆಯೇ ನಮ್ಮ ರಾಜ್ಯದಲ್ಲಿಯೇ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವುದು ಕರಾವಳಿಯ (Coastal area) ಮಲೆನಾಡು ಭಾಗ. ಇಲ್ಲಿಯ ಜನರು ಸುಮಾರು ವರ್ಷಗಳಿಂದ ತಮ್ಮ ಜೀವನವನ್ನು ನಡೆಸಲು ಅಲ್ಲಿರುವ ಅರಣ್ಯವನ್ನು ಒತ್ತುವರಿ (Forest encroachment) ಮಾಡಿಕೊಂಡು ತೋಟಗಳಾಗಿ ಪರಿವರ್ತಸಿಕೊಂಡು ಬೆಳೆಗಳನ್ನು ಬೆಳೆದುಕೊಳ್ಳುತಿದ್ದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಏಳು ಸಾವಿರ ಜನರಿಗೆ ಜಮೀನಿನ ಹಕ್ಕುಪತ್ರ ನೀಡಲು ಮುಂದಾದ ಸರ್ಕಾರ :

ಸುಮಾರು ವರ್ಷಗಳಿಂದಲೂ ಆ ಪ್ರದೇಶದಲ್ಲಿ ಅಡಿಕೆ, ತೆಂಗು, ಬಾಳೆ, ಕಾಲುಮೆಣಸು ಹೀಗೆ ಹಲವಾರು ಬೆಳೆಗಳನ್ನು ಬೆಳೆದುಕೊಂಡು ಬಂದರೂ ಸಹ ಜಮೀನು ಅತಿಕ್ರಮಣ ಆಗಿರುವುದರಿಂದ ಅವರ ಹೆಸರಿನಲ್ಲಿ ಇಲ್ಲ. ಆದ್ದರಿಂದ ಆ ಜಾಗವನ್ನು ತಮ್ಮ ತಮ್ಮ ಹೆಸರಿಗೆ ಮಾಡಿಕೊಡಿ ಎಂದು ಎಷ್ಟೋ ಬಾರಿ ದಶಕಗಳಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಆದರೆ ಇದೀಗ ಈ ಹೋರಾಟಕ್ಕೆ ಒಂದೊಳ್ಳೆ ಸಮಯ ಕೂಡಿ ಬಂದಿದೆ. ಈ ಹೋರಾಟದ ಫಲವಾಗಿ ಇದೇ ತಿಂಗಳು ಏಳು ಸಾವಿರ ಜನರಿಗೆ ಜಮೀನಿನ ಹಕ್ಕುಪತ್ರ(Hakku pathra) ನೀಡಲು ಸರ್ಕಾರ ನಿರ್ಧರಿಸಿದೆ.

whatss

ಇನ್ನು ಇದರ ಕುರಿತು ಸುದ್ದಿಗೋಷ್ಟಿ(Press meet) ನಡಸಿ ಮಾಹಿತಿ ನೀಡಿದ ಅರಣ್ಯ ಇಲಾಖೆ ಸಚಿವರಾದ(Forest department) ಈಶ್ವರ ಖಂಡ್ರ(Ishwar khandre), ಸರ್ಕಾರವು ಹಕ್ಕುಪತ್ರ ನೀಡಲು ಕೆಲವೊಂದು ನಿಯಮಗಳನ್ನು ಮಾಡಿದೆ. ಆ ನಿಯಮದಡಿ ಇರುವ ಜಮೀನುಗಳಿಗೆ ಮಾತ್ರ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದರು. ಇನ್ನು ಕೆಲವರು ಪ್ರಭಾವಿ (influencer) ವ್ಯಕ್ತಿಗಳ ಜೊತೆ ಕೈ ಕುಲುಕಿ ಎಷ್ಟೋ ಅರಣ್ಯ ಪ್ರದೇಶವನ್ನು ಕಂದಾಯ ಪ್ರದೇಶವನ್ನಾಗಿ ಮಾಡಿಕೊಂಡಿದ್ದಾರೆ. ಈಗಾಗಲೇ ಸಾವಿರಾರು ಹೆಕ್ಟರ್ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಅದರಲ್ಲೂ ಬೆಂಗಳೂರು ಸಮೀಪದ ಕೊತ್ತುರು ಪ್ರದೇಶದಲ್ಲಿ 400 ಎಕರೆ ಅರಣ್ಯ ಒತ್ತುವರಿಯಾಗಿತ್ತು ಅದನ್ನು ಸಂರಕ್ಷಣೆ ಮಾಡಲಾಗಿದೆ. ಪ್ರಭಾವಿಗಳು ಅವರಿಗಿರುವ ಅಧಿಕಾರವನ್ನು ಬಳಸಿಕೊಂಡು ಅರಣ್ಯ ಪ್ರದೇಶವನ್ನು(Forest land) ಕಂದಾಯಭೂಮಿಯನ್ನಾಗಿ ಮಾಡಿದ್ದಾರೆ ಎಂದು ಕುದ್ದಾಗಿ ಸಚಿವ ಈಶ್ವರ ಖಂಡ್ರೆ ಅವರೇ ತಿಳಿಸಿದ್ದಾರೆ. ಇನ್ನು ಇದಕ್ಕೆ ಸಹಾಯ ಮಾಡಿದ ಪ್ರಭಾವಿ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಸಿಹಿ ಸುದ್ದಿ :

ಆದರೆ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ರೈತರಿಗೆ ಅಂದರೆ ಕೃಷಿ ಉದ್ದೇಶಕ್ಕೆ ಮಾತ್ರ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಇದರ ಅಡಿಯಲ್ಲಿ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲವರು ಅವರ ಅತ್ತಿರ ಸಾಕಷ್ಟು ಜಮೀನು ಇದ್ದರೂ ಸಹ, ಬೇರೆ ಬೇರೆ ಉದ್ದೇಶಕ್ಕಾಗಿ ಅಥವಾ ಉದ್ಯಮಕ್ಕಾಗಿ ಬಳಸುವ ಉದ್ದೇಶದಿಂದ ಒತ್ತುವರಿ ಮಾಡಿದವರೂ ಸಹ ಸೇರಿದ್ದಾರೆ.

ಹಾಗಾಗಿ ಎಲ್ಲ ಅರ್ಜಿಗಳನ್ನು (Applications) ಬಹಳ ಗಮನವಿಟ್ಟು ಪರಿಶೀಲಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಕೇವಲ ಕೃಷಿ ಉದ್ದೇಶಕ್ಕಾಗಿ(Only for agricultural purpose) ಮಾತ್ರ ಆ ಜಾಗವನ್ನು ಬಳಸುತ್ತಿದ್ದು, ಕಳೆದ ಮೂರು ನಾಲ್ಕು ತಲೆಮಾರುಗಳಿಂದ ಅದೇ ಜಮೀನು ಬಳಸುತ್ತಿದ್ದರೆ ಮಾತ್ರ ಅಂತವರಿಗೆ ಈ ಹಕ್ಕುಪತ್ರ ದೊರೆಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಹಾಗೆ ಬಹಳ ಮುಖ್ಯವಾಗಿ ಒತ್ತುವರಿ ಮಾಡಿಕೊಂಡ ಜಮೀನನ್ನು 1980ರ ಅರಣ್ಯ ರಕ್ಷಣಾಕಾಯ್ದೆಯಡಿ (Forest Conservation Act ) ಸರ್ಕಾರ ವಶಪಡೆಸಿಕೊಳ್ಳಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!