ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳ ನೌಕರರು ಮತ್ತು ಅಧಿಕಾರಿಗಳಿಗೆ ಮಹತ್ವದ ಎಚ್ಚರಿಕೆ ನೀಡಲಾಗಿದೆ. ನೌಕರರ ವೇತನ ಮತ್ತು ಸೇವಾ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್’ (HRMS) ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳದಿದ್ದಲ್ಲಿ, ಅವರ ವೇತನವನ್ನು ತಡೆಹಿಡಿಯಲಾಗುವುದು ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಸರ್ಕಾರದ ಅಧಿಕೃತ ಸುತ್ತೋಲೆ ಲೇಖನದ ಕೊನೆಯ ಹಂತದಲ್ಲಿದೆ .ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ನೋಂದಣಿ ಪ್ರಕ್ರಿಯೆಯನ್ನು ವಿವಿಧ ನೌಕರರ ಗುಂಪುಗಳಿಗೆ ಅನುಗುಣವಾಗಿ ಹಂತಹಂತವಾಗಿ ಪೂರ್ಣಗೊಳಿಸಬೇಕು. ‘ಎ’ ಗುಂಪಿನ ಅಧಿಕಾರಿಗಳಿಗೆ ಆಗಸ್ಟ್ 31, 2025 ರೊಳಗೆ, ‘ಬಿ’ ಗುಂಪಿನವರಿಗೆ ಸೆಪ್ಟೆಂಬರ್ 30, 2025 ರೊಳಗೆ, ‘ಸಿ’ ಗುಂಪಿನವರಿಗೆ ನವೆಂಬರ್ 30, 2025 ರೊಳಗೆ ಮತ್ತು ‘ಡಿ’ ಗುಂಪಿನ ನೌಕರರಿಗೆ ಜನವರಿ 31, 2025 ರೊಳಗೆ HRMS ನಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಸರ್ಕಾರದ ಉದ್ದೇಶ ಮತ್ತು ನಿರ್ದೇಶನಗಳು:
ಈ ಕ್ರಮವನ್ನು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ನೀಡಿರುವ ನಿರ್ದೇಶನಗಳ ಅನುಸಾರ ತೆಗೆದುಕೊಳ್ಳಲಾಗಿದೆ. ಫೆಬ್ರವರಿ 21, 2025 ರಂದು ಹೊರಡಿಸಲಾದ ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ-ಸಿಎಎಂ/12025 ರಲ್ಲಿ ಈ ವಿಚಾರವನ್ನು ವಿವರಿಸಲಾಗಿದೆ. ಈ ಆದೇಶದ ಮೂಲ ಉದ್ದೇಶವೆಂದರೆ, ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ಸಮಗ್ರ ಸಾಮಾಜಿಕ ಭದ್ರತೆಯ ಜಾಲವನ್ನು ಒದಗಿಸುವುದು.
ನೌಕರರು ತಮ್ಮ ಆಯ್ಕೆಯ ಬ್ಯಾಂಕಿನ ‘ಸಂಬಳ ಪ್ಯಾಕೇಜ್’ ಗಳಲ್ಲಿ ನೋಂದಾಯಿಸಿಕೊಂಡರೆ, ಅದರ ಭಾಗವಾಗಿ ಬ್ಯಾಂಕುಗಳು ಉಚಿತವಾಗಿ ಅಥವಾ ಅತ್ಯಲ್ಪ ಶುಲ್ಕದಲ್ಲಿ ನೀಡುವ ಅಪಘಾತ ವಿಮಾ ರಕ್ಷಣೆ (Accidental Insurance) ಮತ್ತು ಅವಧಿ ವಿಮಾ ರಕ್ಷಣೆ (Term Insurance) ಸೇರಿದಂತೆ ಇತರ ಹಲವು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಪಿಎಂ ಯೋಜನೆಗಳಿಗೆ ಪ್ರೋತ್ಸಾಹ:
ಇದರ ಜೊತೆಗೆ, ನೌಕರರು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ನಂತಹ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಸೇರಿಕೊಳ್ಳುವಂತೆ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಈ ಯೋಜನೆಗಳು ಅತ್ಯಲ್ಪ ಪ್ರೀಮಿಯಂನಲ್ಲಿ ಗಣನೀಯ ವಿಮಾ ರಕ್ಷಣೆಯನ್ನು ಒದಗಿಸುತ್ತವೆ. ಹೆಚ್ಚುವರಿಯಾಗಿ, ನೌಕರರು ಬ್ಯಾಂಕುಗಳ ಮೂಲಕ ಹೆಚ್ಚಿನ ವಿಮಾ ರಕ್ಷಣೆಗಾಗಿ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಗಳನ್ನು ಸಹ ತೆಗೆದುಕೊಳ್ಳಬಹುದು.
ನೋಂದಣಿಯಲ್ಲಿ ನಿಧಾನ: ಸರ್ಕಾರ ಕಾಳಜಿ ವ್ಯಕ್ತಪಡಿಸಿದೆ
ಸರ್ಕಾರಿ ಆದೇಶವನ್ನು ಹೊರಡಿಸಿದ ನಂತರ ೪೨ ತಿಂಗಳುಗಳು ಕಳೆದರೂ, HRMS ವ್ಯವಸ್ಥೆಯಲ್ಲಿ ಸಂಬಳ ಪ್ಯಾಕೇಜ್ಗಳಲ್ಲಿ ನೋಂದಾಯಿಸಿಕೊಂಡ ನೌಕರರ ಸಂಖ್ಯೆ ಕೇವಲ ಸುಮಾರು ೩ ಲಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ನೌಕರರು ಈ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ. PMSBY ಯೋಜನೆಯಡಿಯಲ್ಲಿ ಕೇವಲ ೩೨,೬೧೧ ಮತ್ತು PMJJBY ಯೋಜನೆಯಡಿಯಲ್ಲಿ ಕೇವಲ ೨೫,೩೮೬ ನೋಂದಣಿಗಳು ಮಾತ್ರ ದಾಖಲಾಗಿದ್ದು, ಇದು ಸರ್ಕಾರದ ಉದ್ದೇಶಿತ ಗುರಿಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ.
ನೌಕರ ಸಂಘಗಳಿಗೆ ಸೂಚನೆ:
ಈ ಹಿನ್ನೆಲೆಯಲ್ಲಿ, ಸರ್ಕಾರವು ಎಲ್ಲಾ ಇಲಾಖೆಗಳ ಮುಖ್ಯಸ್ಥರು ಮತ್ತು ನೌಕರರ ಸಂಘಗಳ ಅಧ್ಯಕ್ಷರಿಗೆ ಸೂಚನೆ ನೀಡಿದೆ. ತಮ್ಮ ಅಧೀನದಲ್ಲಿರುವ ಎಲ್ಲಾ ನೌಕರರು ಮತ್ತು ಸದಸ್ಯರು ತಮ್ಮ ಕುಟುಂಬದ ಭವಿಷ್ಯದ ಸುರಕ್ಷತೆಗಾಗಿ ಸಮಯಸ್ಫೂರ್ತಿಯಲ್ಲಿ HRMS ನಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರೋತ್ಸಾಹಿಸಿ ಮನವೊಲಿಸುವಂತೆ ಅವರಿಂದ ಕೋರಿಕೆಯಿದೆ. ನಿರ್ದಿಷ್ಟ್ಟ ತಾರೀಕುಗಳೊಳಗೆ ನೋಂದಣಿ ಮಾಡಿಕೊಳ್ಳದ ನೌಕರರ ವೇತನವನ್ನು ತಡೆಹಿಡಿಯಲು ಕಟ್ಟುನಿಟ್ಟಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರವು ಸ್ಪಷ್ಟಪಡಿಸಿದೆ.


ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.