ಚಿನ್ನದ ಬೆಲೆ ಇಳಿಕೆ ಮಹಿಳೆಯರಿಗೆ ಗುಡ್ ನ್ಯೂಸ್! – ಮೇ 28, 2025ರ ಚಿನ್ನದ ಹಾಗೂ ಬೆಳ್ಳಿಯ ದರದ ಸಂಪೂರ್ಣ ವಿವರ
ಭಾರತೀಯ ಮಹಿಳೆಯರ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಚಿನ್ನವು, ಹಬ್ಬ-ಹರಿದಿನ, ಮದುವೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರವಹಿಸುವ ಈ ಅಮೂಲ್ಯ ಲೋಹವು ಇದೀಗ ತನ್ನ ಬೆಲೆಯಲ್ಲಿ ದಿಢೀರ್ ಇಳಿಕೆಯನ್ನು ಕಂಡಿದೆ. ಇದು ಚಿನ್ನದ ಆಭರಣಗಳ ಖರೀದಿಗೆ ತಯಾರಿ ನಡೆಸುತ್ತಿದ್ದ ಗ್ರಾಹಕರಿಗೆ ಖುಷಿಯ ವಿಚಾರವಾಗಿದೆ. ಚಿನ್ನದ ಬೆಲೆಯ ಇತ್ತೀಚಿನ ಏರಿಕೆ, ದೇಶೀಯ ಮಾರುಕಟ್ಟೆಯ ತೀವ್ರ ಚರ್ಚೆಯ ವಿಷಯವಾಗಿತ್ತು. ಮೇ 27, 2025ರಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು ಏರಿಕೆಯಾಗಿದ್ದವು, ಆದರೆ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯನ್ನು ಕಂಡಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 28, 2025: Gold Price
ಹೌದು, ಚಿನ್ನದ ಬೆಲೆಯಲ್ಲಿ ಯಾವಾಗ ಯಾವ ರೀತಿಯ ಬದಲಾವಣೆಯಾಗುತ್ತದೆ ಎನ್ನುವುದನ್ನು ಊಹಿಸುವುದು ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಕಷ್ಟವಾಗುತ್ತಿದೆ. ಯಾಕೆಂದರೆ ಯಾವ ಕ್ಷಣದಲ್ಲಿ ಚಿನ್ನದ ದರ ಏರುತ್ತದೆ ಯಾವ ಕ್ಷಣದಲ್ಲಿ ಚಿನ್ನ ಇಳಿಮುಖವಾಗುತ್ತದೆ ಎನ್ನುವುದು ಯಾರಿಗೂ ಕೂಡ ತಿಳಿಯುತ್ತಿಲ್ಲ. ನಿನ್ನೆ ಬೆಳಗ್ಗೆ ಇಳಿಕೆ ಆಗಿದ್ದಂತ ಚಿನ್ನದ ದರ ಸಂಜೆಯೊಳಗೆ ದಿಢೀರ್ ಏರಿಕೆಯತ್ತ ಮುಖ ಮಾಡಿತ್ತು, ಆದರೆ ಇಂದು ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಹಾಗಿದ್ದರೆ, ಮೇ 28, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,934 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,747 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,310 ಆಗಿದೆ. ಒಟ್ಟಾರೆಯಾಗಿ, 16ರೂ. ನಷ್ಟು ಇಳಿಕೆಯನ್ನು ಕಂಡಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:, 99,900 ರೂ. ನಷ್ಟಿದೆ. ಒಟ್ಟಾರೆಯಾಗಿ 200 ರೂ. ನಷ್ಟು ಇಳಿಕೆಯನ್ನು ಕಂಡಿದೆ.
ಹೌದು, ಚಿನ್ನದ ಮೌಲ್ಯವು ಭಾರತೀಯರನ್ನು ಆಕರ್ಷಿಸುತ್ತಲೇ ಬಂದಿದೆ. ಇದು ಕೇವಲ ಆಭರಣಕ್ಕೆ ಮಾತ್ರವಲ್ಲ, ಸಂಪತ್ತಿನ ಸಂಕೇತವಾಗಿ, ಹಾಗೂ ಭವಿಷ್ಯದ ಭದ್ರತಾ ರೂಪದಲ್ಲಿಯೂ ಬಳಕೆಯಾಗುತ್ತಿದೆ. ಬೆಂಗಳೂರಿನಲ್ಲಿ, ಮೈಸೂರು, ಮಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಮೇ 27ರಂದು ಚಿನ್ನದ ದರ ದಾಖಲೆಯ ಮಟ್ಟಕ್ಕೆ ಏರಿದ ಬೆನ್ನಲ್ಲೇ ಜನತೆಯ ಗಮನ ಸೆಳೆಯುತ್ತಿದೆ.
ಬೆಂಗಳೂರಿನಲ್ಲಿ 27, 2025ರಂದು ಚಿನ್ನದ ಬೆಲೆಗಳು ಹೀಗಿವೆ:
24 ಕ್ಯಾರೆಟ್ (Aparanji) ಚಿನ್ನ,
1 ಗ್ರಾಂ: ₹9,813
10 ಗ್ರಾಂ: ₹98,130
100 ಗ್ರಾಂ: ₹9,81,300
22 ಕ್ಯಾರೆಟ್ ಚಿನ್ನ:
1 ಗ್ರಾಂ: ₹8,995
10 ಗ್ರಾಂ: ₹89,950
100 ಗ್ರಾಂ: ₹8,99,500
18 ಕ್ಯಾರೆಟ್ ಚಿನ್ನ:
1 ಗ್ರಾಂ: ₹7,360
10 ಗ್ರಾಂ: ₹73,600
100 ಗ್ರಾಂ: ₹7,36,000
ಬೆಳ್ಳಿಯ ಬೆಲೆಗಳು:
1 ಗ್ರಾಂ: ₹100
10 ಗ್ರಾಂ: ₹1,000
100 ಗ್ರಾಂ: ₹10,000
1 ಕೆಜಿ: ₹1,00,000
ರಾಜ್ಯದ ಪ್ರಮುಖ ನಗರಗಳ ಚಿನ್ನದ ದರಗಳು (18K / 22K / 24K) ಹೀಗಿವೆ:
ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ:
18k: ₹7,360
22k: ₹8,995
24k: ₹9,813
ಈ ಎಲ್ಲ ನಗರಗಳಲ್ಲಿ ಚಿನ್ನದ ದರಗಳು ಬೆಂಗಳೂರಿನ ಬೆಲೆ ಮಾದರಿಯನ್ನೇ ಅನುಸರಿಸುತ್ತಿವೆ.
ಸ್ಪಾಟ್ ಚಿನ್ನದ ಜಾಗತಿಕ ಮೌಲ್ಯ:
ಸ್ಪಾಟ್ ಗೋಲ್ಡ್: ಔನ್ಸ್‌ಗೆ $3,346.55 (0.3% ಇಳಿಕೆ).
US ಚಿನ್ನ ಭವಿಷ್ಯವಾಣಿ: $3,345.80 (0.6% ಇಳಿಕೆ).
ಸ್ಪಾಟ್ ಬೆಳ್ಳಿ: $33.52 (0.1% ಏರಿಕೆ)
ಚಿನ್ನದ ಬೆಲೆ ಏರಿಕೆಗೆ ಕಾರಣಗಳು ಏನು?:
ಅಂತರಾಷ್ಟ್ರೀಯ ಮಾರುಕಟ್ಟೆಯ ಅನಿಶ್ಚಿತತೆ.
US ಡಾಲರ್ ದರದ ಏರಿಕೆ.
ಭದ್ರತಾ ಹೂಡಿಕೆದಾರರ ವೃತ್ತಿಪರ ತೀರ್ಮಾನಗಳು.
ಭಾರತದಲ್ಲಿ ಹಬ್ಬ ಮತ್ತು ಮದುವೆ ಸೀಸನ್.
ಅಂತರರಾಷ್ಟ್ರೀಯ ರಾಜಕೀಯ ಗೊಂದಲಗಳು, ಸುಂಕ ಯುದ್ಧ, ಯುದ್ಧ ಭೀತಿ.
ಭಾರತದಲ್ಲಿ ಚಿನ್ನವು ಸಾಂಸ್ಕೃತಿಕ, ಆರ್ಥಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿದೆ. ಮದುವೆ, ಜಾತ್ರೆ, ಹಬ್ಬಗಳಲ್ಲಿ ಚಿನ್ನದ ಖರೀದಿ ಸಾಮಾನ್ಯ. ಭಾರತೀಯ ಮಹಿಳೆಯರಿಗೆ ಚಿನ್ನ ಎಂದರೆ ಗೌರವ, ಬದ್ಧತೆ ಮತ್ತು ಭದ್ರತೆಯ ಸಂಕೇತ. ಇತ್ತೀಚಿನ ಚಿನ್ನದ ದರ ಏರಿಕೆಯಿಂದ ಈ ಸಂಬಂಧ ಮತ್ತಷ್ಟು ದೃಢವಾಗುತ್ತಿದೆ.
ಸೂಚನೆ: ಮಾರುಕಟ್ಟೆ ಸ್ಥಿತಿಗತಿಯು ದಿನದಿಂದ ದಿನಕ್ಕೆ ಬದಲಾಗುತ್ತಿರುವುದರಿಂದ, ಚಿನ್ನ ಅಥವಾ ಬೆಳ್ಳಿ ಖರೀದಿಗೆ ಮೊದಲು ನವೀಕೃತ ದರವನ್ನು ಪರಿಶೀಲಿಸಿ. ಮುಂದಿನ ದಿನಗಳಲ್ಲಿ ದರ ಮತ್ತೆ ಏರಿಕೆಯಾಗುತ್ತದೆಯೋ ಅಥವಾ ಇಳಿಯುತ್ತದೆಯೋ ಎಂಬುದು ಅತೀ ನಿಖರವಾಗಿ ಹೇಳಲಾಗದಿದ್ದರೂ, ಪ್ರಸ್ತುತದ ಟ್ರೆಂಡ್ ಬಂಗಾರದ ಮೌಲ್ಯ ಮುಂದುವರೆಯುವ ಸಾಧ್ಯತೆಯಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.