ಭಾರತದಲ್ಲಿ ಚಿನ್ನ (Gold) ಎಂದರೆ ಕೇವಲ ಒಂದು ಲೋಹವಷ್ಟೇ ಅಲ್ಲ, ಅದು ಸಂಪ್ರದಾಯ, ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಪ್ರತೀಕವಾಗಿದೆ. ಮದುವೆ, ಹಬ್ಬ-ಹರಿದಿನಗಳು ಸೇರಿದಂತೆ ಪ್ರತಿಯೊಂದು ಕೆಲಸವೂ ಚಿನ್ನದ ಆಭರಣಗಳಿಲ್ಲದೆ ಅಪೂರ್ಣ! ಚಿನ್ನವನ್ನು ಕೇವಲ ಆಭರಣ ಮಾತ್ರವಲ್ಲ, ಬಂಡವಾಳ ಹೂಡಿಕೆಯ (investment) ಸಾಧನವಾಗಿಯೂ ಜನರು ಪರಿಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಚಿನ್ನದ ಬೆಲೆ ಏರಿಳಿತವು ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ.
ಇತ್ತೀಚೆಗೆ ಚಿನ್ನದ ಮಾರುಕಟ್ಟೆಯಲ್ಲಿ ನಿರಂತರ ಏರಿಕೆಯನ್ನು ಕಾಣುತ್ತಿದ್ದು, ಇದರಿಂದಾಗಿ ಗ್ರಾಹಕರು ಹಾಗೂ ಹೂಡಿಕೆದಾರರು ಚಿಂತಿತರಾಗಿದ್ದಾರೆ. ಅಂತರಾಷ್ಟ್ರೀಯ ಆರ್ಥಿಕ ಪರಿಸ್ಥಿತಿ, ಡಾಲರ್‌ನ (Dollar) ಮೌಲ್ಯದಲ್ಲಿ ಉಂಟಾಗುವ ಬದಲಾವಣೆ, ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ, ಭಾರತ ಸರ್ಕಾರದ ಆರ್ಥಿಕ ನೀತಿಗಳು—ಇವೆಲ್ಲವೂ ಚಿನ್ನದ ಬೆಲೆಯನ್ನು ನೇರವಾಗಿ ಪ್ರಭಾವಿಸುತ್ತವೆ. ಹೀಗಿರುವಾಗ, ಇಂದಿನ ಚಿನ್ನ ಮತ್ತು ಬೆಳ್ಳಿಯ (Gold and Silver) ದರಗಳ ಯಾವ ರೀತಿಯಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಚಿನ್ನ-ಬೆಳ್ಳಿ ಬೆಲೆ ಇಂದು, 08, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಫೆಬ್ರವರಿ 8, 2025 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹7,929 ಆಗಿದ್ದು, ಇದು ಹಿಂದಿನ ದಿನದ ದರಕ್ಕಿಂತ ₹2 ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹8,650 ಆಗಿದ್ದು, ಇದು ಹಿಂದಿನ ದಿನದ ದರಕ್ಕಿಂತ ₹2 ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,929 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,650 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6487 ಆಗಿದ್ದು ಇದು ನಿನ್ನೆಯ ಚಿನ್ನದ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ ₹2 ಇಳಿಕೆಯನ್ನು ನೋಡಬಹುದು. ಬೆಳ್ಳಿ ಬೆಲೆ 1 ಕೆಜಿ: 99,400.
ನಿನ್ನೆಯ ಚಿನ್ನದ ಬೆಲೆ ವಿವರ (ಫೆಬ್ರವರಿ 07, 2025):
ಇತ್ತೀಚಿಗೆ ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಫೆಬ್ರವರಿ 06, 2025ಕ್ಕೆ ಹೋಲಿಕೆ ಮಾಡಿದರೆ 10 ಗ್ರಾಂಗೆ ₹251 ಏರಿಕೆಯನ್ನು ನೋಡಬಹುದು.
22 ಕ್ಯಾರೆಟ್ ಚಿನ್ನ (ಪ್ರತಿ ಗ್ರಾಂಗೆ) ₹7,931
22 ಕ್ಯಾರೆಟ್ ಚಿನ್ನ (10 ಗ್ರಾಂ) – ₹79,301
24 ಕ್ಯಾರೆಟ್ ಅಪರಂಜಿ ಚಿನ್ನ (10 ಗ್ರಾಂ) – ₹86,510
100 ಗ್ರಾಂ 22 ಕ್ಯಾರೆಟ್ ಚಿನ್ನ – ₹7,93,000
100 ಗ್ರಾಂ 24 ಕ್ಯಾರೆಟ್ ಚಿನ್ನ – ₹8,65,100
18 ಕ್ಯಾರೆಟ್ ಚಿನ್ನ (10 ಗ್ರಾಂ) – ₹64,880
ಚಿನ್ನದ ಬೆಲೆ ಏರಿಕೆಯಾಗಲು ಪ್ರಮುಖ ಕಾರಣಗಳೇನು(Cause of increased gold rate)?
ಡಾಲರ್ ಸೂಚ್ಯಂಕದ ಕುಸಿತ
ಜಾಗತಿಕ ಆರ್ಥಿಕ ಬಿಕ್ಕಟ್ಟು
ಹೂಡಿಕೆದಾರರಿಂದ ಹೆಚ್ಚಿದ ಬೇಡಿಕ
ಆಭರಣ ಮಾರುಕಟ್ಟೆಯಲ್ಲಿ ಹೆಚ್ಚಿದ ಹೂಡಿಕೆ
ಬೆಳ್ಳಿಯ ಬೆಲೆಯಲ್ಲೂ ಏರಿಕೆ ಕಂಡಿದೆ :
ಬೆಳ್ಳಿಯ ದರದಲ್ಲೂ ಸಮಾನ ಸ್ಥಿತಿಗತಿ ಕಂಡು ಬಂದಿದೆ. ಇಂದು 1 ಕೆಜಿ ಬೆಳ್ಳಿಯ ಬೆಲೆ ₹99,500 ರೂ.ಗಳಾಗಿ ಏರಿಕೆಯಾಗಿದೆ.
1 ಗ್ರಾಂ ಬೆಳ್ಳಿ – ₹99.50
10 ಗ್ರಾಂ ಬೆಳ್ಳಿ – ₹995
100 ಗ್ರಾಂ ಬೆಳ್ಳಿ – ₹9,950
1 ಕೆಜಿ ಬೆಳ್ಳಿ – ₹99,500
ಹೋಲಿಕೆ ಮಾಡಿದರೆ, ಬೆಳ್ಳಿಯ ದರದಲ್ಲೂ ₹1,000 ರೂ. ಹೆಚ್ಚಾಗಿದೆ.
ವಿವಿಧ ನಗರಗಳಲ್ಲಿ ಚಿನ್ನದ ದರಗಳು:
ವಿವಿಧ ನಗರಗಳಲ್ಲಿನ 22ಕ್ಯಾರೆಟ್ ಚಿನ್ನದ ಬೆಲೆ (ಪ್ರತಿ ಗ್ರಾಂ) :
ಬೆಂಗಳೂರು – 7,930
ಚೆನ್ನೈ – 7,930
ಮುಂಬೈ – 7,930
ದೆಹಲಿ – 7,945
ಕೋಲ್ಕತಾ – 7,930
ಹೈದರಾಬಾದ್ – 7,930
ಪುಣೆ – 7,930
ವಿವಿಧ ನಗರಗಳಲ್ಲಿನ 24K ಕ್ಯಾರೆಟ್ ಚಿನ್ನದ ಬೆಲೆ (ಪ್ರತಿ ಗ್ರಾಂ) :
ಬೆಂಗಳೂರು – 8,651
ಚೆನ್ನೈ – 8,651
ಮುಂಬೈ – 8,651
ದೆಹಲಿ – 8,666
ಕೋಲ್ಕತಾ – 8,651
ಹೈದರಾಬಾದ್ – 8,651
ಪುಣೆ – 8,651
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ :
ಬೆಂಗಳೂರು – 9,950 ರೂ
ಚೆನೈ – 10,700 ರೂ
ಮುಂಬೈ – 9,950 ರೂ
ದೆಹಲಿ – 9,950 ರೂ
ಕೋಲ್ಕತಾ – 9,950 ರೂ
ಹೈದರಾಬಾದ್ – 10,700 ರೂ
ಪುಣೆ – 9,950
MCXನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು:
ಎಂಸಿಎಕ್ಸ್‌ನಲ್ಲಿ (MCX) ಚಿನ್ನ (contract ending April 2025) ಪ್ರತಿ 10 ಗ್ರಾಂಗೆ ₹84,845 ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಸ್ಥಿರಗೊಂಡಿದೆ. ಬೆಳ್ಳಿ (March 2025) 1 ಕೆಜಿಗೆ ₹95,790 ಗರಿಷ್ಠ ಮಟ್ಟವನ್ನು ದಾಖಲಿಸಿದ ನಂತರ ₹95,500 ನಷ್ಟಿದೆ.
ಸ್ಪಾಟ್ ಚಿನ್ನದ ಬೆಲೆ (Spot gold rate) :
Trading Economics ಪ್ರಕಾರ, ಶುಕ್ರವಾರ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ $2,870 ತಲುಪಿತು, ಏರಿಕೆಯ ಹೊಸ ದಾಖಲೆ ನಿರ್ಮಿಸುತ್ತಾ ಸತತ ಆರನೇ ವಾರ ಲಾಭದತ್ತ ಸಾಗುತ್ತಿದೆ. ಜಾಗತಿಕ ವ್ಯಾಪಾರ ಉದ್ವಿಗ್ನತೆ, ಆರ್ಥಿಕ ಅನಿಶ್ಚಿತತೆ ಮತ್ತು ಹೂಡಿಕೆದಾರರ ಸುರಕ್ಷಿತ ಆಸ್ತಿ ಮೆಚ್ಚುಗೆಯಿಂದ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಅಧ್ಯಕ್ಷ ಟ್ರಂಪ್ ಮೆಕ್ಸಿಕೊ ಮತ್ತು ಕೆನಡಾ (Mxico and Canada) ಮೇಲಿನ ಸುಂಕಗಳನ್ನು ಮುಂದೂಡಿದರೂ, ಹಾಗೆ ಎಲ್ಲಾ ಚೀನೀ ಆಮದುಗಳ ಮೇಲೆ ಶೇಕಡಾ 10ರ ಸುಂಕ ವಿಧಿಸಿದರು. ಈ ಬೆಳವಣಿಗೆಗಳು ಚಿನ್ನದ ಬೆಲೆಯನ್ನು ಹೆಚ್ಚಿಸುವ ಪ್ರಮುಖ ಕಾರಣಗಳಾಗಿವೆ.
ಭಾರತದಲ್ಲಿ ಚಿನ್ನಕ್ಕೆ ಸಾಂಪ್ರದಾಯಿಕ ಹಾಗೂ ಆರ್ಥಿಕ ಪ್ರಾಮುಖ್ಯತೆಯಿದ್ದು, ಬೆಲೆಯಲ್ಲಿನ ಬದಲಾವಣೆಗಳು ನೇರವಾಗಿ ಗ್ರಾಹಕರ ಖರೀದಿ ಸಾಮರ್ಥ್ಯಕ್ಕೆ ಪ್ರಭಾವ ಬೀರುತ್ತವೆ. ಸದ್ಯದ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಆದರೆ ಏಪ್ರಿಲ್ 2025ರ ನಂತರ ದರ ಇಳಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ಚಿನ್ನ ಖರೀದಿ ಮಾಡುವ ಮುನ್ನ ಮಾರುಕಟ್ಟೆಯ ಚಲನೆಗಳನ್ನು ಗಮನಿಸುವುದು ಒಳಿತು!
ಈ ಹೊಸ ನಿಯಮ ನಂತರದ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದ್ದು, ಈ ಬಗ್ಗೆ ಸಚಿವಾಲಯ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇದು ದೇಶದ ಅನೇಕ ವಾಹನ ಮಾಲೀಕರಿಗೆ ಬಹುದಿನಗಳ ನಿರೀಕ್ಷಿತ ಸಿಹಿಸುದ್ದಿಯಾಗಲಿದೆ!.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




