ಗ್ರಾಮೀಣ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳು(Free sewing machine):
ಸ್ವಾವಲಂಬನೆಗೆ ಒಂದು ಹೆಜ್ಜೆ. ಈಗಾಗಲೇ ಉಚಿತ ಹೊಲಿಗೆ ಯಂತ್ರ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿನ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯು(Department of Industrial and commercial) ಗ್ರಾಮೀಣ ಮಹಿಳೆಯ(Rural womens)ರನ್ನು ಸಬಲೀಕರಣಗೊಳಿಸಲು ಹಲವಾರು ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ ಮತ್ತು ಅವುಗಳಲ್ಲಿ ಒಂದು ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಒದಗಿಸುತ್ತದೆ, ಅವರು ತಮ್ಮದೇ ಆದ ಟೈಲರಿಂಗ್(Tailoring) ಉದ್ಯಮವನ್ನು ಪ್ರಾರಂಭಿಸಲು ಅಥವಾ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಉದ್ಯೋಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.
ಹೊಲಿಗೆ ಯಂತ್ರವು ಗ್ರಾಮೀಣ ಮಹಿಳೆಯರಿಗೆ ಪ್ರಬಲ ಸಾಧನವಾಗಿದೆ, ಹಾಗಾಗಿ ಈ ಹೊಲಿಗೆ ಯಂತ್ರ ವಿತರಣಾ ಯೋಜನೆಯು ಅವರಿಗೆ ಅತ್ಯಂತ ಉಪಯುಕ್ತವಾಗುತ್ತದೆ. ಈ ಯೋಜನೆಯ ಲಾಭವನ್ನು ಪಡೆದು ಮಹಿಳೆಯರು ತಮಗಾಗಿ, ತಮ್ಮ ಕುಟುಂಬಗಳು ಮತ್ತು ಅವರ ಸಮುದಾಯಗಳಿಗೆ ಬಟ್ಟೆಗಳನ್ನು ಹೊಲಿಯುವ ಮೂಲಕ, ಮಹಿಳೆಯರು ಜೀವನೋಪಾಯವನ್ನು ಗಳಿಸಬಹುದು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಬಹುದು. ತಮ್ಮದೆಯಾದ ಸ್ವಂತ ಟೈಲರಿಂಗ್ ಉದ್ಯಮಗಳನ್ನು ಪ್ರಾರಂಭಿಸಬಹುದು, ಅವರ ಕೆಲಸ ಮತ್ತು ಆದಾಯದ ಮೇಲೆ ಹಿಡಿತ ಸಾಧಿಸಬಹುದು. ಮತ್ತು ಬಟ್ಟೆಗಳನ್ನು ಹೊಲಿಯಲು ಕಲಿಯುವುದು ವೈಯಕ್ತಿಕ ಅಥವಾ ವೃತ್ತಿಪರ ಉದ್ದೇಶಗಳಿಗಾಗಿ ಬಳಸಬಹುದಾದ ಕೌಶಲ್ಯಗಳೊಂದಿಗೆ ಮಹಿಳೆಯರನ್ನು ಸಜ್ಜುಗೊಳಿಸಬಹುದು. ಇದಲ್ಲದೆ ಆದಾಯದ ಮೂಲವನ್ನು ಹೊಂದಿರುವುದು ಮತ್ತು ಕುಟುಂಬದ ಆರ್ಥಿಕತೆಗೆ ಕೊಡುಗೆ ನೀಡುವುದು ಸಮುದಾಯದೊಳಗೆ ಮಹಿಳೆಯ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಬಹುದು.
ಈ ಕಾರ್ಯಕ್ರಮವು ಕರ್ನಾಟಕ ಸಮೇತ, ಭಾರತದ ಅನೇಕ ಭಾಗಗಳಲ್ಲಿ ಯಶಸ್ವಿಯಾಗಿದೆ ಮತ್ತು ಇದು ಅನೇಕ ಗ್ರಾಮೀಣ ಮಹಿಳೆಯರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಹಾಸನ, ಚಿಕ್ಕಬಳ್ಳಾಪುರ, ಚಾಮರಾಜನಗರ, ಗದಗ, ಯಾದಗಿರಿ, ಬೆಂಗಳೂರು, ಬೀದರ, ರಾಯಚೂರು, ಮಂಡ್ಯ, ಚಿಕ್ಕಮಗಳೂರು, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಈಗ ಕೋಲಾರ ಜಿಲ್ಲೆಯಲ್ಲಿಯೂ ಅರ್ಜಿ ಆಹ್ವಾನಿಸಲಾಗಿದೆ. ಈ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಹತೆಗಳು ಯಾವುವು? ಯಂತ್ರ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯವಾದ ದಾಖಲೆಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯು ಈ ಕೆಳಗಿನಂತಿದೆ:
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಹತೆಗಳು ಯಾವುವು?.
ಈ ಯೋಜನೆಯಡಿ, ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಹೊರತುಪಡಿಸಿ, ಹೊಲಿಗೆ ವೃತ್ತಿ(Tailoring) ಯಲ್ಲಿ ತೊಡಗಿರುವವರು ಆನ್ಲೈನ್ (Online) ಅರ್ಜಿ ಸಲ್ಲಿಸಬಹುದು.
ಅಗತ್ಯ ದಾಖಲೆಗಳು(Documents):
ಪಾಸ್‌ಪೋರ್ಟ್ ಗಾತ್ರದ ಫೋಟೋ(Passport size photo)
ಜನ್ಮ ದಿನಾಂಕವನ್ನು ದೃಢೀಕರಿಸಿದ ದಾಖಲೆಗಳು
ಉದಾಹರಣೆಗೆ: SSLC ಮಾರ್ಕ್ಸ್ ಕಾರ್ಡ್/ ವರ್ಗಾವಣೆ ಪ್ರಮಾಣ ಪತ್ರ(Transfer Certificate) /ಇನ್ನಿತರೇ ಪ್ರಮಾಣಪತ್ರ.
ಶೈಕ್ಷಣಿಕ ಅರ್ಹತೆಯ ದಾಖಲೆಗಳು (ವರ್ಗಾವಣೆ ಪ್ರಮಾಣ ಪತ್ರ/ ಮಾರ್ಕ್ಸ್ ಕಾರ್ಡ್ )
ಜಾತಿ ಪ್ರಮಾಣ ಪತ್ರ (SC/ST/ ಅಲ್ಪಸಂಖ್ಯಾತರಿಗೆ ಮಾತ್ರ )
ಪಡೆತರ ಚೀಟಿ
ಸಂಬಂಧಿತ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಟೈಲರ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದಾಗಿ
ದೃಡೀಕರಣ.
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಆನ್ಲೈನ್ ಲಿಂಕ್ ಇಲ್ಲಿದೆ : https://sevasindhuservices.karnataka.gov.in/login.do?
ಆನ್ಲೈನ್ ಅರ್ಜಿ ಸಲ್ಲಿಸಲು 15-01-2024 ಕೊನೆಯ ದಿನಾಂಕವಾಗಿರುತ್ತದೆ.
ಈ ಯೋಜನೆಯು ಹೊಲಿಗೆಗಾರರಿಗೆ ಒಂದು ಉತ್ತಮ ಅವಕಾಶವನ್ನು ನೀಡುತ್ತದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಿ, ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಮತ್ತು ನಿಮ್ಮ ವೃತ್ತಿಜೀವನವನ್ನು ಬೆಳೆಸಿ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




