ಗುಡ್ ನ್ಯೂಸ್ – 3 ತಿಂಗಳ ಉಚಿತ ಕಂಪ್ಯೂಟರ್ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ. ಹೀಗೆ ಅರ್ಜಿ ಹಾಕಿ

free computer coaching

ಇದೀಗ ಯುವಕ ಯುವತಿಯರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಕೆನಾರಾ ಬ್ಯಾಂಕ್ ( Canara Bank ) ಸಂಸ್ಥೆಯ ವತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ( Free Computer Teaching ) ನೀಡಲು ಮುಂದಾಗಿದೆ. ಅದಕ್ಕಾಗಿ ಅರ್ಜಿಯನ್ನು ಕೂಡ ಆಹ್ವಾನಿಸಿದೆ. ಈ ಒಂದು ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯಲು ಯಾರು ಅರ್ಹರು?, ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳ ವಿವರ ಮುಂತಾದ ಮಾಹಿತಿಯ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೆನರಾ ಬ್ಯಾಂಕ್ ವತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣ :

ಕೆನರಾ ಬ್ಯಾಂಕ್‌ ಸಂಸ್ಥೆಯು ಮುಖ್ಯವಾಗಿ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಆಯೋಜಿಸಿ, ತರಬೇತಿ ಪಡೆಯಲು ಅರ್ಜಿಯನ್ನು ಆಹ್ವಾನಿಸಿದ್ದಾರೆ.

ಮುಖ್ಯವಾಗಿ ಈ ಕಂಪ್ಯೂಟರ್ ತರಬೇತಿಯಲ್ಲಿ ತರಬೇತುದಾರರಿಗೆ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್ ( Computer Office Administration ) ಹಾಗೂ ಹಾರ್ಡ್‌ವೇರ್ ( Hardware ) ಮತ್ತು ನೆಟ್‌ವರ್ಕ್‌ ಅಡ್ಮಿನಿಸ್ಟ್ರೇಷನ್ ನ ( Network Administration ) ಬಗ್ಗೆ ತರಗತಿ ನೀಡಲಾಗುತ್ತದೆ. ಇದರಿಂದ ಅವರ ಕಂಪ್ಯೂಟರ್ ನ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಅವರು ಮುಂದೆ ಯಾವುದೇ ಕೆಲಸಗಳಿಗೆ ಸೇರಿಕೊಳ್ಳಲು ಉಪಯೋಗವಾಗುತ್ತದೆ.

whatss

ಉಚಿತ ಕಂಪ್ಯೂಟರ್ ತರಬೇತಿ ದಿನಾಂಕ ( Date ) :

ಈ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿಯು ಜನವರಿ 01, 2024 ರಿಂದ ಆರಂಭವಾಗಿ ಮೂರು ತಿಂಗಳುಗಳ ಕಾಲ ತರಬೇತಿ ಪಡೆಯಲು ಅವಕಾಶ ವಿರುತ್ತದೆ. ಮೂರು ತಿಂಗಳುಗಳ ಒಳಗೆ ಅವರಿಗೆ ಬೇಕಾದ ಕಂಪ್ಯೂಟರ್ ನ ಎಲ್ಲ ಮಾಹಿತಿ ಹಾಗೂ ಜ್ಞಾನವನ್ನು ನೀಡುವ ಉದ್ದೇಶ ಕ್ಯಾನರಾ ಬ್ಯಾಂಕ್ ನೀಡಲಿದೆ.

ಉಚಿತ ಕಂಪ್ಯೂಟರ್ ತರಬೇತಿ ಪಡೆಯಲು ಇರಬೇಕಾದ ಅರ್ಹತೆಗಳ ( Qualifications ) ವಿವರ :

ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ ಪಡೆಯಲು
ಅಭ್ಯರ್ಥಿಗಳು ಕನಿಷ್ಠ ಎಸ್‌ಎಸ್‌ಎಲ್‌ಸಿ ( SSLC ) ಉತ್ತೀರ್ಣರಾಗಿರಬೇಕು. ನಿರುದ್ಯೋಗ ಯುವಕ ಯುವತಿಯರು ಈ ತರಬೇತಿ ಪಡೆಯಲು ಪಡೆಯಲು ಆಸಕ್ತಿ ಹೊಂದಿದ್ದರೆ ಅದಕ್ಕೆ ನೀಡಬೇಕಾದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಪಿಯುಸಿ, ಪದವಿ, ಹಾಗೂ ಡಿಪ್ಲೊಮ ಪಾಸ್‌ ಮಾಡಿದವರಿಗೆ ಮೊದಲ ಈ ತರಬೇತಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.
ಹಾಗೂ ವಯಸ್ಸು ಕನಿಷ್ಠ 18 ರಿಂದ 27 ವರ್ಷದೊಳಗಿರಬೇಕು.
ಪರಿಶಿಷ್ಟ ಜಾತಿ / ವರ್ಗದವರಿಗೆ ಗರಿಷ್ಠ ವಯಸ್ಸು 30 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

tel share transformed

ತರಬೇತಿ ಪಡೆಯಲು ಅಭ್ಯರ್ಥಿಗಳು ಅನುಸರಿಸಬೇಕಾದ ವಿವರಗಳು :

ಈ ಒಂದು ಉಚಿತ ತರಬೇತಿ ಪಡೆಯಲು ಆಸಕ್ತರು ಪ್ರತಿದಿನ ಬೆಳಗ್ಗೆ 11 ಗಂಟೆಗೆ ಮಲ್ಲೇಶ್ವರದ ಕೆನರಾ ಬ್ಯಾಂಕ್‌ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ನಡೆಯಲಿರುವ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಅಥವಾ ಯಾವುದೇ ಇತರೆ ಹೆಚ್ಚಿನ ವಿವರಗಳಿಗೆ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, ಮಲ್ಲೇಶ್ವರ, ಬೆಂಗಳೂರು ಸಂರ್ಕಿಸಬಹುದು.
ದೂರವಾಣಿ ಸಂಖ್ಯೆ – 23440036 / 23463580 / 9448538107 ಕ್ಕೆ ಕರೆ ಮಾಡಿ ಸಂಪರ್ಕಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!