ಕರ್ನಾಟಕ ಸರ್ಕಾರದ (state government) ಸಮಾಜ ಕಲ್ಯಾಣ ಇಲಾಖೆಯು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ(SC-ST) ವಿದ್ಯಾರ್ಥಿಗಳಿಗೆ ವಸತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣವನ್ನು ಕೊಡುತ್ತದೆ. ಅಷ್ಟೇ ಅಲ್ಲದೆ ಇದರೊಟ್ಟಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ UPSC/KAS ತರಬೇತಿಯನ್ನು ಕೂಡಾ ವಿದ್ಯಾರ್ಥಿಗಳಿಗೆ ಓದೀಗಿಸಿ ಕೊಡುವ ಉದ್ದೇಶ ಹೊಂದಿರುವುದರಿಂದ ಸಂಯೋಜಿತ ಪದವಿಯು ವಿದ್ಯಾರ್ಥಿಗಳಿಗೆ ಈ ಪ್ರಯೋಜನವನ್ನು ಪಡೆದಕೊಳ್ಳುವ ಅವಕಾಶವನ್ನು ನೀಡುತ್ತಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಲು SC/ST ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಇದೇ ನವೆಂಬರ್ 29, 2023ರ ಒಳಗಾಗಿ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಿದೆ. ಈ ಪ್ರಯೋಜನವನ್ನು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದ ವರೆಗೂ ಕಾಯದೆ ನಿಗದಿ ಪಡಿಸಿದ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪದವಿಯೊಂದಿಗೆ ಉಚಿತ ವಸತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ :
ಈ ಯೋಜನೆಯ ಸೌಲಭ್ಯದ ಬಗ್ಗೆ ತಿಳಿಯುವುದಾದರೆ, ವಿಧ್ಯಾರ್ಥಿಗಳು ತಮ್ಮ ಪದವಿಯನ್ನು ಪೂರ್ಣಗೊಳಿಸುವವರೆಗೂ ಊಟ, ವಸತಿ, ಸಮವಸ್ತ್ರದೊಂದಿಗೆ ನಾಗರಿಕ ಸೇವಾ ಪರೀಕ್ಷೆಗಲಾದ ಸ್ಪರ್ಧಾತ್ಮಕ ಪರೀಕ್ಷೆಗಳ UPSC/KAS, ಬ್ಯಾಂಕಿಂಗ್, ಎಸ್‌ಎಸ್‌ಸಿ, ಆರ್ಆರ್‌ಬಿ, ಗ್ರೂಪ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಇಲಾಖೆಯಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುತ್ತದೆ. ಈ ಹಿಂದೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಈ ಅವಕಾಶವನ್ನು ಪಡೆದವರಿಗೆ ಅರ್ಜಿಯನ್ನು ಪುನಃ ಹಾಕುವ ಅವಕಾಶ ಇರುವುದಿಲ್ಲ. ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನು, ಅವರು ಕೋಚಿಂಗ್ ಪಡೆಯುವ ನಗರ/ ಸಿಟಿಗಳ ಆಧಾರದಲ್ಲಿ ಕೆಳಗಿನಂತೆ ನೀಡಲಾಗುತ್ತದೆ:
ದೆಹಲಿ : 10,000
ಹೈದೆರಾಬಾದ್ : ರೂ.8000
ಕರ್ನಾಟಕ : ರೂ.6000
ಚೆನ್ನೈ : ರೂ.5000
ಈ ಪ್ರಯೋಜನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಮಿತ್ರ 24×7 ಸಹಾಯವಾಣಿ 9482300400 ಸಂಪರ್ಕಿಸಿ ಅಥವಾ X ಖಾತೆಗೆ ಭೇಟಿ ನೀಡಿ : @[email protected]
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಅರ್ಜಿಯನ್ನು ಸಲ್ಲಿಸುವ ವಿಧಾನ ಹಾಗೂ ಕೊನೆಯ ದಿನಾಂಕ :
ಹಂತ 1: ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಹಂತ 2: ನಂತರ ಸ್ಟೂಡೆಂಟ್ ಲಾಗಿನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ ನಿಮ್ಮ ಸ್ಟೂಡೆಂಟ್ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಂಡು, ಕೇಳಲಾದ ಮಾಹಿತಿಗಳನ್ನು ಎಂಟರ್ ಮಾಡಿ ರಿಜಿಸ್ಟ್ರೇಷನ್ ಅನ್ನು ಮಾಡಿಕೊಳ್ಳಿ.
ಹಂತ 4: ಮುಂದುವರೆದು ನೀವು ಪಡೆಯಬೇಕೆಂದಿರುವ ತರಬೇತಿಯ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ
ಇದು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶ ಎಂದು ಹೇಳಬಹುದಾಗಿದೆ. ಹಾಗಾಗಿ ಇದೇ ತಿಂಗಳ 29ರೊಳಗೆ ಅರ್ಜಿಯನ್ನು ಸಲ್ಲಿಸಿ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಯನ್ನು ನೀವು ತಿಳಿದ ಮೇಲೆ ತಡ ಮಾಡದೆ ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ ಮಾಹಿತಿಯನ್ನು ತಲಿಪಿಸಿ, ಧನ್ಯವಾದಗಳು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
- ಡಿಸೆಂಬರ್ 31ರಿಂದ ಈ ಜನರ ಗೂಗಲ್ ಪೇ, ಫೋನ್ ಪೇ & ಪೆಟಿಎಂ ಖಾತೆಗಳು ಬಂದ್..!
- ಗೃಹಲಕ್ಷ್ಮಿ 3ನೇ ಕಂತಿನ 2000/- ರೂ. ಹಣ ಬಿಡುಗಡೆ, ಈ ಮಹಿಳೆಯರಿಗೆ ಮೊದಲು ಜಮಾ
- ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ Apply Now
- ಸರ್ಕಾರದಿಂದ ಅಂಗವಿಕಲರಿಗೆ ಉಚಿತ ‘ದ್ವಿಚಕ್ರ’ ವಾಹನ ವಿತರಣೆಗೆ ಸಜ್ಜು
- Marriage Registration: ವಿವಾಹ ನೋಂದಣಿಗೆ ನವದಂಪತಿ ಸೇರಿ ಈ 3 ಜನರ ಬಯೋಮೆಟ್ರಿಕ್ ಕಡ್ಡಾಯ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ


Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





