Picsart 25 10 05 22 30 58 409 scaled

Filter Water: ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ? ಎಚ್ಚರಿಕೆ.!

Categories:
WhatsApp Group Telegram Group

ಇತ್ತೀಚಿನ ಕಾಲದಲ್ಲಿ ನೀರು ಎಂದರೆ ಕೇವಲ ಒಂದು ಮೂಲಭೂತ ಅವಶ್ಯಕತೆ ಅಲ್ಲ, ಅದು ಜೀವನದ ಅಮೂಲ್ಯ ಸಂಪನ್ಮೂಲವಾಗಿದೆ. ಹವಾಮಾನ ಬದಲಾವಣೆ, ಜನಸಂಖ್ಯೆ ಹೆಚ್ಚಳ ಮತ್ತು ನೀರಿನ ಮೂಲಗಳ ಕುಗ್ಗುವಿಕೆಯ ನಡುವೆ, ಪ್ರತಿ ಹನಿ ನೀರಿನ ಮಹತ್ವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದಿನ ನಗರ ಜೀವನದಲ್ಲಿ ನೀರು ಉಚಿತವಾಗಿ ಸಿಗುವುದು ಅಪರೂಪದ ಸಂಗತಿಯಾಗಿದ್ದು, ನಾವು ಅದನ್ನು ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಒಂದು ಕಾಲದಲ್ಲಿ ಬಾವಿ ಅಥವಾ ನದಿ ನೀರನ್ನು ನೇರವಾಗಿ ಕುಡಿಯುತ್ತಿದ್ದ ಹಳ್ಳಿಗಳಂತೆಯೇ ಇಂದು ನಗರ ಪ್ರದೇಶಗಳಲ್ಲೂ ಶುದ್ಧ ಕುಡಿಯುವ ನೀರಿನ ಅಗತ್ಯ ತೀವ್ರವಾಗಿ ಹೆಚ್ಚುತ್ತಿದೆ. ಫಿಲ್ಟರ್ ಮಾಡಿದ ನೀರು, ಕ್ಯಾನ್ ವಾಟರ್ ಮತ್ತು ಬಾಟಲ್ ವಾಟರ್ ಎಂಬುವುವು ದಿನನಿತ್ಯದ ಭಾಗವಾಗಿವೆ. .ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನಗರ ಪ್ರದೇಶಗಳಲ್ಲಿ ಪುರಸಭೆ, ಪಟ್ಟಣಸಭೆ ಮತ್ತು ನಗರಸಭೆಗಳ ಮೂಲಕ ನಿಗದಿತ ದಿನಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ. ಕೆಲವೊಮ್ಮೆ ದಿನವೂ, ಕೆಲವು ಕಡೆ ವಾರದಲ್ಲಿ ಮೂರು ಅಥವಾ ನಾಲ್ಕು ಬಾರಿ ಮಾತ್ರ ನೀರು ಬರುತ್ತದೆ. ಇಂತಹ ಸಂದರ್ಭಗಳಲ್ಲಿ ಮನೆಮಂದಿ ಮುಂಚಿತವಾಗಿ ನೀರನ್ನು ಸಂಗ್ರಹಿಸಿಡುವುದು ಸಹಜ. ದೊಡ್ಡ ಡ್ರಮ್‌ಗಳು, ಮಡಕೆಗಳು, ಪ್ಲಾಸ್ಟಿಕ್ ಬಾಟಲಿಗಳು ಅಥವಾ ಸ್ಟೀಲ್ ಧಾರಕಗಳಲ್ಲಿ ನೀರು ಇಟ್ಟುಕೊಳ್ಳಲಾಗುತ್ತದೆ. ಅಡುಗೆ, ಕುಡಿಯುವ ಮತ್ತು ಶೌಚ ಕಾರ್ಯಗಳಿಗಾಗಿ ಈ ನೀರಿನ ಮೇಲೆ ಸಂಪೂರ್ಣ ಅವಲಂಬನೆ ಇರುತ್ತದೆ. ವಿಶೇಷವಾಗಿ ಗೃಹಿಣಿಯರು ನೀರಿನ ಅಗತ್ಯವನ್ನು ಅಂದಾಜು ಮಾಡಿ ಹೆಚ್ಚು ಪ್ರಮಾಣದಲ್ಲಿ ನೀರು ಸಂಗ್ರಹಿಸುತ್ತಾರೆ. ಕೆಲವೊಮ್ಮೆ ಅತಿಥಿಗಳು ಬಂದಾಗ ಅಥವಾ ನಿರೀಕ್ಷೆಗಿಂತ ಹೆಚ್ಚು ನೀರು ಬೇಕಾದ ಸಂದರ್ಭಗಳಲ್ಲಿ ಈ ಸಂಗ್ರಹಿತ ನೀರೇ ಸಹಾಯವಾಗುತ್ತದೆ.

ಆದರೆ, ಒಂದು ಮಹತ್ವದ ಪ್ರಶ್ನೆ ಅನೇಕ ಬಾರಿ ನಿರ್ಲಕ್ಷ್ಯಗೊಳ್ಳುತ್ತದೆ, ಮನೆಯಲ್ಲಿ ಸಂಗ್ರಹಿಸಿದ ನೀರನ್ನು ಎಷ್ಟು ದಿನಗಳವರೆಗೆ ಸುರಕ್ಷಿತವಾಗಿ ಬಳಸಬಹುದು? ನೀರನ್ನು ಹೆಚ್ಚು ಸಮಯ ಸಂಗ್ರಹಿಸುವುದರಿಂದ ಅದರ ಗುಣಮಟ್ಟದಲ್ಲಿ ಬದಲಾವಣೆಗಳು ಸಂಭವಿಸುತ್ತವೆ ಎಂಬುದು ಅನೇಕರು ತಿಳಿದಿಲ್ಲ. ಹಾಗಾದರೆ ನೀರನ್ನು ಹೆಚ್ಚು ಸಮಯ ಸಂಗ್ರಹಿಸುವುದರಿಂದ ಅದರ ಗುಣಮಟ್ಟದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸಂಗ್ರಹಿತ ನೀರಿನ್ನು ಎಷ್ಟು ದಿನಗಳವರೆಗೆ ಬಳಸಬಹುದು?: 

ಕೇವಲ 12 ಗಂಟೆಗಳ ನಂತರ ಸಂಗ್ರಹಿತ ನೀರು ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್‌ನೊಂದಿಗೆ ಮಿಶ್ರಣಗೊಳ್ಳಲು ಆರಂಭಿಸುತ್ತದೆ. ಇದರಿಂದ ನೀರಿನ pH ಮಟ್ಟ (ಆಮ್ಲೀಯತೆ) ನಿಧಾನವಾಗಿ ಕಡಿಮೆಯಾಗುತ್ತದೆ.
ಸುಮಾರು 72 ಗಂಟೆಗಳ (3 ದಿನಗಳ) ನಂತರ ನೀರಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಶುರುವಾಗುತ್ತವೆ. ಕೆಲವೊಮ್ಮೆ ಪಾಚಿ (Algae) ಸಹ ಮೂಡಬಹುದು. ಈ ಹಂತದ ನಂತರ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ.
ಯಾವುದೇ ಪ್ಲಾಸ್ಟಿಕ್ ಡ್ರಮ್, ಬಾಟಲಿ ಅಥವಾ ಮಡಕೆಯಲ್ಲಿಯೂ ನೀರನ್ನು ತುಂಬಿದ್ದರೂ, ಹೆಚ್ಚು ದಿನ ಇಟ್ಟುಬಿಟ್ಟರೆ ಅದರ ಗುಣಮಟ್ಟ ಕುಸಿಯುತ್ತದೆ.

ಸೂರ್ಯನ ಬೆಳಕಿನ ಪ್ರಭಾವ:

ಸಂಗ್ರಹಿತ ನೀರಿನ ಮೇಲೆ ನೇರ ಸೂರ್ಯನ ಕಿರಣಗಳು ಬಿದ್ದರೆ ಬ್ಯಾಕ್ಟೀರಿಯಾ ಮತ್ತು ಶೈವಲಗಳ ಬೆಳವಣಿಗೆ ವೇಗಗೊಳ್ಳುತ್ತದೆ. ಹೀಗಾಗಿ ನೀರಿನ ಬಣ್ಣ ಬದಲಾಗುವುದು ಅಥವಾ ಹಸಿರು ಅಂಶಗಳು ಕಾಣಿಸಿಕೊಳ್ಳುತ್ತವೆ. ಇಂತಹ ನೀರನ್ನು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ನೀರು ಸಂಗ್ರಹದ ಪ್ರಕಾರವೂ ಮಹತ್ವದ್ದು:

ಫಿಲ್ಟರ್ ಮಾಡಿದ ನೀರು,  ಸ್ವಲ್ಪ ಹೆಚ್ಚು ಕಾಲ ಶುದ್ಧವಾಗಿರುತ್ತದೆ.
ಕ್ಯಾನ್ ವಾಟರ್,  ಹೈಜೀನಿಕ್ ಪ್ಯಾಕೇಜಿಂಗ್‌ನಿಂದಾಗಿ ದೀರ್ಘಾವಧಿಯ ಶೆಲ್ಫ್ ಲೈಫ್ ಹೊಂದಿದೆ.
ಪ್ಲಾಸ್ಟಿಕ್ ಡ್ರಮ್ ಮತ್ತು ಬಾಟಲ್ ನೀರು, ಬೇಗ ಕೆಡುವ ಸಾಧ್ಯತೆ ಹೆಚ್ಚು, ವಿಶೇಷವಾಗಿ ಬಿಸಿ ವಾತಾವರಣದಲ್ಲಿ.

ಮಳೆನೀರು ಸಂಗ್ರಹದ ವಿಶೇಷತೆ ಏನು?:

ಸಮರ್ಪಕವಾಗಿ ಶುದ್ಧಗೊಳಿಸಿದ ಟ್ಯಾಂಕ್ ಅಥವಾ ಸಂಗ್ರಹ ತೊಟ್ಟಿಯಲ್ಲಿ ಮಳೆನೀರನ್ನು ಸಂಗ್ರಹಿಸಿದರೆ ಸುಮಾರು 6 ತಿಂಗಳವರೆಗೆ ಬಳಸುವಂತಾಗುತ್ತದೆ. ಆದರೆ ಇದು ಸಂಪೂರ್ಣವಾಗಿ ಕೊಯ್ದು ವ್ಯವಸ್ಥೆಯ ಗುಣಮಟ್ಟ ಹಾಗೂ ತೊಟ್ಟಿಯ ಸ್ವಚ್ಛತೆಯ ಮೇಲೆ ಅವಲಂಬಿತವಾಗಿರುತ್ತದೆ.

ಗಮನಿಸಿ:
ನೀರನ್ನು ದಿನನಿತ್ಯ ತಾಜಾ ಸ್ಥಿತಿಯಲ್ಲಿ ಉಪಯೋಗಿಸುವುದು ಅತ್ಯಂತ ಸುರಕ್ಷಿತ.
ಸಂಗ್ರಹಿತ ನೀರನ್ನು ಮೂರೇ ದಿನಗಳ ಒಳಗೆ ಬಳಸಿಬಿಡುವುದು ಉತ್ತಮ.
ನೇರ ಸೂರ್ಯನ ಬೆಳಕಿನಿಂದ ನೀರನ್ನು ದೂರ ಇಡಿ ಮತ್ತು ಸಂಗ್ರಹಿಸುವ ಪಾತ್ರೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

ಒಟ್ಟಾರೆಯಾಗಿ, ನೀರನ್ನು ಸಂಗ್ರಹಿಸುವುದು ಅಗತ್ಯವಾದರೂ, ಅದರ ಗುಣಮಟ್ಟವನ್ನು ಕಾಪಾಡುವುದು ಅದಕ್ಕಿಂತಲೂ ಮುಖ್ಯ. 72 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿದ ನೀರನ್ನು ಕುಡಿಯುವುದನ್ನು ತಪ್ಪಿಸುವುದು ಒಳಿತು. ಮಳೆನೀರು ಕೊಯ್ದು ವ್ಯವಸ್ಥೆ ಇದ್ದರೆ ಸರಿಯಾದ ಶುದ್ಧತಾ ಕ್ರಮಗಳಿಂದ ನೀರನ್ನು ದೀರ್ಘಾವಧಿಗೆ ಬಳಸಿ ನೀರಿನ ಕೊರತೆಯನ್ನು ತಡೆಗಟ್ಟಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories