FD ಯಲ್ಲಿ ಹಣ ಹೂಡಲು ಯೋಚಿಸುತ್ತಿದ್ದೀರಾ? ಇದು ಸರಿಯಾದ ಸಮಯವೇ ಎಂದು ಅನುಮಾನವಿದೆಯಾ?
ಈಗ FD ಯಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶ! ಬ್ಯಾಂಕ್‌ಗಳಲ್ಲಿ FD ಮಾಡಲು ವಿಳಂಬವಾದರೆ, ಬಡ್ಡಿದರಗಳು ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಉತ್ತಮ ಬಡ್ಡಿದರವನ್ನು ಪಡೆಯಲು ತಕ್ಷಣವೇ ನಿರ್ಧಾರ ಕೈಗೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೋ ದರ ಯೋಜನೆಯಲ್ಲಿ ಪ್ರಮುಖ ಬದಲಾವಣೆ ಮಾಡಿದ್ದು, ಇದು ಸಾಮಾನ್ಯ ಜನರಿಗೆ ಹಾಗೂ ಹೂಡಿಕೆದಾರರಿಗೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆ ಇದೆ. ರೆಪೊ ದರ (Repo rate) ಇಳಿಕೆಯಿಂದಾಗಿ ಸಾಲಗಾರರಿಗೆ ಸಿಹಿಸುದ್ದಿಯಾಗಿದ್ದರೂ, ಭದ್ರತಾ ಠೇವಣಿ (FD) ಹೂಡಿಕೆದಾರರಿಗೆ ಇದು ಹಿನ್ನಡೆಯಾಗಬಹುದು.
ರೆಪೊ ದರ ಮತ್ತು ಅದರ ಪ್ರಭಾವ (Repo rate and its Impact)
ರೆಪೊ ದರವೆಂದರೆ ವಾಣಿಜ್ಯ ಬ್ಯಾಂಕುಗಳು RBI ನಿಂದ ಸಾಲ ಪಡೆಯುವ ದರ. ಈ ದರ ಕಡಿಮೆಯಾದರೆ, ಬ್ಯಾಂಕುಗಳು ಕಡಿಮೆ ವೆಚ್ಚದಲ್ಲಿ ಹಣವನ್ನು ಪಡೆದುಕೊಳ್ಳಬಹುದು. ಇದು ಗೃಹ, ವಾಹನ ಮತ್ತು ಪರ್ಸನಲ್ ಲೋನ್ ಸೇರಿದಂತೆ ವಿವಿಧ ಸಾಲದ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ. ಈ ನಿರ್ಧಾರದಿಂದ ಸಾಲ ಪಡೆದಿರುವವರಿಗೆ ಲಾಭವಾಗಬಹುದು.
ಆದರೆ, ಬ್ಯಾಂಕುಗಳು ತಮ್ಮ ಖರ್ಚು ಕಡಿಮೆ ಮಾಡಬೇಕಾದ ಕಾರಣ, ಅವರು ಜನಸಾಮಾನ್ಯರ ಠೇವಣಿಗಳ ಮೇಲೆ ನೀಡುವ ಬಡ್ಡಿದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಇದು ವಿಶೇಷವಾಗಿ ಸ್ಥಿರ ಠೇವಣಿ (FD) ಮತ್ತು ಸಾರ್ವಜನಿಕ ಭದ್ರತಾ ಯೋಜನೆಗಳು (PPF, NSC) ಗಳಿಗೆ ಹಿನ್ನಡೆಯಾಗಬಹುದು.
ಎಫ್ಡಿ ಇಡಲು ಇದು ಸೂಕ್ತ ಸಮಯವೇ? Is this the right time to keep an FD?
ಹೌದು, ಈಗ ಎಫ್ಡಿ ಇಡಲು ಉತ್ತಮ ಸಮಯ. ರೆಪೊ ದರ ಕಡಿಮೆಯಾಗುತ್ತಿರುವುದರಿಂದ ಬ್ಯಾಂಕುಗಳು ಎಫ್ಡಿ ಮೇಲಿನ ಬಡ್ಡಿದರವನ್ನು ಶೀಘ್ರದಲ್ಲೇ ಕಡಿಮೆ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಈಗಲೇ ಹೂಡಿಕೆ ಮಾಡಿದರೆ, ಪ್ರಸ್ತುತ ಲಭ್ಯವಿರುವ ಹೆಚ್ಚಿನ ಬಡ್ಡಿದರವನ್ನು ಲಾಭ ಪಡೆಯಬಹುದು.
ಹಿರಿಯ ನಾಗರಿಕರು (Senior Citizens) ಹೆಚ್ಚುವರಿ ಬಡ್ಡಿದರ ಲಾಭ ಪಡೆಯುವ ಪ್ರಯೋಜನವಿದೆ. ಆದರೆ, ಇದು ಶೀಘ್ರದಲ್ಲೇ ಕಡಿಮೆಯಾಗಬಹುದು. ಹೀಗಾಗಿ, ಅಗತ್ಯವಿದ್ದರೆ ತಕ್ಷಣವೇ ಎಫ್ಡಿ ಮಾಡುವುದು ಒಳಿತು ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಿದ್ದಾರೆ.
ಹಣ ಹೂಡಿಕೆ ಆಯ್ಕೆಗಳು (Money investment options): ಏನು ಮಾಡಬಹುದು?
ಅಲ್ಪಾವಧಿ ಎಫ್ಡಿ ಆಯ್ಕೆ – ತಕ್ಷಣ ಇಳಿಕೆ ಕಂಡುಬರುವ ಮುನ್ನ 1-2 ವರ್ಷ ಅವಧಿಯ ಎಫ್ಡಿ ಮಾಡಬಹುದು.
ಬೇರೆ ಹೂಡಿಕೆ ಆಯ್ಕೆಗಳನ್ನು ಪರಿಶೀಲಿಸಿ – ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್(Post Office saving scheme), ಡೆಬೆಂಚರ್, ಮ್ಯೂಚುವಲ್ ಫಂಡ್(Mutual fund)ಅಥವಾ ಸ್ಟಾಕ್ ಮಾರುಕಟ್ಟೆ(Stock market)ಯಲ್ಲಿ ಹೂಡಿಕೆ ಮಾಡುವ ಬಗ್ಗೆ ಚಿಂತನೆ ಮಾಡಬಹುದು.
ಆನ್‌ಲೈನ್ ಮತ್ತು ಖಾಸಗಿ ಬ್ಯಾಂಕುಗಳ ಎಫ್ಡಿ ದರಗಳನ್ನು ಹೋಲಿಸಿ – ಕೆಲವು ಖಾಸಗಿ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಇನ್ನೂ ಹೆಚ್ಚಿನ ಬಡ್ಡಿದರ ನೀಡುತ್ತವೆ.
ರಿಕರಿಂಗ್ ಡಿಪಾಜಿಟ್ (Recuring Deposit) ಪರಿಗಣಿಸಿ – ಏಕಕಾಲಕ್ಕೆ ಹೆಚ್ಚಿನ ಮೊತ್ತ ಹೂಡಿಕೆ ಮಾಡಲು ಸಾಧ್ಯವಿಲ್ಲದಿದ್ದರೆ, ಮಾಸಿಕ ಠೇವಣಿಯ ಮೂಲಕ ಲಾಭ ಪಡೆಯಬಹುದು.
ಸಾಲ ಪಡೆದವರಿಗೆ ಒಳ್ಳೆಯ ಸುದ್ದಿ (Good news for borrowers)
ಸಾಲ ಪಡೆದಿರುವವರು ಹೊಸ ಬಡ್ಡಿದರ ನವೀಕರಣದೊಂದಿಗೆ ಕಡಿಮೆ ಬಡ್ಡಿದರದ ಪ್ರಯೋಜನ ಪಡೆಯಬಹುದು. ಗೃಹ ಸಾಲ(Home loan), ಪರ್ಸನಲ್ ಲೋನ್(Personal loan)ಮತ್ತು ವಾಹನ ಸಾಲಗಳ(Vehicla loan)ಬಡ್ಡಿದರಗಳು ಶೀಘ್ರದಲ್ಲೇ ಇಳಿಯಬಹುದು. ಇದು ಹೊಸ ಸಾಲ ಪಡೆಯಲು ಉತ್ತಮ ಅವಕಾಶವಾಗಿದೆ.
ಈಗ ಎಫ್ಡಿ ಮಾಡುವುದು ಲಾಭದಾಯಕ, ಏಕೆಂದರೆ ಶೀಘ್ರದಲ್ಲೇ ಬಡ್ಡಿದರ ಕಡಿಮೆಯಾಗಬಹುದು. ಹಿರಿಯ ನಾಗರಿಕರು ಹೆಚ್ಚುವರಿ ಬಡ್ಡಿದರ ಲಾಭ ಪಡೆಯಲು ಈಗಲೇ ಹೂಡಿಕೆ ಮಾಡುವುದು ಉತ್ತಮ. ಸಾಲ ಪಡೆದವರು ಕಡಿಮೆ ಬಡ್ಡಿದರ ಲಾಭ ಪಡೆಯಲು ಕಾಯಬಹುದು. ಎಫ್‌ಡಿ ಮಾತ್ರವಲ್ಲ, ಬೇರೆ ಹೂಡಿಕೆ ಆಯ್ಕೆಗಳಿಗೂ ಗಮನ ನೀಡುವುದು ಒಳಿತು.
ಹೀಗಾಗಿ, ನಿಮ್ಮ ಹಣಕಾಸು ಗುರಿಗಳ ಪ್ರಕಾರ ಎಫ್ಡಿ ಅಥವಾ ಬೇರೆ ಹೂಡಿಕೆ ಮಾರ್ಗಗಳನ್ನು ಆಯ್ಕೆ ಮಾಡಿ, ಹಣಕಾಸು ತಜ್ಞರ ಸಲಹೆ ಪಡೆದು ಮುಂದುವರಿಯುವುದು ಉತ್ತಮ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




