- 10 ಲಕ್ಷ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಭಾಗ್ಯ.
- ಸೆಪ್ಟೆಂಬರ್ 10, 2024ಕ್ಕೂ ಮುನ್ನ ಆಸ್ತಿ ಹೊಂದಿರಬೇಕು.
- ಮನೆ ನಕ್ಷೆ ಮಂಜೂರಾತಿ ಮತ್ತು ಸಾಲಕ್ಕೆ ಹಾದಿ ಸುಗಮ.
ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ಕರ್ನಾಟಕ ಸರ್ಕಾರವು ಹೊಸ ವರ್ಷದ ಬಂಪರ್ ಕೊಡುಗೆ ನೀಡಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಬಡಾವಣೆಗಳ (Unauthorised Layouts) ‘ಬಿ-ಖಾತಾ’ ಹೊಂದಿರುವ ನಿವೇಶನ, ಫ್ಲಾಟ್ ಹಾಗೂ ಕಟ್ಟಡಗಳನ್ನು ಇನ್ಮುಂದೆ ‘ಎ-ಖಾತಾ’ ಆಗಿ ಪರಿವರ್ತಿಸಲು ರಾಜ್ಯ ಸರ್ಕಾರವು ಮಹತ್ವದ ಹಸಿರು ನಿಶಾನೆ ತೋರಿಸಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗಿದೆ
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಅನ್ನು ಉಲ್ಲಂಘಿಸಿ, ಅನಧಿಕೃತವಾಗಿ ಬಡವಾಣೆಗಳನ್ನು ರಚಿಸಿ, ನಿವೇಶನಗಳನ್ನು ಮಾರಾಟ ಮಾಡಲಾಗಿರುತ್ತದೆ. ಅನಧಿಕೃತ ಬಡಾವಣೆಗಳ ರಚನೆಯಿಂದ ನಗರ ಪ್ರದೇಶಗಳಲ್ಲಿ ಭೂ ಪರಿವರ್ತಿಸಿದ / ಭೂ ಪರಿವರ್ತಿಸದ ಜಮೀನುಗಳಿಗೆ ವಿನ್ಯಾಸ ಅನುಮೋದನೆ ಪಡೆಯದೇ ಅನಧಿಕೃತ ಬಡಾವಣೆ / ರೆವೆನ್ಯೂ ಬಡಾವಣೆಗಳನ್ನು ನಿರ್ಮಾಣ ಮಾಡಿ, ನಿವೇಶನಗಳನ್ನು ನೋಂದಣಿ ಮಾಡಿಕೊಂಡು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸುವುದರಿಂದಾಗುವ ಪ್ರತಿಕೂಲ ಪರಿಣಾಮಗಳನ್ನು ಗಮನಿಸಲಾಗಿ, ನಗರ ಪ್ರದೇಶಗಳಲ್ಲಿ ಉದ್ಯಾನವನ / ಬಯಲುಜಾಗೆಗಳ ಕೊರತೆ, ನಾಗರೀಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲತೆ, ವ್ಯವಸ್ಥಿತವಾದ ರಸ್ತೆಯ ಪರಿಚಲನೆ, ಮೂಲಭೂತ ಸೌಕರ್ಯದ ಕೊರತೆ ಹಾಗೂ ಯೋಜಿತ ಬೆಳವಣಿಗೆಗಳಲ್ಲಿ ತೊಡಕುಗಳಿರುವುದು ಕಂಡು ಬರುತ್ತದೆ. ಈಗಾಗಲೇ ಅನಧಿಕೃತವಾಗಿ ರಚಿತವಾಗಿರುವ ಬಡಾವಣೆಗಳಲ್ಲಿರುವ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976ಕ್ಕೆ ತಿದ್ದುಪಡಿ ತಂದು ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನಾಂಕ 10-09-2024ರ ಪೂರ್ವದಲ್ಲಿ ರಚಿಸಲಾಗಿರುವ ಬಡಾವಣೆಗಳಲ್ಲಿನ ಸ್ವತ್ತುಗಳಿಗೆ ಬಿ-ಖಾತಾ (ಅನಧಿಕೃತ) ನೀಡಲು ಅವಕಾಶ ಕಲ್ಪಿಸಲಾಗಿದೆ.
ಸದರಿ ಕಾಯ್ದೆ ತಿದ್ದುಪಡಿಯಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಕ್ಷಮ ಪ್ರಾಧಿಕಾರದ ಅನುಮೋದನೆ ಇರದ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿ, ಅಂತಹ ಆಸ್ತಿಗಳನ್ನು ಪ್ರತ್ಯೇಕ ರಿಜಿಸ್ಮರ್ನಲ್ಲಿ ನಿರ್ವಹಿಸಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂದಾಜು 10 ಲಕ್ಷ ಈ ರೀತಿಯ ಆಸ್ತಿಗಳಿರುತ್ತವೆ. ಸದರಿ ಆಸ್ತಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದಿಲ್ಲ ಮತ್ತು ಈಗಾಗಲೇ ಕಟ್ಟಡ ಪರವಾನಿಗೆ ಪಡೆಯದೇ ನಿರ್ಮಾಣ ಮಾಡಿರುವ ಸ್ವತ್ತುಗಳಿಗೆ ಹೆಚ್ಚುವರಿ ನಿರ್ಮಾಣ ಅಥವಾ ಮರು ನಿರ್ಮಾಣ /ನೆಲಸಮಗೊಳಿಸಲು ಅನುಮತಿ ನೀಡುತ್ತಿರುವುದಿಲ್ಲ. ಈ ರೀತಿಯ ಸ್ವತ್ತುಗಳು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ವ್ಯಾಪ್ತಿಯಿಂದ ಹೊರಗುಳಿದಿರುತ್ತವೆ. ಅನುಮೋದನೆ ಪಡೆಯದ ಬಡಾವಣೆಗಳಲ್ಲಿ ಸ್ವತ್ತುಗಳಿಗೆ ರಸ್ತೆ, ಚರಂಡಿ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ವಾಸ್ತವವಾಗಿ ನೀಡಲಾಗುತ್ತಿದ್ದು, ಸದರಿ ಆಸ್ತಿಗಳನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 19610 ಅನುಬಂಧಗಳಿಗನುಸಾರವಾಗಿ ನಿಯಂತ್ರಣಕ್ಕೊಳಪಡಿಸುವ ಅವಶ್ಯಕತೆಯಿರುತ್ತದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಚಿತವಾಗಿರುವ ಅನಧಿಕೃತ ಬಡಾವಣೆಗಳಲ್ಲಿನ ಸ್ವತ್ತುಗಳನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಉಪಬಂಧಗಳ ವ್ಯಾಪ್ತಿಗೆ ತಂದು ನಿಯಂತ್ರಿಸುವ ಕುರಿತು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಇವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಬಿ-ಖಾತಾ ಹೊಂದಿರುವ ಸ್ವತ್ತುಗಳಿಗೆ ಎ-ಖಾತಾ ನೀಡಲು ಈ ಕೆಳಕಂಡ ಶಿಫಾರಸ್ಸುಗಳನ್ನು ಮಾಡಿರುತ್ತದೆ.
- ನಗರ ಸ್ಥಳೀಯ ಸಂಸ್ಥೆಗಳಿಂದ ಈಗಾಗಲೇ ಬಿ-ಖಾತಾ ನೀಡಿ, ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿರುವ ಖಾಲಿ ನಿವೇಶನಗಳು:
ಬಿ-ಖಾತಾ ಹೊಂದಿರುವ ನಿವೇಶನಗಳಲ್ಲಿ ಅನಧಿಕೃತ ನಿರ್ಮಾಣಗಳನ್ನು ನಿಯಂತ್ರಿಸುವ ತುರ್ತು ಅವಶ್ಯಕತೆಯಿದೆ. ಪ್ರಸ್ತುತ ಅಂತಹ ಬಿ-ಖಾತಾಗಳಲ್ಲಿನ ನಿರ್ಮಾಣಗಳಿಗೆ ಯಾವುದೇ ಕಟ್ಟಡ ನಕ್ಷೆ ಅನುಮೋದನೆಯನ್ನು ನೀಡಲಾಗುವುದಿಲ್ಲ. ಇದು ಅನಿಯಂತ್ರಿತ ನಿರ್ಮಾಣಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಅಂತಹ ಸಂದರ್ಭಗಳಲ್ಲಿ ಈ ಕೆಳಗಿನ ಅನ್ವಯಿಸಬಹುದು. ಕ್ರಮಗಳನ್ನು
i. ಖಾಲಿ ನಿವೇಶನಕ್ಕೆ ಸಂಪರ್ಕಿಸುವ ಸಾರ್ವಜನಿಕ ರಸ್ತೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಂತಹ ಖಾಲಿ ನಿವೇಶನ ಅಥವಾ ಭೂಮಿಗೆ ಸಂಪರ್ಕಿಸುವ ಖಾಸಗಿ ರಸ್ತೆ ಇದ್ದರೆ, ಅದನ್ನು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 177 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರ 284 ರ ನಿಬಂಧನೆಗಳ ಪ್ರಕಾರ “ಸಾರ್ವಜನಿಕ ರಸ್ತೆ” ಎಂದು ಘೋಷಿಸಬೇಕಾಗುತ್ತದೆ.
ii. ಸದರಿ ನಿವೇಶನವು ಭೂ ಪರಿವರ್ತನೆಯಾಗದ ಜಮೀನು ಇದ್ದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 95 ರಡಿಯಲ್ಲಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಬೇಕು ಅಥವಾ ಕಲಂ 95 ರ ತಿದ್ದುಪಡಿಯಂತೆ ಅನುಮೋದಿತ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಭೂಮಿ ಬಂದರೆ, ಅನುಮೋದಿತ ಮಾಸ್ಟರ್ ಪ್ಲಾನ್ ನಲ್ಲಿ ಸೂಚಿಸಲಾದ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಕಲಂ 95(7) ಕರ್ನಾಟಕ ಭೂಕಂದಾಯ ಕಾಯ್ದೆ ಅಡಿಯಲ್ಲಿ ನಿಗಧಿಪಡಿಸಿದ ಶುಲ್ಕವನ್ನು ಕೆಟಿಸಿಪಿ ಕಾಯ್ದೆ 1961 ರ ಕಲಂ 17 ರಡಿಯಲ್ಲಿ ಅನುಮೋದನೆ ಪಡೆಯುವಾಗ ಪ್ರಾಧಿಕಾರಕ್ಕೆ ಪಾವತಿಸಬೇಕಾಗುತ್ತದೆ.
ಭೂಪರಿವರ್ತನೆ ನಂತರದಲ್ಲಿ ಅಂತಹ ಖಾಲಿ ನಿವೇಶನಕ್ಕೆ ಕೆಟಿಸಿಪಿ ಕಾಯ್ದೆ 1961 ರ ಕಲಂ 17 ರಡಿಯಲ್ಲಿ “ಏಕ ನಿವೇಶನ ಅಥವಾ ಬಹು ನಿವೇಶನ ವಿನ್ಯಾಸ” ಆಗಿ ಸಂಬಂಧಿತ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.
iv. ವಿನ್ಯಾಸ ಅನುಮೋದನೆ ಪಡೆದ ನಂತರ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 106 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರಕಲಂ 112 ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕೃತ (ಎ-ಖಾತಾ) ಖಾತಾ ನೀಡಬಹುದು.












ಪ್ರಮುಖ ಮಾಹಿತಿ ಕೋಷ್ಟಕ
ನಿಮ್ಮ ಸೌಲಭ್ಯಕ್ಕಾಗಿ ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
| ವಿವರ | ಮಾಹಿತಿ |
|---|---|
| ಯಾರಿಗೆ ಅನ್ವಯ? | ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಬಿ-ಖಾತಾ ಆಸ್ತಿಗಳಿಗೆ |
| ಒಟ್ಟು ಫಲಾನುಭವಿಗಳು | ರಾಜ್ಯದ ಸುಮಾರು 10 ಲಕ್ಷ ಆಸ್ತಿ ಮಾಲೀಕರು |
| ಮುಖ್ಯ ಲಾಭ | ಮನೆ ಕಟ್ಟಲು ನಕ್ಷೆ ಮಂಜೂರಾತಿ ಮತ್ತು ಮರು ನಿರ್ಮಾಣಕ್ಕೆ ಅವಕಾಶ |
| ಶುಲ್ಕ | ಭೂ ಪರಿವರ್ತನೆ ಮತ್ತು ವಿನ್ಯಾಸ ಅನುಮೋದನೆ ಶುಲ್ಕ ಅನ್ವಯ |
ಗಮನಿಸಿ: ನಿಮ್ಮ ಆಸ್ತಿಯು ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿದ್ದರೆ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆಯೂ ಕೆಲವು ನಿಯಮಗಳಡಿ ಭೂ ಪರಿವರ್ತನೆಗೆ ಅವಕಾಶವಿದೆ, ಆದರೆ ನಿಗದಿತ ಶುಲ್ಕವನ್ನು ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಪಾವತಿಸಬೇಕು.
ನಮ್ಮ ಸಲಹೆ
ನಮ್ಮ ಸಲಹೆ: ಈ ಪ್ರಕ್ರಿಯೆ ಆರಂಭಿಸುವ ಮೊದಲು ನಿಮ್ಮ ಆಸ್ತಿಯು ‘ಮಾಸ್ಟರ್ ಪ್ಲಾನ್’ನಲ್ಲಿ ಯಾವ ವಲಯದಲ್ಲಿದೆ (ಉದಾಹರಣೆಗೆ: ವಸತಿ ಅಥವಾ ಹಸಿರು ವಲಯ) ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ನಿಮ್ಮ ಸೈಟಿಗೆ ಹೋಗುವ ರಸ್ತೆಯನ್ನು ಸರ್ಕಾರಿ ದಾಖಲೆಗಳಲ್ಲಿ ‘ಸಾರ್ವಜನಿಕ ರಸ್ತೆ’ ಎಂದು ದಾಖಲಿಸಲಾಗಿದೆಯೇ ಎಂದು ಸ್ಥಳೀಯ ನಗರಸಭೆ ಕಚೇರಿಯಲ್ಲಿ ಒಮ್ಮೆ ಪರಿಶೀಲಿಸಿ. ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.
FAQs (ಸಾಮಾನ್ಯ ಪ್ರಶ್ನೆಗಳು)
ಪ್ರಶ್ನೆ 1: ನನ್ನ ಬಳಿ ಬಿ-ಖಾತಾ ಇದೆ, ನಾನು ನೇರವಾಗಿ ಮನೆ ಕಟ್ಟಲು ನಕ್ಷೆ ಮಂಜೂರಾತಿ ಪಡೆಯಬಹುದೇ?
ಉತ್ತರ: ಇಲ್ಲ. ಮೊದಲು ನೀವು ಸರ್ಕಾರದ ಹೊಸ ನಿಯಮದಂತೆ ‘ಏಕ ನಿವೇಶನ ವಿನ್ಯಾಸ’ ಅನುಮೋದನೆ ಪಡೆದು, ಬಿ-ಖಾತಾವನ್ನು ಎ-ಖಾತಾವಾಗಿ ಪರಿವರ್ತಿಸಿಕೊಳ್ಳಬೇಕು. ಆ ನಂತರವೇ ನಕ್ಷೆ ಮಂಜೂರಾತಿ ಸಿಗುತ್ತದೆ.
ಪ್ರಶ್ನೆ 2: ಈ ಸೌಲಭ್ಯವು ಕೇವಲ ಖಾಲಿ ಸೈಟುಗಳಿಗೆ ಮಾತ್ರವೋ ಅಥವಾ ಕಟ್ಟಡಗಳಿಗೂ ಅನ್ವಯಿಸುತ್ತದೆಯೇ?
ಉತ್ತರ: ಇದು ಖಾಲಿ ನಿವೇಶನಗಳು, ಈಗಾಗಲೇ ನಿರ್ಮಿಸಲಾಗಿರುವ ಕಟ್ಟಡಗಳು ಮತ್ತು ಅಪಾರ್ಟ್ಮೆಂಟ್/ಫ್ಲಾಟ್ಗಳಿಗೂ ಅನ್ವಯಿಸುತ್ತದೆ. ಆದರೆ ಅವು ನಿಗದಿತ ಕಟ್ಆಫ್ ದಿನಾಂಕದೊಳಗೆ ನಿರ್ಮಾಣವಾಗಿರಬೇಕು.
ಈ ಮಾಹಿತಿಗಳನ್ನು ಓದಿ
- Property Registration: ಆಸ್ತಿ ನೋಂದಣಿಗೆ ಬಂತು ಹೊಸ ರೂಲ್ಸ್! ಇನ್ಮುಂದೆ ‘ವಿಡಿಯೋ’ ಇದ್ರೆ ಮಾತ್ರ ರಿಜಿಸ್ಟ್ರೇಷನ್; ಶುಲ್ಕ ಎಷ್ಟು ಗೊತ್ತಾ?
- ಸೋಲನ್ನೇ ಕಾಣದ ಜೀವನ ನಿಮ್ಮದಾಗಬೇಕೇ? ಚಾಣಕ್ಯರು ಹೇಳಿದ ಈ 5 ರಹಸ್ಯಗಳನ್ನು ಪಾಲಿಸಿದರೆ ಯಶಸ್ಸು ನಿಮ್ಮ ದೇ
- Land Podi: ರೈತರಿಗೆ ಗುಡ್ ನ್ಯೂಸ್! ‘ಪೋಡಿ’ ಮಾಡಿಸಿದ್ರೆ ಸಾಲ, ಸಬ್ಸಿಡಿ ಎಲ್ಲವೂ ಈಜಿ; ಏನಿದು ಹೊಸ ನಿಯಮ? ಪೂರ್ಣ ಮಾಹಿತಿ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




