1st payment of drought relief

Drought relief : ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ

WhatsApp Group Telegram Group

ಇದೀಗ ರಾಜ್ಯದ ರೈತರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ರಾಜ್ಯದಲ್ಲಿ ಈ ಬಾರಿ ಸಾಕಷ್ಟು ಮುಂಗಾರು ಮಳೆಯಾಗದ ಕಾರಣ ರೈತರು ಬಹಳ ನಷ್ಟ ಅನುಭವಿಸಿದ್ದಾರೆ. ಇದೀಗ ಬರದಿಂದ ಕಂಗೆಟ್ಟಿರುವ ರೈತರ ನೆರವಿಗೆ ಸರ್ಕಾರ ಮುಂದಾಯಾಗುತ್ತಿದೆ. ಹಾಗಾಗಿ ಸರ್ಕಾರ ಯೋಜಿಸಿದ ಬರ ಪರಿಹಾರ(drought relief)ದ ಯೋಜನೆಯಲ್ಲಿ ( Bara Parihara Scheme ) ಮೊದಲ ಕಂತನ್ನು ರೈತರಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯ ಮುಖ್ಯ ಉದ್ದೇಶ ( Purpose ) :

ಕೇಂದ್ರ ಸರ್ಕಾರದ ( Central Government ) ಅನುದಾನಕ್ಕೆ ಕಾಯದೆ ರೈತರ ಹಿತರಕ್ಷಣೆ ಮಾಡುವ ಉದ್ದೇಶದಿಂದ ಬರ ಪರಿಹಾರದ ಮೊದಲ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಪ್ರತಿಯೊಬ್ಬ ರೈತರು ಕೂಡ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು. ರೈತ ಚೆನ್ನಾಗಿ ಇದ್ದರೆ ನಮ್ಮ ದೇಶ ಚೆನ್ನಾಗಿ ಇರುತ್ತದೆ. ಮತ್ತು ನಾವು ಅವರ ಕಷ್ಟ ಸ್ಪಂದಿಸಬೇಕು ಎನ್ನುವ ಮುಖ್ಯ ಉದ್ದೇಶ ಇದಾಗಿದೆ.

ಬರ ಪರಿಹಾರದ ಮೊದಲ ಕಂತಿನಲ್ಲೆ ಪ್ರತಿಯೊಬ್ಬ ರೈತನಿಗೂ ತಲಾ 2000 ರೂ :

ಬೆಳೆಹಾನಿಗೊಳಗಾದ ಹಾಗೂ ಬರದಿಂದ ಕಂಗಾಲಾದ ರೈತರಿಗೆ ರಾಜ್ಯ ಸರ್ಕಾರ ಮೊದಲ ಕಂತಿನಲ್ಲಿ ( First Installment ) ತಲಾ 2,000 ರೂ.ಗಳನ್ನು ನೀಡುತ್ತಿದೆ. ಬೆಳೆ ವಿಮೆಗೆ ಸರಕಾರ 460 ಕೋಟಿ ರೂಪಾಯಿ ಮಧ್ಯಂತರ ಪರಿಹಾರವನ್ನು ಕೂಡ ಬಿಡುಗಡೆ ಮಾಡಿದೆ. ಈ ಒಂದು ವಿಚಾರ ರೈತರ ಮುಖದಲ್ಲಿ ನಗು ಮೂಡಿಸಿದೆ.

ರಾಜ್ಯ ಸರಕಾರದಿಂದ ಅರ್ಹ ರೈತರಿಗೆಗೆ ಮೊದಲ ಕಂತಿನ ಬರ ಪರಿಹಾರದ ಹಣವನ್ನು ವರ್ಗಾವಣೆ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. FID ಸಂಖ್ಯೆ ಹೊಂದಿರುವ ಅರ್ಹ ರೈತರ ಖಾತೆಗೆ ಮೊದಲ ಕಂತಿನ ರೂ 2,000 ಹಣ ವರ್ಗಾವಣೆ ಪಕ್ರಿಯೆಯು ಕೂಡ ಆರಂಭವಾಗಿದೆ ಎಂದು ರಾಜ್ಯ ಸರಕಾರದ ವಾರ್ತಾ ಇಲಾಖೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

whatss

ಮೊದಲ ಕಂತಿನ ರೂ 2,000 ವರ್ಗಾವಣೆ ಕುರಿತು ವಾರ್ತಾ ಇಲಾಖೆಯ ( News Department ) ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ( Post ) ವಿವರ ಹೀಗಿದೆ:

ರಾಜ್ಯ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ಮೊದಲ ಕಂತಿನ ಪರಿಹಾರ ₹ 2000 ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ಎನ್‌ಡಿಆರ್‌ಎಫ್‌ ( NDRF ) ನಿಂದ ಬರ ಪರಿಹಾರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiyya ) ಅವರು ಪ್ರಧಾನಿ ನರೇಂದ್ರ ಮೋದಿ ( PM Narendra Modi ) ಅವರನ್ನು ಭೇಟಿ ಮಾಡಿ ಶೀಘ್ರ ಪರಿಹಾರ ಬಿಡುಗಡೆ ಮಾಡಲು ತಿಳಿಸಿದ್ದಾರೆ.

ಬರ ಪರಿಹಾರದ ಹಣ ಪಡೆಯಲು ಏನು ಮಾಡಬೇಕು? ಮತ್ತು ಅದಕ್ಕೆ ನೀಡಬೇಕಾದ ಮುಖ್ಯ ಮಾಹಿತಿಯ ವಿವರ ಈ ಕೆಳಗೆ ನೀಡಲಾಗಿದೆ :

FID ನಂಬರ್ ಅನ್ನು ಲಿಂಕ್ ಮಾಡುವುದು ಕಡ್ಡಾಯ :

ಬರ ಪರಿಹಾರ ಪಡೆಯಲು ಎಲ್ಲಾ ರೈತರು ತಪ್ಪದೇ ತಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಬೇಕು. FID ನಂಬರ್ ರಚನೆ ಮಾಡಿಕೊಂಡ ರೈತರಿಗೆ ಮಾತ್ರ ಈ ಪರಿಹಾರದ ಹಣ ಸಿಗಲಿದೆ ಅದ್ದರಿಂದ ಜಮೀನು ಹೊಂದಿರುವ ಎಲ್ಲಾ ರೈತರು ತಪ್ಪದೇ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ ನಂಬರ್ ನೀಡಿ FID ನಂಬರ್ ರಚನೆ ಮಾಡಿಕೊಳ್ಳಬೇಕು.

ಆಧಾರ್ ಲಿಂಕ್ ( Adhar link ) ಮಾಡುವುದು ಕಡ್ಡಾಯ :

ರೈತರು ಸರಕಾರದ ಯಾವುದೇ ಸಹಾಯಧನ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಅಗಲು ಆಧಾರ್ ಲಿಂಕ್/NPCI ಮ್ಯಾಪಿಂಗ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್ ಲಿಂಕ್ ಇದ್ದರೆ ಮಾತ್ರ ನಿಮಗೆ ಬರ ಪರಿಹಾರದ ಹಣ ಜಮಾ ಅಗಲಿದೆ.

tel share transformed

ರೈತರು ತಮ್ಮ ಬ್ಯಾಂಕ್ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ :

ವಿಧಾನ 1 :

ಬರ ಪರಿಹಾರದ ಅಧಿಕೃತ ವೆಬ್ಸೈಟ್ ಗೆ ( Website ) ಭೇಟಿ ನೀಡಿ : https://landrecords.karnataka.gov.in/pariharapayment/ ನಿಮ್ಮ ಬ್ಯಾಂಕಿನ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್ ಚೆಕ್ ( Balance Check ) ಮಾಡುವ ಮೂಲಕ ನಿಮ್ಮ ಖಾತೆಗೆ 2000 ವರ್ಗಾವಣೆ ಆಗಿರುವುದು ಚೆಕ್ ಮಾಡಬಹುದು.

ವಿಧಾನ 2 :

ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ನೇರ ನಗದು ವರ್ಗಾವಣೆ ಡಿಬಿಟಿ ಮೂಲಕ ವರ್ಗಾವಣೆಯಾದ ಹಣದ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ( DBT Application ) ಅನ್ನು ಬಿಡುಗಡೆ ಮಾಡಿದ್ದು ರೈತರು ಆ ಅಪ್ಲಿಕೇಶನ್ ನಲ್ಲಿ ಡೌನ್ಲೋಡ್ ( Download ) ಮಾಡಿಕೊಂಡು ಹಣ ಬಿಡುಗಡೆ ಮಾಡಿದ್ದನ್ನು ಚೆಕ್ ಮಾಡಿಕೊಳ್ಳಬಹುದು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories