ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ

crop damage compensation status check

ಇದೀಗ ರಾಜ್ಯದ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೌದು ಸದ್ಯ ರಾಜ್ಯದಲ್ಲಿ ರೈತರು ಬರದಿಂದ ಅನೇಕ ನಷ್ಟ ಅನುಭವಿಸುತ್ತಿದ್ದಾರೆ. ಮತ್ತು ಅವರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ಮತ್ತು ಸಾಲ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರ ಬೆಳೆಹಾನಿ ಪರಿಹಾರ ( crop compensation ) ಯೋಜನೆಯಲ್ಲಿ 105 ಕೋಟಿ ಬಿಡುಗಡೆ ಮಾಡಿದೆ. ಈ ಒಂದು ಯೋಜನೆಯನ್ನು ಹಲವಾರು ರೈತರು ಪಡೆದುಕೊಂಡಿದ್ದಾರೆ. ಹಾಗೆಯೇ ಸರ್ಕಾರ ( State Government ) ನೀಡುತ್ತಿರುವ ಈ ಒಂದು ಯೋಜನೆಯ ಪರಿಹಾರ ಧನ ರೈತರಿಗೆ ದೊರೆತಿಲ್ಲ. ಯಾಕೆ? ಏನು ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಳೆಹಾನಿ ಪರಿಹಾರದ ರೈತರ ಪಟ್ಟಿ ಬಿಡುಗಡೆ ( list of farmers for crop damage compensation ) :

ಸರ್ಕಾರದಿಂದ ಜಾರಿಗೊಳಿಸಿದ ಬೆಳೆಹಾನಿ ಪರಿಹಾರದ ಯೋಜನೆಗೆ ಹಲವಾರು ರೈತರು ಅರ್ಜಿ ಸಲ್ಲಿಸಿದ್ದರೂ ಕೂಡ ಕೆಲವು ರೈತರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಹಾಗೆಯೇ ಇನ್ನು ಹಲವರು ಜನ ರೈತರ ಹೆಸರು ಪಟ್ಟಿಯಲ್ಲಿ ಇಲ್ಲವಾಗಿದೆ. ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡುವ ಲಿಂಕ್ ( Checking Link ) ಅನ್ನು ಬಿಡುಗಡೆ ಮಾಡಿದ್ದಾರೆ. ಅದರ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಸರ್ಕಾರದಿಂದ ಪರಿಹಾರದ ಸಬ್ಸಿಡಿ :

ಬೆಳೆಹಾನಿ ಪರಿಹಾರದ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಈಗಾಗಲೇ ಹೊರಡಿಸಿದೆ. ಕೇಂದ್ರ ಸರ್ಕಾರದಿದಂದ ಬರ ನಿರ್ವಹಣೆಗಾಗಿ NDRF ಅನುದಾನವನ್ನು ನಿರೀಕ್ಷಿಸಿ, ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ 17-07-2023ರಲ್ಲಿ ಹೊರಡಿಸಿರುವ SDRF ಮಾರ್ಗಸೂಚಿಯನ್ವಯ ಅರ್ಹ ರೈತರಿಗೆ ಬರ ಪರಿಸ್ಥಿತಿಯಿಂದ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಠ 2 ಹೆಕ್ಟೇರ್ ಗೆ ಸೀಮಿತಗೊಳಿಸಿ ಇನ್ ಪುಡ್ ಸಬ್ಸಿಡಿ(Subsidy)ಯನ್ನು ನಿಗದಿಪಡಿಸಲಾಗಿದೆ.

ನಷ್ಟ ಪರಿಹಾರಕ್ಕೆ ನಿಗದಿಪಡಿಸಿದ ಮೊತ್ತ ( Price ) :

ಮಳೆಯಾಶ್ರಿತ ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ ಗಳಿಗೆ ರೂ.8,500 ನಿಗದಿಪಡಿಸಿದ್ದಾರೆ.
ಹಾಗೆಯೇ ನೀರಾವರಿ ಬೆಳೆಗೆ ರೂ.17,000
ಮತ್ತು ಬಹು ವಾರ್ಷಿಕ ಬೆಳೆ ನಷ್ಟ ಪರಿಹಾರಕ್ಕೆ ರೂ.22,500 ಪರಿಹಾರವನ್ನು ನಿಗದಿ ಮಾಡಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರವು ಒಟ್ಟು 105 ಕೋಟಿಯನ್ನು ಆಯುಕ್ತರು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬೆಂಗಳೂರು ಇವರಿಗೆ ಬಿಡುಗಡೆ ಮಾಡಿದೆ.

whatss

 

ಆಧಾರ್ ಲಿಂಕ್ ಆಗದ ಬೆಳೆಹಾನಿ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ವಿಧಾನ ( Steps for checking status ) :

ಹಂತ 1: ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಈ ಕೆಳಗೆ ನೀಡಲಾಗಿದೆ.
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:
https://parihara.karnataka.gov.in/service87/

ಹಂತ 2: ನಂತರ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೊಬಳಿ, ಗ್ರಾಮ, ವರ್ಷ, ಹಂಗಾಮು ಹಾಗೂ ಬೆಳೆಹಾನಿ ಕಾರಣ select ಮಾಡಿ,Get report ಮೇಲೆ ಕ್ಲಿಕ್ ಮಾಡಿ.

ಹಂತ 3: ಅದು ಆದ ನಂತರ ನಿಮಗೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ (bele hani parihara) ಜಮಾ ಮಾಹಿತಿ ದೊರೆಯಲಿದೆ.

ಹಂತ 4: ಹಾಗೆಯೇ ವೀವ್ ಸ್ಟೇಟಸ್ view status ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮ್ಮ ಹೆಸರು , ಬ್ಯಾಂಕಿನ ಹೆಸರು , ಮೊತ್ತ , ವಿಳಾಸ ಮತ್ತು ಮುಂತಾದವುಗಳನ್ನು ಚೆಕ್ ಮಾಡಬಹುದು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

One thought on “ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ

Leave a Reply

Your email address will not be published. Required fields are marked *

error: Content is protected !!