ದಿನದ ಆರಂಭ ಹೇಗಿದೆಯೋ ಅದೇ ಇಡೀ ದಿನದ ಮನಸ್ಥಿತಿಯನ್ನು, ಶಕ್ತಿಯನ್ನು ಮತ್ತು ಕಾರ್ಯಕ್ಷಮತೆಯನ್ನು ನಿರ್ಧರಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಹೆಚ್ಚಿನವರು ಟೀ-ಕಾಫಿ(Tea -Coffee) ಕಡೆಗೆ ಓಡುತ್ತಾರೆ. ಅದು ತಾತ್ಕಾಲಿಕವಾಗಿ ಎಚ್ಚರ ಕೊಟ್ಟರೂ, ದೀರ್ಘಾವಧಿಯಲ್ಲಿ ಆಯಾಸ, ಆಲಸ್ಯ, ಆಸಿಡಿಟಿ ಹಾಗು ಇನ್ನಿತರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದರ ಬದಲು ಆರೋಗ್ಯಕರ ಪಾನೀಯಗಳನ್ನು ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ದೇಹ-ಮನಸ್ಸು ತಾಜಾ, ಆಕ್ಟಿವ್ ಆಗಿ ಉಳಿಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಲ್ಲಿ ನಿಮ್ಮ ಬೆಳಗಿನ ದಿನಚರಿಯಲ್ಲಿ ಸೇರಿಸಬಹುದಾದ ಕೆಲವೊಂದು ಪಾನೀಯಗಳನ್ನು ಪರಿಚಯಿಸಿದ್ದೇವೆ:
ಬೆಚ್ಚಗಿನ ನೀರು(Warm water)– ದೇಹದ ಶುದ್ಧಿಕರಣಕ್ಕೆ ಮೊದಲ ಹೆಜ್ಜೆ
ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಅತ್ಯಂತ ಸರಳವಾದ ಆರೋಗ್ಯ ಅಭ್ಯಾಸ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಅರಿಶಿನ–ಕರಿಮೆಣಸಿನ ನೀರು(Turmeric-Black Pepper Water) – ರೋಗನಿರೋಧಕ ಶಕ್ತಿಗೆ ಬೂಸ್ಟ್
ಬೆಚ್ಚಗಿನ ನೀರಿಗೆ ಸ್ವಲ್ಪ ಅರಿಶಿನ ಮತ್ತು ಕರಿಮೆಣಸು ಸೇರಿಸಿ ಕುಡಿಯುವುದು ಪ್ರಾಚೀನ ಭಾರತೀಯ ಉಪಚಾರ. ಇದು ದೇಹದಲ್ಲಿ ಇನ್ಫ್ಲಮೇಶನ್ ಕಡಿಮೆ ಮಾಡುತ್ತದೆ, ಕೊಬ್ಬು ಕರಗಿಸಲು ಸಹಕಾರಿಯಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನಿಂಬೆ ನೀರು(Lemon water) – ಶಕ್ತಿಯ ನೈಸರ್ಗಿಕ ಮೂಲ
ಟೀ-ಕಾಫಿ ಬದಲು ನಿಂಬೆ ನೀರು ಸೇವಿಸಿದರೆ ದೇಹಕ್ಕೆ ತಾಜಾತನ ನೀಡುತ್ತದೆ. ನಿಂಬೆಯಲ್ಲಿರುವ ವಿಟಮಿನ್ C ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬೆಳಗ್ಗೆ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
ಶುಂಠಿ–ಜೇನುತುಪ್ಪದ ಪಾನೀಯ(Ginger–honey drink) – ಜೀರ್ಣಕ್ರಿಯೆಗೆ ಮಿತ್ರ
ಶುಂಠಿ ತನ್ನ ಔಷಧೀಯ ಗುಣಗಳಿಗಾಗಿ ಪ್ರಸಿದ್ಧ. ಇದನ್ನು ಜೇನುತುಪ್ಪದೊಂದಿಗೆ ಸೇರಿಸಿ ಕುಡಿಯುವುದು ಶಕ್ತಿ ನೀಡುವುದಲ್ಲದೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನೀರಿನಲ್ಲಿ ಶುಂಠಿ ತುಂಡುಗಳನ್ನು ಕುದಿಸಿ ನಂತರ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತ-ಜ್ವರದ ತೊಂದರೆಗಳೂ ಕಡಿಮೆ ಆಗುತ್ತವೆ.
ಗ್ರೀನ್ ಟೀ(Green tea)– ಆಂಟಿಆಕ್ಸಿಡೆಂಟ್ಗಳ ಖಜಾನೆ
ಗ್ರೀನ್ ಟೀ ದೇಹವನ್ನು ಹಾನಿಕರ ಫ್ರೀ ರಾಡಿಕಲ್ಗಳಿಂದ ರಕ್ಷಿಸುತ್ತದೆ. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ಗಳು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ಇದು ತಕ್ಷಣ ಶಕ್ತಿ ನೀಡುತ್ತದೆ. ದಿನದ ಪ್ರಾರಂಭಕ್ಕೆ ಇದು ಕಾಫಿಗಿಂತ ಉತ್ತಮ ಪರ್ಯಾಯ.
ಜೀರಿಗೆ ನೀರು(Cumin water) – ಜೀರ್ಣಾಂಗದ ಸ್ವಚ್ಛತೆ
ಜೀರಿಗೆ ನೀರು ಗ್ಯಾಸ್ಟ್ರಿಕ್ ಸಮಸ್ಯೆ, ಆಮ್ಲೀಯತೆ, ಮಲಬದ್ಧತೆ ಮುಂತಾದ ಸಮಸ್ಯೆಗಳಿಗೆ ಪರಿಹಾರ. ಬೆಳಿಗ್ಗೆ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಹೊಟ್ಟೆ ಹಗುರವಾಗುತ್ತದೆ.
ತಾಜಾ ಹಣ್ಣಿನ ರಸ(Fresh fruit juice) – ನೈಸರ್ಗಿಕ ವಿಟಮಿನ್ಗಳ ಉತ್ಸವ
ಎಳನೀರು, ದಾಳಿಂಬೆ ಜ್ಯೂಸ್, ಕಲ್ಲಂಗಡಿ ಹಣ್ಣಿನ ರಸ ಇತ್ಯಾದಿ ಬೆಳಗ್ಗೆ ಕುಡಿಯುವುದರಿಂದ ದೇಹಕ್ಕೆ ಜಲಸಂಚಯ, ವಿಟಮಿನ್, ಖನಿಜಗಳು ದೊರೆಯುತ್ತವೆ. ಇದರಿಂದ ದೇಹಕ್ಕೆ ಶಕ್ತಿಯೂ, ಮನಸ್ಸಿಗೆ ಉಲ್ಲಾಸವೂ ಲಭಿಸುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಟೀ-ಕಾಫಿ ಕಡೆಗೆ ಹೋಗುವ ಬದಲು ಈ ಆರೋಗ್ಯಕರ ಪಾನೀಯಗಳಲ್ಲಿ ಒಂದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿ. ಆರಂಭದಲ್ಲಿ ಸ್ವಲ್ಪ ಕಷ್ಟವಾಗಬಹುದು, ಆದರೆ ಕೆಲವು ದಿನಗಳಲ್ಲಿ ನೀವು ದೇಹದಲ್ಲಿ ಉತ್ಸಾಹ, ಮನಸ್ಸಿನಲ್ಲಿ ಚೈತನ್ಯ, ಕಾರ್ಯಗಳಲ್ಲಿ ಶಕ್ತಿ ಕಂಡುಹಿಡಿಯುತ್ತೀರಿ. ಆರೋಗ್ಯಕರ ಅಭ್ಯಾಸಗಳು ದೀರ್ಘಾವಧಿಯಲ್ಲಿ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುತ್ತವೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.