ಇತ್ತೀಚಿನ ದಿನಗಳಲ್ಲಿ ಆರೋಗ್ಯವಂತರಂತೆ ಕಂಡುಬರುವ ಅನೇಕರು ಹಠಾತ್ ಹೃದಯಾಘಾತಕ್ಕೆ(heart attack) ಬಲಿಯಾಗಿ ಅಕಾಲಿಕ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದಿನನಿತ್ಯದ ಒತ್ತಡದ ಜೀವನಶೈಲಿ, ಅಹಿತಕರ ಆಹಾರಪದ್ಧತಿ, ನಿರಂತರ ಕುಳಿತುಕೊಳ್ಳುವ ಕೆಲಸ, ಹಾಗೂ ವ್ಯಾಯಾಮದ ಕೊರತೆ ಇವು ಎಲ್ಲವೂ ಹೃದಯದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಇದಕ್ಕೆ ಅನುಗುಣವಾಗಿ ಈಗ 40 ರಿಂದ 50ರ ನಡುವೆ ಇರುವ ವಯೋಮಾನದ ಜನರಲ್ಲಿ ಕೂಡಾ ಹೃದಯಾಘಾತಗಳ ಪ್ರಮಾಣ ಹೆಚ್ಚುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ತೀವ್ರ ಸಂಕಟಕಾರಿ ಪರಿಸ್ಥಿತಿಯನ್ನು ಮನಗಂಡ ಖ್ಯಾತ ಹೃದ್ರೋಗ ತಜ್ಞರು, ನಾರಾಯಣ ಹೆಲ್ತ್ ಸಂಸ್ಥೆಯ ಸಂಸ್ಥಾಪಕರಾದ(Founder of Narayana Health Institute) ಡಾ. ದೇವಿಪ್ರಸಾದ್ ಶೆಟ್ಟಿ(Dr. Deviprasad Shetty) ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಆರೋಗ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ವಿಶೇಷವಾಗಿ 40 ವರ್ಷ ಮೇಲ್ಪಟ್ಟವರು ಈ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡರೆ ಹಠಾತ್ ಹೃದಯಾಘಾತಗಳನ್ನು ತಪ್ಪಿಸಿಕೊಳ್ಳಬಹುದೆಂದು ಅವರು ತಿಳಿಸಿದ್ದಾರೆ. ಡಾ.ದೇವಿಪ್ರಸಾದ್ ಶೆಟ್ಟಿಯವರು ನೀಡಿದ ಮುಖ್ಯ ಸಲಹೆಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಡಾ.ದೇವಿಪ್ರಸಾದ್ ಶೆಟ್ಟಿಯವರು ನೀಡಿದ ಮುಖ್ಯ ಸಲಹೆಗಳು ಹೀಗಿವೆ:
1. 40 ವರ್ಷಕ್ಕೆ ನಂತರ ಇಸಿಜಿ ಹಾಗೂ ಆಂಜಿಯೋಗ್ರಾಮ್:
“ನಿಮ್ಮ ವಯಸ್ಸು 40 ದಾಟಿದರೆ ಪ್ರತಿ 10 ವರ್ಷಕ್ಕೊಮ್ಮೆ ಇಸಿಜಿ (ECG) ಹಾಗೂ ಆಂಜಿಯೋಗ್ರಾಂ (Angiogram) ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಡಾ. ಶೆಟ್ಟಿ ಸಲಹೆ ನೀಡುತ್ತಾರೆ. ಇವು ಹೃದಯದ ಶಕ್ತಿಯನ್ನು, ಬ್ಲಾಕ್‌ಗಳ ಅಸ್ತಿತ್ವವನ್ನು ತಡೆಯುವ ಮೊದಲು ಪತ್ತೆಹಚ್ಚಲು ಸಹಕಾರಿಯಾಗುತ್ತದೆ.
2. ಹೊರಗೆ ಆರೋಗ್ಯವಾಗಿದ್ದರೂ ಒಳಗಿನ ಸ್ಥಿತಿ ಪರೀಕ್ಷಿಸಬೇಕು:
ಕೆಲವೊಮ್ಮೆ ವ್ಯಕ್ತಿಯು ಬಹಿರಂಗವಾಗಿ ಅತ್ಯಂತ ಆರೋಗ್ಯವಂತನಂತೆ ಕಾಣಬಹುದು. ಆದರೆ ಒಳಗಿನಿಂದ ಹೃದಯದಲ್ಲಿ ಬ್ಲಾಕೇಜ್(Blockage in the heart) ಇದ್ದರೂ ಹೊರಗೆ ಯಾವುದೇ ಲಕ್ಷಣವಿಲ್ಲದೆ ಸುಮ್ಮನೆ ಸಾಗಬಹುದು. ಇಂತಹ ಸಂದರ್ಭಗಳಲ್ಲಿ ಮಾತ್ರವೇ ಈ ರೀತಿ ನಿಯಮಿತ ಪರೀಕ್ಷೆಗಳು ಪ್ರಾಣ ಉಳಿಸಬಹುದಾಗಿದೆ.
3. ವ್ಯಾಯಾಮ, ಆಹಾರ ಕ್ರಮ ಹಾಗೂ ಮಿತವಾದ ಜೀವನಶೈಲಿ:
ಇವುಗಳ ಬಗ್ಗೆ ಡಾ. ಶೆಟ್ಟಿ ಸ್ಪಷ್ಟವಾಗಿ ಮಾತನಾಡಿಲ್ಲದಿದ್ದರೂ, ಅವರು ಹಲವು ಹಳೆಯ ಉಪನ್ಯಾಸಗಳಲ್ಲಿ ಈ ವಿಷಯದ ಮಹತ್ವವನ್ನು ನಿರಂತರವಾಗಿ ಒತ್ತಿಹೇಳುತ್ತಿದ್ದಾರೆ. ನಿಯಮಿತ ನಡೆ, ಕಡಿಮೆ ಕೊಬ್ಬಿನ ಆಹಾರ ಮತ್ತು ಧೂಮಪಾನ(Smoking), ಮಧ್ಯಾಪಾದಿಂದ ದೂರವಿರುವುದು ತುಂಬಾ ಅಗತ್ಯವೆಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಅಧುನಿಕ ಜೀವನಶೈಲಿಯಲ್ಲಿ ನಿರಂತರ ಆರೋಗ್ಯ ಪರಿಶೀಲನೆಗಳು ಸಾವು-ಬದುಕಿನ ವ್ಯತ್ಯಾಸ ಮಾಡಬಹುದು. ಒಂದು ವೇಳೆ ನೀವು ಅಥವಾ ನಿಮ್ಮ ಕುಟುಂಬದವರು 40 ವರ್ಷ ದಾಟಿದ್ದರೆ, ಹೃದಯ ಸಂಬಂಧಿ ತಪಾಸಣೆಯ ಕುರಿತು ಈಗಲೇ ಗಂಭೀರವಾಗಿ ಯೋಚಿಸಿ. ಜೀವನದುದ್ದಕ್ಕೂ ಆರೋಗ್ಯವಂತರಾಗಿರಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.