Picsart 25 08 24 23 33 09 023 scaled

ಶುಗರ್ ಲೆವೆಲ್ 200 ಒಳಗಿದ್ದರೆ ಮಾತ್ರೆ ಬೇಕೇ? ಎಕ್ಸ್ಪರ್ಟ್ ಸಲಹೆ! ಇಲ್ಲಿದೆ ಸಂಪೂರ್ಣ ಮಾಹಿತಿ. 

Categories:
WhatsApp Group Telegram Group

ಇಂದಿನ ಕಾಲದಲ್ಲಿ ಮಧುಮೇಹ (ಡಯಾಬಿಟಿಸ್) ಎಂದರೆ ಬಹುತೇಕ ಕುಟುಂಬಗಳಿಗೂ ಪರಿಚಿತವಾದ ಕಾಯಿಲೆ. ಕೆಲಸದ ಒತ್ತಡ(Work pressure), ಅಸಮತೋಲನವಾದ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಜಿನ್ಸ್ (Heredity) ಹಾಗೂ ಕೆಲವು ಔಷಧಿಗಳ ಅತಿಯಾದ ಬಳಕೆ – ಇವೆಲ್ಲವು ಸೇರಿ ಮಧುಮೇಹವನ್ನು ಹೆಚ್ಚಿಸುತ್ತಿವೆ. ಆದರೆ ಶುಗರ್ ಲೆವೆಲ್ ಸ್ವಲ್ಪ ಮಟ್ಟಿಗೆ ಏರಿದೆ ಎಂದರೇನು ತಕ್ಷಣವೇ ಮಾತ್ರೆ ತೆಗೆದುಕೊಳ್ಳಬೇಕೇ? ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಸದಾ ಇರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಬಗ್ಗೆ ಪ್ರಸಿದ್ಧ ಹೃದ್ರೋಗ ತಜ್ಞ(Cardiologist) ಹಾಗೂ ವೈದ್ಯಕೀಯ ಚಿಂತಕ ಡಾ. ಬಿ.ಎಂ. ಹೆಗ್ಡೆ ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಮಧುಮೇಹ(Diabetes):

ಡಾ. ಹೆಗ್ಡೆಯವರ ಪ್ರಕಾರ, ಮಧುಮೇಹ ಅಂದರೆ ಇತ್ತೀಚಿನ ರೋಗವಲ್ಲ. ಪುರಾತನ ಕಾಲದಲ್ಲಿಯೂ ಸಕ್ಕರೆ ಮಟ್ಟದ ಏರಿಳಿತವಿತ್ತು, ಆದರೆ ಅದನ್ನು ಜೀವನ ಶೈಲಿ ಮೂಲಕ ನಿಯಂತ್ರಿಸುತ್ತಿದ್ದರು. ವೈದ್ಯಕೀಯ ಜಗತ್ತಿನಲ್ಲಿ ನಾವು ಬಳಸುವ ಕೆಲವು ಔಷಧಿಗಳೇ ಮಧುಮೇಹಕ್ಕೆ ಕಾರಣವಾಗಬಹುದೆಂದು ಅವರು ಎಚ್ಚರಿಸಿದ್ದಾರೆ. ಉದಾಹರಣೆಗೆ, ಕೊಲೆಸ್ಟ್ರಾಲ್ ಕಡಿಮೆ ಮಾಡುವ ಕೆಲವು ಗುಳಿಗೆಗಳು ಮಧುಮೇಹ ಬರುವ ಸಾಧ್ಯತೆಯನ್ನು ಶೇ. 40 ರವರೆಗೆ ಹೆಚ್ಚಿಸಬಹುದು ಎನ್ನುವ ತತ್ವವನ್ನು ಅವರು ಉಲ್ಲೇಖಿಸಿದ್ದಾರೆ.

ಶುಗರ್ ಲೆವೆಲ್ 190–200 ನಡುವೆ ಇದ್ದರೆ?

ಸಂವಾದದಲ್ಲಿ ಒಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ಅವರು ಬಹಳ ಸ್ಪಷ್ಟವಾಗಿ ಹೇಳಿದ್ದು – ಆಹಾರದ ನಂತರ ಶುಗರ್ ಲೆವೆಲ್ 190 ಅಥವಾ 200 ಒಳಗಿದ್ದರೆ ಅದು ಗಂಭೀರವಾದ ವಿಷಯವಲ್ಲ. ಇದನ್ನು “ನಾರ್ಮಲ್” ಶ್ರೇಣಿಯಲ್ಲಿಯೇ ಪರಿಗಣಿಸಬಹುದು. ಹೀಗಾಗಿ ಇಂತಹ ಸ್ಥಿತಿಯಲ್ಲಿ ತಕ್ಷಣ ಮಾತ್ರೆ ಹಿಡಿಯುವ ಅವಶ್ಯಕತೆ ಇಲ್ಲ.

ಅವರ ಸಂದೇಶದ ಮೂಲತತ್ವ:
“ಔಷಧಿ ದೇಹಕ್ಕೆ ತಾತ್ಕಾಲಿಕ ಸಹಾಯ ಮಾಡಬಹುದು, ಆದರೆ ಜೀವನ ಶೈಲಿ ದೇಹ–ಮನಸ್ಸಿಗೆ ಶಾಶ್ವತ ಶಕ್ತಿ ನೀಡುತ್ತದೆ.”
ಆದ ಕಾರಣ ಜೀವನ ಶೈಲಿಯ ಬದಲಾವಣೆಯೇ ನಿಜವಾದ ಪರಿಹಾರ.

ಉತ್ತಮ ಜೀವನಶೈಲಿಗೆ ಅನುಸರಿಸಬೇಕಾದ ಕ್ರಮಗಳು(Steps to follow for a better lifestyle):

ಆಹಾರದಲ್ಲಿ ನಿಯಮ:

ತೈಲ, ಸಕ್ಕರೆ ಹಾಗೂ ಪ್ಯಾಕೇಜ್ ಆಹಾರಗಳನ್ನು ಕಡಿಮೆ ಮಾಡಬೇಕು.

ಹಣ್ಣು, ತರಕಾರಿ, ಧಾನ್ಯ ಮತ್ತು ನೈಸರ್ಗಿಕ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.

ವ್ಯಾಯಾಮ(Exercise):

ಪ್ರತಿದಿನ ಸರಳವಾದ ನಡಿಗೆ, ಯೋಗ ಅಥವಾ ದೇಹಕ್ಕೆ ತಕ್ಕ ಯಾವುದೇ ಚಟುವಟಿಕೆಯನ್ನು ಮಾಡುವುದು ಅಗತ್ಯ.

ನಿಯಮಿತ ವ್ಯಾಯಾಮದಿಂದ ಶರೀರದಲ್ಲಿ ಇನ್ಸುಲಿನ್ ಪ್ರತಿಕ್ರಿಯೆ ಉತ್ತಮಗೊಳ್ಳುತ್ತದೆ.

ಮನೋಭಾವ(Attitude):

ಸದಾ ಒಳ್ಳೆಯ ಆಲೋಚನೆ ಬೆಳೆಸಿಕೊಳ್ಳುವುದು.

ತೃಪ್ತಿಯ ಮನಸ್ಸು ಹಾಗೂ ಇತರರಿಗೆ ಸಹಾಯ ಮಾಡುವ ಗುಣವು ಹಾರ್ಮೋನ್‌ಗಳನ್ನು ಸಮತೋಲನಗೊಳಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಔಷಧಿಗಳ ಅವಲಂಬನೆ ಕಡಿಮೆ ಮಾಡುವುದು:

ಕೇವಲ ಔಷಧಿಗಳ ಮೇಲೆ ನಂಬಿಕೆ ಇಡುವುದರಿಂದ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುವುದಿಲ್ಲ.

ದೀರ್ಘಕಾಲಿಕ ಆರೋಗ್ಯಕ್ಕಾಗಿ ಜೀವನ ಶೈಲಿ ಬದಲಾವಣೆ ಅತ್ಯಗತ್ಯ.

ಒಟ್ಟಾರೆ, ಡಾ. ಹೆಗ್ಡೆಯವರ ಮಾತುಗಳು ವೈದ್ಯಕೀಯ ಜ್ಞಾನಕ್ಕಿಂತಲೂ, ಜೀವನದ ಜಾಣ್ಮೆಯನ್ನು ಹಂಚಿಕೊಳ್ಳುವಂತಿವೆ. ಶುಗರ್ ಲೆವೆಲ್ 200 ಒಳಗಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಬದಲಿಗೆ, ಜೀವನ ಶೈಲಿ, ಆಹಾರ, ವ್ಯಾಯಾಮ ಮತ್ತು ಸಕಾರಾತ್ಮಕ ಮನೋಭಾವದ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಔಷಧಿ ಕೊನೆಯ ಆಯ್ಕೆಯಾದರೂ, ಮೊದಲ ಹೆಜ್ಜೆಯೇ ಆಗಬಾರದು ಎಂಬುದೇ ಅವರ ತತ್ವ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories