ಭಾರತದಲ್ಲಿ ನಗರೀಕರಣದ ವೇಗ, ಜನಸಂಖ್ಯೆಯ ಗಟ್ಟಿಮುಟ್ಟಿದ ಸಂಚಲನ, ಹಾಗೂ ಡಿಜಿಟಲ್ ಆಧಾರಿತ ಸೇವೆಗಳ (Digital based services) ವ್ಯಾಪ್ತಿಗೆ ಬೆಳಕಿನ ಸ್ಪರ್ಶ ನೀಡುವ ಕಾರ್ಯವನ್ನು ‘ಬೈಕ್ ಟ್ಯಾಕ್ಸಿ’(Bike taxi) ಹಾಗೂ ‘ಕ್ಯಾಬ್ ಅಗ್ರಿಗೇಟರ್’ ಸೇವೆಗಳು (Cab Aggregator services ) ಮಾಡುತ್ತಿರುವುದು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊರಡಿಸಿರುವ ಹೊಸ ಮಾರ್ಗಸೂಚಿಗಳು ಸಾರ್ವಜನಿಕ ಪ್ರಯಾಣ ವ್ಯವಸ್ಥೆಯಲ್ಲಿ ಕ್ರಾಂತಿಯತ್ತದ ಹೆಜ್ಜೆ ಎಂದು ಪರಿಗಣಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಖಾಸಗಿ ಬೈಕುಗಳಿಗೆ ವಾಣಿಜ್ಯ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ :
ಇದುವರೆಗೂ ಖಾಸಗಿ ನೊಂದಾಯಿತ ದ್ವಿಚಕ್ರ ವಾಹನಗಳನ್ನು ವ್ಯಾಪಾರಿಕ ಪ್ರಯಾಣ ಸೇವೆಗೆ ಬಳಸಲು ಕಾನೂನು ಅಡಚಣೆ ಇತ್ತು. ಆದರೆ ಇದೀಗ ಈ ತಡೆಗಳನ್ನು ತೆರವುಗೊಳಿಸಿ, ಓಲಾ, ಊಬರ್‌ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಮತ್ತಷ್ಟು ಅನ್ವಯತೆಯನ್ನು ಕಲ್ಪಿಸಲಾಗಿದೆ. ಇದರ ಪರಿಣಾಮವಾಗಿ ಉದ್ಯೋಗ ಅವಕಾಶಗಳು ಹೆಚ್ಚಾಗಬಹುದು, ವಿಶೇಷವಾಗಿ ಯುವಕರಿಗೆ ಸೈಡ್ ಇನ್‌ಕಮ್‌ನ ದಾರಿ (side income source) ತೆರೆಯಬಹುದು.
ಡೈನಮಿಕ್ ಪ್ರೈಸಿಂಗ್ – ಗ್ರಾಹಕ–ಡ್ರೈವರ್ ಸಮತೋಲನ:
ಕೇಂದ್ರದ ಮಾರ್ಗಸೂಚಿಗಳ ಪ್ರಮುಖ ಅಂಶವೆಂದರೆ, ಡೈನಮಿಕ್ ಪ್ರೈಸಿಂಗ್‌ಗೆ (dynamic pricing) ಅನುಮತಿ ನೀಡಿರುವುದು. ಬೇಡಿಕೆ ಕಡಿಮೆ ಇದ್ದರೆ ದರ ಇಳಿಕೆ, ಹೆಚ್ಚಿನ ವೇಳೆ ದರ ಹೆಚ್ಚಳ ಸಾಧ್ಯತೆ – ಇದು ವ್ಯವಹಾರ ಬುದ್ಧಿವಂತಿಕೆಯ ಪ್ರದರ್ಶನ. ಉದಾಹರಣೆಗೆ, ಪೀಕ್ ಅವರ್ಸ್‌ಗಳಲ್ಲಿ ದರವನ್ನು ಎರಡು ಪಟ್ಟುವರೆಗೂ ಹೆಚ್ಚಿಸಬಹುದು. ಇದು ಡ್ರೈವರ್‌ಗಳಿಗೆ ಹೆಚ್ಚಿನ ಆದಾಯಕ್ಕೆ ಸಹಕಾರಿಯಾಗುತ್ತದೆ. ಆದರೆ ಇದರ ದುರುಪಯೋಗವನ್ನು ತಡೆಯಲು ರಾಜ್ಯ ಸರ್ಕಾರಗಳ ಮೇಲೆ ಜವಾಬ್ದಾರಿ ಹೆಚ್ಚಾಗಿದೆ.
ಚಾಲಕರ ಸುರಕ್ಷತೆ ಮತ್ತು ತರಬೇತಿಗೆ ಆದ್ಯತೆ:
ಚಾಲಕರಿಗೆ ಕಡ್ಡಾಯವಾಗಿ ಪೊಲೀಸ್ ಪರಿಶೀಲನೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ಪರೀಕ್ಷೆ, 40 ಗಂಟೆಗಳ ತರಬೇತಿ – ಇವುಗಳು ‘ಪ್ರಯಾಣಿಕ ಸುರಕ್ಷತೆ’ ಎಂಬ ತತ್ವಕ್ಕೆ ಅಡಿಗಲ್ಲು ಇಡುವಂತಿವೆ. ಬಲವಂತದ ಲೈಸೆನ್ಸಿಂಗ್ ಅಥವಾ ಅನುಭವವಿಲ್ಲದ ಚಾಲಕರ ಪ್ರವೇಶ ತಡೆಯುವ ಈ ಕ್ರಮ ಅತ್ಯಂತ ಶ್ಲಾಘನೀಯ.
ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ:
ಮಾರ್ಗಸೂಚಿಯಲ್ಲಿ ಪೈಕಿ ಮತ್ತೊಂದು ವಿಶಿಷ್ಟ ಅಂಶವೆಂದರೆ ಎಲೆಕ್ಟ್ರಿಕ್ ವಾಹನ (electric vehicles) ಬಳಕೆಯನ್ನು ಉತ್ತೇಜಿಸುವ ಕಾನೂನು. ಇದು ಕಾರ್ಬನ್ ಉತ್ಸರ್ಗವನ್ನು ಕಡಿಮೆ ಮಾಡುವ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯ ಪ್ರೋತ್ಸಾಹಕ್ಕೆ ದೊಡ್ಡ ಹೆಜ್ಜೆ.
ಸೈಬರ್ ಸೆಕ್ಯೂರಿಟಿ ಮತ್ತು ಡೇಟಾ ಸಂರಕ್ಷಣೆಗೆ ಒತ್ತು:
CERT-in ಮಾರ್ಗಸೂಚಿಗಳ ಅನುಸರಣೆಯು, ಟ್ರ್ಯಾಕಿಂಗ್ ಸಿಸ್ಟಮ್ (Tracking system), ಪ್ಯಾನಿಕ್ ಬಟನ್(panic button), ಇಂಗ್ಲಿಷ್/ಹಿಂದಿ/ಸ್ಥಳೀಯ ಭಾಷೆಗಳಲ್ಲಿ ಅಪ್ಲಿಕೇಶನ್ – ಈ ಎಲ್ಲಾ ಅಂಶಗಳು ಗ್ರಾಹಕ ನಂಬಿಕೆಗೆ ಆಧಾರವಾಗಿವೆ. ಜೊತೆಗೆ ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆಯ(digital data protection act ) ಅನುಸರಣೆ ಕಡ್ಡಾಯಗೊಳಿಸಿರುವುದು, ಡೇಟಾ ದುರ್ಯೋಗ ತಡೆಯುವಲ್ಲಿ ಪ್ರಮುಖ ಹೆಜ್ಜೆ.
ಅರ್ಥಶಾಸ್ತ್ರದ ಪರಿಪ್ರೇಕ್ಷ್ಯದಲ್ಲಿ: ಲಾಭದ ಷರತ್ತುಗಳು:
ಅಗ್ರಿಗೇಟರ್ ಸೇವೆಗಳಲ್ಲಿ (aggregator services) ಲಾಭದ ಪೈಕಿ ಶೇ. 80 ರಷ್ಟು ಡ್ರೈವರ್‌ಗೆ ಹಂಚಿಕೆ ಮಾಡಬೇಕೆಂಬ ನಿಯಮ – ಇದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಶೋಷಣಾತ್ಮಕ ಧೋರಣೆಗೆ ಕಡಿವಾಣ ಹಾಕುತ್ತದೆ. ಇದರಿಂದ “ಆತ್ಮನಿರ್ಭರ ಚಾಲಕ” (Self-reliant driver) ಎಂಬ ಸಿದ್ಧಾಂತ ಬೆಳೆಸಬಹುದು.
ಈ ಮಾರ್ಗಸೂಚಿಗಳು ಕೇವಲ ಕಾನೂನು ಅಥವಾ ತಂತ್ರಾಂಶ ನಿಯಮಾವಳಿಗಳಷ್ಟೇ ಅಲ್ಲ; ಇವು ಒಂದು ನೂತನ ನಗರ ಸಂಚಾರ ಸಂಸ್ಕೃತಿಗೆ ಮುನ್ನುಡಿ ಬರೆದಂತಿದೆ. ಸಾರ್ವಜನಿಕರು ಹೆಚ್ಚು ಸುರಕ್ಷಿತ, ಕಡಿಮೆ ಸಮಯದ, ಹಾಗೂ ಅರ್ಥಪೂರ್ಣ ಸಾರಿಗೆ ಆಯ್ಕೆಗಳನ್ನು ಬಳಸಲು ಸಾಧ್ಯವಾಗುತ್ತದೆ.
ಆದರೆ, ಈ ಮಾರ್ಗಸೂಚಿಗಳ ಯಶಸ್ಸು ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ಅನುಷ್ಠಾನ ಸಾಮರ್ಥ್ಯ, ಕಟ್ಟುನಿಟ್ಟಿನ ಪರಿಶೀಲನೆ ಹಾಗೂ ಸಾರ್ವಜನಿಕ ಜಾಗೃತಿಯ ಮೇಲೆ ಅವಲಂಬಿತವಾಗಿರುತ್ತದೆ.
ಬದಲಾವಣೆಯ ಮಾರ್ಗದಲ್ಲಿ ಈ ನವೀನ ಮಾರ್ಗಸೂಚಿಗಳು ಹೊಸ ಯುಗದ ಸಾರಿಗೆ ಸಂಸ್ಕೃತಿಗೆ ಬಾಗಿಲು ತೆರೆದಿವೆ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




