ಕಲಬುರಗಿ, ಗದಗ, ಹಾವೇರಿ ಜಿಲ್ಲೆಗಳು ಅಗ್ರಸ್ಥಾನದಲ್ಲಿ – ಜಿಲ್ಲಾವಾರು ವಿವರ
ಬೆಂಗಳೂರು: ಕರ್ನಾಟಕದ 23 ಲಕ್ಷಕ್ಕೂ ಹೆಚ್ಚು ರೈತರಿಗೆ 1,449 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬಿಡುಗಡೆ ಮಾಡಿವೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಈ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾವ ಬೆಳೆಗಳಿಗೆ ಪರಿಹಾರ?
2024-25ನೇ ಸಾಲಿನ ಮುಂಗಾರು ಬೆಳೆಗಳಾದ ತೊಗರಿ, ಭತ್ತ, ರಾಗಿ, ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಹೆಸರು, ನೆಲಗಡಲೆ, ಉದ್ದು ಮತ್ತು ಸೂರ್ಯಕಾಂತಿ ಸೇರಿದಂತೆ ಹಲವಾರು ಬೆಳೆಗಳ ಹಾನಿಗೆ ಈ ಪರಿಹಾರ ನೀಡಲಾಗಿದೆ.
ಜಿಲ್ಲಾವಾರು ಹಂಚಿಕೆ:
- ಕಲಬುರಗಿ: ₹656 ಕೋಟಿ (ಕಳೆದ ವರ್ಷದ್ದಕ್ಕಿಂತ ಮೂರು ಪಟ್ಟು ಹೆಚ್ಚು)
- ಗದಗ: ₹242 ಕೋಟಿ
- ಹಾವೇರಿ: ₹95 ಕೋಟಿ
- ವಿಜಯಪುರ: ₹97 ಕೋಟಿ
- ವಿಜಯನಗರ: ₹70 ಕೋಟಿ
- ಚಿತ್ರದುರ್ಗ: ₹33 ಕೋಟಿ
- ದಾವಣಗೆರೆ: ₹44 ಕೋಟಿ
- ಯಾದಗಿರಿ: ₹18 ಕೋಟಿ
- ಧಾರವಾಡ: ₹23 ಕೋಟಿ
- ಕೊಪ್ಪಳ: ₹34 ಕೋಟಿ
- ಬೆಳಗಾವಿ: ₹24 ಕೋಟಿ
- ಶಿವಮೊಗ್ಗ: ₹13 ಕೋಟಿ
- ಮಂಡ್ಯ: ₹3 ಕೋಟಿ
- ಬಾಗಲಕೋಟೆ: ₹14 ಕೋಟಿ
- ಬೀದರ್: ₹13 ಕೋಟಿ
- ಚಾಮರಾಜನಗರ: ₹2 ಕೋಟಿ
- ಬಳ್ಳಾರಿ: ₹32 ಲಕ್ಷ
- ಉಡುಪಿ: ₹3 ಲಕ್ಷ
- ದಕ್ಷಿಣ ಕನ್ನಡ: ₹2.40 ಲಕ್ಷ
- ಬೆಂಗಳೂರು ನಗರ: ₹4 ಲಕ್ಷ
- ಒಟ್ಟು ಪರಿಹಾರ ಮೊತ್ತ: ₹1,449 ಕೋಟಿ ರೂಪಾಯಿ
ಹಣ ಯಾವಾಗ ಸಿಗುತ್ತದೆ?
ಸುಮಾರು 50% ರೈತರ ಖಾತೆಗೆ ಈಗಾಗಲೇ ಹಣ ಜಮೆಯಾಗಿದೆ. ಉಳಿದವರಿಗೆ ರಾಜ್ಯ ಸರ್ಕಾರ ತ್ವರಿತವಾಗಿ ಪಾವತಿಸಲು ಕ್ರಮ ಕೈಗೊಂಡಿದೆ.
ಯೋಜನೆಯ ಪ್ರಾಮುಖ್ಯತೆ:
ಹಿಂದಿನ ವರ್ಷಗಳಲ್ಲಿ ಅಕಾಲಿಕ ಮಳೆ ಮತ್ತು ಬೆಳೆ ಹಾನಿಯಿಂದ ಬಳಲಿದ ರೈತರಿಗೆ ಈ ಪರಿಹಾರ ಆರ್ಥಿಕ ಸುರಕ್ಷತೆ ನೀಡುತ್ತದೆ. ಸರ್ಕಾರವು PMFBY ಯೋಜನೆ ಮೂಲಕ ರೈತರನ್ನು ಹೆಚ್ಚು ಕವರ್ ಮಾಡಲು ಮುಂದಾದಿದೆ.
ಹೆಚ್ಚಿನ ಮಾಹಿತಿಗೆ:
- ರೈತ ಸಹಾಯ ಕೇಂದ್ರಗಳು
- ಕೃಷಿ ಇಲಾಖೆ ಅಧಿಕೃತ ವೆಬ್ಸೈಟ್
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.